ಇತಿಹಾಸ

ಹಿಂದೂ ಮಹಾಸಾಗರದಲ್ಲಿ ವಿಲುಪ್ತವಾಗಿರುವ ಭಾರತದ ಉಪದ್ವೀಪ ಕುಮಾರಿ ಖಂಡ!! ಸಾವಿರಾರು ವರ್ಷಗಳ ಹಿಂದೆ ಪ್ರಾಕೃತಿಕ ವಿಕೋಪಕ್ಕೆ ತುತ್ತಾಗಿ ಸಾಗರತಳ ಸೇರಿದ ಪ್ರಾಚೀನ ಭಾರತೀಯ ಭೂಭಾಗ!!

ಮಿಲಿಯಾಂತರ ವರ್ಷಗಳ ಹಿಂದಿದ್ದ ಭಾರತಕ್ಕೂ ಈಗಿರುವ ಭಾರತಕ್ಕೂ ಅಜಗಜಾಂತರ ವ್ಯತ್ಯಾಸವಿದೆ. ಅಖಂಡ ಆರ್ಯಾವರ್ತ ಭಾರತ ಕೇವಲ ಕಾಶ್ಮೀರದಿಂದ ಕನ್ಯಾಕುಮಾರಿವರೆಗೆ ಸೀಮಿತವಾಗಿರಲಿಲ್ಲ, ಬದಲಾಗಿ ರಷ್ಯಾದಿಂದ ಕುಮಾರಿ ಖಂಡ, ಅಫಘಾನಿಸ್ತಾನದಿಂದ ಇಂಡೋನೇಷಿಯಾವರೆಗೆ ಹಬ್ಬಿತ್ತು. ಇದರಲ್ಲಿ ಕೆಲವು ಭೂಭಾಗ ಪ್ರಾಕೃತಿಕ ವಿಕೋಪಕ್ಕೆ ತುತ್ತಾಗಿ ವಿಲುಪ್ತವಾದರೆ ಮತ್ತೆ ಕೆಲವು ಭೂಭಾಗಳು ಮಾನವನ ಮಹಾತ್ವಾಕಾಂಕ್ಷೆಯ ಫಲವಾಗಿ ಮಂತಾಂಧರ ದಾಳಿಗೆ ಸಿಕ್ಕಿ ಕೈ ತಪ್ಪಿ ಹೋಯಿತು. ಹಿಂದೂ ಮಹಾಸಗರದಲ್ಲಿದ್ದ ಭಾರತದ ಭೂಭಾಗವೊಂದು ಪ್ರಾಕೃತಿಕ ವಿಕೋಪಕ್ಕೆ ತುತ್ತಾಗಿ ಸಮುದ್ರ ತಳ ಸೇರಿದೆ ಎಂದು ಅನ್ವೇಷಣೆಗಳಿಂದ ತಿಳಿದು ಬಂದಿದೆ.

ಹತ್ತೊಂಬತ್ತನೆ ಶತಮಾನದಲ್ಲಿ ಅಮೇರಿಕಾ ಮತ್ತು ಯುರೋಪಿನ ವಿದ್ವಾಂಸರ ತಂಡವು ಆಫ್ರಿಕಾ-ಮಡಗಾಸ್ಕರ್-ಭಾರತದ ಮಧ್ಯೆ ಇರುವ ಭೌಗೋಳಿಕ ಸಂಬಂಧದ ಅಧ್ಯಯನ ನಡೆಸುತ್ತಿದ್ದಾಗ ಹಿಂದೂ ಸಾಗರದ ತಳದಲ್ಲಿ ಒಂದು ವಿಲುಪ್ತ ಮಹಾದ್ವೀಪ ಕಣ್ಣಿಗೆ ಗೋಚರಿಸುತ್ತದೆ. ಈ ಮಹಾದ್ವೀಪಕ್ಕೆ ಅವರು ‘ಲೆಮುರಿಯಾ’ ಎಂದು ಹೆಸರಿಡುತ್ತಾರೆ. 230 ಮಿಲಿಯನ್ ವರ್ಷಗಳಷ್ಟು ಹಳೆಯದಾದ ಈ ಮಹಾ ದ್ವೀಪದಲ್ಲಿ ಅತ್ಯಂತ ಪ್ರಾಚೀನ ಮತ್ತು ಉನ್ನತ ನಾಗರಿಕತೆಯೊಂದಿತ್ತು ಎಂದು ಕಂಡುಕೊಳ್ಳುತ್ತಾರೆ ಮತ್ತು ಅದಕ್ಕೆ “ಮು” ಎಂದು ಹೆಸರಿಸುತ್ತಾರೆ. ಆಶ್ಚರ್ಯವೆಂದರೆ ಈ ದ್ವೀಪದ ಉಲ್ಲೇಖ ಭಾರತೀಯ ಪುರಾಣಗ್ರಂಥಗಳಲ್ಲಿ ಮೊದಲೆ ಇತ್ತು!!

ತಮಿಳು ಮತ್ತು ಸಂಸ್ಕೃತ ಸಾಹಿತ್ಯದ ಪ್ರಕಾರ ಈ ಮಹಾದ್ವೀಪವನ್ನು ಕುಮಾರಿ ಖಂಡ(ಕುಮಾರಿಕಾ ಖಂಡ) ಎಂದು ಕರೆಯಲಾಗುತ್ತಿತ್ತು. ತಮಿಳು ಮತ್ತು ಸಂಸ್ಕೃತ ಭಾಷೆಗಳು ಪ್ರಪಂಚದ ಅತ್ಯಂತ ಪ್ರಾಚೀನ ಭಾಷೆಗಳು ಮತ್ತು ಎರಡೂ ಭಾಷೆಗಳ ಜನಕ ಶಿವ ಎನ್ನುವುದು ನಿಮಗೆ ತಿಳಿದಿರಲಿ. ಜಗತ್ತಿನ ಬಹುತೇಕ ಭಾಷೆಗಳಿಗೆ ಸಂಸ್ಕೃತ ಮತ್ತು ತಮಿಳು ಭಾಷೆಗಳೆ ಮೂಲ. ಪಾಶ್ಚಾತ್ಯ ಸಂಶೋಧಕ ಫಿಲ್ ಸ್ಕೋಟ್ಲರ್ ಪ್ರಕಾರ ಮಾನವನ ಜೀವ ವಿಕಾಸ ಈ ಮಹಾದ್ವೀಪದಲ್ಲೆ ಆಗಿತ್ತು. ಇನ್ನು ಭಾರತೀಯ ಅನ್ವೇಷಕರ ಪ್ರಕಾರ ಈ ಭೂಭಾಗ ಭಾರತಕ್ಕೆ ಸೇರಿತ್ತು ಮತ್ತು ಇಲ್ಲಿ ತಮಿಳು ಸಭ್ಯತೆಯೊಂದು ವಾಸವಾಗಿತ್ತು. ಇದನ್ನು ಕುಮಾರಿ ನಾಡು ಅಥವಾ ಕುಮಾರಿ ಖಂಡ ಎಂದು ಕರೆಯಲಾಗುತ್ತಿತ್ತು.

ದಕ್ಷಿಣದ ಪಾಂಡ್ಯ ರಾಜರು ಈ ಮಹಾದ್ವೀಪವನ್ನು ಆಳುತ್ತಿದ್ದರು ಎನ್ನುವುದು ತಮಿಳು ವಿದ್ವಾಂಸರ ಅನಿಸಿಕೆ. ಪಾಂಡ್ಯನ್ ಎನ್ನುವ ಚಕ್ರವರ್ತಿಯೊಬ್ಬ ಈ ದ್ವೀಪವನ್ನು ಆಳುತ್ತಿದ್ದ ಮತ್ತು ಆತನ ಮಗಳ ಹೆಸರು ‘ಕುಮಾರಿ’ ಹಾಗಾಗಿ ಈ ಖಂಡಕ್ಕೆ ಕುಮಾರಿ ನಾಡು/ಖಂಡ ಎನ್ನುವ ಹೆಸರು ಬಂದಿದೆ. ತಮಿಳು ಜಾನಪದ ಕಥೆಗಳಲ್ಲಿಯೂ ಕುಮಾರಿ ಖಂಡದ ಬಗ್ಗೆ ಉಲ್ಲೇಖವಿದೆ ಎಂದು ಹೇಳಲಾಗುತ್ತದೆ. ಭಾರತೀಯ ಸಮುದ್ರ ವಿಜ್ಞಾನ ಸಂಸ್ಥೆಯ ಅನ್ವೇಷಕರ ಪ್ರಕಾರ 230 ಮಿಲಿಯನ್ ವರ್ಷಗಳ ಹಿಂದೆ ಈ ಖಂಡ ಸಮುದ್ರ ಮಟ್ಟದಿಂದ ನೂರು ಮೀಟರ್ ಎತ್ತರದಲ್ಲಿತ್ತು ಮತ್ತು ಹತ್ತು ಸಾವಿರ ವರ್ಷಗಳ ಹಿಂದೆ ಅರುವತ್ತು ಮೀಟರ್ ಎತ್ತರದಲ್ಲಿತ್ತು. ಹೆಚ್ಚು ಕಡಿಮೆ 15,000 ವರ್ಷಗಳ ಹಿಂದಿನವರೆಗೆ ಈ ಖಂಡ ಅಸ್ತಿತ್ವದಲ್ಲಿತ್ತು ಎನ್ನಲಾಗಿದೆ.

ಈ ಖಂಡದಲ್ಲೇ ರಾವಣನ ಲಂಕೆಯಿತ್ತು. ಪುರಾಣಗಳಲ್ಲಿ ನಲ-ನೀಲ ಎಂಬ ವಾಸ್ತು ಶಿಲ್ಪಿಗಳು ರಾಮ ಸೇತುವನ್ನು ನಿರ್ಮಾಣ ಮಾಡಿದ್ದರು. ಈ ಪ್ರದೇಶದಲ್ಲಿ ಸ್ಕೋಟ್ಲರ್ ನಡೆಸಿದ ಸಂಶೋಧನೆಗಳಲ್ಲಿ ಇಲ್ಲಿ ಕೆಲವು ಜೀವಾಶ್ಮಗಳು ದೊರೆತಿವೆ ಮತ್ತು ಆ ಕಾಲದ ಮನುಷ್ಯರು ನಮಗಿಂತ ತುಂಬಾ ಎತ್ತರ ಮತ್ತು ಬಲಿಷ್ಟರಾಗಿದ್ದರು ಎಂದು ತಿಳಿದು ಬಂದಿದೆ. ಈ ಖಂಡವು ಆಫ್ರಿಕಾ ಖಂಡದವರೆಗೂ ಚಾಚಿದ್ದರಿಂದ ಆಫ್ರಿಕಾ ಮತ್ತು ಭಾರತದ ಮಧ್ಯೆ ಸೇತುವಿನಂತೆ ಕೆಲಸ ಮಾಡುತ್ತಿತ್ತು ಎಂದು ಹೇಳಲಾಗುತ್ತದೆ. ಮಡಗಾಸ್ಕರ್ ನ ಲೆಮುರ್ ಎನ್ನುವ ಮಂಗಗಳಿಗೂ ಭಾರತದ ವಾನರರಿಗೂ ಸಾಮ್ಯತೆಗಳಿರುವುದು ಸಂಶೋಧನೆಗಳಿಂದ ಕಂಡು ಬಂದಿದೆ ಎನ್ನಲಾಗಿದೆ.

ಪ್ರಾಯಶ ಹಿಮನದಿಗಳ ಕರಗುವಿಕೆಯಿಂದಾಗಿ ಅಥವಾ ಸುನಾಮಿಯಿಂದಾಗಿ ಈ ಮಹಾದ್ವೀಪ ಸಮುದ್ರದಲ್ಲಿ ವಿಲುಪ್ತವಾಗಿರಬಹುದು ಎಂದು ವಿಜ್ಞಾನಿಗಳು ಊಹಿಸುತ್ತಾರೆ. ಸ್ಕೋಟ್ಲರ್ ಆವರು ಮಡಗಾಸ್ಕರ್ ಮತ್ತು ಭಾರತದಲ್ಲಿ ದೊರೆತ ವಾನರರ ಅವಶೇಷದ ಜೀವಾಶ್ಮಗಳಿಂದ ಇಲ್ಲಿ ಅತ್ಯುನ್ನತ ಸಭ್ಯತೆಯೊಂದು ಇದ್ದಿರಬಹುದು ಎಂದು ತರ್ಕಿಸುತ್ತಾರೆ. ತಮ್ಮ ಪುಸ್ತಕ ‘The Mammals of Madagascar’ ನಲ್ಲಿ ತಮ್ಮ ಅನ್ವೇಷಣೆಯ ಬಗ್ಗೆ ಸಾಕ್ಷ್ಯಗಳನ್ನು ನೀಡಿದ್ದಾರೆ. ಶ್ರೀಲಂಕಾದ ‘ಪರ್ಕ್ ಸ್ಟೆಂಟ್’ ವಸ್ತು ಸಂಗ್ರಹಾಲಯದಲ್ಲಿ ಈ ಖಂಡದಿಂದ ಉತ್ಖನನ ಮಾಡಲಾದ ವಸ್ತುಗಳನ್ನು ಪ್ರದರ್ಶನಕ್ಕೆ ಇಡಲಾಗಿದೆ.

ಸಂಸ್ಕೃತದ ಖಂಡ ಪುರಾಣದಲ್ಲಿ ಏಳು ಖಂಡಗಳ ವರ್ಣನೆ ಇದೆ. ಅದರಲ್ಲಿ ಒಂದು ಕುಮಾರಿಕಾ ಖಂಡ. ಅಲ್ಲಿ ಬಲಿಷ್ಟನಾದ ಚಕ್ರವರ್ತಿಯೊಬ್ಬನಿದ್ದ ಮತ್ತು ಆತನ ಮಗಳ ಹೆಸರು ಕುಮಾರಿ ಎಂದು ಖಂಡ ಪುರಾಣದಲ್ಲಿ ಉಲ್ಲೇಖವಾಗಿದೆ. 1000CE ಪೂರ್ವದಲ್ಲಿ ಬರೆಯಲಾದ ಸಂಸ್ಕೃತ ಮತ್ತು ತಮಿಳು ಸಾಹಿತ್ಯದಲ್ಲಿ ಸುನಾಮಿಯಿಂದಾಗಿ ಸಮುದ್ರದಲ್ಲಿ ವಿಲುಪ್ತವಾದ ಸಾಮ್ರಾಜ್ಯಗಳ ಉಲ್ಲೇಖವಿದೆ! ಬಹುಶಃ ಕೃಷ್ಣನ ದ್ವಾರಕೆಯೂ ಸುನಾಮಿಯಿಂದಾಗಿ ಸಮುದ್ರದಲ್ಲಿ ಮುಳಿಗಿದ್ದಿರಬಹುದು.

ಜಗತ್ತಿನ ನಾನಾ ಭಾಗಗಳಲ್ಲಿ ಇವತ್ತು ಸಂಶೋಧನೆಗಳು ನಡೆಯುತ್ತಿವೆ. ಈ ಎಲ್ಲಾ ಸಂಶೋಧನೆಗಳು ಮತ್ತು ಉತ್ಖನನ ಕಾಲದಲ್ಲಿ ದೊರೆಯುತ್ತಿರುವ ವಸ್ತುಗಳು ಭಾರತದೊಂದಿಗಿನ ತಮ್ಮ ಸಂಬಂಧವನ್ನು ತೋರಿಸುತ್ತಿವೆ. ಮಾನವನ ಜೀವ ವಿಕಾಸ ಮೊತ್ತ ಮೊದಲ ಬಾರಿಗೆ ಆರ್ಯಾವರ್ತ ಭಾರತದಲ್ಲೆ ನಡೆದದ್ದು. ಹಾಗಾಗಿಯೆ ಇಲ್ಲಿ ವೇದ-ಪುರಾಣ-ಉಪನಿಷತ್ತು-ವಿಜ್ಞಾನ-ತಂತ್ರಜ್ಞಾನ ವಿಷಯಗಳು ಉಚ್ಚ್ರಾಯ ಸ್ಥಿತಿಯಲ್ಲಿದ್ದದ್ದು. ಪ್ರಪಂಚದ ಇನ್ನಿತರ ದೇಶಗಳು ಕಣ್ಬಿಡುವ ಮೊದಲೆ ನಾವು ಮಂಗಳನ ಅಂಗಳಕ್ಕೆ ಜಿಗಿದಾಗಿತ್ತು ಎನ್ನುವುದು ಸುಳ್ಳಲ್ಲ. ಆಸ್ತೆಯಿರುವವರು ಹಾಗೆಯೆ ನಂಬುತ್ತಾರೆ ಇನ್ನುಳಿದವರಿಗೆ ಅಲ್ಲಿ ದೊರೆತೆ ಸಾಕ್ಷ್ಯಗಳಿವೆ ಬೇಕಿದ್ದರೆ ನಂಬಬಹುದು. ಇಲ್ಲದಿದ್ದರೆ ಅದೆ ಹಳಸಲು ಆರ್ಯ-ದ್ರಾವಿಡ ಸಿದ್ಧಾಂತವನ್ನು ಪ್ರತಿಪಾದಿಸಿ ನಗೆಪಾಟಲಿಗೀಡಾಗಬಹುದು.

-Postcard team

Tags

Related Articles

FOR DAILY ALERTS
Close