ಪ್ರಚಲಿತ

ಜನಾದೇಶವನ್ನು ಹತ್ತು ವರ್ಷಗಳಲ್ಲಿ ಅಭಿವೃದ್ಧಿಗಾಗಿ ಬಳಸಿದ್ದಾರೆ ಪ್ರಧಾನಿ ಮೋದಿ

ಪ್ರಧಾನಿ ನರೇಂದ್ರ ಮೋದಿ ಅವರು ಭಾರತವನ್ನು ವಿಶ್ವದ ಐದನೇ ಅತೀ ದೊಡ್ಡ ಆರ್ಥಿಕತೆಯಾಗಿ ಪರಿವರ್ತನೆ ಮಾಡಿದ್ದಾರೆ ಎಂದು ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್ ಅವರು ಶ್ಲಾಘಿಸಿದ್ದಾರೆ.

ಮುಂದಿನ ಎರಡು ವರ್ಷಗಳಲ್ಲಿ ಭಾರತವು ಮೂರನೇ ಅತೀ ದೊಡ್ಡ ಆರ್ಥಿಕತೆಯಾಗಿ ಬೆಳವಣಿಗೆ ಹೊಂದುವ ಭರವಸೆಯನ್ನು ಸಹ ಅವರು ವ್ಯಕ್ತಪಡಿಸಿದ್ದಾರೆ. ಜನರು ಓರ್ವ ನಾಯಕನಿಗೆ ಜನಾದೇಶವನ್ನು ನೀಡಿದಾಗ, ಆತ ಜನರಿಗಾಗಿ ಏನನ್ನು ಮಾಡುತ್ತಾನೆ ಎನ್ನುವುದು ಮುಖ್ಯವಾಗುತ್ತದೆ. 2014 ರಲ್ಲಿ ಪ್ರಧಾನಿ ಮೋದಿ ಅವರಿಗೆ ಜನಾದೇಶ ದೊರಕಿದ್ದು, ಈ ಅವಕಾಶವನ್ನು ಅವರು ಬಹಳಷ್ಟು ಅರ್ಥಪೂರ್ಣ ಮತ್ತು ಮಹತ್ವವಾಗಿ ಬಳಕೆ ಮಾಡಿಕೊಂಡಿದ್ದಾರೆ. ಕಳೆದ ಹತ್ತು ವರ್ಷಗಳಲ್ಲಿ ಅವರು ದೇಶದ ಅಭಿವೃದ್ಧಿಯ ದೃಷ್ಟಿಕೋನದಿಂದ ಸಾಕಷ್ಟು ಕೆಲಸ ಮಾಡಿದ್ದಾರೆ ಎಂದು ನುಡಿದಿದ್ದಾರೆ.

ಕಳೆದ ಹತ್ತು ವರ್ಷಗಳ ಹಿಂದೆ ಭಾರತದ ಆರ್ಥಿಕತೆ ಉಸಿರಾಡುವುದಕ್ಕೂ ಪರದಾಡುವ ಪರಿಸ್ಥಿತಿ ಇತ್ತು. ಕಾಂಗ್ರೆಸ್ ಪಕ್ಷದ ನೇತೃತ್ವದ ಯುಪಿಎ ಸರ್ಕಾರ ಆಗೆಲ್ಲಾ ದೇಶವನ್ನು ಸಾಕಷ್ಟು ಅವನತಿಯತ್ತ ತಳ್ಳಿತ್ತು. ಜೊತೆಗೆ, ದೇಶದ ಸಂಪತ್ತು, ಈ ದೇಶದ ಸಾರ್ವಜನಿಕರ ತೆರಿಗೆ ಹಣವನ್ನು ನುಂಗಿ ನೀರ್ಕುಡಿದು ತಮ್ಮ ಹೊಟ್ಟೆ, ಸಂಪತ್ತು ಕ್ರೋಢೀಕರಿಸುವತ್ತ ಮಾತ್ರವೇ ಚಿತ್ತ ಹರಿಸಿತ್ತು.

ಹಾಗೆಯೇ ಕಳೆದ ಹತ್ತು ವರ್ಷಗಳಿಗೂ ಮೊದಲು ಭಾರತದಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿತ್ತು. ಸರ್ಕಾರ ಜನರಿಗೆಂದು ಏನಾದರೊಂದು ಯೋಜನೆಗಳನ್ನು ಜಾರಿಗೆ ತಂದು, ಅದಕ್ಕಾಗಿ ಹಣ ಬಿಡುಗಡೆ ಮಾಡಿದರೆ ಫಲಾನುಭವಿಗಳಿಗೆ ಆ ಮೊತ್ತದ ಒಂದು ಅಂಶವಷ್ಟೇ ತಲುಪುತ್ತಿತ್ತು. ಉಳಿದ ಹಣ ರಾಜಕಾರಣಿಗಳು, ಅಧಿಕಾರಿಗಳ ಹೊಟ್ಟೆ ಸೇರುವ ದುರಂತ ಸ್ಥಿತಿ ಇತ್ತು‌.

ಹಾಗೆಯೇ ದೇಶಕ್ಕೆ ಭಯೋತ್ಪಾದಕರ ಕರಿ ನೆರಳು ಹೆಚ್ಚಾಗಿತ್ತು. ಮಾತ್ರವಲ್ಲದೆ ನಮ್ಮ ದೇಶದ ರಕ್ಷಣಾ ವ್ಯವಸ್ಥೆ ಸಹ ಭದ್ರವಾಗಿ ಇರಲಿಲ್ಲ. ಯಾವುದೇ ನಿರ್ಧಾರವನ್ನು ರಕ್ಷಣಾ ಸಚಿವಾಲಯ ತೆಗೆದುಕೊಳ್ಳಬೇಕಾದರೂ, ಅದು ಎಷ್ಟೇ ತುರ್ತು ವಿಷಯವಾದರೂ ಸರ್ಕಾರದ ಮುಂದೆ ಕೈ ಕಟ್ಟಿ ಒಪ್ಪಿಗೆಗಾಗಿ ನಿಲ್ಲುವ ಸ್ಥಿತಿ ಇತ್ತು.

ಆದರೆ ಕಳೆದ ಹತ್ತು ವರ್ಷಗಳ ಪ್ರಧಾನಿ ಮೋದಿ ಅವರ ಸರ್ಕಾರ ದೇಶದ ಚಿತ್ರಣವನ್ನು ಸಕಾರಾತ್ಮಕವಾಗಿ ಬದಲಾಯಿಸಿದ್ದಾರೆ. ಪ್ರಧಾನಿ ಮೋದಿ ಸರ್ಕಾರ ಕೈಗೊಂಡ ಕ್ರಮಗಳ ಕಾರಣಕ್ಕೆ ದೇಶದ ಆರ್ಥಿಕತೆ ಚೇತರಿಕೆ ಕಾಣುವುದು ಜೊತೆಗೆ, ದೇಶದ ಸುಮಾರು ಇಪ್ಪತೈದು ಕೋಟಿ ಜನರು ಬಡತನ ರೇಖೆಯಿಂದ ಮೇಲೆ ಬಂದಿದ್ದಾರೆ. ಹಾಗೆಯೇ ಭ್ರಷ್ಟರ ವಿರುದ್ಧ ಪ್ರಧಾನಿ ಮೋದಿ ಅವರ ಹೆಜ್ಜೆ ಸರ್ಕಾರ ನೀಡುವ ಯೋಜನೆ, ಸೌಲಭ್ಯಗಳನ್ನು ಜನರಿಗೆ ಯಾವುದೇ ನಷ್ಟ ಇಲ್ಲದೆ ತಲುಪುವ ಹಾಗೆ ಮಾಡಿದೆ ಎನ್ನುವುದು ಸತ್ಯ ಮತ್ತು ಸ್ಪಷ್ಟ.

Tags

Related Articles

Close