ಪ್ರಚಲಿತ

ಇತಿಹಾಸದಲ್ಲಿ ಹೀರೋ ಆಗಿದ್ದ ಅಕ್ಬರನ ನೈಜ ಮುಖದ ಆದರ್ಶ ಅತ್ಯಂತ ಕರಾಳವಾಗಿತ್ತು.! ಈತನ ಹಿಂಸೆಗೆ ಅಸುನೀಗಿದವರೆಷ್ಟು ಮಂದಿ ಗೊತ್ತಾ.?

ಭಾರತದ ಇತಿಹಾಸಗಾರರ ಪ್ರಕಾರ ಮೊಘಲರು ಆಕ್ರಮಿಸಿ ನಮ್ಮನ್ನಾಳುವವರೆಗೂ ನಮ್ಮ ಬಳಿ ಐಶ್ವರ್ಯ,ವಿದ್ಯೆ,ಕಲೆ,ಸಾಹಿತ್ಯ ಮತ್ತು ವಾಸ್ತುಶಿಲ್ಪಗಳಾದಿ ಯಾವುದೂ ಇಲ್ಲದೆ ಅನಾಗರೀಕರಾಗಿದ್ದೆವು..ಭಾರತವನ್ನಾಳಿದ್ದ ಮೊಘಲರೆಲ್ಲರೂ ಪರಧರ್ಮ ಸಹಿಷ್ಣುಗಳೂ ಅತ್ಯುತ್ತಮರೂ ಆಗಿದ್ದರು..ಇವರಲ್ಲೂ ಅತ್ಯುತ್ತಮ ರಾಜನೆಂದರೆ ಅಕ್ಬರ್..ಶಾಲೆಯ ಪಠ್ಯಪುಸ್ತಕದ ತುಂಬೆಲ್ಲಾ ಅಕ್ಬರನ ಗುಣಗಾನಗಳೇ ತುಂಬಿರುವುದು ದುರಂತ..ಆತನ ಧರ್ಮ ಸಹಿಷ್ಣುತೆ ಎಷ್ಟರ ಮಟ್ಟಿಗಿತ್ತೆಂದರೆ ಆತ ಜೋಧಾಬಾಯಿಗಾಗಿ ದೇವಾಲಯವನ್ನೇ ನಿರ್ಮಿಸಿದ್ದ..ಜೋಧಾಬಾಯಿ ಮತ್ತು ಅಕ್ಬರನ ಪ್ರೇಮಕಥೆಯು ಭಾರತದಲ್ಲಿ ರೋಮಿಯೋ ಜೂಲಿಯಟ್ ಕಥೆಗಿಂತಲೂ ಪ್ರಸಿದ್ಧವಾಗಿದೆ.ಅನೇಕ ಬಾರತೀಯ ಇತಿಹಾಸಗಾರರು ಅಕ್ಬರನನ್ನು ಕರುಣಾಳು ಎಂದು ಕರೆಯುತ್ತಾರೆ.ಆದರೆ ಪಾಶ್ಚಾತ್ಯ ಇತಿಹಾಸಗಾರ ವಿನ್ಸೆಂಟ್ ಸ್ಮಿತ್ ಅಕ್ಬರನ ನೈಜ ಸ್ವರೂಪವನ್ನು ಈ ರೀತಿಯಾಗಿ ವರ್ಣಿಸಿದ್ದಾನೆ.

*ತನ್ನ ತಂದೆ ಹುಮಾಯೂನನು ಕಾಮರಾನನ ಕಣ್ಣನ್ನು ಚುಚ್ಚಿಸಿದಂತೆ,ಅಕ್ಬರನು ಕಾಮರಾನನ ಮಕ್ಕಳನ್ನು ಗ್ವಾಲಿಯರ್ ನ ಕೋಟೆಗೆ ಕಳುಹಿಸಿ ಅಲ್ಲಿ ಅವರನ್ನು ಕೊಲೆ ಮಾಡಿಸಿದನು.

*೧೫೬೫ ನವೆಂಬರ್ ೫ ರ ಯುದ್ಧದಲ್ಲಿ ಹಿಂದೂ ರಾಜನಾದ ಹೇಮುವಿನ ಕಣ್ಣೊಳಗೆ ಬಾಣ ಹೊಕ್ಕು ಆತನ ದೃಷ್ಟಿಯು ಹೊರಟು ಹೋಯಿತು ಅದೇ ಸಮಯದಲ್ಲಿ ಆತನ ಆನೆಯೂ ದೃಷ್ಟಿಯನ್ನು ಕಳೆದುಕೊಂಡು ಮದವೇರಿ ಎತ್ತಲೋ ಓಡಿಹೋಯಿತು..ಇದರಿಂದ ತಮ್ಮ ರಾಜ ಯುದ್ಧರಂಗದಿಂದ ಪಲಾಯನಗೈದನೆಂದು ಹೇಮುವಿನ ಸೈನಿಕರು ಭಾವಿಸಿ …ನಿಜವಾಗಿಯೂ ಯುದ್ಧದಲ್ಲಿ ಗೆದ್ದಿದ್ದ ಹೇಮುವಿನ ಸೈನಿಕರು ತಪ್ಪು ಗ್ರಹಿಕೆಯಿಂದ ಪಲಾಯನಗೈದ ಕಾರಣ ಯುದ್ಧದಲ್ಲಿ  ಅಕ್ಬರ ಸೈನ್ಯಕ್ಕೆ ಮೇಲುಗೈಯಾಯಿತು.ಮಾರನೆಯದಿನ ದೃಷ್ಟಿ ಹೀನ ಹೇಮುವಿನ ಎದೆಯೊಳಗೆ ಈಟಿಯಿಂದ ಇರಿದು ಕೊಲೆಗೈದು ಆಗ್ರಾದಲ್ಲಿದ್ದ ಅವನ ವೃದ್ಧ ತಂದೆತಾಯಿಯರನ್ನು ಕೊಲ್ಲಿಸಿ ಅಲ್ಲಿನ ಹೆಂಗಸರನ್ನು ತನ್ನ ಜನಾನಾಗೆ ಸೇರಿಸಿಕೊಂಡಿದ್ದ.

*ಅಬುಲ್ ಫಸಲ್ ತನ್ನ ಬರಹದಲ್ಲಿ ‘ ಮಿರಾಬ್ ಖಾನ್ ಎಂಬ ಸರದಾನನ್ನು ಕಪಿಯಂತೆ ಮರದ ಪೆಟ್ಟಿಗೆಯೊಳಗೆ ಕೂಡಿ ಹಾಕಲಾಯಿತೆಂದೂ,ಆ  ಪೆಟ್ಟಿಗೆಯನ್ನು ಆನೆಯ ಸೊಂಡಿಲಿನಿಂದ ಸುತ್ತಿಸಿ ೫ ದಿನಗಳ ಪರ್ಯಂತ ಎಳೆಸಲಾಯಿತೆಂದೂ,ಆರನೆಯ ದಿನ ಅವನನ್ನು ಕೊಲ್ಲಿಸಲಾಯಿತೆಂದೂ’ ನಿರ್ವಿಕಾರವಾಗಿ ಬರೆದಿಟ್ಟಿದ್ದಾನೆ.

*ಚಿತ್ತೋರ್ ಕೋಟೆಯ ವಶವಾದ ಮೇಲೆ,ಯುದ್ಧ ನಿಂತಿದ್ದರೂ ಅಲ್ಲಿಯ ಜನರನ್ನೂ,ಪ್ರತಾಪ್ ಸಿಂಹನಿಗೆ ಆಹಾರ ಒದಗಿಸುತ್ತಿದ್ದ ರೈತರನ್ನೂ ಕೊಲ್ಲಿಸಲಾಯಿತು.ಸತ್ತಿದ್ದ ಜನರ ಜನಿವಾರಗಳೇ ಎಪ್ಪತ್ತನಾಲ್ಕುವರೆ ಮಣ ಭಾರವಿತ್ತು.

*ಅಹಮದಾಬಾದಿನ ರಾಜ ಮುಜಫರಶಹನನ್ನು ಆನೆಯ ಕಾಲಿಗೆ ಕಟ್ಟಿ ತುಳಿಸಲಾಯಿತು ಮತ್ತು ಆತನ ಸರದಾರನನ್ನು ಹಲ್ಲು ಕೀಳಿಸಿ ಕೊಲ್ಲಲಾಯಿತು.

*ಅಕ್ಬರನ ಬಂಧುವಾದ ಮಸೂರ್ ಹಕೀಮ್ ಮಿರ್ಜಾ ಎಂಬವನು ದಂಗೆ ಎದ್ದಾಗ ಅವನ ಕಣ್ಣುಗಳನ್ನು ಸೂಜಿಯ ದಾರದಿಂದ ಹೋಲಿಸಲಾಯಿತು.ಅವನ ೩೦೦ ಸೈನಿಕರ ಮುಖದ ಮೇಲೆ ಸತ್ತ ನಾಯಿ ಕತ್ತೆಗಳ ಚರ್ಮವನ್ನು ಎಳೆಸಿಅಮಾನುಷ ಅತ್ಯಾಚಾರ ನಡೆಸಿ ಕೊಲ್ಲಲಾಯಿತು.

*ಬಂಗಾಳದ ರಾಜ ದಾವೂದ್ ಖಾನ್ ಯುದ್ಧರಂಗದಲ್ಲಿ ಕೆಳಗೆ ಬಿದ್ದು ಕುಡಿಯಲು ನೀರು ಕೇಳಿದಾಗ ಅಕ್ಬರನ ಸೈನಿಕರು ತಮ್ಮ  ಪಾದರಕ್ಷೆಯೊಳಗೆ ನೀರು ತುಂಬಿ ಕುಡಿಸಿದ್ದರು ಮಾತ್ರವಲ್ಲದೆ ಯುದ್ಧ ಮುಗಿದ ನಂತರವೂ ೨೦೦೦ ಸೈನಿಕರನ್ನು ಕೊಂದು ಅವರ ತಲೆಯಿಂದ ೮ ಗೋಪುರಗಳನ್ನು ನಿರ್ಮಿಸಲಾಗಿತ್ತು.

*ತನ್ನ ಜನನಾದ ಬಾಲ ಸೇವಕನೊಬ್ಬ ಹಗಲು ಹೊತ್ತಿನಲ್ಲಿ ನಿದ್ರಿಸುತ್ತಿದ್ದ ಎಂದು ಕೋಟೆಯ ಮೇಲಿನಿಂದ ಕೆಳದೂಡಿ ಕೊಲ್ಲಲಾಗಿತ್ತು.

*ಜಹಾಂಗೀರನ ಹೆಂಡತಿಯೂ ಮಾನಸಿಂಗನ ಹೆಂಡತಿಯೂ ಆಗಿದ್ದ ಮನಬಾ ಅಕ್ಬರನ ಕೃತ್ಯಗಳಿಗೆ ಹೇಸಿ ಉಪವಾಸ ಮಾಡಿ ಸತ್ತಳು( ಕೆಲವು ಇತಿಹಾಸಗಾರರ ಪ್ರಕಾರ ಆಕೆಗೆ ವಿಷವಿಕ್ಕಿ ಕೊಲ್ಲಲಾಗಿತ್ತು)

*ಅಕ್ಬರನು ತನ್ನ ಆಸ್ಥಾನದಲ್ಲಿ ವಿಷಪ್ರಾಶನ ಮಾಡಿಸಲು ಒಬ್ಬ ಅಧಿಕಾರಿಯನ್ನೇ ನೇಮಿಸಿದ್ದನು.ಅಕ್ಬರನ ಕಣ್ಸನ್ನೆಯಂತೆ ವಿಷ ನೀಡುವುದೇ ಈತನ ಉದ್ಯೋಗವಾಗಿತ್ತು.

*ಅಕ್ಬರನ ಕೊಲೆಯ ವಿಧಾನಗಳು ವಿವಿಧವಾಗಿತ್ತು.ಕೆಲವರನ್ನು ನೀರಿನ ಪ್ರವಾಹದಲ್ಲಿ ಮುಳುಗಿಸಿದರೆ ಕೆಲವರಿಗೆ ವಿಷಪ್ರಾಶನ ಮಾಡಿಸುತ್ತಿದ್ದ.

*ಆಯುಧದಿಂದ ಚುಚ್ಚುವುದು,ಆನೆಯ ಕಾಲಲ್ಲಿ ತುಳಿಸವುದು,ಮೊಳೆ ಹೊಡೆಸುವುದು,ತಲೆ ಹಾರಿಸುವುದು,ನೇಣು ಹಾಕುವುದು ಇವು ಕೆಲವು ರೀತಿಯ ಮರಣದಂಡನೆಗಳು.

*ಕೆಲವು ಚಿಕ್ಕ ಮಕ್ಕಳನ್ನು ಮನುಷ್ಯರ ಸಹವಾಸದಿಂದ ಬೇರ್ಪಡಿಸಿ ಮೂಕರನ್ನಾಗಿ ಬೆಳೆಸುತ್ತಿದ್ದ.

ಅಕ್ಬರನ ಈ ಅತಿ ಕ್ರೂರ ಶಿಕ್ಷೆಗಳನ್ನು ವರ್ಣಿಸುವ ತೈಲಚಿತ್ರ ಈಗಲೂ ಲಂಡನ್ನಿನ ಕೆನ್ನಿಂಗ್ಟನ್ ವಸ್ತುಸಂಗ್ರಹಾಲಯದಲ್ಲಿ ದೊರೆಯುತ್ತದೆ.ಅಂದಿನ ಕಾಲದಲ್ಲಿ ಮುಸ್ಲಿಮರು ಪರಸ್ಪರ ಸಲಾಂ ಆಲೆಕ್ಕುಮ್ ಎಂದೇ ಪರಸ್ಪರ ಅಭಿನಂದಿಸುತ್ತಿದ್ದರು..ಆದರೆ ಅಲ್ಲಾಹು ಅಕ್ಬರ್ ಎಂಬ ಘೋಷಣೆಯನ್ನು ಅಕ್ಬರನು ಜಾರಿಗೆ ತಂದಿದ್ದ.ಅಕ್ಬರನಿಗೆ ಸೆರೆ ಸಿಕ್ಕಿದ ಸೈನಿಕರು ಯುದ್ಧ ಖೈದಿಗಳಾಗಿ ಪರಿಗಣಿಸಲ್ಪಡುತ್ತಿರಲಿಲ್ಲ..ಅವರೂ ಅವನ ಗುಲಾಮರಾಗಿ ಅವರನ್ನು ಅಕ್ಬರ್ ತನಗಿಷ್ಟ ಬಂದವರಿಗೆ ಹಂಚುತ್ತಿದ್ದ.

ವಿಲಿಯಮ್ ಲೀಡ್ಸ್ ಎಂಬವನಿಗೆ ೫ ಗುಲಾಮರನ್ನು ನೀಡಿದ್ದ ಎಂಬ ಉಲ್ಲೇಖವಿದೆ.ಅಕ್ವಅವೀನಾ ಎಂಬ ಫಾದರ್ ಪೋರ್ಚುಗಲ್ ಗೆ ಹೊರಟಾಗ ಅಕ್ಬರ್ ಅವನಿಗೆ ದಾಸಿಯರನ್ನು ಕೊಡಲು ಮುಂದಾದನೆಂದೂ ಸನ್ಯಾಸಿಯಾದ ತನಗೆ ಅವರ ಗೊಡವೆ ಏಕೆಂದು ಗುಲಾಮರಾಗಿದ್ದ ಐದು ಮಹಿಳೆಯರನ್ನು ಬಿಡುಗಡೆ ಮಾಡಿಸಿದ್ದಾಗಿ ಆತನೇ ಬರೆದಿಟ್ಟಿದ್ದಾನೆ.ಹೀಗೆ ಅಕ್ಬರ್ ಪುರುಷರನ್ನು ಗುಲಾಮರನ್ನಾಗಿಯೂ,ಸ್ತ್ರೀಯರನ್ನು ವೇಶ್ಯೆಯರನ್ನಾಗಿಯೂ ಕಾಣುತ್ತಿದ್ದನೆಂಬುದು ಸ್ಪಷ್ಟವಾಗುತ್ತದೆ.ಬದಾಯುನಿ ತನ್ನ ಬರಹದಲ್ಲಿ ತನ್ನನ್ನು ವಿರೋಧಿಸಿದ ಕೆಲವು ಕಾಜಿ ಮುಲ್ಲಾಗಳನ್ನೇ ಕತ್ತೆ ಮತ್ತು ಒಂಟೆಗಳಿಗೆ ಪ್ರತಿಯಾಗಿ ಅಕ್ಬರನಿಗೆ ಮಾರಿದ್ದನೆಂದು ಉಲ್ಲೇಖಿಸಿದ್ದಾನೆ.ಹೀಗೆ  ತನ್ನದೇ ಮತದ ಪಂಡಿತರನ್ನೂ ಸರದಾರರನ್ನು ಹೋಗಲಿ ಶತ್ರು ರಾಜನನ್ನು ಗೌರವಿಸದೆ ಕ್ರೌರ್ಯವನ್ನು ಮೆರೆದ ವ್ಯಕ್ತಿ ಪರಧರ್ಮ ಸಹಿಷ್ಣುವಾಗಿದ್ದ ಕರುಣಾಳುವಾಗಿದ್ದ ಎಂದರೆ ಹೇಗೆ ನಂಬಬೇಕೆಂದು ತಿಳಿದವರ್ಯಾರಾದರೂ ಇದ್ದರೆ ದಯವಿಟ್ಟು ಹೇಳಿ….

ಉಲ್ಲೇಖ : ಇತಿಹಾಸದ ಮೇಲೆ ಹೊಂಬೆಳಕು

-Deepashree M

Tags

Related Articles

FOR DAILY ALERTS
Close