ಪ್ರಚಲಿತ

ಗೋ ಹತ್ಯೆ ನಿಲ್ಲುವುದೇ ಪ್ರಪಂಚದ ಸಮಸ್ಯೆಗಳೆಲ್ಲಕ್ಕೂ ಪರಿಹಾರ..

ಹಿಂದೂ ಧರ್ಮದಲ್ಲಿ ಗೋವಿಗೆ ಅತ್ಯಂತ ಶ್ರೇಷ್ಠ ಸ್ಥಾನವಿದೆ. ಗೋವನ್ನು ತಾಯಿಯಂತೆ, ದೇವರಂತೆ ಪೂಜಿಸುವ ಪದ್ಧತಿ ಇದೆ‌. ಗಾವೋ ವಿಶ್ವಸ್ಯ ಮಾತರಂ ಎಂಬ ಮಾತು ಸಹ ಪ್ರಚಲಿತದಲ್ಲಿದ್ದು, ಗೋವಿನ ದೇಹದ ಪ್ರತಿಯೊಂದು ಭಾಗದಲ್ಲಿಯೂ ಮುಕ್ಕೋಟಿ ದೇವರುಗಳು ನೆಲೆಸಿದ್ದಾಗಿ ನಂಬಲಾಗುತ್ತದೆ.

ಇಂತಹ ಮಾತೃ ಸಮಾನ ಗೋವುಗಳನ್ನು ಕಳ್ಳತನ ಮಾಡುವುದು, ಅವುಗಳನ್ನು ಕದ್ದು ಸಾಗಿಸುವುದು, ಅವುಗಳನ್ನು ಅಕ್ರಮವಾಗಿ ಹತ್ಯೆ ಮಾಡುವ ಮೂಲಕ ಗೋವನ್ನು ತಾಯಿ ಎಂದು ಪೂಜಿಸುವ ಕೋಟ್ಯಂತರ ಹಿಂದೂಗಳ ಭಾವನೆಗೆ ಕೊಳ್ಳಿ ಇಡುವ ಕೆಲಸವನ್ನು ಕೆಲವು ಜಿಹಾದಿ ಮನಸ್ಥಿತಿಯ ಜನರು (ಧರ್ಮಾತೀತವಾಗಿ) ಈ ಸಮಾಜದಲ್ಲಿದ್ದಾರೆ. ಮನೆಯ ಮಗುವಿನಂತೆ ಸಾಕಿದ್ದ ಗೋವು ಯಾವುದೋ ಕ್ರಿಮಿಗಳ ಪಾಲಾದಾಗ ಆಗುವ ಸಂಕಟಕ್ಕೆ ಸಾಂತ್ವನವೇ ಇಲ್ಲ ಎಂದರೂ ತಪ್ಪಾಗಲಾರದು.

‘ಗೋ ಹತ್ಯೆ ನಿಲ್ಲಿಸಿದರೆ ಈ ಭೂಮಿಯ ಎಲ್ಲಾ ಸಮಸ್ಯೆಗಳೂ ಪರಿಹಾರವಾಗುತ್ತವೆ’ ಎಂದು ಗುಜರಾತ್‌ನ ತಾಪಿ ಜಿಲ್ಲಾ ನ್ಯಾಯಾಲಯದ ಪ್ರದಾನ ನ್ಯಾಯಾಧೀಶರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಅಕ್ರಮವಾಗಿ ಗೋವುಗಳ ಸಾಗಾಟ ನಡೆಸುತ್ತಿದ್ದ ವ್ಯಕ್ತಿಯೊಬ್ಬನಿಗೆ ಜೀವಾವಧಿ ಶಿಕ್ಷೆ ವಿಧಿಸಿದ ಬಳಿಕ ಅವರು ಈ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ಈ ಸಂದರ್ಭದಲ್ಲಿ ಗುಜರಾತ್‌ನ ನ್ಯಾಯಾಲಯ ಗೋಹತ್ಯೆಗೆ ಸಂಬಂಧಿಸಿದ ಹಾಗೆ ಕೆಲವೊಂದು ಕುತೂಹಲಕಾರಿ ಅಂಶಗಳ ಬಗೆಗೂ ಅವಲೋಕನ ನಡೆಸಿದೆ.

ಗೋವಿನ ಸೆಗಣಿಯನ್ನು ಬಳಸುವ ಮನೆಗಳು ವಿಕಿರಣ ಗಳಿಂದ ಸುರಕ್ಷತೆ ಒದಗಿಸುವುದಾಗಿ ವಿಜ್ಞಾನ ಹೇಳುತ್ತದೆ. ಗೋ ಮೂತ್ರವು ಗುಣ ಮಾಡಲಾಗದ ಹಲವಾರು ರೋಗಗಳನ್ನು ಗುಣಪಡಿಸುವ ಶಕ್ತಿಯನ್ನು ಹೊಂದಿದೆ. ಗೋವು ಅರವತ್ತೆಂಟು ಕೋಟಿ ಪವಿತ್ರ ಸ್ಥಳಗಳು, ಮುಕ್ಕೋಟಿ ದೇವತೆಗಳ ವಾಸ ಸ್ಥಳವೂ ಆಗಿದೆ. ಇಡೀ ಬ್ರಹ್ಮಾಂಡದ ಮೇಲೆ ಗೋವಿನ ಬಾಧ್ಯತೆಯ ಬಗ್ಗೆ ಯಾವುದೇ ವಿವರಣೆ ನೀಡುವ ಅಗತ್ಯ ಇಲ್ಲ ಎಂದು ನ್ಯಾಯಾಧೀಶರು ತಮ್ಮ ಆದೇಶದಲ್ಲಿ ತಿಳಿಸಿದ್ದಾರೆ.

ಅದೇ ರೀತಿ ಗೋವುಗಳನ್ನು ಹಿಂಸಿಸಿದರೆ, ಅತೃಪ್ತಿಗೊಳಿಸಿದರೆ ನಮ್ಮ ಆಸ್ತಿ, ಸಂಪತ್ತು ನಾಶವಾಗುತ್ತದೆ ಎಂದು ಅವರು ಅಭಿಪ್ರಾಯ ವ್ಯಕ್ತ ಪಡಿಸಿದ್ದಾರೆ. ಗುಜರಾತ್ ನ್ಯಾಯಾಧೀಶರು ಗೋ ಅಕ್ರಮ ಹತ್ಯೆಯ ಬಗ್ಗೆ ಹೇಳಿರುವ ಈ ಮಾತುಗಳನ್ನು, ದೇಶದ ಎಲ್ಲಾ ನ್ಯಾಯಾಧೀಶರು ಒಕ್ತೊರಲಿನಿಂದ ಒಪ್ಪಿ, ಗೋ ಹತ್ಯೆ ನಿಷೇದವಾಗಿದ್ದರೆ, ನಮ್ಮ ದೇಶದ ಗೋ ಸಂಪತ್ತು ರಕ್ಷಣೆಯಾಗಬಹುದು.

Tags

Related Articles

Close