ಅಂಕಣ

ಸಮಯದ ಅಭಾವವೆ? ಭೂಮಿ ಮೇಲೆ ಭವಿಷ್ಯದಲ್ಲಿ ದಿನಕ್ಕೆ 25 ಗಂಟೆಗಳಿರಬಹುದು ಎನ್ನುತ್ತಿದ್ದಾರೆ ವಿಜ್ಞಾನಿಗಳು!! 1.4 ಶತಕೋಟಿ ವರ್ಷಗಳ ಹಿಂದೆ ಭೂಮಿ ಮೇಲೆ ದಿನಕ್ಕೆ ಕೇವಲ 18 ಗಂಟೆಗಳಿದ್ದವು?!

ದಿನಕ್ಕೆ ಇಪತ್ತ ನಾಲ್ಕು ಗಂಟೆಗಳಿದ್ದರೂ ಸಮಯದ ಅಭಾವ ಎಂದು ಸಬೂಬು ನೀಡುವವರು ತಲೆ ತಿರುಗಿ ಬೀಳುವಂತ ವಿಚಾರವೊಂದನ್ನು ವಿಜ್ಞಾನಿಗಳು ಹೊರಗೆಡಹಿದ್ದಾರೆ. ಭವಿಷ್ಯದಲ್ಲಿ ಭೂಮಿ ಮೇಲೆ ದಿನಕ್ಕೆ 25 ಗಂಟೆಗಳಿರಬಹುದು ಎಂದು ವಿಜ್ಞಾನಿಗಳು ಲೆಕ್ಕಾಚಾರ ಹಾಕಿದ್ದಾರೆ. ವಿಜ್ಞಾನಿಗಳ ಪ್ರಕಾರ 1.4 ಶತಕೋಟಿ ವರ್ಷಗಳ ಹಿಂದೆ ಭೂಮಿ ಮೇಲೆ ದಿನಕ್ಕೆ ಕೇವಲ 18 ಗಂಟೆಗಳಿದ್ದವಂತೆ!! ರಾಮಾಯಣ-ಮಹಾಭಾರತ ಕಾಲದಲ್ಲಿ ಜನರು ಮುನ್ನೂರು ನಾಲ್ನೂರು ಎಂಟ್ನೂರು ವರ್ಷಗಳವರೆಗೆ ಬದುಕುತ್ತಿದ್ದರು ಎಂದು ಪುರಾಣಗಳು ಹೇಳುತ್ತವೆ. ಈಗಿನ ಕಾಲಕ್ಕೆ ನೂರು ವರ್ಷ ಬದುಕಿದರೆ ಹೆಚ್ಚು ಅಂಥದರಲ್ಲಿ ತ್ರೇತಾ-ದ್ವಾಪರ ಯುಗಗಳಲ್ಲಿ ಎಂಟ್ನೂರು ವರ್ಷಗಳು ಬದುಕುತ್ತಿದ್ದುದ್ದಕ್ಕೆ ಭೂಮಿಯ ಮೇಲೆ ಒಂದು ದಿನಕ್ಕೆ ಕೇವಲ 18 ಗಂಟೆಗಳಿದ್ದದ್ದೆ ಕಾರಣವಿರಬಹುದೆ?

ಭೂಮಿಯ ಮೇಲಿನ ದಿನಗಳು ದೀರ್ಘಾವಧಿಯನ್ನು ಪಡೆಯುತ್ತಿವೆ ಮತ್ತು ಅದಕ್ಕೆ ಕಾರಣ ಚಂದ್ರ

ಭೂಮಿಯ ನಿಧಾನಗತಿಯ ಚಲನೆಗೆ ಚಂದ್ರ ಕಾರಣ. ಶತ ಕೋಟಿ ವರ್ಷಗಳಿಂದ ಚಂದ್ರನು ಭೂಮಿಯಿಂದ ದೂರ ಜರುಗುತ್ತಾ ಹೋಗುತ್ತಿದ್ದಾನೆ. ಚಂದ್ರನ ದೂರ ಚಲಿಸುವಿಕೆಯು ಭೂಮಿಯ ಮೇಲಿನ ಅವಧಿಗಳನ್ನು ದೀರ್ಘಗೊಳಿಸುತ್ತಿದೆ ಎನ್ನುವುದು ವಿಜ್ಞಾನಿಗಳ ಅಂಬೋಣ. 1.4 ಶತಕೋಟಿ ವರ್ಷಗಳ ಹಿಂದೆ ಚಂದ್ರ ಭೂಮಿಗೆ ಅತ್ಯಂತ ಸಮೀಪದಲ್ಲಿದ್ದ ಹಾಗಾಗಿ ಭೂಮಿ ತನ್ನ ಅಕ್ಷದ ಮೇಲೆ ವೇಗವಾಗಿ ಸುತ್ತುತ್ತಿತ್ತು. ವಿಸ್ಕಾನ್ಸಿನ್-ಮ್ಯಾಡಿಸನ್ ವಿಶ್ವವಿದ್ಯಾಲಯದ ಭೂವಿಜ್ಞಾನಿ ಸ್ಟೀಫನ್ ಮೆಯರ್ಸ್ನ ಎಂಬ ಅಧ್ಯಯನ ಲೇಖಕ ಭೂಮಿಯ ತಿರುಗುವಿಕೆ ಮತ್ತು ಚಂದ್ರನ ಸ್ಥಳಗಳ ನಡುವಿನ ಸಂಬಂಧವನ್ನು ತಿರುಗುತ್ತಿರುವ ಫಿಗರ್ ಸ್ಕೇಟರ್ ಮತ್ತು ಅವನ ತೋಳುಗಳಂತೆ ವಿವರಿಸಿದ್ದಾರೆ.

ವೇಗವಾಗಿ ತಿರುಗುತ್ತಿರುವ ಸ್ಕೇಟರ್ ತನ್ನ ವೇಗವನ್ನು ನಿಧಾನಗೊಳಿಸಲು ತೋಳುಗಳನ್ನು ಹಿಗ್ಗಿಸುತ್ತಾನೆ. ಆಗ ಆತನ ತಿರುಗುವ ವೇಗ ಕಡಿಮೆ ಆಗುತ್ತದೆ. ಹಾಗೆಯೆ ಭೂಮಿಯಿಂದ ದೂರ ಸರಿಯುತ್ತಿರುವ ಚಂದ್ರನಿಂದಾಗಿ ಭೂಮಿ ತನ್ನ ಅಕ್ಷದ ಸುತ್ತ ತಿರುಗುವ ವೇಗ ಕಡಿಮೆ ಆಗುತ್ತಿದೆ ಎನ್ನುವುದು ಸ್ಟೀಫನ್ ಅವರ ತರ್ಕ.

ಬಾಹ್ಯಾಕಾಶದಲ್ಲಿ ಭೂಮಿಯ ಚಲನೆಯು ಅಂತರಿಕ್ಷದಲ್ಲಿ ಸುತ್ತುವ ಇನ್ನಿತರ ಕಾಯಗಳಿಂದ ಪ್ರಭಾವಿತವಾಗಿರುತ್ತದೆ, ಈ ಕಾಯಗಳು ಭೂಮಿ ಮೇಲೆ ಬಲವನ್ನು ಬೀರುತ್ತವೆ. ಅಂತರಿಕ್ಷದಲ್ಲಿ ಚಲಿಸುವ ಅನ್ಯ ಕಾಯಗಳಿಂದಾಗಿ ಶತಕೋಟಿ ವರ್ಷಗಳಲ್ಲಿ, ಭೂಮಿಯ ಮೇಲಿನ ದಿನವು ಗಮನಾರ್ಹವಾಗಿ ಬದಲಾಗಿದೆ. ಈ ಚಲಿಸುವ ಕಾಯಗಳಲ್ಲಿನ ಸಣ್ಣ ವ್ಯತ್ಯಾಸಗಳು ಕೂಡಾ ಮಿಲಿಯಾಂತರ ವರ್ಷದ ನಂತರ ದೊಡ್ಡ ಬದಲಾವಣೆಗೆ ಕಾರಣವಾಗುತ್ತವೆ. ಭೂಮಿಯ ಹವಾಮಾನ ಚಕ್ರಗಳನ್ನು ವಶಪಡಿಸಿಕೊಂಡಿರುವ 90 ಮಿಲಿಯನ್ ವರ್ಷ ಹಳೆಯ ಬಂಡೆಯ ಅಧ್ಯಯನದಿಂದ ಈ ನಿಶ್ಕರ್ಷಕ್ಕೆ ಬರಲಾಗಿದೆ.

ಆದರೆ ಹೆಚ್ಚು ಹೆಚ್ಚು ಬಂಡೆಯ ಅಧ್ಯಯನ ನಡೆಸುತ್ತಾ ಹೋದಂತೆ ಅಧ್ಯಯನ ಕರ್ತರ ತೀರ್ಮಾನಗಳು ಕಡಿಮೆ ವಿಶ್ವಾಸಾರ್ಹವಾಗುತ್ತಾ ಸಾಗಿತು. ಅಂದರೆ ಚಂದ್ರನು ಭೂಮಿಯಿಂದ ಪ್ರಸ್ತುತ ವರ್ಷಕ್ಕೆ 3.82 ಸೆಂ.ಮೀ.ಗಳಷ್ಟು ದೂರ ಹೋಗುತ್ತಿದ್ದರೂ ಇದನ್ನು 1.5 ಶತಕೋಟಿ ವರ್ಷಗಳ ಹಿಂದಿನ ಕಾಲಕ್ಕೆ ಹೋಲಿಸಿದರೆ ಚಂದ್ರ ಭೂಮಿಗೆ ಅತಿ ಹತ್ತಿರದಲ್ಲಿಯೇ ಇರುತ್ತಿತ್ತು ಮತ್ತು ಭೂಮಿಯೊಂದಿಗಿನ ಗುರುತ್ವಾಕರ್ಷಣೆಯ ಸಂವಹನದಿಂದಾಗಿ ಭೂಮಿಯ ಉಪಗ್ರಹವಾದ ಚಂದ್ರ ನುಚ್ಚು ನೂರಾಗುತ್ತಿತ್ತು! ಈ ತರ್ಕದಿಂದಾಗಿ ಅಧ್ಯಯನದ ವಿಶ್ವಾಸಾರ್ಹತೆಯನ್ನು ಕಳೆದುಕೊಳ್ಳುತ್ತದೆ ಎನ್ನುವುದು ಅಧ್ಯಯನ ತಂಡದ ಅಂಬೋಣ. ಆದರೆ ಈ ತಂಡ ಕೋಟ್ಯಂತರ ವರ್ಷಗಳ ಹಿಂದಿನ ಭೂಮಿಯ ಚಲನೆ ಮತ್ತು ಭೂಮಿ ಮತ್ತು ಚಂದ್ರನ ನಡುವಿನ ದೂರವನ್ನು ಅಳೆಯುವಲ್ಲಿ ಸಫಲರಾಗಿದ್ದಾರೆ. ಬಹುಶಃ ನಮ್ಮ ವೇದೋಪನಿಷತ್ ಮತ್ತು ಪುರಾಣಗಳಲ್ಲಿ ಇದರ ಉತ್ತರ ಅಡಗಿರಬಹುದು.

The study was published in the Proceedings of the National Academy of Sciences.

-ಶಾರ್ವರಿ

Tags

Related Articles

Close