ಪ್ರಚಲಿತ

ಹಿಂದೂ ಧರ್ಮದ ಮೌಲ್ಯಗಳಿಂದ ಜಗತ್ತಿಗೆ ಸ್ಫೂರ್ತಿ: ಥಾಯ್ಲೆಂಡ್ ಪ್ರಧಾನಿ

ಜಗತ್ತಿನ ಹಲವಾರು ರಾಷ್ಟ್ರಗಳ ಜನರು ಸನಾತನ ಹಿಂದೂ ಧರ್ಮದತ್ತ ವಾಲುತ್ತಿದ್ದಾರೆ.‌ಹಿಂದೂ ಧರ್ಮದ ಆಳ ಅರಿವನ್ನು ತಿಳಿದುಕೊಂಡ ವಿದೇಶಿಗರು ಇಂದು ಹಿಂದೂ ಧರ್ಮದತ್ತ ಆಕರ್ಷಿತರಾಗುತ್ತಿರುವುದು ಮಾತ್ರವಲ್ಲ, ಹಿಂದೂ ಧರ್ಮವನ್ನು ಒಪ್ಪಿ, ಸ್ವೀಕಾರ ಮಾಡುತ್ತಿರುವ ಸಂಗತಿಯೂ ತೀರಾ ಹೊಸತೇನಲ್ಲ.

ಹಿಂದೂಗಳ ಗುರುತನ್ನು ಜಗತ್ತಿನಲ್ಲಿ ಪ್ರಗತಿಪರ ಮತ್ತು ಪ್ರತಿಭಾವಂತ ಸಮಾಜವಾಗಿ ಸ್ಥಾಪನೆ ಮಾಡುವ ಉದ್ದೇಶದೊಂದಿಗೆ ಮೂರನೇ ವಿಶ್ವ‌ ಹಿಂದೂ ಕಾಂಗ್ರೆಸ್‌ ಅನ್ನು ಬ್ಯಾಂಕಾಕ್‌ನಲ್ಲಿ ಉದ್ಘಾಟನೆ ಮಾಡಲಾಗಿದೆ.

ಈ ಸಂದರ್ಭದಲ್ಲಿ ಥಾಯ್ಲೆಂಡ್‌ನ ಪ್ರಧಾನಿ ಶ್ರೆತ್ತಾ ಥಾವಿಸಿನ್ ಅವರು ಹಿಂದೂ ಧರ್ಮದ ಬಗ್ಗೆ ಕಳುಹಿಸಿದ ಸಂದೇಶವನ್ನು ಅವರ ಅನುಪಸ್ಥಿತಿಯಲ್ಲಿ ವಾಚಿಸಲಾಗಿದೆ. ಇದರಲ್ಲಿ ಪ್ರಕ್ಷುಬ್ಧತೆಯ ಜೊತೆಗೆ ಹೋರಾಟ ನಡೆಸುತ್ತಿರುವ ಜಗತ್ತು ಅಹಿಂಸೆ, ಸತ್ಯ, ಸಹಿಷ್ಣುತೆ, ಮತ್ತು ಸಾಮರಸ್ಯದ ಹಿಂದೂ ಮೌಲ್ಯಗಳಿಂದ ಸ್ಪೂರ್ತಿ ಪಡೆಯಬೇಕು. ಆಗಲೇ ಜಗತ್ತಿನಲ್ಲಿ ಶಾಂತಿ ನೆಲೆಸಲು ಸಾಧ್ಯ ಎಂದು ಹೇಳಿದ್ದಾರೆ.

ಹಿಂದೂ ಧರ್ಮದ ತತ್ವಗಳು ಮತ್ತು ಮೌಲ್ಯಗಳ ಮೇಲೆ ಆಯೋಜನೆ ಮಾಡಲಾಗಿರುವ ವಿಶ್ವ ಹಿಂದೂ ಕಾಂಗ್ರೆಸ್ ಅನ್ನು ಥಾಯ್ಲೆಂಡ್‌ನಲ್ಲಿ ಆಯೋಜನೆ ಮಾಡಲಾಗಿರುವುದು ಗೌರವವೇ ಸರಿ ಎಂಬ ಅಭಿಪ್ರಾಯವನ್ನು ಅವರು ವ್ಯಕ್ತಪಡಿಸಿದ್ದಾರೆ. ಹಾಗೆಯೇ ಶಾಂತಿಯುತ ಸಹಬಾಳ್ವೆಗಾಗಿ ಸಂಶ್ಲೇಷಣೆ ಮತ್ತು ಸಮತೋಲನದ ಪ್ರಮುಖ ತತ್ವಗಳನ್ನು ಹಿಂದೂ ಧರ್ಮ ಒಳಗೊಂಡಿರುವುದಾಗಿ ಅವರು ತಿಳಿಸಿದ್ದಾರೆ.

ಭಾರತದಲ್ಲಿ ಇದ್ದುಕೊಂಡು, ಹಿಂದೂ ಧರ್ಮದಲ್ಲಿಯೇ ಹುಟ್ಟಿ ಮಾತೃ ಧರ್ಮವನ್ನೇ ಅವಹೇಳನ ಮಾಡುವ ಕೆಲವು ನಾಮರ್ಧರು ನಮ್ಮ ನಡುವೆ ಇದ್ದಾರೆ. ಇಂತಹ ಬುದ್ಧಿ ಜೀವಿ‌ಗಳಿಗೆ ಹಿಂದೂ ಧರ್ಮದ ಪಾವಿತ್ರ್ಯತೆ ಇನ್ನೂ ಅರಿವಾಗದೇ ಇರುವುದು ದುರಾದೃಷ್ಟವೇ ಸರಿ. ಅಂತಹವರು ಹಿಂದೂ ಧರ್ಮವನ್ನು ಗೌರವಿಸಿ, ಅದನ್ನು ಒಪ್ಪಿಕೊಂಡು ಸ್ವೀಕಾರ ಮಾಡುತ್ತಿರುವವರ, ಹಿಂದೂ ಧರ್ಮದ ಬಗ್ಗೆ ಒಳ್ಳೆಯ ಭಾವನೆ ಇರಿಸಿಕೊಂಡವರನ್ನು ನೋಡಿ ಕಲಿಯಬೇಕಾಗಿದೆ. ಹಿಂದೂ ಧರ್ಮದ ಶ್ರೇಷ್ಠತೆಯನ್ನು ವಿದೇಶಿಗರೂ ಅರಿತು ಮಾತನಾಡುತ್ತಿರುವಾಗ, ನಮ್ಮಲ್ಲೇ ಕೆಲವರು ಹಿಂದೂ ಧರ್ಮದ ವಿರುದ್ಧ ಹೋಗುತ್ತಿರುವುದು ಬೇಸರದ ವಿಷಯ.

Tags

Related Articles

Close