ಪ್ರಚಲಿತ

ಅಧ್ಯಾಯ 8: ‘ಸ್ವಯಂಸೇವಕ’ ಎಂಬ ಸಂಘದ ಆಧಾರ ಸ್ಥಂಭ! ಐಕ್ಯತೆಯ ರೂವಾರಿಗಳು,ಶಿಸ್ತಿನ ಸಿಪಾಯಿಗಳು, ಸಮಾಜದಲ್ಲಿ ಸಭ್ಯತೆ, ಸಂಸ್ಕೃತಿಯ ಪ್ರತೀಕ ಇವರು!

ಅಧ್ಯಾಯ 8: ನಾನೊಬ್ಬ ಸಾಧಾರಣ ಸ್ವಯಂಸೇವಕ

ಸ್ವಯಂಸೇವಕ ಎಂದರೆ ಯಾರು?

ರಾಷ್ಟ್ರೀಯ ಸ್ವಯಂಸೇವಕ ಸಂಘದ ಶಾಖೆಯಲ್ಲಿ ಯಾರು ಪಾಲ್ಗೊಳ್ಳುತ್ತಾರೆಯೊ ಅವರೆಲ್ಲರೂ ಸ್ವಯಂಸೇವಕರು. ಆರೆಸ್ಸೆಸ್ ನ ಶಿಸ್ತಿಗೆ, ತತ್ವ ಸಿದ್ಧಾಂತಗಳಿಗೆ ಇವರು ಸದಾಕಾಲ ಬದ್ಧರು. ಸ್ವಯಂಸೇವಕರೆಲ್ಲರೂ ಸಂಘದ ಕಾರ್ಯಕರ್ತರಾಗಿ ದುಡಿಯುವುದಿಲ್ಲ. ಸಂಘ ಶಿಕ್ಷಾ ವರ್ಗದ ಕಲಿಕೆಯ ನಂತರವಷ್ಟೇ ಸ್ವಯಂಸೇವಕರು ಕಾರ್ಯಕರ್ತರಾಗಿ ಸಂಘದ ಕೆಲಸಗಳಲ್ಲಿ ಪಾಲ್ಗೊಳ್ಳಬಹುದು.

ಸಂಘದಲ್ಲಿ ಸ್ವಯಂಸೇವಕರೆಲ್ಲರೂ ಒಂದೇ, ಅವರನ್ನು ಜಾತಿ, ಧರ್ಮ, ಸಾಮಾಜಿಕ ಹಿನ್ನಲೆಯಲ್ಲಿ ವಿಂಗಡಿಸುವ ಕ್ರಮ ಸಂಘದಲ್ಲಿಲ್ಲ. ಈ ಐಕ್ಯತೆ,ನಾವೆಲ್ಲಾ ಒಂದು ಎಂಬ ಭಾವವೇ, ಸಂಘದ ಬಹುದೊಡ್ಡ ಶಕ್ತಿ.ಡಾಕ್ಟರ್ ಜೀ, ಸ್ವಯಂಸೇವಕರಿಗೆ ಸಂಘ ಶಿಕ್ಷಾ ವರ್ಗದ ಮೂಲಕ ಶಿಕ್ಷಣ ಹಾಗೂ ತರಬೇತಿ ನೀಡುವ ಉದ್ದೇಶ, ಸಂಘದ ಸಿದ್ಧಾಂತಗಳನ್ನು, ಅದರ ಧ್ಯೇಯವನ್ನು ಸಾಮಾನ್ಯ ಜನರಿಗೆ ತಲುಪಿಸಲು ಸಹಕಾರಿ ಆಗಲೀ ಎಂಬುದಷ್ಟೇ ಎನ್ನುತ್ತಾರೆ. ಪ್ರತಿ ಹಂತದ ತರಬೇತಿಯ ನಂತರ ಸ್ವಯಂಸೇವಕರು ಸಂಘದಲ್ಲಿ ವಿವಿಧ ಹುದ್ದೆಗಳನ್ನು ಏರುತ್ತಾರೆ.

ಇದರ ಪ್ರಥಮ ಹಂತವೇ, ಪ್ರಾಥಮಿಕ ಶಿಕ್ಷಾ ವರ್ಗ. ಎರಡನೇ ಹಂತವಾಗಿ, ದ್ವಿತೀಯ ಶಿಕ್ಷಾ ವರ್ಗ ಹಾಗೂ ಕೊನೆಯ ಹಂತದ ತರಬೇತಿಯನ್ನು ತೃತೀಯ ಶಿಕ್ಷಾ ವರ್ಗಗಳಲ್ಲಿ ನೀಡಲಾಗುತ್ತದೆ.ಆರೆಸ್ಸೆಸ್ ನ ನಾಗ್ಪುರದ ಪ್ರಧಾನ ಕಚೇರಿಯಲ್ಲಿ ನಡೆಯುವ 25 ದಿನಗಳ ತರಬೇತಿಯಲ್ಲಿ, ಈ ಮೂರು ವರ್ಗಗಳ ಶಿಕ್ಷಣ ಪಡೆದ ಸ್ವಯಂಸೇವಕರು ಅರ್ಹತೆ ಪಡೆಯುತ್ತಾರೆ.

ಹೇಗಿರುತ್ತವೆ ಈ ಶಿಕ್ಷಾ ವರ್ಗದ ಕಾರ್ಯಗಾರಗಳು?

ಶಿಕ್ಷಾ ವರ್ಗಗಳು ಎಂದರೆ ಶಿಸ್ತಿನ ಇನ್ನೊಂದು ರೂಪ. ದಿನಚರಿಯನ್ನು ಚಾಚೂ ತಪ್ಪದೆ ಪಾಲಿಸಲಾಗುತ್ತದೆ. ಬೆಳಿಗ್ಗೆ 4 ಗಂಟೆಯಿಂದ ರಾತ್ರಿ 10 ರವರೆಗೆ ವಿವಿಧ ರೀತಿಯ ಕಾರ್ಯಕ್ರಮಗಳನ್ನು ಶಿಕ್ಷಾ ವರ್ಗವು ಒಳಗೊಂಡಿರುತ್ತವೆ. ಬೆಳಿಗ್ಗೆ ಯೋಗ ಹಾಗೂ ಇನ್ನಿತರ ವ್ಯಾಯಾಮಗಳು, ತದ ನಂತರ ಬೇರೆ ಬೇರೆ ವಿಷಯಗಳ ಮೇಲೆ ಚರ್ಚೆ, ಹಾಗೂ ಉಪನ್ಯಾಸಗಳನ್ನು ಏರ್ಪಡಿಸಲಾಗುತ್ತದೆ.

ಸಂಜೆಯ ಕಾರ್ಯಕ್ರಮವಾಗಿ, ನಿಯುದ್ ಎಂಬ ಶಸ್ತ್ರಾಸ್ತ್ರಗಳ ಪ್ರಯೋಗವಿಲ್ಲದೆ ನಡೆಸುವ ಹೋರಾಟದ ಕಲೆಯನ್ನು ಕಲಿಸಿಕೊಡಲಾಗುತ್ತದೆ. ಪ್ರಕೃತಿ ವಿಕೋಪದ ಸಮಯದಲ್ಲಿ ಹೇಗೆ ಕೆಲಸ ಮಾಡಬೇಕು, ಪ್ರಚಾರವನ್ನು ಯಾವ ಕಾರಣಗಳಿಗಾಗಿ ಕೈಗೊಳ್ಳಬೇಕು, ಸೇವಾ ಕಾರ್ಯಗಳು ಹೇಗಿರಬೇಕು? ಗ್ರಾಮೀಣ ಭಾಗದ ಜನರಿಗೆ ಉಪಯುಕ್ತ ರೀತಿಯಲ್ಲಿ ಸೇವಾ ಚಟುವಟಿಕೆಗಳನ್ನ ರೂಪಿಸುವುದು ಹೇಗೆ ಇದೆಲ್ಲವನ್ನೂ ಶಿಕ್ಷಾ ವರ್ಗದಲ್ಲಿ ಕಲಿಸಿಕೊಡಲಗುತ್ತದೆ

ಸೈದ್ಧಾಂತಿಕ ಹಾಗೂ ಸಂಘದ ತತ್ವಗಳ ಬಗ್ಗೆ ಒತ್ತು ನೀಡಿ ಸ್ವಯಂಸೇವಕರಿಗೆ ಮನನ ಮಾಡಿಸಲಾಗುತ್ತದೆ. ಸರಸಂಘಚಾಲಕರೂ ಕೂಡ ದೇಶದ ವಿವಿದೆಡೆ ನಡೆಯುವ ಸಂಘ ಶಿಕ್ಷಾ ವರ್ಗದಲ್ಲಿ ಪಾಲ್ಗೊಂಡು ಸ್ವಯಂಸೇವಕರಿಗೆ ಪ್ರೋತ್ಸಾಹ ಹಾಗೂ ಮಾರ್ಗದರ್ಶನವನ್ನು ನೀಡುತ್ತಾರೆ.
ಶಿಕ್ಷಾ ವರ್ಗಗಳು ಶುರುವಾದ ಹೊಸತರಲ್ಲಿ, ಪ್ರತಿ ಶನಿವಾರದಂದು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿತ್ತು ಹಾಗೂ ರವಿವಾರ ತರಬೇತಿಗಳು ನಡೆಯದೇ ರಜೆಯ ದಿನವಾಗಿತ್ತು.ನಂತರದ ದಿನಗಳಲ್ಲಿ ಈ ಶಿಬಿರಗಳ ಅವಧಿಯನ್ನು 30 ದಿನಗಳಿಂದ 25 ದಿನಗಳಿಗೆ ಸೀಮಿತಗೊಳಿಸಿ, ಸಂಘ ಸಿದ್ಧಾಂತ ಹಾಗೂ ದೈಹಿಕ ಕಾರ್ಯ ಚಟುವಟಿಕೆಗಳ ಮೇಲೆ ಒತ್ತು ನೀಡಲು ಪ್ರಾರಂಭವಾಯಿತು.

ಶಿಕ್ಷಾ ವರ್ಗದ ಇತಿಹಾಸ:

1927 ರಲ್ಲಿ ಡಾಕ್ಟರ್ ಜೀ ಪ್ರಪ್ರಥಮವಾಗಿ ಸಂಘ ಶಿಕ್ಷಾ ವರ್ಗವನ್ನು ಬೇಸಿಗೆಯ ಶಿಬಿರವಾಗಿ ಪ್ರಾರಂಭಿಸಿದರು. 40 ದಿನಗಳ ಈ ಶಿಬಿರವು ಬೇಸಿಗೆ ಶಿಬಿರ ಎಂದೇ ಕರೆಯಲ್ಪಡುತ್ತಿತ್ತು. ಬೆಳಿಗ್ಗೆ 5 ರಿಂದ ಇರುಳು 9 ರ ವರೆಗೆ ನಡೆಯುತ್ತಿದ್ದ ಈ ಶಿಬಿರಗಳು ಮುಂದಿನ ದಿನಗಳಲ್ಲಿ Officers Training Camp ಎಂದು ಪ್ರಖ್ಯಾತಿ ಪಡೆಯಿತು.

1950 ರ ನಂತರ, ಅದೇ OTC ಸಂಘ ಶಿಕ್ಷಾ ವರ್ಗವೆಂಬ ಹೆಸರು ಪಡೆಯಿತು. ಮೊದಮೊದಲು ಆಂಗ್ಲ ಭಾಷೆಯಲ್ಲಿ ಇರುತ್ತಿದ್ದ ಆದೇಶ ಹಾಗು ಕಾರ್ಯಕ್ರಮಗಳು, ಪ್ರಾದೇಶಿಕ ಭಾಷೆಗಳಿಗೆ ಮಾರ್ಪಾಡದವು. ಸಂಘ ಶಿಕ್ಷಾ ವರ್ಗದ ಶಿಬಿರಕ್ಕೆ ಹಲವಾರು ಮಹನೀಯರು ಭೇಟಿ ನೀಡಿದ್ದಾರೆ. ಮಹಾತ್ಮಾ ಗಾಂಧಿ, ಡಾಕ್ಟರ್ ಅಂಬೇಡ್ಕರ್, ಹಾಗೂ ಝಾಕಿರ್ ಹುಸೇನ್ ಇವರಲ್ಲಿ ಕೆಲವರು. ಕಳೆದ 85 ವರ್ಷಗಳಿಂದ ಎಷ್ಟೇ ಅಡೆ ತಡೆ ಇದ್ದರೂ ಅವೆಲ್ಲವನ್ನೂ ಮೀರಿ ಸಂಘ ಶಿಕ್ಷಾ ವರ್ಗ ನಿರಂತರವಾಗಿ ಶಿಬಿರಗಳನ್ನು ನಡೆಸುತ್ತಲೇ ಬಂದಿದೆ.

ಸ್ವಯಂಸೇವಕರ ವಿಂಗಡನೆ ಮಾಡಲಾಗುತ್ತದೆಯೇ?

ಇಲ್ಲ, ಸ್ವಯಂಸೇವಕರನ್ನು ಯಾವ ರೀತಿಯಲ್ಲೂ ವಿಂಗಡಿಸುವ ಕ್ರಮ ಆರೆಸ್ಸೆಸ್ ನಲ್ಲಿ ಇಲ್ಲ. ಆಡು ಮಾತಿನಲ್ಲಿ ಇವರು ಗೃಹಸ್ಥರು, ಇವರು ಬ್ರಹ್ಮಚಾರಿ ಸ್ವಯಂಸೇವಕರು ಎಂದು ಹೇಳುವ ಪದ್ಧತಿ ಶಾಖೆಯಲ್ಲಿ ಇದೆ.ತಮ್ಮ ಮನೆ ಮಠ, ಸುಖಕರ ಬದುಕು ಎಲ್ಲವನ್ನೂ ತ್ಯಜಿಸಿ ಪ್ರಚಾರಕರಾಗಿ ದುಡಿಯುವ ಬ್ರಹ್ಮಚಾರಿ ಸ್ವಯಂಸೇವಕರ ಸಂಖ್ಯೆ 5% ಕ್ಕಿಂತ ಕಡಿಮೆಯೇ… ಮಿಕ್ಕಿದ 95% ಸ್ವಯಂಸೇವಕರು ತಮ್ಮ ಕುಟುಂಬದ ಜೊತೆಜೊತೆಗೆ ಸಂಘದ ಚಟುವಟಿಕೆಗಳಲ್ಲಿ ಭಾಗಿಯಾಗುತ್ತಾರೆ.

ಸಂಘದಲ್ಲಿ ತಂಡ ಸ್ಪೂರ್ತಿ ಹೇಗಿರುತ್ತದೆ?

ಒಬ್ಬ ಸ್ವಯಂಸೇವಕ ವ್ಯಾಯಾಮ ಹಾಗೂ ಇನ್ನಿತರ ಶಾರೀರಿಕ ಚಟುವಟಿಕೆಯ ಜವಾಬ್ದಾರಿ ಹೊತ್ತಿದ್ದರೆ , ಮತ್ತೊಬ್ಬ ಸ್ವಯಂಸೇವಕ ಅಡುಗೆಯ ತಯಾರಿಯಲ್ಲಿ ತನ್ನನ್ನು ತೊಡಗಿಸಿಕೊಂಡು ಕೆಲಸ ನಿರ್ವಹಿಸುತ್ತಾರೆ. ಸಂಘದಲ್ಲಿ ಸ್ವಯಂಸೇವಕರನ್ನು ಒಗ್ಗೂಡಿಸುವ ವಿಷಯ ಎಂದರೆ ಅವರೆಲ್ಲರೂ ದುಡಿಯುತ್ತಿರುವ ಉದ್ದೇಶ ಒಂದೇ.ಆರೆಸ್ಸೆಸ್ ನ ಸಭೆಗಳಲ್ಲಿ ಹಿರಿಯ ಪ್ರಾಯದ ಸ್ವಯಂಸೇವಕರು ವಯಸ್ಸಿನಲ್ಲಿ ತಮಗಿಂತ ಕಿರಿಯ ಸ್ವಯಂಸೇವಕರಿಗೆ ಸಲ್ಯೂಟ್ ನೀಡುವುದು ಸಾಮಾನ್ಯವಾಗಿ ಕಂಡುಬರುವ ದೃಶ್ಯ. ಸಂಘದಲ್ಲಿ ವ್ಯಕ್ತಿಯೊಬ್ಬ ವಹಿಸಿಕೊಂಡಿರುವ ಜವಾಬ್ದಾರಿ ಇಂದ ಅವನಿಗೆ ಗೌರವ ಆದರ ಸಲ್ಲಿಸಲಾಗುತ್ತದೆ ಹೊರತು ವಯಸ್ಸು, ಕೆಲಸ, ಆರ್ಥಿಕ ಹಿನ್ನಲೆ ಇವೆಲ್ಲಾ ನಗಣ್ಯ.

ದಕ್ಷತೆಗೆ ಸಿಗುವ ಗೌರವ:

ಈ ಮುಖ್ಯ ಕಾರಣದಿಂದಲೇ ಆರೆಸ್ಸೆಸ್ ನ ಸ್ವಯಂಸೇವಕರು ಸಂಘಕ್ಕೆ ತಮ್ಮ ತಾನು ಮನ ಧನದ ನಿಸ್ವಾರ್ಥ ಸೇವೆ ನೀಡುವುದು. ಸಂಘದಲ್ಲಿ ಮಾತನಾಡುವುದು ಕೆಲಸ ಮಾತ್ರವೇ ಆಗಿರುತ್ತದೆ. ಕಾಂಗ್ರೆಸ್ ಮತ್ತು ಕಮ್ಯುನಿಸ್ಟರು ಆರೆಸ್ಸೆಸ್ ನ ಸಿದ್ಧಾಂತ ಬಹಳ ಸಂಕುಚಿತ ಎಂಬ ಮಿಥ್ಯರೋಪ ಮಾಡುತ್ತಾರೆ. ಆದರೆ ಸಂಘದ ಪ್ರತಿಯೊಬ್ಬ ಸ್ವಯಂಸೇವಕರು ಸದಾ ಕಾಲ ಚರ್ಚೆ ಹಾಗೂ ಮುಕ್ತ ಮನಸ್ಸಿನಿಂದ ವಿರೋಧಿ ಧೋರಣೆಗಳನ್ನು ಎದುರಿಸುತ್ತಾನೆ. ಹಾಗಾಗಿಯೇ ಸಂಘವು ಸಮಾಜಕ್ಕೆ ತನ್ನ ಕೊಡುಗೆಗಳನ್ನು ನೀಡುತ್ತಾ ನಿರಂತರವಾಗಿ ಸಮಾಜದ ಮುಖ್ಯ ವಾಹಿನಿಯಲ್ಲಿ ಇದ್ದುಕೊಂಡೇ ದೇಶದ ಸರ್ವತೋಮುಖ ಏಳಿಗೆಗೆ ಶ್ರಮಿಸುತ್ತಿದೆ.

Chapter 1:

ರಾಷ್ಟ್ರೀಯ ಸ್ವಯಂಸೇವಕ ಸಂಘ – ಪ್ರಪಂಚದ ಅತೀ ದೊಡ್ಡ ಸ್ವಯಂಸೇವಕ ಸಂಸ್ಥೆಯ ಹುಟ್ಟು ಹಾಗೂ ಬೆಳೆದು ಬಂದ ಹಾದಿಯ ಒಳನೋಟ!

Chapter 2:

ಕೈಕಟ್ಟಿ ಕೂರಲಿಲ್ಲ, ಸಂಘರ್ಷದ ಹಾದಿಯಲ್ಲಿ ಪ್ರತಿಯೊಂದು ಸಾಲುಗಳನ್ನು ಮೆಟ್ಟಿಸುತ್ತಾ ಡಾಕ್ಟರ್ ಜೀ ಕಟ್ಟಿದ ಸಂಘಟನೆ ಇಂದು ಹೆಮ್ಮರವಾಗಿದೆ! ಅವರ ತ್ಯಾಗ, ನೀತಿಗಳ ಕಿರು ಪರಿಚಯ ಇಲ್ಲಿದೆ!

Chapter 3:

ರಾಷ್ಟ್ರೀಯ ಸ್ವಯಂಸೇವಕ ಸಂಘದ ಶಾಖೆ ಎಂದರೆ ಏನು? ಕೆಲವು ಪೂರ್ವಾಗ್ರಹಗಳನ್ನು ಬಗೆಹರಿಸಿ, ಶಾಖೆಯ ಚಟುವಟಿಕೆಗಳ ಮಾಹಿತಿಯುಕ್ತ ಲೇಖನ ಇಲ್ಲಿದೆ!

Chapter 4:

ಅಧ್ಯಾಯ 4:ಆರೆಸ್ಸೆಸ್ ವಿರೋಧಿಗಳು ಹರಿಡಿದ ಅತೀ ದೊಡ್ಡ ಸುಳ್ಳು “ಸ್ವಾತಂತ್ರ್ಯ ಸಂಗ್ರಾಮದಲ್ಲಿ ಆರೆಸ್ಸೆಸ್ ಕೊಡುಗೆ ಶೂನ್ಯ”! ಮಿತ್ಯಾರೋಪಗಳಿಗೆ ತೆರೆ ಎಳೆಯುವ ಸಮಯ!

Chapter 5:

ಅಧ್ಯಾಯ 5: ಕಾಶ್ಮೀರವನ್ನು ಉಳಿಸಿಕೊಳ್ಳಲು ಪ್ರಾಣತೆತ್ತ ಸ್ವಯಂಸೇವಕರ ಕಥೆ ನಿಮಗೆ ತಿಳಿದಿದೆಯೇ? ಕೋಟ್ಲಿಯ ಬಲಿದಾನಿಗಳು ಯಾರು ಗೊತ್ತೇ? ಇಲ್ಲವಾದಲ್ಲಿ ಈ ಇತಿಹಾಸ ಪ್ರತಿಯೊಬ್ಬ ಭಾರತೀಯನೂ ತಿಳಿಯಲೇ ಬೇಕಾದದ್ದು!

chapter 6:

ಅಧ್ಯಾಯ 6: ಗಾಂಧಿ ಹತ್ಯೆ ಮತ್ತು ಆರೆಸ್ಸೆಸ್ ! ಒಂದೇ ಸುಳ್ಳನ್ನು ಕಾಂಗ್ರೆಸ್ ಪದೇ ಪದೇ ಹೇಳುತ್ತಿರುವುದು ಏತಕ್ಕಾಗಿ?? ಸುಳ್ಳಿನ ಪರದೆ ಸರಿಸುವ ಕೆಲವು ಸತ್ಯಾಂಶಗಳು ಇಲ್ಲಿವೆ!

Chapter 7:

ಅಧ್ಯಾಯ 7: ಸಂವಿಧಾನ ಶಿಲ್ಪಿ ಬಾಬಾಸಾಹೇಬ ಅಂಬೇಡ್ಕರ್ ಹಾಗೂ ಆರೆಸ್ಸೆಸ್! ಅಂಬೇಡ್ಕರ್ ಆರೆಸ್ಸೆಸ್ ಅನ್ನು ದ್ವೇಷಿಸುತ್ತಿದ್ದರೇ??? ಅಥವಾ ಆರೆಸ್ಸೆಸ್ ಅಂಬೇಡ್ಕರ್ ವಿರೋಧಿಯೇ? ಇಲ್ಲಿದೆ ಉತ್ತರ

-Dr.Sindhu Prashanth

Tags

Related Articles

FOR DAILY ALERTS
Close