ಪ್ರಚಲಿತ

ರಫೆಲ್ ಡೀಲ್ ವಿಚಾರದಲ್ಲಿ ರಾಹುಲ್ ಗಾಂಧಿಗೆ ನೋಟಿಸ್! ನ್ಯಾಯಾಂಗ ನಿಂದನೆ ಆರೋಪದಲ್ಲಿ ಕಾಂಗ್ರೆಸ್ ಅಧ್ಯಕ್ಷನಿಗೆ ಕಂಟಕ!

ದೇಶದ ಭದ್ರತೆಯ ವಿಚಾರದಲ್ಲೂ ತಮಾಷೆ ನೋಡುವ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ತನ್ನ ರಾಜಕೀಯ ಲಾಭಕ್ಕಾಗಿ ಪದೇ ಪದೇ ಪ್ರಧಾನಿ ಶ್ರೀ ನರೇಂದ್ರ ಮೋದಿಯವರನ್ನು ಕಳ್ಳ ಎಂದು ಟೀಕೆ ಮಾಡುತ್ತಿದ್ದು ಇದೀಗ ರಾಹುಲ್ ಗಾಂಧಿಗೆ ಕಂಟಕ ಎದುರಾಗಿದೆ. ರಫೆಲ್ ಡೀಲ್ ವಿಚಾರದಲ್ಲಿ ರಾಹುಲ್ ಗಾಂಧಿ ತಮ್ಮ ಕಾಂಗ್ರೆಸ್ ಪಕ್ಷ ಮಾಡಿದ್ದ ಹಗರಣಗಳನ್ನು ಮುಚ್ಚಿ ಹಾಕಲು ಪ್ರಯತ್ನಿಸಿ ವಿಫಲರಾದಾಗ ನರೇಂದ್ರ ಮೋದಿಯವರ ಮೇಲೆ ಗೂಬೆ ಕೂರಿಸಲು ಯತ್ನಿಸಿದರು. ರಫೆಲ್ ಯುದ್ಧ ವಿಮಾನ ಖರೀದಿಯಲ್ಲಿ ಮೋದಿ ಕಮಿಷನ್ ಪಡೆದುಕೊಂಡಿದ್ದಾರೆ ಎಂದು ಆಧಾರ ರಹಿತವಾಗಿ ಆರೋಪಿಸಿದ ರಾಹುಲ್, ದೇಶದ ಸಂಪತ್ತನ್ನು ಮೋದಿ ಲೂಟಿ ಮಾಡುತ್ತಿದ್ದಾರೆ ಎಂದು ಬಿಂಬಿಸಿದ್ದರು. ಕೇಂದ್ರ ಸರಕಾರ ಇದಕ್ಕೆಲ್ಲ ಪ್ರತ್ಯುತ್ತರ ನೀಡುತ್ತಲೇ ಬಂದಿದ್ದರು ಕೂಡ ರಾಹುಲ್ ತನ್ನ ತೀಟೆ ತೀರಿಸಿಕೊಳ್ಳಲು ಮೋದಿ ವಿರುದ್ಧ ಪ್ರಶ್ನೆ ಕೇಳುತ್ತಲೇ ಇದ್ದರು. ಮೋದಿಯವರನ್ನು ಪ್ರಶ್ನಿಸಲು ಹೋಗಿ ಇದೀಗ ರಾಹುಲ್ ಗಾಂಧಿ, ನ್ಯಾಯಾಂಗವನ್ನೇ ನಿಂದಿಸಿದ್ದಾರೆ ಎಂದು ಇದೀಗ ಸ್ವತಃ ಸುಪ್ರೀಂ ಕೋರ್ಟ್ ನೋಟಿಸ್ ಜಾತಿಗೊಳಿಸಿದೆ.!

ವೈಯಕ್ತಿಕ ಅಭಿಪ್ರಾಯವನ್ನೇ ನ್ಯಾಯಾಲಯದ ಆದೇಶ ಎಂಬಂತೆ ಬಿಂಬಿಸಿದ್ದ ರಾಹುಲ್!

ರಾಹುಲ್ ಗಾಂಧಿ ಅವರು ಪ್ರಧಾನಿ ನರೇಂದ್ರ ಮೋದಿಯವರ ವಿರುದ್ಧ ಯಾವುದೇ ಆರೋಪ ಮಾಡಿದರು ಅದಕ್ಕೆ ಸಾಕ್ಷಿಗಳು ಇರುವುದಿಲ್ಲ, ಆದರೂ ತನ್ನ ಅಭಿಪ್ರಾಯವನ್ನೇ ನ್ಯಾಯಾಲಯದ ಅಭಿಪ್ರಾಯ ಎಂಬಂತೆ ಬಿಂಬಿಸುತ್ತಾರೆ. ಪದೇ ಪದೇ ಇಲ್ಲ‌ ಸಲ್ಲದ ಆರೋಪ ಮಾಡುವ ರಾಹುಲ್ ಗಾಂಧಿ ವಿರುದ್ಧ ಇದೀಗ ಬಿಜೆಪಿ ಮುಖ್ಯಸ್ಥೆ ಮೀನಾಕ್ಷಿ ಲೇಖಿ ಅವರು ಸಲ್ಲಿಸಿರುವ ಅರ್ಜಿಯ ಪ್ರಕಾರ ಕೋರ್ಟ್ ರಾಹುಲ್ ವಿರುದ್ಧ ನೋಟಿಸ್ ಬಿಡುಗಡೆಗೊಳಿಸಿದೆ. ರಾಹುಲ್ ಗಾಂಧಿ ಅವರು ಮೋದಿಯವರನ್ನು ಪ್ರಶ್ನಿಸಲು ಹೋಗಿ ತಮ್ಮ ಅಭಿಪ್ರಾಯವನ್ನೇ ಕೋರ್ಟ್‌ನ ಅಭಿಪ್ರಾಯ ಎಂಬಂತೆ ಬಿಂಬಿಸಿದ್ದರು. ಅಷ್ಟೇ ಅಲ್ಲದೆ ಈ ಸಂದರ್ಭದಲ್ಲಿ ರಾಹುಲ್ ಬಳಕೆ ಮಾಡಿದ್ದ ಭಾಷೆಗಳು ಕೂಡ ಸರಿಯಾಗಿರಲಿಲ್ಲ ಎಂದು ಆರೋಪಿಸಿದ ಮೀನಾಕ್ಷಿ ಲೇಖಿ, ಈ‌ ಬಗ್ಗೆ ಕೋರ್ಟ್ ವಿಚಾರಣೆ ನಡೆಸಬೇಕು ಎಂದು ಕೇಳಿಕೊಂಡಿದೆ. ಇದರನ್ವಯ ಕೋರ್ಟ್ ಕೂಡ ರಾಹುಲ್ ವಿರುದ್ಧ ನೋಟೀಸ್ ಜಾರಿಗೊಳಿಸಿದೆ.

ಎಪ್ರಿಲ್ 22ರ ವೇಳೆಗೆ ನೋಟಿಸ್‌ಗೆ ಉತ್ತರಿಸುವಂತೆ ಕೋರ್ಟ್ ಆದೇಶಿಸಿದ್ದು, ವಿಚಾರಣೆಗೆ ದಿನಾಂಕ ನಿಗದಿ ಮಾಡಿದೆ. ಅದೇ ರೀತಿ ರಾಹುಲ್ ಗಾಂಧಿಯವರು ನ್ಯಾಯಾಂಗ ನಿಂದನೆ ಮಾಡಿದ್ದೇ ಆದಲ್ಲಿ ಶಿಕ್ಷೆ ಅನುಭವಿಸುವುದು ಗ್ಯಾರಂಟಿ.!

-ಅರ್ಜುನ್

Tags

Related Articles

FOR DAILY ALERTS
Close