ಪ್ರಚಲಿತ

ಭಾರತೀಯರು ಯಾವುದೇ ದೇಶದಲ್ಲಿದ್ದರೂ ಚಿಂತೆ ಪಡಬೇಕಾಗಿಲ್ಲ..! ಮೋದಿ ಸರಕಾರದ ಬಗ್ಗೆ ಸುಷ್ಮಾ ಸ್ವರಾಜ್ ಹೇಳಿದ್ದೇನು ಗೊತ್ತಾ..?

ನಾವು ಭಾರತೀಯರು ಎಂದು ಹೆಮ್ಮೆಯಿಂದ ಹೇಳುವಂತಹ ಸ್ಥಿತಿ ನಿರ್ಮಾಣವಾಗಿದೆ ಎಂದರೆ ಅದು ಶ್ರೀ ನರೇಂದ್ರ ಮೋದೀಜೀ ಅವರ ಆಡಳಿತ ವೈಖರಿಯೇ ಕಾರಣ. ಕಾಂಗ್ರೆಸ್ ಆಡಳಿತದಲ್ಲಿ ಇಡೀ ಜಗತ್ತಿನ ಮುಂದೆ ಹಿಂದಿನ ಸರತಿಯಲ್ಲಿ ನಿಲ್ಲಬೇಕಾಗಿದ್ದ ಭಾರತವನ್ನು ಇಂದು ಇಡೀ ಜಗತ್ತೇ ಅಪ್ಪಿಕೊಂಡು ಸ್ವಾಗತಿಸುವಂತೆ ಮಾಡಿದ್ದಾರೆ ನಮ್ಮ ಹೆಮ್ಮೆಯ ಪ್ರಧಾನಿ ಮೋದೀಜೀ. ಪ್ರಧಾನಿ ಮೋದಿ ಹೋದಲ್ಲೆಲ್ಲಾ ಸಿಗುವ ಅದ್ಭುತ ಸ್ವಾಗತ , ಗೌರವ ನಮ್ಮ ಇಡೀ ದೇಶಕ್ಕೆ ಸಿಗುವ ಗೌರವ. ಅನಿವಾಸಿ ಭಾರತೀಯರು ಕೂಡಾ ಇಂದು ಯಾವುದೇ ದೇಶದಲ್ಲಿ ವಾಸಿಸುತ್ತಿದ್ದರೂ ನಿಶ್ಚಿಂತೆಯಿಂದ ತಮ್ಮ ಕೆಲಸ ಮತ್ತು ಜೀವನ ನಡೆಸುತ್ತಿದ್ದಾರೆ ಎಂದರೆ ಅದಕ್ಕೆ ಮುಖ್ಯ ಕಾರಣ ನರೇಂದ್ರ ಮೋದೀಜೀ ಅವರ ರಾಜತಾಂತ್ರಿಕ ನೀತಿ. ಜಗತ್ತಿನ ಎಲ್ಲಾ ದೇಶಗಳ ಜೊತೆಗೂ ಉತ್ತಮ ಬಾಂಧವ್ಯ ಇಟ್ಟುಕೊಂಡ ಮೋದೀಜೀ ನಮ್ಮ ದೇಶಕ್ಕೆ ಸಿಕ್ಕ ವರ ಎಂದರೆ ತಪ್ಪಾಗದು..!

ಈಗಾಗಲೇ ಮೋದೀಜೀ ಸರಕಾರಕ್ಕೆ ನಾಲ್ಕು ವರ್ಷ ತುಂಬಿದ್ದು, ಇಡೀ ಜಗತ್ತೇ ಊಹಿಸಲಾಗದ ರೀತಿಯಲ್ಲಿ ದೇಶವನ್ನು ಅತೀ ಎತ್ತರದ ಸ್ಥಾನದಲ್ಲಿ ನಿಲ್ಲಿಸಿದ ಕೀರ್ತಿ ನರೇಂದ್ರ ಮೋದಿಯವರಿಗೆ ಸಲ್ಲಬೇಕು. ಯಾಕೆಂದರೆ ಭಾರತೀಯರೆಂದರೆ ಸಾಕು ಉರಿದು ಬೀಳುತ್ತಿದ್ದ ಕೆಲ ರಾಷ್ಟ್ರಗಳು ಇಂದು ಇದೇ ಭಾರತೀಯರಿಗೆ ವಿಶೇಷ ಗೌರವ ನೀಡುತ್ತದೆ ಎಂದರೆ ಜಗತ್ತು ಭಾರತವನ್ನು ನೋಡುವ ದೃಷ್ಟಿ ಯಾವ ರೀತಿ ಬದಲಾಗಿದೆ ಎಂಬುದು ತಿಳಿಯುತ್ತದೆ.!

ಮೋದಿ ಸರಕಾರದ ಬಗ್ಗೆ ವಿದೇಶಾಂಗ ಸಚಿವೆ ಹೇಳಿದ್ದೇನು..?

ಸುಷ್ಮಾ ಸ್ವರಾಜ್, ಮೋದಿ ಸರಕಾರದ ಒಬ್ಬ ನಿಷ್ಟಾವಂತ ಸಚಿವರುಗಳಲ್ಲಿ ಒಬ್ಬರು. ಕೇವಲ ಒಂದು ಟ್ವೀಟ್ ಮೂಲಕವೇ ಅದ್ಯಾವ ರೀತಿಯ ಸಮಸ್ಯೆಗಳನ್ನು ಬಗೆಹರಿಸುವ ಸುಷ್ಮಾ ಸ್ವರಾಜ್ ಮೋದಿ ಸರಕಾರ ನಾಲ್ಕು ವರ್ಷ ಪೂರೈಸಿರುದರ ಬಗ್ಗೆ ಮಾತನಾಡುತ್ತಾ , ಇಂದು ಭಾರತ ಯಾವ ಅಭಿವೃದ್ಧಿ ಹೊಂದಿದ ರಾಷ್ಟ್ರಗಳಿಗೂ ಕಡೆಮೆಯಿಲ್ಲ. ಭಾರತೀಯರು ಯಾವುದೇ ದೇಶದಲ್ಲಿ ವಾಸಿಸುತ್ತಿದ್ದರೂ ನಿಶ್ಚಿಂತೆಯಿಂದ ಇರಬಹುದು, ಯಾವುದೇ ತೊಂದರೆ ಉಂಟಾದರೂ ಅದಕ್ಕೆ ನಮ್ಮ ಕೇಂದ್ರ ಸರಕಾರ ತಕ್ಷಣ ಸ್ಪಂದಿಸುತ್ತದೆ. ಅನಿವಾಸಿ ಭಾರತೀಯರೂ ಕೂಡಾ ನಮ್ಮ ದೇಶದ ಪ್ರಜೆಗಳು , ಆದ್ದರಿಂದ ಅವರ ರಕ್ಷಣೆ ಕೂಡಾ ನಮ್ಮ ಸರಕಾರದ ಜವಾಬ್ದಾರಿ ಎಂದ ಸುಷ್ಮಾ ಸ್ವರಾಜ್, ಇರಾನ್ , ಇರಾಕ್, ದುಬೈ, ಸಿರಿಯಾ, ಲಿಬಿಯಾ, ಕತಾರ್ ಮತ್ತು ಸೌದಿ ಅರೆಬಿಯಾದಲ್ಲಿ ತೊಂದರೆಗೊಳಗಾಗಿದ್ದ ಎಲ್ಲಾ ಭಾರತೀಯರನ್ನು ನಮ್ಮ ಮೋದಿ ಸರಕಾರ ರಕ್ಷಿಸುವ ಕೆಲಸ ಮಾಡಿದೆ. ಆ ಮೂಲಕ ಭಾರತೀಯರ ಪಾಲಿಗೆ ಕೇಂದ್ರ ಸರಕಾರ ಎಂದಿಗೂ ಇದೆ ಎಂಬುದು ಸಾರುತ್ತಲೇ ಬಂದಿದೆ ಎಂದಿದ್ದಾರೆ.!

Image result for modi sushma swaraj and bjp leADERS

ಜಾಗತಿಕ ಮಟ್ಟದಲ್ಲಿ ದೇಶದ ಶಕ್ತಿ – ಸಾಮಾರ್ಥ್ಯ ಪ್ರದರ್ಶನ  ..!

ದೇಶದ ಆಂತರಿಕ ಭದ್ರತೆಯ ಬಗ್ಗೆ ಮೋದಿ ಸರಕಾರ ಯಾವ ರೀತಿಯಲ್ಲಿ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳುತ್ತಿದೆಯೋ ಅದೇ ರೀತಿ ಜಾಗತಿಕ ಮಟ್ಟದಲ್ಲಿ ನಮ್ಮ ದೇಶದ ಶಕ್ತಿ ಪ್ರದರ್ಶಿಸಿದೆ. ನಮ್ಮ ಸೈನಿಕರ ಮೇಲೆ ದಾಳಿ ನಡೆಸಿದ ಪಾಕಿಸ್ತಾನಿ ಉಗ್ರರನ್ನು ಅವರ ನೆಲಕ್ಕೆ ನುಗ್ಗಿ ಹೊಡೆದು ಸಾಯಿಸಲಾಗಿದೆ. ಇದು ನಮ್ಮ ದೇಶದ ಸಾಮಾರ್ಥ್ಯವನ್ನು ಜಗತ್ತಿಗೆ ಪ್ರದರ್ಶಿಸಿದ ರೀತಿ. ನಮ್ಮ ದೇಶದ ವಿಚಾರಕ್ಕೆ ಯಾರೇ ಬಂದರೂ ಅಂತವರನ್ನು ಯಾವ ಕಾರಣಕ್ಕೂ ಸುಮ್ಮನೆ ಬಿಡುವುದಿಲ್ಲ ಎಂದ ಸುಷ್ಮಾ ಸ್ವರಾಜ್ ಪಾಕಿಸ್ತಾನಕ್ಕೆ ಪರೋಕ್ಷವಾಗಿ ಮತ್ತೊಮ್ಮೆ ಖಡಕ್ ಎಚ್ಚರಿಕೆ ನೀಡಿದ್ದಾರೆ.

Image result for surgical strike

ವಿದೇಶಾಂಗ ನೀತಿಯಲ್ಲೂ ಅನೇಕ ಸುಧಾರಣೆಯ ಕ್ರಮಗಳನ್ನು ಕೈಗೊಂಡಿದ್ದು ಇವೆಲ್ಲವೂ ಮೋದಿ ಸರಕಾರದ ಹೆಮ್ಮೆಯ ವಿಚಾರ. ಜಗತ್ತಿನ ಹಲವು ರಾಷ್ಟ್ರಗಳ ಜೊತೆ ಉತ್ತಮ ಸಂಬಂಧ ಹೊಂದಿರುವ ಭಾರತ , ವ್ಯಾಪಾರ , ರಕ್ಷಣೆ ಸೇರಿ ಅನೇಕ ಒಪ್ಪಂದಗಳಿಗೆ ಸಹಿ ಹಾಕಿದೆ ಎಂದರು..!

ಈ ಮೂಲಕ ನರೇಂದ್ರ ಮೋದಿ ನೇತ್ರತ್ವದ ಕೇಂದ್ರ ಸರಕಾರ ನಾಲ್ಕು ವರ್ಷ ಪೂರೈಸಿರುವುದರ ಬಗ್ಗೆ ಮಾತನಾಡಿದ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್, ಭಾರತೀಯರು ಯಾವುದೇ ರಾಷ್ಟ್ರಗಳಲ್ಲಿ ಇದ್ದರೂ ಚಿಂತೆ ಪಡಬೇಕಾಗಿಲ್ಲ ಎಂದು ಮೋದಿ ಸರಕಾರದ ವತಿಯಿಂದ ಭರವಸೆ ನೀಡುದರು..!!

–ಸಾರ್ಥಕ್

Tags

Related Articles

Close