ಪ್ರಚಲಿತ

ಕಾಶ್ಮೀರಿ ಹಿಂದೂಗಳ ಕರಾಳ ಜೀವನ ಅಧ್ಯಾಯ -೭ : ಕ್ರೌರ್ಯ ಮತ್ತು ದಬ್ಬಾಳಿಕೆಯು ಹಿಂದೂಗಳ ಜೀವನ ಸಂಸ್ಕೃತಿಯನ್ನೇ ಕಾಶ್ಮೀರದಿಂದ ಹೊರಗೋಡಿಸಿತ್ತು

ಅಧ್ಯಾಯ -೭

ಕಾಶ್ಮೀರದ ಸುಲ್ತಾನ ಸಿಕಂದರ್,ಅವರ ಸೇನಾ ಮುಖ್ಯಸ್ಥರಾದ ಮಲಿಕ್ ಸೈಫ್ ಉದ್ ದೀನ್ ಮತ್ತು ಸುಲ್ತಾನ್ ಅಲಿ ಷಾ ಅವರು ಪ್ರಾರಂಭಿಸಿದ ಹಿಂದೂಗಳ ನರಮೇಧವೆಂಬ ಕ್ರೌರ್ಯಕ್ಕೆ ಯಾವುದೇ ಕೊನೆ ಮೊದಲಿರಲಿಲ್ಲ..ಹಿಂದೂಗಳ ಮೇಲಿದ್ದ ಕ್ರೋಧದಿಂದಾಗಿ ಅವರು ಹಿಂದೂಗಳನ್ನು ಸುಡುವುದು,ನೇಣುಹಾಕುವುದು, ನೀರಿಗೆ ನೆಗೆಯುವಂತೆ ಮಾಡುವುದು ಇತ್ಯಾದಿಗಳನ್ನು ಎಗ್ಗಿಲ್ಲದೆ ಮಾಡುತ್ತಿದ್ದರು.ಮಾತೃಧರ್ಮವನ್ನೇ ನಂಬಿದ್ದ ಅನೇಕರು ಮತಾಂತರಗೊಳ್ಳಲು ಒಪ್ಪದೇ ಪ್ರಾಣವನ್ನೇ ತ್ಯಜಿಸಿದ್ದರು.ಶೇಕ್ ಜಲಾಲುದ್ದೀನ್ ಬುಖಾರಿ ನೇತೃತ್ವದ ಸಯ್ಯದ್ ಗಾಲ ಎರಡನೇ ತಂಡ ಕಾಶ್ಮೀರವನ್ನು ಪ್ರವೇಶಿಸಿದ ಬಳಿಕ ಕಾಶ್ಮೀರಿ ಹಿಂದೂಗಳ ಪರಿಸ್ಥಿತಿಯು ನಾವು ಕನಸಿನಲ್ಲೂ ನೆನೆಸಲಾಗದಷ್ಟು ಕ್ರೂರವಾಗಿತ್ತು.ಹಚ್ಚ ಹಸುರಿನ ಫಲವತ್ತಾದ ಗದ್ದೆಯನ್ನು ಗುಂಪಾದ ಮಿಡತೆಗಳು ತಿಂದು ನಾಶಗೊಳಿಸುವ ರೀತಿಯಲ್ಲೇ ಹಿಂದೂಗಳು ಮತ್ತು ಹಿಂದೂಗಳ ಸಾಂಸ್ಕೃತಿಕ ಕಟ್ಟಡಗಳನ್ನೂ ನಾಶಪಡಿಸಲಾಯಿತು.

ಕಾಶ್ಮೀರವು ಒಂದು ರೀತಿಯಲ್ಲಿ ಹಿಂದೂಗಳ ಕಸಾಯಿಖಾನೆಯಾಗಿ ಮಾರ್ಪಟ್ಟಿತ್ತು.ಮೊದಲ ಆಕ್ರಮಣದಲ್ಲಿ ಮುಸಲ್ಮಾನರ ಕಣ್ಣಿಂದ ನಾಶವಾಗದೆ ಉಳಿದ ಕಲಾಕೃತಿಗಳೂ ಕಟ್ಟಡಗಳೂ ಈ ಬಾರಿ ನಾಶಹೊಂದಿತು.ಕಾರ್ಕೊಟ ಅರಸರ ವೈಭವಯುತ ಆಳ್ವಿಕೆಯ ಸಾಕ್ಷಿಯಾಗಿದ್ದ ಪರಿಹಾಸ್ಪೊರಾವನ್ನು ಧ್ವಂಸಗೊಳಿಸಲಾಯಿತು.ದೇವಾಲಯಗಳು,ಬೌದ್ಧ ವಿಹಾರಗಳು ಮತ್ತು ಶೈವರ ಪ್ರಾರ್ಥನಾ ಮಂದಿರಗಳನ್ನು ಕೊಳ್ಳೆಹೊಡೆದು ನಾಶಪಡಿಸಲಾಯಿತು ಮಾತ್ರವಲ್ಲದೆ ಅವಶೇಷಗಳನ್ನೂ ಗುರುತಿಸಲಾಗದಂತೆ ಪುಡಿಗಟ್ಟಲಾಯಿತು.ಆಡಳಿತದ ಶಕ್ತಿ ಮತ್ತು ಸಯ್ಯದ್ ಗಳ ಸಮೂಹದಿಂದ ಒಗ್ಗೂಡಿದ ಜನರೂ,ಮತಾಂತರ ಹೊಂದಿದ ಜನರೂ ಸೇರಿ ಕಾಶ್ಮೀರದ ಸಂತ ಜೋನ್ರಾಜ್ನ ನಂದಾರಿಸಿ ಮತ್ತು ಮುಲ್ಲಾ ನೂರ್ ಆರ್ ಉದ್ದೀನ್ ಅವರನ್ನೂ ಸಹ ಕೊಂದುಬಿಟ್ಟರು ಯಾಕೆಂದರೆ ಅವರು ಕಾಶ್ಮೀರಿ ಹಿಂದೂಗಳ ಜನಾಂಗೀಯ ಹತ್ಯೆಯನ್ನು ವಿರೋಧಿಸಿದ್ದರು.

ಯಾರಿಗೂ ಕೇಡನ್ನು ಬಯಸದ ನಂದ ರಿಷಿ ಯನ್ನು ಹಸುವಿನ ರಕ್ತದಲ್ಲಿ ಅದ್ದಿ ಕೊಳ್ಳುವ ಅಮಾನವೀಯ ಕೃತ್ಯವೂ ಮತಾಂಧ ಮುಸಲ್ಮಾನರಿಂದ ನಡೆದಿತ್ತು.ಮುಸಲ್ಮಾನರ ಧಾರ್ಮಿಕ ಶ್ರೇಷ್ಠತೆಯನ್ನು ಅವರು ಎಂದಿಗೂ ಅಂಗೀಕರಸದೆ ಇದ್ದುದು ಮತ್ತು ಮುಸಲ್ಮಾನರ ಧರ್ಮವನ್ನು ಪರಾಮರ್ಶಿಸಿದ್ದರಿಂದ ಸಯ್ಯದ್ ರು ಅವರ ಬಗ್ಗೆ ದ್ವೇಷದ ಭಾವನೆಯನ್ನು ಹೊಂದಿದ್ದರು.ರಿಷಿಗಳು ಸ್ವಭಾವತಹ ಜಾತಿ,ಮತ ಮತ್ತು ಧರ್ಮವನ್ನು ಪರಿಗಣಿಸದೆ ಎಲ್ಲರಿಗೂ ಸಾಂತ್ವನ ನೀಡುವ ಸಾತ್ವಿಕ ಮನುವಾದಿಯಾಗಿದ್ದರು.ಹಿಂಸೆ ಮತ್ತು ದ್ವೇಷದ ಕುರಿತಾಗಿ ಅಸಹ್ಯವನ್ನು ಹೊಂದಿದ್ದ ಅವರು ಬ್ರಹ್ಮಚರ್ಯವನ್ನು ಪಾಲಿಸುತ್ತಿದ್ದರು ಮತ್ತು ಪ್ರಾಣಿ ಪಕ್ಷಿಗಳನ್ನು ಕೊಳ್ಳುವುದನ್ನು ವಿರೋಧಿಸುತ್ತಿದ್ದ ಅವರು ತರಕಾರಿ ಮತ್ತು ಹಣ್ಣುಗಳನ್ನು ತಿನ್ನುತ್ತಾ ಯೋಗಾಭ್ಯಾಸವನ್ನು ನಡೆಸುತ್ತಿದ್ದರು..

ಇದನ್ನೇ ಕಾಶ್ಮೀರದ ರಿಷಿ ಚಳುವಳಿ ಎಂದು ಕರೆಯಲ್ಪಟ್ಟು ಮಾನವೀಯ ಮೌಲ್ಯಗಳನ್ನು ಆಧರಿಸಲ್ಪಟ್ಟಿತ್ತು.ಆದರೆ ಇಂತಹಾ ಚಳುವಳಿಯನ್ನು ಸೇಯ್ಡ್ಗಳು ಕೀಳಾಗಿ ಕಂಡರು.ಅವರ ಹಿಂದೂಗಳ ನರಮೇಧದ ಅಭಿಯಾನದಲ್ಲಿ ಇದೊಂದು ಅಡಚಣೆಯಾಗಿ ಪರಿಗಣಿಸಲ್ಪಟ್ಟಿತ್ತು.ಹೀಗೆ ರಿಷಿಗಳಂತೆ ಬದುಕುತ್ತಿದ್ದ ಮುಸಲ್ಮಾನರನ್ನು ಸೂಫೀಗಳೆಂದು ಕರೆದರೂ ಸಯ್ಯದ್ಗಳು ಅವರನ್ನು ಧರ್ಮದ್ರೋಹಿಗಳೆಂದೇ ಪರಿಗಣಿಸಿದ್ದರು.ನಿರ್ದಯ ಮುಸಲ್ಮಾನರು ಕಾಶ್ಮೀರಿ ಹಿಂದೂಗಳಿಗೆ ಮಾತ್ರವಲ್ಲ ಮುಸ್ಲಿಂ ಸೂಫಿ ಸಂತರಿಗೂ ಮಾರ್ಸಕವಾಗಿದ್ದರು.ಹಿಂದೂಗಳ ಹತ್ಯಾಕಾಂಡ ಮತ್ತು ನರಮೇಧವನ್ನು ನಡೆಸುವ ಮೂಲಕ ಅವರ ಆಸ್ತಿಗಳನ್ನು ವಶಪಡಿಸಿಕೊಳ್ಳುವುದು,ದರೋಡೆ ಮಾಡುವುದು ಮತ್ತು ಮಹಿಳೆಯರ ಆತ್ಯಾಚಾರಗಳನ್ನೂ ಕ್ರೂರವಾಗಿ ನಡೆಸಿದ್ದರು.

ಸುಲ್ತಾನ್ ಝಯ್ನ್ ಉಲ್ ಅಬಿದೀನ್ :

ಕೆಟ್ಟ ರೀತಿಯ ಧಾರ್ಮಿಕ ಮತಾಂಧತೆ ಅತ್ಯಂತ ಸುಸಂಸ್ಕೃತ ನಾಗರೀಕತೆಗೆ ಅಂತ್ಯ ಹಾಡಿತು.ಸ್ವರ್ಗ ಸದೃಶವಾದ ಕಾಶ್ಮೀರಕ್ಕೆ ಮಾಸಲಾಗದ ಗಾಯವನ್ನು ಮೂಡಿಸಿತ್ತು.ಈ ಕುಕೃತ್ಯವನ್ನು ನಡೆಸಿದ್ದು ಯಾವುದೇ ಅರಬ್ಬರ ಸೈನ್ಯವಲ್ಲ ಬದಲಾಗಿ ಸುಲ್ತಾನ್ ಸಿಕಂದರ್ ಮತ್ತು ಅಲಿಷಾ ಅವರು.ಸುಲ್ತಾನ್ ಝಯ್ನ್ ಉಲ್ ಆಬಿದೀನ್ ಕಾಶ್ಮೀರದ ಇತಿಹಾಸದಲ್ಲಿ ಸಹಿಷ್ಣುತೆ,ಪರಸ್ಪರ ಹಿತಾಸಕ್ತಿ ಮತ್ತು ಸಹಬಾಳ್ವೆಯ ಹೊಸ ಅಧ್ಯಾಯದ ಲೇಖಕರಾಗಿದ್ದರು.ತನ್ನ ಹಿರಿಯರು ನಡೆಸಿದ ರಕ್ತಪಾತ,ಧಾರ್ಮಿಕ ಕಿರುಕುಳ ಮತ್ತು ದೌರ್ಜನ್ಯಗಳ ಪೂರ್ವನಿರ್ದೇಶನವನ್ನು ಉಲ್ಲಂಘಿಸಿದ್ದನು.ಕಾಶ್ಮೀರದ ಸಂಕುಚಿತ ಮನೋಭಾವನೆಯ ಆಡಳಿತಗಾರರ ಮಧ್ಯೆ ಇವನೊಬ್ಬ ದೂರದೃಷ್ಟಿಯುಳ್ಳ ಅರಸನಾಗಿದ್ದನು.ಇಸ್ಲಾಮಿಕ್ ಮತಾಂತರಿಗಳ ಅತ್ಯುತ್ಸಾಹವನ್ನು ತಡೆದು ಕಾಶ್ಮೀರಿ ಹಿಂದೂಗಳಿಗೆ ಭಯೋತ್ಪಾದನೆ ಮತ್ತು ದಬ್ಬಾಳಿಕೆ ರಹಿತವಾಗಿ ಬದುಕಲು ಸುಲ್ತಾನ್ ಝಯ್ನ್ ಉಲ್ ಆಬಿದೀನ್ ಅನುವುಮಾಡಿಕೊಟ್ಟಿದ್ದನು.ಕಾಶ್ಮೀರದ ಮೂಲಭೂಮಿಯಿಂದ ಪಲಾಯನಗೈದು ಭಾರತದ ವಿವಿಧೆಡೆ ವಾಸಿಸುತ್ತಿದ್ದ ಕಾಶ್ಮೀರಿ ಹಿಂದೂಗಳಿದ್ದಲ್ಲಿಗೆ ಸಂದೇಶವಾಹಕರನ್ನು ಕಳುಹಿಸಿ ಅವರನ್ನು ಕಾಶ್ಮೀರಕ್ಕೆ ಮರಳಲು ಆಹ್ವಾನಿಸಿದರು.

ನಾಮಮಾತ್ರ ತೆರಿಗೆಯನ್ನು ಪಾವತಿಸಿ ಮರಣಹೊಂದಿದ ತಮ್ಮ ಆತ್ಮೀಯರನ್ನು ಸುಡಲು ಅವಕಾಶಮಾಡಿ ಕೊಟ್ಟಿದ್ದನು.ಇವರು ಯಾವುದೇ ತಾರತಮ್ಯವಿಲ್ಲದೆ ಶಿಕ್ಷಣವನ್ನೂ ಪಡೆಯುವ ಮತ್ತು ಯಾವುದೇ ತೊಂದರೆಯಿಲ್ಲದೆ ಜೀವನೋಪಾಯವನ್ನು ನಡೆಸಲು ಅಗತ್ಯವಾದ ಸೇವೆಗಳಿಗೆ ಸೇರುವ ಅವಕಾಶವನ್ನೂ ನೀಡಲಾಯಿತು.ಹಿಂದೂಗಳಿಗೂ ತಮ್ಮ ಹಬ್ಬಗಳನ್ನು ಆಚರಿಸಲು ಮತ್ತು ಧಾರ್ಮಿಕ ಆಚರಣೆಗಳನ್ನು ನಡೆಸಲು ಅವಕಾಶ ನೀಡಲಾಯಿತು.ಸುಲ್ತಾನರು ಹಿಂದೂಗಳಿಗಾಗಿ ಎರಡು ದೇವಾಲಯಗಳನ್ನು ನಿರ್ಮಿಸಿದರು ಮತ್ತು ಧಾರ್ಮಿಕ ಮತಾಂಧತೆಯಿಂದ ಲೂಟಿ ಮತ್ತು ಹಾನಿಗೊಳಗಾದ ದೇವಾಲಯಗಳನ್ನು ನವೀಕರಿಸಿದ್ದರು. ನೃತ್ಯ,ಸಂಗೀತ,ನಾಟಕ ಚಿತ್ರಕಲೆಗಳ ಮೇಲಿದ್ದ ನಿಷೇಧವನ್ನು ಕೂಡಾ ರದ್ದುಗೊಳಿಸಿದ್ದರು.

Chapter 1:

ಭೂಲೋಕದ ಸ್ವರ್ಗ ಕಾಶ್ಮೀರ ಶಾರದಾ ಮಾತೆಯ ತವರೂರು! ಭರತ ಭೂಮಿ ಎಂಬುದು ದೇವರುಗಳ ಭೂಮಿ ಎಂಬುದನ್ನು ನಾವು ಮರೆತಿದ್ದೇವಾ?

Chapter2:

ಭಾರತದ ಕಿರೀಟ ಕಾಶ್ಮೀರ ಶಾರದೆಯ ಕಿರೀಟವಾಗಿದ್ದು ಹೇಗೆ? ಕಾಶ್ಮೀರಪುರವಾಸಿನಿಯ ಐತಿಹಾಸಿಕ ಕಥೆ…

Chapter 3:

ಕಾಶ್ಮೀರದಲ್ಲಿ ಹಿಂದೂಗಳ ಇತಿಹಾಸ ಎಂತದ್ದು.? ಇಸ್ಲಾಂ ಧರ್ಮಕ್ಕೆ ಮತಾಂತರಗೊಂಡ ಹಿಂದೂಗಳ ಪರಿಸ್ಥಿತಿ ಹೇಗಾಗಿತ್ತು??

Chapter 4:

ಅಧ್ಯಾಯ ೪: ಪಂಡಿತರ ಬೀಡಾಗಿದ್ದ ಕಾಶ್ಮೀರದಲ್ಲಿ ಹಿಂದೂಗಳಿಗೆ ವಿಧಿಸಿದ್ದ ಷರತ್ತುಗಳು ಎಂತದ್ದು ಗೊತ್ತಾ.? ಆ ಷರತ್ತು ಪಾಲಿಸದಿದ್ದರೆ ಏನಾಗುತ್ತೆ.?

Chapter 5:

ಅಧ್ಯಾಯ ೫:ಕಡೆಗೂ‌ ಹಿಂದೂಗಳ ಘೋರ ಅವನತಿಗೆ ಮೂಕ ಸಾಕ್ಷಿಯಾಯಿತು ಭಾರತದ ಮುಕುಟ.! ಹೆಜ್ಜೆ ಹೆಜ್ಜೆಗೂ ನೆಲೆವೂರಿತ್ತು ಇಸ್ಲಾಂ ಛಾಯೆ!

Chapter 6:

ಅಧ್ಯಾಯ ೬: ಕಾಶ್ಮೀರದಲ್ಲಿ ಯಾವುದು ಆಗಬಾರದಿತ್ತೋ ಅದು ಆಗಿಯೇ ಹೋಗಿತ್ತು.! ಅಲ್ಲಿ ಧರೆಗುರುಳಿದ ದೇವಾಲಯಗಳಿಗೆ ಲೆಕ್ಕವೇ ಇಲ್ಲ…

-Deepashree M

Tags

Related Articles

FOR DAILY ALERTS
Close