ಪ್ರಚಲಿತ

ಮಹಾನ್ ಜ್ಯೋತಿಷ್ಯೆಯಾಗಿದ್ದರೂ ಆಕೆಯ ನಾಲಿಗೆಯನ್ನು ತಾನೇ ಕೊಯ್ಯಲು ಹೇಳಿದ್ಯಾಕೆ ಖನಾ? ವರಹಾಳ ಸೊಸೆಗ್ಯಾಕೆ ಬಂತು ಇಂತಹಾ ಪರೀಕ್ಷೆ.?

“ ಭಾರತೀಯ ಸ್ತ್ರೀ,ಭಾರತೀಯವಸ್ತ್ರದಲ್ಲಿ ಭಾರತದ ಅಮರ ಋಷಿವಾಣಿಯನ್ನು ಪಾಶಾತ್ಯ ರಾಷ್ಟ್ರಗಳಲ್ಲಿ ಮೊಳಗುವಂತಾದರೆ,ಪಾಶಾತ್ಯ ರಾಷ್ಟ್ರಗಳಲ್ಲಿ ಒಂದು ಹೊಸ ಅಲೆಯೇ ಮೇಲೇಳಲಿದೆ. ಮೈತ್ರೇಯಿ , ಖನಾ, ಸಾವಿತ್ರಿ,ಲೀಲಾವತಿ ಮತ್ತು ಉಭಯ ಭಾರತೀಯರು ಜನಿಸಿದ ಈ ನಾಡಿನಲ್ಲಿ ಇದನ್ನು ಮಾಡಬಲ್ಲ ಸ್ತ್ರೀ ಸಿಗಲಾರಳೇನು ?” ಎಂದು ಸ್ವಾಮೀ ವಿವೇಕಾನಂದರು ತಮ್ಮ ಪತ್ರವೊಂದರಲ್ಲಿ ಉಲ್ಲೇಖಿಸಿದ್ದರು.ಖನಾ ಮತ್ತು ಲೀಲಾವತಿ ಭಾರತದ ಜ್ಯೋತಿಷ್ಯ ಶಾಸ್ತ್ರ ಮತ್ತು ಗಣಿತ ಶಾಸ್ತ್ರಗಳಲ್ಲಿ ಬಹುದೊಡ್ಡ ಹೆಸರನ್ನು ಹೊಂದಿರುವ ಮಹಿಳೆಯರಾಗಿದ್ದಾರೆ.

ಏಳು ಅಥವಾ ಎಂಟನೆಯ ಶತಮಾನದಲ್ಲಿ ಉಜ್ಜಯಿನಿಯನ್ನು ಆಳುತ್ತಿದ್ದ ರಾಜಾ ವಿಕ್ರಮಾದಿತ್ಯನ ಆಸ್ಥಾನದಲ್ಲಿ ಪ್ರಸಿದ್ಧರಾಗಿದ್ದ ನವರತ್ನಗಳಲ್ಲಿ ಮಹಾನ್ ಜ್ಯೋತಿಷಿ ವರಾಹನೂ ಒಬ್ಬರಾಗಿದ್ದರು..ವರಾಹಾರಿಗೆ ಪ್ರಿಥುವ್ಯನೆಂಬ ಪುತ್ರನು ಜನಿಸಿದನು..ಹುಟ್ಟಿದ ತಕ್ಷಣವೇ ಮಗನ ಜಾತಕವನ್ನು ಪರೀಕ್ಷಿಸುವಾಗ ವರಾಹರಿಂದ ಒಂದು ಸಣ್ಣ ತಪ್ಪು ನಡೆದುಹೋಯಿತು ಮತ್ತು ಇದರಿಂದಾಗಿ ಅವರು ಮಗುವಿನ ಆಯುಷ್ಯ ೧೦ ವರ್ಷಗಳೆಂದು ಅರಿತು ಅಲ್ಪಾಯುಷಿ ಮಗನನ್ನು ಪ್ರೀತಿಸಿ ಮುಂದೆ ದುಃಖಕ್ಕೀಡಾಗುವುದು ಬೇಡವೆಂದು ಮಗುವನ್ನು ಮಣ್ಣಿನ ಮಡಕೆಯಲ್ಲಿರಿಸಿ ಕ್ಷಿಪ್ರಾ ನದಿಯಲ್ಲಿ ತೇಲಿಬಿಟ್ಟನು.ಮಡಕೆಯು ತೇಲಿಕೊಂಡು ಹೋಗಿ ಕೆಲವು ವರ್ತಕರ ಕೈಸೇರಿತು..ಅವರು ಆ ಮಗುವಿನ ಪಾಲನೆ ಪೋಷಣೆಯನ್ನು ಮಾಡಿ ಅವನಿಗೆ ಒಂದು ಕೆಲಸವನ್ನೂ ಕೊಟ್ಟರು.ಬಾಲಕನು ಅತ್ಯಂತ ಸಮರ್ಥನಾಗಿದ್ದನು ಅವನಿಗೆ ವಂಶಪಾರಂಪರ್ಯವಾಗಿ ಬಂದ ಜ್ಯೋತಿಷ್ಯಶಾಸ್ತ್ರದ ಪ್ರಜ್ಞೆಯು ಬಹಳವಾಗಿತ್ತು.ಅವನು ಊರಿಂದೂರಿಗೆ ಸಂಚರಿಸುತ್ತ ಲಂಕೆಯ ಒಬ್ಬ ಪ್ರಸಿದ್ಧ ಜ್ಯೋತಿಷಿಯ ಮನೆಯನ್ನು ಸೇರಿದನು.ಅವನ ಶಿಷ್ಯನಾಗಿ ಜ್ಯೋತಿಷ್ಯವನ್ನೂ ಕಲಿತನು ಮಾತ್ರವಲ್ಲದೆ ಅತ್ಯಂತ ಪ್ರತಿಭಾನ್ವಿತ ಜ್ಯೋತಿಷಿಯಾದ ಅವನ ಮಗಳಾದ ಖಾನಾಳನ್ನು ವಿವಾಹವಾದನು.

ಕಾಲ ಕಳೆದಂತೆ ಸಂಚಾರ ನಿಮಿತ್ತ ಪ್ರಿಥುವ್ಯ ಪತ್ನಿಯೊಂದಿಗೆ ಭಾರತಕ್ಕೆ ಹಿಂತಿರುಗಿ ಉಜ್ಜಯಿನಿಯನ್ನು ತಲುಪಿದನು.ಅಲ್ಲಿ ವಿಕ್ರಮಾದಿತ್ಯನ ಆಸ್ಥಾನದಲ್ಲಿ ವರಾಹನನ್ನು ಸೋಲಿಸಿಯೂ ಬಿಟ್ಟನು.ಈ ನಡುವೆ ಅದು ಹೇಗೋ ವರಾಹಾನಿಗೆ ಪ್ರಿಥುವ್ಯ ತನ್ನ ಮಗ ಎಂದು ತಿಳಿಯಿತು. ಮಗ ಸೊಸೆಯರೊಂದಿಗೆ ಅನುನಯದಿಂದ ಸಂಭಾಷಿಸಿ ಅವರನ್ನು ತನ್ನೊಂದಿಗೆ ಇರಿಸಿಕೊಂಡನು..ಈಗ ಕಷ್ಟಕರವಾದ ಜ್ಯೋತಿಷ್ಯದ ಸಮಸ್ಯೆಗಳನ್ನು ಮಗ ಸೊಸೆಯರು ಪರಿಹರಿಸತೊಡಗಿದರು.ಕೆಲವೊಮ್ಮೆ ಖನಾ ಮನೆಯಲ್ಲಿದ್ದಾಗ ಮಾವನ ತಪ್ಪುಗಳನ್ನು ಎತ್ತಿ ಹೇಳುತ್ತಿದ್ದಳು..ಆದರೂ ಸುತ್ತುಮುತ್ತಲ ಜನರಿಗೆ ಪ್ರಿಥುವ್ಯನ ಪತ್ನಿಯ ಜ್ಞಾನದ ಅರಿವಿರಲಿಲ್ಲ..ಮಾವ ವರಾಹಾನಿಗೆ ಸೊಸೆಯ ಪ್ರತಿಭೆಯನ್ನು ಕಂಡು ಅಸೂಯೆಯಾಯಿತು ಯಾಕೆಂದರೆ ವರಾಹರಾಗಲಿ ಪತಿ ಪ್ರಿಥುವ್ಯನಾಗಲಿ ಜ್ಯೋತಿಷ್ಯ ಶಾಸ್ತ್ರದಲ್ಲಿ ಅವಳ ಪ್ರತಿಭೆಗೆ ಸಾಟಿಯಾಗಿರಲಿಲ್ಲ.ಹೀಗಿರಲು ಒಂದು ದಿನ ರಾಜನು ವರಾಹಾನಿಗೆ ನಕ್ಷತ್ರಗಳಿಗೆ ಸಂಬಂಧಿಸಿದಂತೆ ಒಂದು ಕಠಿಣ ಪ್ರಶ್ನೆಯನ್ನು ಕೇಳಿದನು..ಆಗ ವರಾಹನು ಉತ್ತರಿಸಲು ಒಂದು ದಿನದ ಕಾಲಾವಕಾಶ ಕೇಳಿ ಪಡೆದುಕೊಂಡನು.ಮನೆಗೆ ಬಂದು ಬಹಳಷ್ಟು ಆಲೋಚಿಸಿದಾಗಲೂ ಉತ್ತರ ಸಿಗದೇ ಹೋದಾಗ ಊಟದ ಸಮಯದಲ್ಲಿ ಖನಾ ಅತ್ಯಂತ ಸುಲಭವಾಗಿ ಆ ಪ್ರಶ್ನೆಗೆ ಉತ್ತರವನ್ನು ನೀಡಿದಳು.ರಾಜನ ಆಸ್ಥಾನದಲ್ಲಿ ತನ್ನ ಮರ್ಯಾದೆಯನ್ನು ಸೊಸೆ ಕಾಪಾಡಿದಳೆಂದು ವರಾಹಾನಿಗೆ ಬಹಳ ಸಂತೋಷವಾಯಿತು.

ಮರುದಿನ ರಾಜಸಭೆಯಲ್ಲಿ ವರಾಹನು ರಾಜನಿಗೆ ಉತ್ತರವನ್ನು ಒಪ್ಪಿಸಿದಾಗ ರಾಜನು ವರಾಹನಲ್ಲಿ ಉತ್ತರವನ್ನು ಹೇಗೆ ಪಡೆದೆ ಎಂದು ಪ್ರಶ್ನಿಸಿದನು..ಆಗ ವರಾಹನು ಉತ್ತರ ನೀಡಿದವಳು ತನ್ನ ಸೊಸೆ ಖನಾ ಎಂದು ಒಪ್ಪಿಕೊಳ್ಳಬೇಕಾಯಿತು.ಖಾನಾಳ ಪ್ರತಿಭೆಗೆ ರಾಜ ಮತ್ತು ಆಸ್ಥಾನ ಪಂಡಿತರೆಲ್ಲಾ ಬೆರಗಾದರು.ರಾಜ “ ಖಾನಾಳನ್ನು ರಾಜಗೌರವದೊಂದಿಗೆ ಆಸ್ಥಾನಕ್ಕೆ ಕರೆತನ್ನಿರಿ,ನಾನು ಇನ್ನೂ ಕೆಲವು ಗಹನ ಪ್ರಶ್ನೆಗಳನ್ನು ಕೇಳಬೇಕು” ಎಂದು ಆಜ್ಞಾಪಿಸಿದನು..ಮೊದಲೇ ಖಾನಾಳ ಪ್ರತಿಭೆಯ ಬಗ್ಗೆ ಅಸೂಯೆಯನ್ನು ಹೊಂದಿದ್ದ ವರಾಹಾನಿಗೆ ಈ ವಿಚಾರವು ಸಹ್ಯವಾಗಲಿಲ್ಲ.ಮನೆಗೆ ಮರಳಿದ ವರಾಹನು ತನ್ನ ಮಗ ಪ್ರಿಥುವ್ಯ ಖನಾಳ ನಾಲಗೆಯನ್ನು ಕತ್ತರಿಸುವಂತೆ ಆದೇಶಿಸಿದನು.ಪ್ರಿಥುವ್ಯ ಸಂದಿಗ್ಡದಲ್ಲಿ ಸಿಲುಕಿದನು ತಂದೆಯ ಆದೇಶವನ್ನು ಪಾಲಿಸುವುದೋ ಅಥವಾ ಪ್ರಾಮಾಣಿಕ ಪತಿವ್ರತಾ ಪತ್ನಿಯ ವಿದ್ವತ್ತಿಗೆ ಬೆಲೆ ಕೊಡುವುದೋ ಎಂದು,ಇಂತಹಾ ಸಂದರ್ಭದಲ್ಲೂ ಖನಾ ತನ್ನ ಪತಿಗೆ ನೆರವಾದಳು.ಖಾನಾಳು ತನ್ನ ಪತಿಗೆ ಪತ್ನಿಯ ಮೇಲಿನ ಪ್ರೇಮಕ್ಕಿಂತ ತಂದೆಯ ಮಾತನ್ನು ಪರಿಪಾಲಿಸುವುದೇ ಶ್ರೇಷ್ಠವೆಂದು ಸೂಚಿಸಿದಳು.ಅಲ್ಲದೆ ತಾನೊಂದು ಅವಗಢದಲ್ಲಿ ತೀರಿಕೊಳ್ಳಲಿದ್ದೇನೆ ಆದ್ದರಿಂದ ಯಾವುದೇ ಚಿಂತೆಯೂ ಇಲ್ಲದೆ ತನ್ನ ನಾಲಗೆಯನ್ನು ಕತ್ತರಿಸುವಂತೆ ಕೇಳಿಕೊಂಡಳು. ಪ್ರಿಥುವ್ಯ ಅತ್ಯಂತ ದುಃಖದಿಂದ ತನ್ನ ಪ್ರತಿಭಾವಂತ ಪತ್ನಿಯ ವಿನಂತಿಯನ್ನು ಸ್ವೀಕರಿಸಬೇಕಾಯಿತು.ಈ ದಿಟ್ಟ ಮಹಿಳೆಯು ತನ್ನ ಪತಿಗೆ ದಿಟ್ಟವಾದ ಕರ್ತವ್ಯಪಾಲನೆಯ ವಿಧಾನವನ್ನು ತೋರಿಸಿಕೊಟ್ಟಳು.ಕುಲಮರ್ಯಾದೆಯನ್ನು ಮೀರಿ ತಾನು ರಾಜನ ಆಸ್ಥಾನಕ್ಕೆ ಹೋಗಬಾರದೆಂಬ ಮಾವನ ಬಯಕೆಯನ್ನು ಈಡೇರಿಸಿದಳು. ಉತ್ತರಭಾರತದಲ್ಲಿ ಇಂದಿಗೂ ರೈತರು ಖನಾ ಕಲಿಸಿಕೊಟ್ಟ ಜ್ಯೋತಿಷ್ಯ ಶಾಸ್ತ್ರದ ಸೂತ್ರಗಳನ್ನು ಅನುಸರಿಸಿ ಬಹಳ ಸರಿಯಾಗಿ ಮಳೆಯ ಆಗಮನವನ್ನು ಗ್ರಹಿಸುತ್ತಾರೆ.

-Deepashree M

Tags

Related Articles

FOR DAILY ALERTS
Close