ಪ್ರಚಲಿತ

ಭಾರತವನ್ನು ಪಾಕಿಸ್ತಾನದ ಜೊತೆ ತುಲನೆ ಮಾಡಿ ದೇಶಕ್ಕೆ ಅಪಮಾನ ಮಾಡಿದ ರಾಹುಲನಿಗೆ ಮಾನಸಿಕ ತಪಾಸಣೆ ಮಾಡಲು ಸಲಹೆ ನೀಡಿದರು ಸುಬ್ರಮಣ್ಯನ್ ಸ್ವಾಮಿ!!

ರಕ್ತದಲ್ಲಿ ಪಾಕಿಸ್ತಾನದ ನೆತ್ತರು ಹರಿಯುತ್ತಿದ್ದರೆ ಅವರು ಭಾರತದ ಬಗ್ಗೆ ಒಳ್ಳೆಯ ಮಾತುಗಳನ್ನಾಡಲು ಸಾಧ್ಯವೆ? ಪಾಕಿಸ್ತಾನದ ಮುಗಲ ಘಿಯಾಸುದ್ದೀನ್ ಗಾಜಿಯ ವಂಶಸ್ಥರಾದ ನಾಮಧಾರಿ ಗಾಂಧಿಗಳು ತಮ್ಮ ನಿಷ್ಟೆಯನ್ನು ಪಾಕಿಸ್ತಾನಕ್ಕಲ್ಲದೆ ಭಾರತಕ್ಕೆ ತೋರಲು ಸಾಧ್ಯವೆ? ದೇಶದ್ರೋಹ ಅವರ ವಂಶವಾಹಿಗಳಲ್ಲಿ ಹರಿಯುತ್ತಿದೆ. ಕಾಂಗ್ರೆಸಿನ ಮಂದ ಬುದ್ದಿ ಇದನ್ನು ಮತ್ತೆ ಮತ್ತೆ ಸಾಬೀತುಪಡಿಸುತ್ತಿದ್ದಾನೆ. ಕರ್ನಾಟಕದಲ್ಲಿ ನಡೆಯುತ್ತಿರುವ ರಾಜಕೀಯ ಬೆಳವಣಿಗೆಗಳ ಬಗ್ಗೆ ಟೀಕೆ ಮಾಡುವ ಭರದಲ್ಲಿ ರಾಹುಲ್ ಗಾಂಧಿ “ಐಸಾ ಸಿರ್ಫ್ ಪಾಕಿಸ್ತಾನ್ ಮೆ ಹೋತಾ ಹೈ” ಎಂದು ಹೇಳಿರುವುದು ಭಾರತೀಯರಿಗೆ ಮಾಡಿದ ಅಪಮಾನ. ಈ ಬಗ್ಗೆ ಭಾಜಪದ ಹಲವಾರು ನಾಯಕರು ಆಕ್ಷೇಪ ವ್ಯಕ್ತ ಪಡೆಸಿದ್ದಾರೆ. ರಾಹುಲನ ಈ ಹೇಳಿಕೆಗೆ ದೇಶಾದ್ಯಂತ ಪ್ರತಿರೋಧ ಕಂಡುಬರುತ್ತಿದೆ.

2014 ರಿಂದ ನಡೆದ ಎಲ್ಲಾ ಚುನಾವಣೆಗಳಲ್ಲೂ ಕಾಂಗ್ರೆಸಿನ ಹೀನಾಯ ಸೋಲು ಮೇಡಮ್ ಜಿ ಮತ್ತಾಕೆಯ ಬಾಲಬಡುಕರನ್ನು ಹುಚ್ಚರನ್ನಾಗಿಸಿದೆ. ಅವರ ಯುವರಾಜ ಮೊದಲೆ ಮಂದಬುದ್ದಿ, ಆತನ ಹೇಳಿಕೆಗಳು ಕಾಂಗ್ರೆಸಿನ ಶವಪೆಟ್ಟಿಗೆಗೆ ಒಂದೊಂದೆ ಮೊಳೆಗಳನ್ನು ಹೊಡೆಯುತ್ತಿವೆ. ಕರ್ನಾಟಕದಲ್ಲಿ ಹೀನಾಯ ಸೋಲಿನ 36 ಗಂಟೆಗಳ ಬಳಿಕ ಅವರ ಮೌನವನ್ನು ಮುರಿದು ರಾಯ್ಪುರದಲ್ಲಿ ನಡೆದ ಸಮಾವೇಶದಲ್ಲಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಮಾತನಾಡುತ್ತಾ, ದೇಶದಲ್ಲಿ ನಡೆಯುತ್ತಿರುವ ರಾಜಕೀಯ ವಾತಾವರಣವನ್ನು ಪಾಕಿಸ್ತಾನಕ್ಕೆ ಹೋಲಿಸಿದ್ದಾರೆ. ಇದಕ್ಕೆ ಭಾಜಪದ ಘಟಾನುಘಟಿ ನಾಯಕರು ಆಕ್ಷೇಪ ವ್ಯಕ್ತ ಪಡಿಸಿ ರಾಹುಲನನ್ನು ಝಾಡಿಸಿದ್ದಾರೆ.

ಅಮ್ಮ-ಮಗನಿಗೆ ಸಿಂಹ ಸ್ವಪ್ನವಾಗಿ ಕಾಡುತ್ತಿರುವ ಸುಬ್ರಮಣ್ಯನ್ ಸ್ವಾಮಿ ಅವರು ರಾಹುಲ್ ಮಾನಸಿಕ ತಪಾಸಣೆಗೆ ಒಳಪಡಬೇಕೆಂದು ಹೇಳಿದ್ದಾರೆ. ಪಾಕಿಸ್ತಾನದಂತಹ “ಮೂರನೇ ದರದ ದೇಶ” ದೊಂದಿಗೆ ಭಾರತದ ಪರಿಸ್ಥಿತಿಯನ್ನು ಹೋಲಿಸಿರುವುದು ರಾಹುಲ್ ಗಾಂಧಿ ದೇಶಕ್ಕೆ ಮಾಡಿದ ಅಪಮಾನವೆಂದು ಕಿಡಿ ಕಾರಿದ್ದಾರೆ. ಕಾಂಗ್ರೆಸಿನ ಹೊಲಸು ರಾಜಕೀಯದ ಅನಾವರಣ ಮಾಡುತ್ತಾ. “ಕರ್ನಾಟಕವು ನಮ್ಮ ಕೈಯಲ್ಲಿದೆ, ಅದಕ್ಕಾಗಿಯೇ ಅವರು (ಕಾಂಗ್ರೆಸ್) ಹೆದರುತ್ತಿದ್ದಾರೆ. ಅವರು ತಮ್ಮ ಸಮತೋಲನ ಕಳೆದುಕೊಂಡಿದ್ದಾರೆ, “ಎಂದು ಹೇಳಿದರು. ರಾಹುಲ್ ಗಾಂಧಿಯವರ ಕೃತ್ಯವನ್ನು ಖಂಡಿಸುತ್ತಾ ದೇಶದ ಮೇಲೆ ಆಕ್ರಮಣ ಮಾಡುವುದು ಅವನ ಮರಣದ ಸಂಕೇತವಾಗಿದೆ ಮತ್ತು ಅವನಿಗೆ ಮಾನಸಿಕ ತಪಾಸಣೆ ಬೇಕು ಎಂದು ಹೇಳಿದ್ದಾರೆ.

ರಾಹುಲ್ ಮತ್ತು ಫೇಕ್ ರಮ್ಯಾನಂತಹವರಿಗೆ ತುಲನೆ ಮಾಡಲು ಪಾಕಿಸ್ತಾನದಂತಹ ದೇಶವೆ ಏಕೆ ಕಣ್ಣಿಗೆ ಬೀಳುತ್ತೋ ಅದನ್ನು ಅವರೆ ಹೇಳಬೇಕು. ಭಾರತದಲ್ಲಿ ಸರ್ವಾಧಿಕಾರ ಸರಕಾರವಿದೆ, ಸಂವಿಧಾನ ಅಪಾಯದಲ್ಲಿದೆ ಎನ್ನುವ ರಾಹುಲ್ ತಮ್ಮ ಅಜ್ಜಿ 1975ರಲ್ಲಿ ದೇಶಕ್ಕೆ ತುರ್ತುಪರಿಸ್ಥಿತಿಯ ಗಾಯ ಕೊಟ್ಟದನ್ನು ಮರೆತಿದ್ದಾರೆ. “ಹಿಟ್ಲರ್ ದಾದಿ” ಇಂದಿರಾ ಗಾಂಧಿ ಐವತ್ತಕ್ಕೂ ಹೆಚ್ಚು ಬಾರಿ ಚುನಾಯಿತ ಸರ್ಕಾರಗಳನ್ನು ಬರ್ಖಾಸ್ತು ಮಾಡಿ ರಾಜ್ಯಗಳಲ್ಲಿ ರಾಷ್ಟ್ರಪತಿ ಆಳ್ವಿಕೆ ಹೇರಿದ್ದು ನೆನಪಿಲ್ಲ. ಇವರದೆ ತಾಯಿ ಜಾರ್ಖಂಡಿನಲ್ಲಿ ಬಿಜೆಪಿಗೆ ಬಹುಮತವಿದ್ದರೂ ಸರಕಾರ ರಚಿಸದಂತೆ ಮಾಡಿದ್ದು ನೆನಪಿಲ್ಲ. ತಾವು ಮಾಡಿದರೆ ಸರಿ ಬೇರೆಯವರು ಮಾಡಿದರೆ ಸಂವಿಧಾನಕ್ಕೆ ಅಪಮಾನ. ಇಂಥ ಇಬ್ಬಗೆ ನೀತಿಯನ್ನು ಸಮರ್ಥಿಸುವ ಕಾಂಗ್ರೆಸಿನ ಭಟ್ಟಂಗಿಗಳು, ಕಂತೆಗೆ ತಕ್ಕ ಬೊಂತೆ.

ದೇಶ ಸರಿಯಾದ ದಿಕ್ಕಿನಲ್ಲೆ ನಡೆಯುತ್ತಿದೆ. ಲೋಕತಂತ್ರಕ್ಕೂ ಅಪಾಯವಿಲ್ಲ, ಸಂವಿಧಾನಕ್ಕೂ ಅಪಾಯವಿಲ್ಲ, ದೇಶದ ಜನರಿಗೂ ಅಪಾಯವಿಲ್ಲ. ಅಪಾಯವಿರುವುದು ಕಾಂಗ್ರೆಸಿನ ರಾಜಪರಿವಾರಕ್ಕೆ ಮತ್ತು ಭಟ್ಟಂಗಿಗಳಿಗೆ ಮಾತ್ರ. ಸೋಲಿನ ಮೇಲೆ ಸೋಲುಣ್ಣುತ್ತಿರುವ ಕಾಂಗ್ರೆಸ್ ಶಾಶ್ವತವಾಗಿ ಸ್ಮಶಾನ ಸೇರಲಿದೆ. 48 ವರ್ಷಗಳು ಅಧಿಕಾರದ ದರ್ಪದಿಂದ ಮೆರೆದಾಡಿದವರೆಲ್ಲ ಮುಣ್ಣು ಮುಕ್ಕುವ ಕಾಲ ಬಂದಿದೆ. ಇನ್ನು ವೆಟಿಕನ್-ಮೆಕ್ಕಾಗಳಿಗೂ ಇವರ ಅಗತ್ಯವಿಲ್ಲ. ಕುಂಟು ಕುದುರೆಯ ಮೇಲೆ ಹಣ ಸುರಿಯಲು ವೆಟಿಕನ್-ಮೆಕ್ಕಾಗಳಿಗೇನು ತಿಕ್ಕಲೇ? ಭಾರತದಲ್ಲಿ ರಾಜಮಾತೆಯ ಭವಿಷ್ಯ ಡೋಲಾಯಮಾನವಾಗಿದೆ. ಅದಕ್ಕೆ ಕಾಂಗ್ರೆಸ್ ಹುಚ್ಚು ನಾಯಿ ಕಡಿದಂತೆ ಅತ್ತಿಂದಿತ್ತ ಓಡಾಡುತ್ತಿರುವುದು. ಕರ್ನಾಟಕವನ್ನು ಕಳೆದುಕೊಂಡರೆ 2019 ರ ಚುನಾವಣೆಗೆ ದುಡ್ಡು ಪೀಕುವುದು ಎಲ್ಲಿಂದ? ಇದೆ ಕಾಂಗ್ರೆಸಿನ ಚಿಂತೆ. ಅದಕ್ಕಾಗೆ ಇಷ್ಟೆಲ್ಲಾ ನಾಟಕ.

-ಶಾರ್ವರಿ

Tags

Related Articles

Close