ಪ್ರಚಲಿತ

ಮಾನವ ಹಕ್ಕುಗಳ ಹೋರಾಟಗಾರರಿಗೆ ನೇರ ಪ್ರಶ್ನೆ ಇಟ್ಟು ದಿಟ್ಟತನ ಪ್ರದರ್ಶಿಸಿದ ಸುನಂದಾ ವಸಿಷ್ಠ..!

 ಅಮೆರಿಕಾದ ವಾಷಿಂಗ್ಟನ್ ನಲ್ಲಿ ನಡೆದ ಮಾನವ ಹಕ್ಕುಗಳ ಕುರಿತಾದ ಸಂವಾದದಲ್ಲಿ ಭಾಗವಹಿಸಿದ್ದ ಭಾರತದ ಕಾಶ್ಮೀರಿ ಹಿಂದೂ ಹೆಣ್ಣುಮಗಳೊಬ್ಬಳು ಸುಳ್ಳು ಮಾನವ ಹಕ್ಕು ಹೋರಾಟಗಾರರಿಗೆ ತಕ್ಕ ಉತ್ತರವನ್ನು ನೇರವಾಗಿ ನೀಡಿದ್ದಾಳೆ.ಮೊದಲಿನ ಭಾರತಕ್ಕೂ ಇಂದಿನ ಭಾರತಕ್ಕೂ ಬಹಳಷ್ಟು ವೆತ್ಯಾಸವಿದೆ ಎಂಬುದು ಹಲವರಿಗೆ ಅರಗಿಸಿಕೊಳ್ಳಲಾಗದಂತಹಾ ವಿಷಯವಾಗಿದೆ..ಮೊದಲು ಪ್ರತಿಯೊಂದು ವಿಷಯಕ್ಕೂ ಅಮೆರಿಕಾ ಮತ್ತು ರಷ್ಯಾ ದೇಶಗಳ ಅನುಮತಿಗೂ ಒಪ್ಪಿಗೆಗೂ ಕಾಯುತ್ತಿದ್ದ ದೇಶವೀಗ ತನ್ನ ದೇಶದ ಆಂತರಿಕ ವಿಷಯಗಳಲ್ಲಿ ಹೊರಗಿನ ಯಾವುದೇ ದೇಶದ ಮಧ್ಯಸ್ತಿಕೆಯ ಅಗತ್ಯವಿಲ್ಲ ಎಂದು ನೇರವಾಗಿ ಹೇಳುತ್ತಿದೆ..ಹೀಗೆ ಪ್ರತಿಯೊಂದು ವೇದಿಕೆಗಳಲ್ಲೂ ಭಾರತವನ್ನು ಧೃಡವಾಗಿ ಪ್ರತಿನಿಧಿಸುವಂತಹಾ ಅನೇಕರಿಗೆ ಪ್ರಧಾನಿ ಮೋದಿಯೇ ಸ್ಫೂರ್ತಿ ಮತ್ತು ಧೈರ್ಯ ನೀಡಿದ್ದಾರೆಂಬುದು ಕೂಡಾ ಸುಳ್ಳಲ್ಲ.ಕಾಶ್ಮೀರದ ಕಣಿವೆಯಲ್ಲಿ ಹಲವಾರು ವರ್ಷಗಳಿಂದ ನಡೆಯುತ್ತಿದ್ದ ಕ್ರೌರ್ಯ,ಭಯೋತ್ಪಾದನೆ ಮತ್ತು ಕುಟುಂಬ ರಾಜಕಾರಣಕ್ಕೆ ಮಂಗಳವನ್ನು ಹಾಡಿ ಸಾಮಾನ್ಯ ಜನರ ಜೀವನವನ್ನು ಸುಂದರವಾಗಿಸಲು ಚುನಾವಣಾ ಪ್ರಚಾರದಲ್ಲಿ ಹೇಳಿದ್ದಂತೆ ಮೋದಿ ಸರಕಾರ ೩೭೦ ನೇ ವಿಧಿಯನ್ನು ರದ್ದುಪಡಿಸಿತು..ಅಂದರೆ ಕಾಶ್ಮೀರವೂ ಭಾರತದ ಇತರ ರಾಜ್ಯಗಳಂತೆಯೇ ಭಾರತದ ನ್ಯಾಯಾಂಗ ಮತ್ತು ಕಾರ್ಯಾಂಗಗಳ ಅಧೀನದಲ್ಲಿ ಬರುತ್ತದೆ.ಇದಕ್ಕೋಸ್ಕರ ಕಣಿವೆ ರಾಜ್ಯದಲ್ಲಿ ಕೆಲವು ದಿನಗಳು ನಿಷೇಧಾಜ್ಞೆ ಜಾರಿಯಾರಿತು..ಜಮ್ಮು ಮತ್ತು ಲಡಾಖ್ ಗಳು ಶಾಂತವಾಗಿದ್ದು ಸಂತೋಷ ವ್ಯಕ್ತಪಡಿಸಿದರೆ ಕಾಶ್ಮೀರ ಮಾತ್ರ ಎಂದಿನಂತೆ ಘರ್ಷಣೆಗಿಳಿಯಿತು..
      ಹಲವು ದಶಕಗಳಿಂದ ಯುದ್ಧಭೂಮಿಯಾಗಿರುವ ಕಾಶ್ಮೀರದಲ್ಲಿ ಹಲವಾರು ಸಾಮಾನ್ಯಜನ ಭಯೋತ್ಪಾದನೆಗೆ ಬಲಿಯಾಗಿದ್ದಾರೆ..ಹಲವಾರು ಸೈನಿಕರು ಹುತಾತ್ಮರಾಗಿದ್ದರೆ ಇನ್ನು ಹಲವಾರು ಶಾಶ್ವತವಾಗಿ ಅಂಗಾಂಗ ಕಳೆದುಕೊಂಡಿದ್ದಾರೆ..ಅದೆಲ್ಲಕ್ಕೂ ಮಿಗಿಲಾಗಿ ದಶಕಗಳ ಹಿಂದೆ ಮುಸ್ಲಿಂ ಭಯೋತ್ಪಾದಕರು ಕಾಶ್ಮೀರಿ ಹಿಂದೂಗಳ ಮಾರಣ ಹೋಮ ನಡೆಸಿದ್ದರು..ಅತ್ಯಾಚಾರ ಅನಾಚಾರಗಳಿಗೆ ಎಲ್ಲೆಯೇ ಇರಲಿಲ್ಲ..ಕೊನೆಗೆ ತಮ್ಮದೇ ನೆಲದಲ್ಲಿ ಕಾಶ್ಮೀರಿ ಪಂಡಿತರು ನಿರಾಶ್ರಿತರಾದರು..ಹಲವಾರು ಅನಾಥರಾದರು..ಇಂತಹಾ ಕ್ರೌರ್ಯದ ಹೊತ್ತಲ್ಲೂ ಕಂಬಳಿ ಹೊದ್ದು ಮಲಗಿದ್ದ ಮಾನವಹಕ್ಕು ಹೋರಾಟಗಾರರು ಇಂದು ಕಾಶ್ಮೀರದಲ್ಲಿ ನಡೆಯದೆ ಇರುವ ದೌರ್ಜನ್ಯದ ಕುರಿತು ಕಾರ್ಯಕ್ರಮಗಳನ್ನು ನಡೆಸುತ್ತಿದ್ದಾರೆ.. ಇಂತಹುದೇ ಒಂದು ಮಾನವ ಹಕ್ಕುಗಳ ಕುರಿತ ಸಂವಾದವೊಂದು ನಿನ್ನೆ ವಾಷಿಂಗ್ಟನ್ ನಲ್ಲಿ ನಡೆಯುತ್ತಿತ್ತು..ಈ ಸಂವಾದದಲ್ಲಿ ಭಾರತವನ್ನು ಪ್ರತಿನಿಧಿಸಿದ್ದ ಕಾಶ್ಮೀರಿ ಹಿಂದೂ ಮಹಿಳೆಯಾದ ಸುನಂದಾ ವಸಿಷ್ಠ ತಮ್ಮ ಭಾಷಣದಲ್ಲಿ ಕಾಶ್ಮೀರದಲ್ಲಿ ಹಿಂದೂಗಳ ಮೇಲೆ ನಡೆದ ದೌರ್ಜನ್ಯವನ್ನು ಎಳೆ ಎಳೆಯಾಗಿ ಬಿಡಿಸಿಟ್ಟಿದ್ದಾರೆ.ವೃತ್ತಿಯಲ್ಲಿ ಅಂಕಣಕಾರ್ತಿಯಾಗಿರುವ ಸುನಂದಾ ಕಾಶ್ಮೀರದಲ್ಲಿ ಪಂಡಿತರ ಮೇಲೆ ನಡೆದ ದೌರ್ಜನ್ಯಗಳನ್ನು ಖಂಡಿತಾ ಇತರರಿಗಿಂತ ಚೆನ್ನಾಗಿ ಬಲ್ಲವರಾಗಿದ್ದಾರೆ.
    “ ಕಾಶ್ಮೀರವಿಲ್ಲದೆ ಭಾರತವೇ ಇಲ್ಲ,ನಾವು ಯಾವತ್ತೂ ಕಾಶ್ಮೀರವನ್ನು ಆಕ್ರಮಿಸಲೇ ಇಲ್ಲ ಯಾಕೆಂದರೆ ಕಾಶ್ಮೀರ ಭಾರತದ ಅವಿಭಾಜ್ಯ ಅಂಗ.ಭಾರತವೆಂದರೆ ೭೦ ವರ್ಷ ಹಳೆಯ ದೇಶವಲ್ಲ ೫೦೦೦ ವರ್ಷ ಹಳೆಯ ನಾಗರೀಕತೆ.ಇಂದು ಮಾನವ ಹಕ್ಕಿನ ಬಗ್ಗೆ ಈ ರೀತಿ ಚರ್ಚೆ ನಡೆಯುತ್ತಿರುವುದಕ್ಕೆ ನನಗೆ ಸಂತಸವಾಗುತ್ತಿದೆ.ಏಕೆಂದರೆ ಅಂದು ನನ್ನ ಕುಟುಂಬ ಮತ್ತು ನನ್ನಂಥ ಎಷ್ಟೋ ಜನ ತಮ್ಮ ಮನೆ,ಬದುಕು,ಬದುಕಿನ ಹಾದಿ ಎಲ್ಲವನ್ನೂ ಕಳೆದುಕೊಂಡಾಗ ಈ ಜಗತ್ತು ಮೌನವಾಗಿತ್ತು.೧೯೯೦ ರ ದಶಕದಲ್ಲಿ ೪,೦೦,೦೦೦ ಕ್ಕೂ ಹೆಚ್ಚು ಕಾಶ್ಮೀರಿಗಳನ್ನು ಕಾಶ್ಮೀರದಿಂದ ಹೊರಗಟ್ಟಲಾಯಿತು.ಆಗ ಯಾರೂ ಮಾತನಾಡಲಿಲ್ಲ.ನನ್ನ ಕುಟುಂಬದವರನ್ನು ಪಾಕಿಸ್ತಾನಿ ಉಗ್ರರು ಕೊಲ್ಲುವಾಗ ಈ ಮಾನವಹಕ್ಕು ಹೋರಾಟಗಾರರೆಲ್ಲ ಎಲ್ಲಿದ್ದರು? ಇಂದು ನಾನಿಲ್ಲಿ ಮಾತನಾಡುತ್ತಿದ್ದೇನೆ ಏಕೆಂದರೆ ನಾನು ಸಂತ್ರಸ್ತೆಯಾಗಿ ಬದುಕುಳಿದಿದ್ದೇನೆ.ಜಿಹಾದಿಗಳ ಕ್ರೌರ್ಯದಿಂದ ನನ್ನನ್ನು ರಕ್ಷಿಸುವ ಸಲುವಾಗಿ ನನ್ನ ಅಜ್ಜ ನನ್ನನ್ನು ಕೊಲ್ಲಲೂ ತಯಾರಾಗಿದ್ದರು..ಇಂದು ಪಾಶ್ಚಿಮಾತ್ಯ ರಾಷ್ಟ್ರಗಳು ಕಾಣುವ ಐಸಿಸ್ ನ ಕ್ರೌರ್ಯವನ್ನು ನಾವು ಮೂರು ದಶಕಗಳ ಮೊದಲೇ ಅನುಭವಿಸಿದ್ದೇವೆ.ಜಿಹಾದಿಗಳು ಅಕ್ಕಿಯ ಗೋದಾಮಿನಲ್ಲಿ ಅಡಗಿದ್ದ ಬಿಕೆ ಗಂಜೂ ಎಂಬ ಇಂಜಿನಿಯರ್ ಅನ್ನು ಅವನ ನೆರೆಮನೆಯವನ ಸಹಾಯದಿಂದ ಹುಡುಕಿ ಗುಂಡಿಕ್ಕಿ ಕೊಂದು ..ಅವನ ರಕ್ತದಿಂದ ಕೆಂಪಾಗಿದ್ದ ಅಕ್ಕಿಯನ್ನು ಅವನ ಪತ್ನಿಗೆ ಬಲಾತ್ಕಾರದಿಂದ ತಿನ್ನಿಸಿದ್ದರು..ಇಂತಹಾ ಕ್ರೌರ್ಯವನ್ನು ನಾವು ಅನುಭವಿಸಿದ್ದೇವೆ..ಮುಂದೆ ಯಾವಾಗಲಾದರೂ ಒಂದು ದಿನ ನನಗೂ ನನ್ನ ಪಂಗಡದ ಇತರ ಸಂತ್ರಸ್ತರಿಗೂ ಅವರ ಮಾನವಹಕ್ಕುಗಳಿಗಾಗಿ ಧ್ವನಿ ಎತ್ತುವ ದಿನ ಬರಬಹುದೆಂದು ಆಶಿಸುತ್ತೇನೆ” ಎಂದು ನೆರೆದ ಅಷ್ಟೂ ಜನರ ಮುಂದೆ ನೇರವಾಗಿಯೂ ದಿಟ್ಟವಾಗಿಯೂ ಸುನಂದಾ ಪುಷ್ಕರ್ ಹೇಳಿದರು.
-Deepashree M
Tags

Related Articles

FOR DAILY ALERTS
Close