ಪ್ರಚಲಿತ

ಟೆರರ್ ಫಂಡಿಗ್ ಗಾಗಿ ಹಿಂದೂ ದೇವತೆಗಳ ಮತ್ತು ಧಾರ್ಮಿಕ ಸಂಘಟನೆಗಳ ಹೆಸರಿನಲ್ಲಿ ಖಾತೆ ತೆಗೆದಿತ್ತು ಪಿ ಎಫ್ ಐ! “ಕೇಸರಿ ಭಯೋತ್ಪಾದನೆ” ಎಂದು ನಿರೂಪಿಸಲು ಹೆಣೆದ ಹೊಸ ಷಡ್ಯಂತ್ರ ಬಯಲು!

ಪೌರತ್ವ ತಿದ್ದುಪಡಿ ಮಸೂದೆ (ಸಿಎಎ) ಯ ಬಗ್ಗೆ ಆತಂಕವನ್ನು ಹಬ್ಬಿಸಲು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್‌ಐ) ಹಲವು ಸಂಸ್ಥೆಗಳನ್ನು ಸಿಎಎ ವಿರುದ್ಧ ಎತ್ತಿಕಟ್ಟಲು ನೋಡಿತು. ತಮ್ಮ ಕೆಲಸಗಳಿಗೆ ಬೇಕಾದ ಫಂಡ್ ಅನ್ನು ಒಟ್ಟು ಮಾಡಲು ಹಿಂದೂ ಮಹಾಪುರುಷರ ,ದೇವಿ ದೇವತೆಗಳ ಹೆಸರಿನಲ್ಲಿ ಸುಳ್ಳು ಸೊಸೈಟಿಗಳನ್ನು ನಿರ್ಮಿಸಿ ಖಾತೆಯನ್ನು ತೆರೆದಿದ್ದರು. ಇದೇ ಖಾತೆಗಳಿಂದ ೨ ತಿಂಗಳಿನಲ್ಲಿ ಲಕ್ಷಾಂತರ ರೂಪಾಯಿಗಳ ವಹಿವಾಟು ನಡೆಯಿತು. ಖಾತೆಗಳ ವಿವರಗಳನ್ನು ವಾಟ್ಸ್ ಆ್ಯಪ್ ಗ್ರೂಪ್ ನ ಮುಖಾಂತರ ಖಾತೆದಾರರಿಗೆ ನೀಡಲಾಗುತ್ತಿತ್ತು. ಇದುವರೆಗೆ ೪ ಖಾತೆಗಳ ಬಗ್ಗೆ ಮಾಹಿತಿಗಳು ಸಿಬ್ಬಂದಿಗಳಿಗೆ ದೊರೆತಿದೆ.

ಸಿಎಎ ಹಾಗೂ ಎನ್‌ಆರ್‌ಸಿ ಬಗ್ಗೆ ಬೇರೆ ಬೇರೆ ನಗರಗಳಲ್ಲಿ ಆದ ಗಲಭೆ ಗೊಂದಲಗಳ ಸಮಯದಲ್ಲಿ ಕೇರಳದ ಪಿಎಫ್‌ಐ ಸಂಘಟನೆಯ ಹೆಸರು ಹೊರ ಬಂದಾಗ ಎಟಿಎಸ್ , ಎ ಸ್ ಟಿ ಎಫ್ ಗಳ ಜೊತೆಗೆ ಕೇಂದ್ರ ಸರ್ಕಾರದ ಪೊಲೀಸ್ ಸಿಬ್ಬಂದಿಗಳು ತನಿಖೆ ನಡೆಸಿದರು. ಸ್ಪೆಶಲ್ ಇನ್‌ವೆಸ್ಟಿಗೇಶನ್ ಟೀಮ್ – ವಿಶೇಷ ತನಿಖಾ ದಳ(ಎಸ್‌ಐಟಿ) ಶುಕ್ರವಾರ ಪಿಎಫ್‌ಐ ಗೆ ಸಂಬಂಧಿಸಿದ ೫ ಜನರಾದ ಉಮರ್ , ನಿವೃತ್ತಿ ಹೊಂದಿದ ಶಿಕ್ಷಕ ಸೈಯದ್ ಅಬ್ದುಲ್ ಹಯೀ, ಫೈಜಾನ್, ವಾಸಿಫ್ ಹಾಗೂ ಸರ್ವರ್ ಆಲಮ್ ಅನ್ನು ಬಂಧಿಸಿ ಜೈಲಿನಲ್ಲಿ ಇರಿಸಿತು. ಅವರ ಮೊಬೈಲ್‌‌ನಲ್ಲಿ ೪ ಹಿಂದೂ ಹೆಸರಿನ ಸೊಸೈಟಿಯ ಬ್ಯಾಂಕ್ ಖಾತೆಯ ವಿವರಗಳ ಬಗ್ಗೆ ತಿಳಿದು ಬಂದಿದೆ. ಅದರ ಹೆಸರು ಬಾಲಾಜಿ, ಸರಸ್ವತಿ , ದಯಾನಂದ ಇತ್ಯಾದಿ. ಇದೇ ಹೆಸರಿನಿಂದ ಅವರು ಬ್ಯಾಂಕ್ ಖಾತೆಗಳನ್ನೂ ತೆರೆದಿದ್ದರು.

ಪೊಲೀಸರ ವಿಚಾರಣೆ ಸಂದರ್ಭದಲ್ಲಿ ಕೇರಳ, ಅಸ್ಸಾಂ, ಪಶ್ಚಿಮ ಬಂಗಾಳ, ದೆಹಲಿ ಹಾಗೂ ಮುಂಬಯಿನಿಂದಲೂ ಖಾತೆಗೆ ಹಣ ಜಮಾವಣೆ ಆಗಿದೆ ಎಂದು ವಿಷಯ ಬೆಳಕಿಗೆ ಬಂದಿದೆ. ಈ ಹಣಗಳ ಉಪಯೋಗವನ್ನು ನಿವೃತ್ತ ಶಿಕ್ಷಕ ಹಾಗೂ ಆತನ ಸಂಗಡಿಗರು ಸಿಎಎ ವಿರುದ್ಧ ಆದ ಎಲ್ಲ ಗಲಭೆ ಹಾಗೂ ಪ್ರದರ್ಶನಗಳಿಗೆ ಬಳಸಿದ್ದಾರೆ. ಖಾತೆಗಳಲ್ಲಿ ಈವರೆಗೆ ಸರಿಸುಮಾರು ೮೦ ಲಕ್ಷಕ್ಕಿಂತಲೂ ಅಧಿಕ ಹಣಕಾಸಿನ ವಹಿವಾಟು ನಡೆದಿದೆ. ಪೊಲೀಸರು ಈ ಖಾತೆಗಳ ಬಗ್ಗೆ ಇನ್ನಷ್ಟು ವಿಚಾರಣೆ ನಡೆಸುತ್ತಿದ್ದಾರೆ. ಜೊತೆಗೆ ಖಾತೆಗೆ ಹಣ ಪಾವತಿ ಮಾಡುವವರ ಬಗ್ಗೆಯೂ ವಿವರಗಳನ್ನು ಕಲೆ ಹಾಕುತ್ತಿದ್ದಾರೆ.

Image result for pfi caa funding

ಸಿಒ ಅಲೋಕ್ ಸಿಂಹ್ , ಜೈಲಿನಲ್ಲಿರುವ ಪಿಎಫ್‌ಐ ಸಂಘಟನೆಯ ಸದಸ್ಯರ ಪೊಬೈಲ್ ತನಿಖೆ ನಡೆಸಿ ನಾಲ್ಕು ಸೊಸೈಟಿಗಳ ಬಗ್ಗೆ ಮಾಹಿತಿ ಲಭ್ಯವಾಗಿದ್ದು ಅದರ ವಿರುದ್ಧ ಉನ್ನತ ತನಿಖೆ ನಡೆಸುತ್ತಿದ್ದು, ಆದಷ್ಟು ಬೇಗ ಎಲ್ಲಾ ಸತ್ಯಾಂಶ ಪ್ರಕಟವಾಗಲಿದೆ ಎಂದು ತಿಳಿಸಿದ್ದಾರೆ.

ದೇಶ ವಿರೋಧಿ ಕೆಲಸ ಯಾರೇ ಮಾಡುತ್ತಿರಲಿ ಅವರ ಪೊಳ್ಳು ನಾಟಕ ಹೆಚ್ಚು ಕಾಲ ಉಳಿಯುವುದಿಲ್ಲ. ‌ದೇಶ ಒಡೆಯುವ ಕೆಲಸ ಯಾರೇ ಮಾಡಲಿ ಅವರಿಗೆ ತಕ್ಕ ಶಿಕ್ಷೆ ಆಗಲೇಬೇಕು.ಭಾರತ ಮಾತೆಯ ಕೀರ್ತಿಗೆ ಚ್ಯುತಿ ತರುವ ಕೆಲಸ ಎಂದಿಗೂ‌ ಮಾಡ ಕೂಡದು. ವಿರೋಧಿಸುವ ಹಕ್ಕು ಎಲ್ಲರಿಗೂ ಇದೆ, ಆದರೆ ಕುಕೃತ್ಯಗಳಲ್ಲಿ ಭಾಗಿಯಾಗುವವರಿಗೆ ಮತ್ತು ಅದನ್ನು ಬೆಂಬಲಿಸುವವರು ಶಿಕ್ಷೆ ಅತ್ಯಗತ್ಯ.

ನಾವೆಲ್ಲರೂ ಇರುವುದು ಭಾರತವೆಂಬ ಪುಣ್ಯ ಭೂಮಿಯಲ್ಲಿ ನಾವೆಲ್ಲ ಭಾರತಾಂಬೆಯ ಹೆಮ್ಮೆಯ ಪುತ್ರರಾಗಬೇಕು ಹೊರತು ಇಲ್ಲಿಯ ನೆಲ, ಜಲ, ಗಾಳಿ, ಸ್ವಾತಂತ್ರ್ಯ ಅನುಭವಿಸುತ್ತಾ ದೇಶದ್ರೋಹಿ ಚಟುವಟಿಕೆಗಳಲ್ಲಿ ಭಾಗಿಯಾಗುವವರು ದೇಶದ್ರೋಹಿಗಳಲ್ಲದೇ ಮತ್ತೇನು?!?!

ಜಾಗೃತರಾಗಿ ಸುಶಿಕ್ಷಿತರಾಗಿ

Ashwini

Tags

Related Articles

FOR DAILY ALERTS
Close