ಪ್ರಚಲಿತ

ಅಧ್ಯಾಯ 20: ಅವರೊಬ್ಬ ವಿಜ್ಞಾನಿ, ಬದುಕಿದ್ದು ಮಾತ್ರ ಸನ್ಯಾಸಿಯ ಹಾಗೆ! ಇದು ರಜ್ಜು ಭೈಯ್ಯ ಎಂದೇ ಪ್ರೀತಿಯಿಂದ ಕರೆಸಿಕೊಂಡ ರಾಷ್ಟ್ರೀಯ ಸ್ವಯಂಸೇವಕ ಸಂಘದ ಸರಸಂಘಚಾಲಕರ ಜೀವನಗಾಥೆ!

ಅಧ್ಯಾಯ 20: ಶೈಕ್ಷಣಿಕವಾಗಿ ಅತ್ಯುನ್ನತ ಸಾಧನೆಗಳನ್ನು ಮಾಡಿದ, ಒಬ್ಬ ಅಪೂರ್ವ ಸಾಧಕ, ಶಿಕ್ಷಕ, ಪ್ರೊಫೆಸರ್ ರಾಜೇಂದ್ರ ಸಿಂಗ್

ಪರಮಾಣು ಶಾಸ್ತ್ರಜ್ಞರು ಆರೆಸ್ಸೆಸ್ ಸರಸಂಘಚಾಲಕ ರೇ??!!!

ಆಶ್ಚರ್ಯವೆನಿಸಿದರೂ ಸತ್ಯ. ಆರೆಸ್ಸೆಸ್ ಅನ್ನು ಕೇವಲ ಒಂದು ಹಿಂದೂ ಸಂಘಟನೆ ಎಂದು ನೋಡುವವರಿಗೆ ಸಂಘದ ಪರಮೋಚ್ಛ ಸ್ಥಾನ ಗ್ರಹಿಸಿದ ವ್ಯಕ್ತಿ ಒಬ್ಬ ವಿಜ್ಞಾನಿ ಎಂಬ ವಿಷಯ ಆಶ್ಚರ್ಯ ತರಿಸಬಹುದು. ಆದರೆ ಸಂಘದ ಪ್ರತಿಯೊಬ್ಬ ಸರಸಂಘಚಾಲಕ ರೂ ಕೂಡ ಉತ್ತಮ ಪದವಿ ಹಾಗೂ ಶೈಕ್ಷಣಿಕವಾಗಿ ಸಾಧನೆಗೈದವರೇ ಆಗಿದ್ದಾರೆ.ಪ್ರೊ. ರಾಜೇಂದ್ರ ಸಿಂಗ್ ಪರಮಾಣು ಶಾಸ್ತ್ರವನ್ನು ಆಯ್ದುಕೊಂಡ ಕಾಲದಲ್ಲಿ ವಿಜ್ಞಾನ ಓದುವವರೇ ಕಡಿಮೆ ಅಂತಹುದರಲ್ಲಿ ಪರಮಾಣು ವಿಜ್ಞಾನ ಅವರ ಕಲಿಕೆಯ ವಿಷಯವಾಗಿತ್ತು ಎಂದರೆ ಅವರ ಪಾಂಡಿತ್ಯ ಹಾಗೂ ಬುದ್ಧಿಮತ್ತೆಯ ಅಂದಾಜು ಸಿಗಬಹುದು.ಪ್ರೊ. ರಾಜೇಂದ್ರ ಸಿಂಗ್ ಹುಟ್ಟಿದ್ದು 29 ಜನವರಿ 1922 ರಲ್ಲೀ. ರಜ್ಜು ಭೈಯ್ಯಾ ಎಂದೇ ಹೆಸರಾಗಿದ್ದ ಇವರು 1994 ರಿಂದ 2000 ನೇ ಇಷವಿಯ ವರೆಗೆ ಸಂಘದ ನಾಲ್ಕನೇ ಸರಸಂಘಚಾಲಕರಾಗಿ ಕಾರ್ಯ ನಿರ್ವಹಿಸಿದವರು.1960 ರ ಸುಮಾರಿನಲ್ಲಿ ಅಲಹಾಬಾದ್ ವಿಶ್ವವಿದ್ಯಾಲಯದಲ್ಲಿ ಭೌತಶಾಸ್ತ್ರ ವಿಭಾಗದ ಮುಖ್ಯಸ್ಥರಾಗಿದ್ದ ರಜ್ಜು ಭೈಯ್ಯಾ ಜನಿಸಿದ್ದು ಉತ್ತರಪ್ರದೇಶದ ಶಾಹ್ ಜಹಾನ್ ಪುರದಲ್ಲಿ. ಶ್ರೀಮತಿ ಜ್ವಾಲಾ ದೇವಿ ಹಾಗೂ ಶ್ರೀ ಬಲ್ಬೀರ್ ಸಿಂಗ ರ ಸುಪುತ್ರರಾದ ರಜ್ಜು ಭೈಯ್ಯ ತಮ್ಮ ಮೆಟ್ರಿಕ್ಯುಲೇಷನ್ ಅನ್ನು ಉನ್ನಾವೋ ನಲ್ಲಿ ಪೂರ್ಣಗೊಳಿಸಿ, ನವದೆಹಲಿಯ ಮೊಡರ್ನ್ ಸ್ಕೂಲ್ನಲ್ಲಿ ತಮ್ಮ ಶಿಕ್ಷಣ ಮುಂದುವರೆಸಿದರು. ನೈನಿತಾಲ್ ನ ಸೈಂಟ್ ಜೋಸೆಫ್ ಕಾಲೇಜ್ ನಲ್ಲಿ ತಮ್ಮ ಪದವಿ ಶಿಕ್ಷಣ ಪಡೆದ ರಜ್ಜು ಭೈಯ್ಯಾ ಅಲಹಾಬಾದ್ ವಿಶ್ವವಿದ್ಯಾಲಯದಿಂದ ಭೌತಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದರು.

ರಜ್ಜು ಭೈಯ್ಯಾ ಪರಮಾಣು ಶಾಸ್ತ್ರದಲ್ಲಿ ಅತ್ಯಂತ ಪರಿಣಿತಿ ಹೊಂದಿದ್ದರು. ಮಕ್ಕಳಿಗೆ ಪ್ರಿಯ ಶಿಕ್ಷಕರೂ ಆಗಿದ್ದರು. ಸರ್ ಸಿವಿ ರಾಮನ್ ಇವರು ಸ್ನಾತಕೋತ್ತರ ವಿದ್ಯಾರ್ಥಿಯಾಗಿದ್ದಾಗ ಮುಂದಿನ ವಿದ್ಯಾಭ್ಯಾಸಕ್ಕಾಗಿ ಫೆಲೋಶಿಪ್ ಅನ್ನು ಕೂಡ ನೀಡಬಯಸಿದ್ದರು. ಆದರೆ ರಜ್ಜು ಭೈಯ್ಯಾ ಜೀವನ ಹೊಸತೊಂದು ಆಯಾಮ ಪಡೆದುಕೊಳ್ಳ ಲಿತ್ತು.1941 ರ ಕ್ವಿಟ್ ಇಂಡಿಯಾ ಚಳುವಳಿ ಸಮಯ. ರಾಜೇಂದ್ರ ಸಿಂಗ್ ಸಂಘದ ಸಂಪರ್ಕಕ್ಕೆ ಬಂದರು.1966ರ ಹೊತ್ತಿಗೆ ತಮ್ಮ ವಿಶ್ವವಿದ್ಯಾಲಯ ದಲ್ಲಿನ ಹುದ್ದೆಗೆ ರಾಜೀನಾಮೆ ಕೊಟ್ಟು, ಪೂರ್ಣಕಾಲಿಕ ಪ್ರಚಾರಕರಾಗಿ ತಮ್ಮ ಜೀವನದ ಹೊಸ ಅಧ್ಯಾಯ ಆರಂಭಿಸಿದರು. 1980 ರ ಹೊತ್ತಿಗೆ, ರಜ್ಜು ಭೈಯ್ಯಾ ಸಂಘದ ಸರಕಾರ್ಯವಾಹ ರಾಗಿ ಕೆಲಸ ಮಾಡುತ್ತಿದ್ದರು.1994ರಲ್ಲಿ ಬಾಳಾಸಾಹೇಬ ದಿಯೊರಸ್ ನಂತರ ಸಂಘವನ್ನು ನಡೆಸಲು ಸರಸಂಘಚಾಲಕ ರಾಗಿ ನೇಮಕಗೊಂಡರು.ಆರು ವರ್ಷಗಳ ಕಾಲ ಅವರು ಈ ಸ್ಥಾನದಲ್ಲಿದ್ದು, ಆಗಿನ ಸಮಯವು ಸಂಘಕ್ಕೂ ಹಾಗೂ ಭಾರತಕ್ಕೂ ಅತ್ಯಂತ ಮಹತ್ವಪೂರ್ಣದ್ದಾಗಿತ್ತು.1998, ಭಾರತೀಯ ರಾಜಕೀಯ ನೆಲೆಯಲ್ಲಿ ಹಲವಾರು ಪಲ್ಲಟಗಳು ನಡೆದವು. ಅಲ್ಲಿಯವರೆಗೂ ವಿರೋಧ ಪಕ್ಷದಲ್ಲಿ ಭಾರತೀಯ ಜನತಾ ಪಾರ್ಟಿಯ, ಚುನಾವಣೆಗಳಲ್ಲಿ ಅತ್ಯಂತ ದೊಡ್ಡ ಪಕ್ಷವಾಗಿ ಹೊಮ್ಮುವ ಮೂಲಕ NDA ಕೇಂದ್ರದಲ್ಲಿ ಅಧಿಕಾರ ಹಿಡಿಯಿತು. ಆರೆಸ್ಸೆಸ್ ಹಾಗೂ ಬಿಜೆಪಿ ಯ ಸಿದ್ಧಾಂತಗಳಲ್ಲಿ ಇರುವ ಸಾಮ್ಯತೆಗಳ ಕಾರಣ ಈ ಸಮಯವು ಅತ್ಯಂತ ಮಹತ್ವ ಪಡೆಯಿತು.ಫೆಬ್ರವರಿ 2000 ನೇ ಇಸವಿಯಲ್ಲಿ ತಮ್ಮ ಅನಾರೋಗ್ಯದ ಕಾರಣದಿಂದ ರಜ್ಜು ಭೈಯ್ಯಾ ತಮ್ಮ ಸ್ಥಾನಕ್ಕೆ ಕೆ ಎಸ್ ಸುದರ್ಶನ್ ರವರ ಹೆಸರನ್ನು ಸೂಚಿಸಿ ಸರಸಂಘಚಾಲಕ ಸ್ಥಾನವನ್ನು ತೊರೆದರು.
ತುರ್ತು ಪರಿಸ್ಥಿತಿಯ ಸಮಯದಲ್ಲಿ ಭೂಗತರಾಗಿ ಭಾರತ ಪರ್ಯಂತ ತಿರುಗಾಟ ನಡೆಸಿದರು.

“ಎಲ್ಲಾ ಮನುಷ್ಯರೂ ಸ್ವಭಾವತಃ ಒಳ್ಳೆಯವರೇ, ನಮ್ಮ ವ್ಯವಹಾರ ಅದೇ ಒಳ್ಳೆತನವನ್ನು ಮನಸ್ಸಿನಲ್ಲಿ ಇಟ್ಟುಕೊಂಡೇ ನಡೆಯಬೇಕು. ಕೋಪ, ತಾಪ, ಈರ್ಷೆ ಇವೆಲ್ಲಾ ತನ್ನ ಜೀವನದ ಸಂಘರ್ಷದಲ್ಲಿ ವ್ಯಕ್ತಿಯೊಬ್ಬನ ಮೇಲೆ ಪ್ರಭಾವ ಬೀರುವ ವಿಷಯಗಳು ಅವನ್ನು ಮನ್ನಿಸಿ, ಅವನ ಸ್ವಭಾವವನ್ನು ಮಾತ್ರ ಗಣನೆಗೆ ತೆಗೆದುಕೊಳ್ಳಬೇಕು” ಎನ್ನುತ್ತಿದ್ದರು ರಜ್ಜು ಭೈಯಾಅವರು ನುಡಿದಂತೆ ನಡೆಯುತ್ತಿದ್ದರು ಎನ್ನುವುದಕ್ಕೆ ಒಂದು ಉದಾಹರಣೆ,1995 ರಲ್ಲಿ, ಹಿಂದೂ ಸ್ವಯಂಸೇವಕ ಸಂಘದ ಕಾರ್ಯಕ್ರಮವೊಂದು ಲಂಡನ್ ನಲ್ಲಿ ನಡೆಯುವುದಿತ್ತು. ಕಾರ್ಯಕ್ರಮವನ್ನು ವಿರೋಧಿಸಿ ಖಲಿಸ್ಥಾನಿ ಬೆಂಬಲಿಗರು ಕಾರ್ಯಕ್ರಮ ನಡೆಯುವ ಸ್ಥಳದಲ್ಲಿ ಜಮಾಯಿಸಿದ್ದರು. ಸ್ಕಾಟ್ಲೆಂಡ್ ಯಾರ್ಡ್ ನ ಪೊಲೀಸರು ಕಾರ್ಯಕ್ರಮದ ಆಯೋಜಕರನ್ನು ಸಂಪರ್ಕಿಸಿ ಮಾಹಿತಿ ಕೇಳಿದಾಗ, ಸರಸಂಘಚಾಲಕ ರನ್ನು ಬರಮಾಡಿಕೊಂಡು ಯಾವುದೇ ಅಡಚಣೆಗಳು ಉಂಟಾಗದ ರೀತಿಯಲ್ಲಿ ಕಾರ್ಯಕ್ರಮ ನಡೆಯಲಿದೆ ಎಂದು ಆಯೋಜಕರು ಹೇಳಿದರು.1984 ರಲ್ಲಿ ನಡೆದ ಒಂದು ಘಟನೆ ಸಂಘದ ಶಿಸ್ತು ಸಿದ್ಧಾಂತ ಎಂತದ್ದು ಎಂಬುದನ್ನು ಲಂಡನ್ ಪೊಲೀಸರಿಗೂ ಮನದಟ್ಟು ಮಾಡಿಕೊಟ್ಟಿತ್ತು.

ಹಿಂದೂ ಸಮ್ಮೇಳನ ನಡೆಯುವ ಜಾಗದಲ್ಲಿ ಖಲಿಸ್ಥಾನಿಗಳು ಸೇರಿ ಘೋಷಣೆ ಕೂಗುವಾಗ, ಹಿಂದೂ ಧರ್ಮದ ವಿರುದ್ಧ ನಿಂದನಾ ಭರಿತ ಹೇಳಿಕೆಗಳನ್ನು ನೀಡುವಾಗ ಕೂಡ ಸ್ವಯಂಸೇವಕರು ತಮ್ಮ ಸ್ಥೈರ್ಯ ಕಳೆದುಕೊಳ್ಳದೆ ತಮ್ಮ ಶಿಸ್ತಿನ್ನು ಕಾಯ್ದುಕೊಂಡು ಯಾವುದೇ ಗಲಭೆಗಳು ಆಗದಂತೆ ನೋಡಿಕೊಂಡರು.
ಈ ಬಾರಿಯೂ ಅಂತಹುದೇ ವಿರೋಧ ವ್ಯಕ್ತವಾದಾಗ ಪೊಲೀಸರಿಗೆ ಸಂಘದ ನಾಯಕರ ಮೇಲೆ ಭರವಸೆ ಇತ್ತು.ರಜ್ಜು ಭೈಯ್ಯಾ ಲಂಡನ್ ಗೆ ಬಂದಿಳಿದಾಗ ಅಂದು ಪೊಲೀಸ್ ನಿರ್ದೇಶಕರಾಗಿದ್ದ ಜಾನ್ ಹಂಬ್ಲೇಟನ್ ತಾವೇ ಖುದ್ದು ಅವರನ್ನ ಸ್ವಾಗತಿಸಿದ್ದರು.ಸಭೆ ನಡೆಯುವ ಹೊತ್ತಿಗೆ ಪ್ರತಿಭಟನಾಕಾರರು ಘೋಷಣೆ ಕೂಗುತ್ತಾ ಅಲ್ಲಿಗೆ ಬಂದು ಕೆಲವೇ ಹೊತ್ತಲ್ಲಿ ಅಲ್ಲಿಂದ ಕಾಲ್ಕಿತ್ತರು. ಹಣ ಕೊಟ್ಟು ಜೊತೆಗೆ ಕರಕೊಂಡು ಬಂದಿದ್ದ ಬಾಡಿಗೆ ಪ್ರತಿಭಟನಾಕಾರರ ಪರಿಸ್ಥಿತಿ ಶೋಚನೀಯವಾಗಿ ತೊಡಗಿತು. ಬಿಸಿಲಿನಲ್ಲಿ ನೀರು ನೆರಳು ಇಲ್ಲದೆ ಪರಿತಪಿಸಿ ಸುವಂತಾಯಿತು.ಸಮಾವೇಶಕ್ಕೆ ಸೇರಿದ್ದ ಸ್ವಯಂಸೇವಕರು ಊಟ ಮಾಡಲು ಹೋಗುವ ಹೊತ್ತಿಗೆ ರಜ್ಜು ಭೈಯ್ಯಾ ಹೊರಗೆ ಬಿಸಿಲಿನಲ್ಲಿ ಒಣಗುತ್ತಿದ್ದ ಪ್ರತಿಭಟನಾಕಾರರನ್ನು ಒಳಗೆ ಕರೆ ದು ಅವರಿಗೆ ಆಹಾರ ಹಾಗೂ ನೀರಿನ ವ್ಯವಸ್ಥೆ ಮಾಡುವಂತೆ ಹೇಳಿದರು. ಮೊದಮೊದಲು ಸ್ವಲ್ಪ ಹಿಂಜರಿಕೆ ಇದ್ದರೂ ನಂತರ ಅವರೆಲ್ಲರೂ ಸ್ವಯಂಸೇವಕರ ಜೊತೆಗೆ ಸೇರಿ ಆಹಾರ ಸೇವಿಸಿದರು.
ಮರುದಿನ ಅದೇ ಪ್ರತಿಭಟನಾಕಾರರು ಸ್ವಯಂಸೇವಕರಿಗೆ ಉಪಹಾರದ ವ್ಯವಸ್ಥೆಯನ್ನು ಮಾಡಿದ್ದರು.ಸ್ವದೇಶಿ ಕಲ್ಪನೆಯನ್ನು ತೀವ್ರವಾಗಿ ನಂಬಿದ್ದ ರಜ್ಜು ಭಯ್ಯಾ ಅದೇ ನಿಟ್ಟಿನಲ್ಲಿ ಹಗಲಿರುಳು ಶ್ರಮಿಸಿದರು.ರಾಷ್ಟ್ರೀಯ ಸ್ವಯಂ ಸೇವಕ ಸಂಘ ಇದೇ ಮೊದಲ ಬಾರಿಗೆ ‘ಸೈನಿಕ ಶಾಲೆ’ಯೊಂದನ್ನು ತೆರೆಯಲು ಈಗ ಸಕಲ ಸಿದ್ಧತೆ ನಡೆಸಿದೆ. ಸಶಸ್ತ್ರ ಪಡೆಗಳಲ್ಲಿ ಅಧಿಕಾರಿಗಳ ಕೊರತೆ ನೀಗಿಸುವ ನಿಟ್ಟಿನಲ್ಲಿ ಅತ್ಯುತ್ತಮ ಶಿಕ್ಷಣ ಹಾಗೂ ತರಬೇತಿಯೊಂದಿಗೆ ವಿದ್ಯಾರ್ಥಿಗಳನ್ನು ಸೇನೆಗೆ ಸಜ್ಜುಗೊಳಿಸುವುದು ಶಾಲೆಯ ಧ್ಯೇಯವಾಗಲಿದೆ.

ಆರೆಸ್ಸೆಸ್‌ನ ಶಿಕ್ಷಣ ಘಟಕ ‘ವಿದ್ಯಾ ಭಾರತಿ’ ನಡೆಸಲಿರುವ ಶಾಲೆಯು ಉತ್ತರ ಪ್ರದೇಶದ ಬುಲಂದ್‌ಶಹರ್‌ ಜಿಲ್ಲೆಯ ಶಿಕಾರ್‌ಪುರದಲ್ಲಿ 20 ಸಾವಿರ ಚದರ ಮೀಟರ್‌ ಅಳತೆಯಲ್ಲಿ ತಲೆ ಎತ್ತಲಿದೆ. ಆರೆಸ್ಸೆಸ್‌ ಇಲ್ಲಿ ಸಿಬಿಎಸ್‌ಇ ಪಠ್ಯಕ್ರಮದೊಂದಿಗೆ ‘ರಜ್ಜು ಭಯ್ಯಾ ಸೈನಿಕ್‌ ವಿದ್ಯಾಮಂದಿರ’ ತೆರೆಯಲಿದ್ದು, ಮುಂಬರುವ ಏಪ್ರಿಲ್‌ನಿಂದ 6ನೇ ತರಗತಿಗೆ ಪ್ರವೇಶ ಅವಕಾಶ ಆರಂಭಗೊಳ್ಳಲಿದೆ. ಮೊದಲ ಹಂತದಲ್ಲಿ 160 ವಿದ್ಯಾರ್ಥಿಗಳಿಗೆ ಅವಕಾಶ ಕಲ್ಪಿಸಲಾಗುತ್ತದೆ. 6ರಿಂದ 12ನೇ ತರಗತಿವರೆಗೆ ಕಲಿಯಬಹುದಾಗಿರುತ್ತದೆ.ಹುತಾತ್ಮ ಯೋಧರ ಮಕ್ಕಳಿಗೆ ಮೀಸಲು: ”ಆರೆಸ್ಸೆಸ್‌ ಇಂತಹ ಪ್ರಯೋಗಕ್ಕೆ ಕೈಹಾಕಿರುವುದು ಇದೇ ಮೊದಲು. ಇಲ್ಲಿ ಸಿಗುವ ಯಶಸ್ಸನ್ನು ಆಧರಿಸಿ ಮುಂದಿನ ದಿನಗಳಲ್ಲಿ ಬೇರೆ ಕಡೆಯೂ ವಿಸ್ತರಿಸಲಾಗುವುದು. ಆರಂಭದ 160 ಸೀಟುಗಳಲ್ಲಿ ಹುತಾತ್ಮ ಯೋಧರ ಮಕ್ಕಳಿಗೆ 56 ಸೀಟುಗಳನ್ನು ಮೀಸಲಿರಿಸಲಾಗುವುದು. ಸೆಪ್ಟೆಂಬರ್‌ನಲ್ಲಿ ನಿವೃತ್ತ ಅಧಿಕಾರಿಗಳು ಇಲ್ಲಿಗೆ ಭೇಟಿ ನೀಡಿ ಶಾಲೆಯ ಸರ್ವತೋಮುಖ ಬೆಳವಣಿಗೆಯ ದೃಷ್ಟಿಯೊಂದಿಗೆ ಸಲಹೆ ಸೂಚನೆಗಳನ್ನು ನೀಡಲಿದ್ದಾರೆ,” ಎಂದು ವಿದ್ಯಾ ಭಾರತಿ ಉಚ್ಛ ಶಿಕ್ಷಾ ಸಂಸ್ಥಾನದ ಪಶ್ಚಿಮ ಬಂಗಾಳ ಮತ್ತು ಉತ್ತರಾಖಂಡದ ಪ್ರಾದೇಶಿಕ ಸಂಚಾಲಕ ಅಜಯ್‌ ಗೋಯಲ್‌ ಹೇಳಿದ್ದಾರೆ.ಶಿಕಾರ್‌ಪುರ ಆರೆಸ್ಸೆಸ್‌ನ ಮಾಜಿ ಸರಸಂಘಚಾಲಕ ರಜ್ಜು ಭಯ್ಯಾ, ರಾಜೇಂದ್ರ ಸಿಂಗ್‌ ಅವರ ತವರು.ದೇಶದ ಹಿತವನ್ನೇ ಸದಾ ಕಾಲ ಬಯಸಿದ ವ್ಯಕ್ತಿಗೆ ಇದಕ್ಕಿಂತ ಉತ್ತಮ ಶ್ರದ್ಧಾಂಜಲಿ ಬೇರೊಂದು ಇರಲು ಸಾಧ್ಯವಿಲ್ಲ.

Chapter 1:

ರಾಷ್ಟ್ರೀಯ ಸ್ವಯಂಸೇವಕ ಸಂಘ – ಪ್ರಪಂಚದ ಅತೀ ದೊಡ್ಡ ಸ್ವಯಂಸೇವಕ ಸಂಸ್ಥೆಯ ಹುಟ್ಟು ಹಾಗೂ ಬೆಳೆದು ಬಂದ ಹಾದಿಯ ಒಳನೋಟ!

Chapter 2:

ಕೈಕಟ್ಟಿ ಕೂರಲಿಲ್ಲ, ಸಂಘರ್ಷದ ಹಾದಿಯಲ್ಲಿ ಪ್ರತಿಯೊಂದು ಸಾಲುಗಳನ್ನು ಮೆಟ್ಟಿಸುತ್ತಾ ಡಾಕ್ಟರ್ ಜೀ ಕಟ್ಟಿದ ಸಂಘಟನೆ ಇಂದು ಹೆಮ್ಮರವಾಗಿದೆ! ಅವರ ತ್ಯಾಗ, ನೀತಿಗಳ ಕಿರು ಪರಿಚಯ ಇಲ್ಲಿದೆ!

Chapter 3:

ರಾಷ್ಟ್ರೀಯ ಸ್ವಯಂಸೇವಕ ಸಂಘದ ಶಾಖೆ ಎಂದರೆ ಏನು? ಕೆಲವು ಪೂರ್ವಾಗ್ರಹಗಳನ್ನು ಬಗೆಹರಿಸಿ, ಶಾಖೆಯ ಚಟುವಟಿಕೆಗಳ ಮಾಹಿತಿಯುಕ್ತ ಲೇಖನ ಇಲ್ಲಿದೆ!

Chapter 4:

ಅಧ್ಯಾಯ 4:ಆರೆಸ್ಸೆಸ್ ವಿರೋಧಿಗಳು ಹರಿಡಿದ ಅತೀ ದೊಡ್ಡ ಸುಳ್ಳು “ಸ್ವಾತಂತ್ರ್ಯ ಸಂಗ್ರಾಮದಲ್ಲಿ ಆರೆಸ್ಸೆಸ್ ಕೊಡುಗೆ ಶೂನ್ಯ”! ಮಿತ್ಯಾರೋಪಗಳಿಗೆ ತೆರೆ ಎಳೆಯುವ ಸಮಯ!

Chapter 5:

ಅಧ್ಯಾಯ 5: ಕಾಶ್ಮೀರವನ್ನು ಉಳಿಸಿಕೊಳ್ಳಲು ಪ್ರಾಣತೆತ್ತ ಸ್ವಯಂಸೇವಕರ ಕಥೆ ನಿಮಗೆ ತಿಳಿದಿದೆಯೇ? ಕೋಟ್ಲಿಯ ಬಲಿದಾನಿಗಳು ಯಾರು ಗೊತ್ತೇ? ಇಲ್ಲವಾದಲ್ಲಿ ಈ ಇತಿಹಾಸ ಪ್ರತಿಯೊಬ್ಬ ಭಾರತೀಯನೂ ತಿಳಿಯಲೇ ಬೇಕಾದದ್ದು!

chapter 6:

ಅಧ್ಯಾಯ 6: ಗಾಂಧಿ ಹತ್ಯೆ ಮತ್ತು ಆರೆಸ್ಸೆಸ್ ! ಒಂದೇ ಸುಳ್ಳನ್ನು ಕಾಂಗ್ರೆಸ್ ಪದೇ ಪದೇ ಹೇಳುತ್ತಿರುವುದು ಏತಕ್ಕಾಗಿ?? ಸುಳ್ಳಿನ ಪರದೆ ಸರಿಸುವ ಕೆಲವು ಸತ್ಯಾಂಶಗಳು ಇಲ್ಲಿವೆ!

Chapter 7:

ಅಧ್ಯಾಯ 7: ಸಂವಿಧಾನ ಶಿಲ್ಪಿ ಬಾಬಾಸಾಹೇಬ ಅಂಬೇಡ್ಕರ್ ಹಾಗೂ ಆರೆಸ್ಸೆಸ್! ಅಂಬೇಡ್ಕರ್ ಆರೆಸ್ಸೆಸ್ ಅನ್ನು ದ್ವೇಷಿಸುತ್ತಿದ್ದರೇ??? ಅಥವಾ ಆರೆಸ್ಸೆಸ್ ಅಂಬೇಡ್ಕರ್ ವಿರೋಧಿಯೇ? ಇಲ್ಲಿದೆ ಉತ್ತರ

Chapter 8:

ಅಧ್ಯಾಯ 8: ‘ಸ್ವಯಂಸೇವಕ’ ಎಂಬ ಸಂಘದ ಆಧಾರ ಸ್ಥಂಭ! ಐಕ್ಯತೆಯ ರೂವಾರಿಗಳು,ಶಿಸ್ತಿನ ಸಿಪಾಯಿಗಳು, ಸಮಾಜದಲ್ಲಿ ಸಭ್ಯತೆ, ಸಂಸ್ಕೃತಿಯ ಪ್ರತೀಕ ಇವರು!

Chapter 9:

ಅಧ್ಯಾಯ 9: ರಾಷ್ಟ್ರೀಯ ಸ್ವಯಂ ಸೇವಕ ಸಂಘದ ‘ ಬೈರಾಗಿಗಳು’ – ‘ ಪ್ರಚಾರಕರು’ ! ಪ್ರಚಾರಕರಾಗಿ ಕೆಲಸ‌ ಮಾಡುವುದು ಅಂದರೆ ಏನು? ಪ್ರಚಾರಕರಾಗಿ ಪ್ರಸಿದ್ಧಿ ಪಡೆದವರ ಬಗ್ಗೆ ನಿಮಗೆಷ್ಟು ಗೊತ್ತು?

Chapter 10:

ಅಧ್ಯಾಯ 10: ರಾಜಾಭಾವು ಮಹಾಂಕಲ್ ಅವರ ಬಲಿದಾನ ಮತ್ತು ಯುವ ಸಿಂಹ ಜಗನ್ನಾಥ ರಾವ್ ಜೋಶಿಯವರ ಪರಾಕ್ರಮ ಇದು ಗೋವಾ ವಿಮೋಚನೆಯ ಕಥೆ!!

Chapter 11:

ಅಧ್ಯಾಯ 11: ಸಂಘದ ಮಹತ್ವವೇನು ಎಂಬುದನ್ನು ಲಾಲ್ ಬಹದ್ದೂರ್ ಶಾಸ್ತ್ರಿ ಅರಿತಿದ್ದರು! ಹೇಗೆ? 1965 ರ ಭಾರತ ಪಾಕಿಸ್ತಾನ ಯುದ್ಧದಲ್ಲಿ ಸಂಘ ನಿರ್ವಹಿಸಿದ ಕಾರ್ಯವೇನು? ಇಲ್ಲಿದೆ ಮಾಹಿತಿ.

Chapter 12:

ಅಧ್ಯಾಯ 12: ಏಕನಾಥ್ ರಾನಡೆ! ಎಲ್ಲ ಸಮಸ್ಯೆಗಳ ಎದುರಿಸಿ, ಕಷ್ಟಗಳ ಅಲೆಗಳನ್ನು ಬಂಡೆಯಂತೆ ಎದುರಿಸಿ, ವಿವೇಕಾನಂದ ಶಿಲಾ ಸ್ಮಾರಕವನ್ನು ಭಾರತಕ್ಕೆ ಕೊಡುಗೆ ಇತ್ತ ಮಹನೀಯ! ಈ ಸ್ವಯಂಸೇವಕ ಅಸಾಧ್ಯವನ್ನು ಸಾಧ್ಯವಾಗಿಸಿದ ಕಥೆ ಇಲ್ಲಿದೆ!!

Chapter 13:

ಅಧ್ಯಾಯ 13: ತುರ್ತು ಪರಿಸ್ಥಿತಿ ಎಂಬ ಕರಾಳ ಅಧ್ಯಾಯ! ಭಾರತ ದೇಶದ ಪ್ರಜಾಪ್ರಭುತ್ವಕ್ಕೆ ಅಂಟಿದ ಕಳಂಕವನ್ನು ಸ್ವಯಂಸೇವಕರು ತಮ್ಮ ಬಲಿದಾನದಿಂದ ತೊಡೆದು ಹಾಡಿದರು.

Chapter 14:

ಅಧ್ಯಾಯ 14: ಆದರ್ಶ ಸ್ವಯಂಸೇವಕ, ನಿಸ್ವಾರ್ಥ ಪ್ರಚಾರಕ, ಗ್ರಾಮ ಅಭ್ಯುದಯಕ್ಕೆ ಜೀವ ಸವೆಸಿದ, ಅಪರೂಪದ ವ್ಯಕ್ತಿತ್ವ ಭಾರತ ರತ್ನ ನಾನಾಜಿ ದೇಶಮುಖ್!

Chapter 15:

ಅಧ್ಯಾಯ 15: ದೇವ ಭಾಷೆ ಸಂಸ್ಕೃತಕ್ಕೆ ಹೊಸತೊಂದು ಕಾಯಕಲ್ಪ ನೀಡಿದ ಆರೆಸ್ಸೆಸ್! ಸಂಸ್ಕೃತ ಭಾರತಿಯ ಸಾಧನೆಗಳ ಒಳ ನೋಟ ಇಲ್ಲಿದೆ!

Chapter 16:

ಅಧ್ಯಾಯ 16: 1984 ರ ಸಿಖ್ ಹತ್ಯಾಕಾಂಡದ ಸಮಯದಲ್ಲಿ ಆರೆಸ್ಸೆಸ್ ಸ್ವಯಂಸೇವಕರು, ತಮ್ಮ ಜೀವದ ಹಂಗು ತೊರೆದು ಸಿಖ್ ಸಹೋದರರನ್ನು ರಕ್ಷಿಸಿದರು. ಬದಲಾಗಿ ಸಿಕ್ಕಿದ್ದು ಮಾತ್ರ ಮೋಘಾ ಹತ್ಯಾಕಾಂಡ!

Chapter 17:

ಅಧ್ಯಾಯ 17: ಯಾವುದೇ ಸಂಘದ ಕೀರ್ತಿ ಮುಗಿಲೆತ್ತರಕ್ಕೆ ಬೆಳೆಯುವುದು, ತನ್ನ ವಿರೋಧಿಗಳ ಪ್ರಶಂಸೆ ಗಳಿಸಿದಾಗ! ಸೇವಾ ಭಾರತಿ ಗೆ ತನ್ನ ಪಿತ್ರಾರ್ಜಿತ ಆಸ್ತಿಯನ್ನು ಅಮರ್ ಸಿಂಗ್ ದಾನವಾಗಿ ಕೊಟ್ಟಾಗ ಈ ಮಾತಿಗೊಂದು ಸಾಕ್ಷಿ ದೊರೆತ ಹಾಗಾಯಿತು!

Chapter 18:

ಅಧ್ಯಾಯ 18: ಸಂಘದ ವಿರೋಧಿಗಳ ಪಡೆ ಬಹು ದೊಡ್ಡದು! ಕಾಂಗ್ರೆಸ್, ಕಮ್ಯೂನಿಸ್ಟ್, ಮಿಷನರಿ, ಇಸ್ಲಾಂ ವಾದಿಗಳು ಎಲ್ಲರಿಂದ ಸಂಘ ದಾಳಿಗೊಳಗಾದ ಉದಾಹರಣೆಗಳಿವೆ, ಹಿಂದುತ್ವ ಅದಕ್ಕೆ ಕಾರಣ ಎಂದು ನೀವು ಭಾವಿಸಿದ್ದಲ್ಲಿ, ಇಲ್ಲಿದೆ ಸರಿಯಾದ ಮಾಹಿತಿ!

Chapter 19:

ಅಧ್ಯಾಯ 19: ಜ್ಞಾನಕ್ಕಿಂತ ದೊಡ್ಡ ಕಣ್ಣಿಲ್ಲ , ಚರ್ಚೆ ಹಾಗೂ ಮಂಥನದಿಂದ ಪಡೆದ ಜ್ಞಾನ ಯಾವಾಗಲೂ ಶ್ರೇಷ್ಠ ಎನ್ನುತ್ತದೆ ನಮ್ಮ ಸಂಸ್ಕೃತಿ! ಸಂಘವನ್ನು ವಿನಾ ಕಾರಣ ನಿಂದಿಸುವವರಿಗೆ ಕೆಲವೊಂದು ಸತ್ಯಾಂಶಗಳು, ಕೆಲವೊಂದು ಪ್ರಶ್ನೆಗಳು!

-Dr.Sindhu Prashanth

Tags

Related Articles

FOR DAILY ALERTS
Close