ಪ್ರಚಲಿತ

ಉಗ್ರರನ್ನು ಜೀವಂತವಾಗಿ ಹಿಡಿಯಲು ಮುಂದಾಗಿದ ಭಾರತೀಯ ಸೇನೆ!! ಉಗ್ರ ನಿಗ್ರಹಕ್ಕೆ ಸೇನೆಯಿಂದ ಮಾಸ್ಟರ್ ಪ್ಲಾನ್ !!

ಪ್ರಧಾನಿ ನರೇಂದ್ರ ಮೋದಿಯವರು ಯಾವಾಗ ಆಡಳಿತದ ಚುಕ್ಕಾಣಿಯನ್ನು ಹಿಡಿದರೋ ಅಂದಿನಿಂದ ಇಡೀ ದೇಶವೇ ಬದಲಾವಣೆಯ ಗಾಳಿ ಬೀಸಿದೆ ಅಂತಾನೇ ಹೇಳಬಹುದು!! ಅದೊಂದು ಕಾಲವಿತ್ತು.. ದಿನಬೆಳಗಾದರೆ ಸಾಕು ಜಮ್ಮು-ಕಾಶ್ಮೀರದಲ್ಲಿ ಉಗ್ರರ ದಾಳಿಗೆ ಯೋಧರ ಸಾವು!! ಎನ್ನುವ ಶೀರ್ಷಿಕೆಯೊಂದಿಗೆ ಯೋಧರ ಸಾವಿನ ಸುದ್ದಿ ಪತ್ರಿಕೆಯ ಮುಖಪುಟಗಳಲ್ಲಿ ರಾರಾಜಿಸುತ್ತಿತ್ತು. ಆದರೆ, ಕೇಂದ್ರದಲ್ಲಿ ನರೇಂದ್ರ ಮೋದಿ ಸರ್ಕಾರ ಯಾವಾಗ ಅಸ್ತಿತ್ವಕ್ಕೆ ಬಂದಿತೋ, ಅಂದಿನಿಂದ ಸೇನೆಗೆ ಸ್ವಾತಂತ್ರ್ಯ ಸಿಕ್ಕಿತು ಎಂದು ರಾಜಾರೋಷವಾಗಿ ಹೇಳಬಹುದು. ಅಷ್ಟೇ ಅಲ್ಲದೇ, ನರೇಂದ್ರ ಮೋದಿ ಸರ್ಕಾರದಿಂದ ಉಗ್ರರ ವಿರುದ್ಧದ ದಾಳಿಗೆ ಪ್ರೋತ್ಸಾಹ, ಸರ್ಜಿಕಲ್ ದಾಳಿಗೆ ಅನುಮತಿ ನೀಡಿತೋ, ಅಂದಿನಿಂದ ಕಾಶ್ಮೀರದ ಪರಿಸ್ಥಿತಿಯೇ ಬದಲಾಗತೊಡಗಿತು. 

ಉಗ್ರ ನಿಗ್ರಹಕ್ಕೆ ಭಾರತೀಯ ಸೈನ್ಯದಿಂದ ಮತ್ತೊಂದು ಬಿಗ್ ಪ್ಲಾನ್!!

ಈಗಾಗಾಲೇ ಭಾರತೀಯ ಸೈನ್ಯದಿಂದ ಹಲವಾರು ಉಗ್ರರನ್ನು ನರಕಕ್ಕೆ ಕಳುಹಿಸಿದ್ದು ಇದೀಗ ಭಾರತೀಯ ಸೈನ್ಯ ಮತ್ತೊಂದು ಹೊಸ ಮಾಸ್ಟರ್ ಪ್ಲಾನ್ ಮಾಡಿದ್ದಾರೆ!! ಜಮ್ಮು ಮತ್ತು ಕಾಶ್ಮೀರದಲ್ಲಿ ಉಗ್ರಗಾಮಿಗಳನ್ನು ಮಟ್ಟ ಹಾಕುತ್ತಿರುವ ಭದ್ರತಾ ಪಡೆಗಳು ಹೊಸ ತಂತ್ರ ಅನುಸರಿಸಲು ಮುಂದಾಗಿವೆ. ಉಗ್ರ ಸಂಘಟನೆಗಳಿಗೆ ಸೇರ ಬೇಡಿ ಎಂಬ ಮನವೊಲಿಕೆ ತಂತ್ರ ಮುಂದುವರಿಸುವ ಜತೆಗೆ, ಇದರ ಹೊರತಾಗಿಯೂ ಭಯೋತ್ಪಾದನೆಯತ್ತ ಮುಖ ಮಾಡಿರುವವರನ್ನು “ಜೀವಂತ ವಾಗಿ ಹಿಡಿಯುವ ಪ್ರಯತ್ನ ‘(ಟ್ರೈ ಟು ಕ್ಯಾಚ್ ದೆಮ್ ಎಲೈವ್)ಕ್ಕೆ ಕೈಹಾಕಿವೆ.

ಒಟ್ಟು 7 ತಿಂಗಳ ಅವಧಿ ಯಲ್ಲಿ 70ಕ್ಕೂ ಹೆಚ್ಚು ಉಗ್ರ ರನ್ನು ಕೊಲ್ಲಲಾಗಿದ್ದು, ಇದರ ಹೊರತಾಗಿಯೂ ಉಗ್ರ ಸಂಘಟನೆಗಳು ಯುವಕರ ಮನಸ್ಸು ಪರಿವರ್ತನೆ ಮಾಡುತ್ತಿವೆ ಹಾಗೂ ಜಿಹಾದ್ ನಡೆಸಲು ಕುಮ್ಮಕ್ಕು ನೀಡುತ್ತಿವೆ. ಈ ಸಂಪರ್ಕ ವ್ಯವಸ್ಥೆಯನ್ನು ಕಡಿದು ಹಾಕುವುದೇ ನಮ್ಮ ಗುರಿ ಎಂದು ನಿನ್ನೆ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಉಗ್ರರನ್ನು ಜೀವಂತವಾಗಿ ಹಿಡಿದು, ಯಾವ ಕಾರಣಕ್ಕಾಗಿ ಅವರು ಅಸಂತೋಷಗೊಂಡಿದ್ದಾರೆ ಎನ್ನುವುದನ್ನು ತಿಳಿದುಕೊಳ್ಳಲಾಗುತ್ತದೆ. ಗುಂಡಿನ ಚಕಮಕಿಯಲ್ಲಿ ಅಸು ನೀಗುವ ಬಗ್ಗೆ 15 ಅಥವಾ 16ನೇ ವಯಸ್ಸಿನವರನ್ನು ಮನಃ ಪರಿವರ್ತನೆ ಮಾಡುವುದು ಅಷ್ಟು ಸುಲಭವಲ್ಲ. ಇದರ ಹೊರತಾಗಿಯೂ ಉಗ್ರರ ತಂತ್ರಕ್ಕೆ ಪ್ರತಿತಂತ್ರ ಹೂಡಲೇಬೇಕು ಎಂದು ಉಗ್ರ ನಿಗ್ರಹ ದಳದಲ್ಲಿ ತೊಡಗಿರುವ ಹಿರಿಯ ಅಧಿಕಾರಿ ಹೇಳಿದ್ದಾರೆ. ತಾತ್ಕಾಲಿಕ ಕದನ ವಿರಾಮ ಜಾರಿ ಮಾಡಿರುವುದು ಉಗ್ರ ಸಂಘಟನೆಗಳಿಗೆ ಈಗಾಗಲೇ ಸೇರಿರುವ ಯುವಕರನ್ನು ಮನವೊಲಿಸಿ ಕರೆಯಿಸಿಕೊಳ್ಳಲು ಕುಟುಂಬ ಸದಸ್ಯರಿಗೆ ಸೂಕ್ತ ಸಂದರ್ಭ ಎನ್ನುವುದು ಹಲವು ಅಧಿಕಾರಿಗಳ ಅಭಿಪ್ರಾಯ.

ಉಗ್ರರು ತಮ್ಮ ಬುದ್ಧಿವಂತಿಕೆಯನ್ನು ತಾವು ತೋರಿಸಿದರೆ ಅದಕ್ಕೆ ಪ್ರತಿತಂತ್ರವಾಗಿ ಭಾರತೀಯಸೇನೆ ಅತೀ ದೊಡ್ಡ ಮಾಸ್ಟರ್ ಪ್ಲಾನ್ ಅನ್ನೇ ಮಾಡಿದೆ!! ಜಮ್ಮು-ಕಾಶ್ಮೀರದಲ್ಲಿ ಉಗ್ರರನ್ನು ನಿಗ್ರಹ ಮಾಡಲು ಭಾರತೀಯ ಸೈನ್ಯ ನೂತನ ಯೋಜನೆ ರೂಪಿಸಿದ್ದು, ಉಗ್ರರನ್ನು ಕೊಲ್ಲುವ ಬದಲು ಜೀವಂತವಾಗಿ ಹಿಡಿಯಲು ಮುಂದಾಗಿದೆ. ಯಾವುದೇ ಉಗ್ರರನ್ನು ಹತ್ಯೆ ಮಾಡುವುದರಿಂದ ಅವರ ಜೀವ ಹೋಗುತ್ತದೆಯೇ ವಿನಃ ಅವರು ಎಷ್ಟು ಉಗ್ರರನ್ನು ನೇಮಿಸಿದ್ದಾರೆ, ಆ ಉಗ್ರ ತನ್ನ ಕುಟುಂಬದವರನ್ನೂ ಉಗ್ರ ಸಂಘಟನೆಯತ್ತ ಸೆಳೆಯುತ್ತಿದ್ದಾನಾ, ಉಗ್ರರ ಮುಂದಿನ ದಾಳಿ ಕುರಿತ ಯೋಜನೆ ಯಾವುದು ಎಂಬುದರ ಕುರಿತು ಪತ್ತೆ ಹಚ್ಚಲು ಭಾರತೀಯ ಸೇನೆ ಈ ಯೋಜನೆ ರೂಪಿಸಿದೆ. ಹಾಗಾಗಿ, ಉಗ್ರರು ಅಡಗಿರುವ ಸೇನಾನೆಲೆಯನ್ನು ಪತ್ತೆ ಹಚ್ಚಿ, ಎಷ್ಟು ಸಾಧ್ಯವೋ ಅಷ್ಟು ಸಾಧ್ಯವಾದಷ್ಟು ಉಗ್ರರನ್ನು ಜೀವಂತವಾಗಿ ಹಿಡಿಯುವುದು ಸೇನೆಯ ಮುಂದಿನ ಯೋಜನೆಯಾಗಿದೆ, ಹೀಗೆ ಸೆರೆಸಿಕ್ಕ ಉಗ್ರರನ್ನು ಹಿಡಿದು ತಂದು, ಅವರನ್ನು ಬಾಯಿಬಿಡಿಸುವ ಯೋಜನೆಯನ್ನು ಸೇನೆ ರೂಪಿಸಿಕೊಂಡಿದೆ!!

source: tulunadu news
ಪವಿತ್ರ

Tags

Related Articles

Close