ಅಂಕಣಇತಿಹಾಸಪ್ರಚಲಿತ

ಸಂತಾನ ಶಕ್ತಿ ಹರಣದ ಕರಾಳ ಇತಿಹಾಸ!! ಸಂಜಯ್ ಗಾಂಧಿಯಿಂದ ಬಲವಂತವಾಗಿ ೮.೩ ಮಿಲಿಯನ್ ಭಾರತೀಯರ ಸಂತಾನ ಹರಣವಾಗಿತ್ತು!

ಇದು ಪ್ರಜಾಪ್ರಭುತ್ವ!! ಯಾರಿಂದ ಪ್ರಜಾಪ್ರಭುತ್ವ ವೆನ್ನುವುದು ಹುಟ್ಟಿಕೊಂಡಿತೆಂದು ಹೇಳಲಾಗುತ್ತದೆಯೋ, ಯಾರು ಜಾತ್ಯಾತೀತತೆಯನ್ನು ಪ್ರಮೋಟ್ ಮಾಡಿದರೆಂದು ಹೇಳಲಾಗುತ್ತದೋ, ಯಾವ ಭಾರತೀಯರು ನೆಹರೂ ಕುಟುಂಬವೊಂದು ಮಾತ್ರವೇ ಸ್ವಾತಂತ್ರ್ಯ ತಂದುಕೊಟ್ಟಿತೆಂದು ಮೂರ್ಖ ನಂಬಿಕೆವ ಇಟ್ಟುಕೊಂಡಿದ್ದಾರೋ, ಆ ನೆಹರೂ ಕುಟುಂಬವೊಂದು ಭಾರತದ ಪ್ರಜಾಪ್ರಭುತ್ವವೊಂದರ ಬುಡ ಹಿಡಿದು ಅಲುಗಾಡಿಸಿದ್ದೊಂದು ಭಾರತದ ಇತಿಹಾಸದ ದುರಂತ!! ಅದೆಲ್ಲಿಂದ ಬಂದರೋ ನೋಡಿ, ನೆಹರೂ ಮತ್ತು ಮಹಾತ್ಮಾ ಎನ್ನುವ ಗಾಂಧಿ!! ಭಾರತವನ್ನು ಇಬ್ಭಾಗವಾಗಿಸಿ ಬಿಟ್ಟರು!! ಅದೂ ಸಹ, ಸ್ಲೋ ಪಾಯಿಸನ್ನಿನ ಹಾಗೆ ಭಾರತೆ ರಾಜಕೀಯವನ್ನಾಕ್ರಮಿಸಿಕೊಂಡ ಈ ಇಬ್ಬರ ಅಧಿಕಾರದ ದಾಹಕ್ಕೋ ಅಥವಾ ತುಷ್ಟೀಕರಣದ ಪರಮಾವಧಿಯೋ ಏನೋ ನೋಡಿ!! ಮಿಲಿಯನ್ನುಗಟ್ಟಲೇ ಭಾರತೀಯರು ರುಂಡ ಕತ್ತರಿಸಿಕೊಂಡು, ಚೂರಿ ಇರಿಸಿಕೊಂಡು, ಮೆಟ್ಟಿಸಿಕೊಂಡು, ಮಾನ ಹರಣವಾಗಿಸಿಕೊಂಡು,. ಭಾರತದ ನೆಲವನ್ನು ರಕ್ತದಿಂದ ತೋಯಿಸಿಬಿಟ್ಟರು! ಅವರ ನೋವು, ಸಾವುಗಳೆಲ್ಲವೂ ಸಹ ಒಂದು ಭಾರತವನ್ನು ನಿರ್ಮಾಣ ಮಾಡಲು ಪಣ ತೊಟ್ಟರೆ ಜೊತೆ ಜೊತೆಗೇ ಪಾಕಿಸ್ಥಾನವೂ ನಿರ್ಮಾಣವಾಗಿ ಹೋಗಿತ್ತು! ಶಾಶ್ವತವಾದ ಮೈಗ್ರೇನಿನ ಹಾಗೆ!!

ಭಾರತದ ಸಂವಿಧಾನದ ಧ್ಯೇಯ ವಾಕ್ಯವಾದ ಪ್ರಜಾಪ್ರಭುತ್ವವೊಂದು ಅಪಾಯದಲ್ಲಿ ಸಿಲುಕಿದ್ದು ಇಂದಿರಾ ಗಾಂಧಿ ಭಾರತದ ಮೇಲೆ ತುರ್ತು ಪರಿಸ್ಥಿತಿ ಹೇರಿದಾಗ ಮಾತ್ರವಲ್ಲ, ಬದಲಾಗಿ ಕಾಂಗ್ರೆಸ್ ಆಳಿದ ೭೦ ವರ್ಷಗಳ ಕಾಲವೂ ಸಹ ಪ್ರಜಾಪ್ರಭುತ್ವ ಅರ್ಥ ಕಳೆದುಕೊಂಡಿತ್ತೇ ವಿನಃ ಇನ್ನೇನೂ ಆಗಿರಲಿಲ್ಲ! ಭಾರತದ ಸಮಾಜವನ್ನು ಅಭಿವೃದ್ದಿಗೊಳಿಸುವ ಬದಲು, ತಮ್ಮದೇ ಅಹಂಕಾರ ಅಧಿಕಾರ ಮದದೊಳ ಬಿದ್ದ ಕಾಂಗ್ರೆಸ್ ಎಂಬ ಪಕ್ಷವೊಂದು ಸ್ವರ್ಗವಾಗಿದ್ದ ಭಾರತವನ್ನು ನರಕವನ್ನಾಗಿಸಿದ್ದನ್ನು ಯಾವ ಭಾರತೀಯನೂ ಮರೆಯಲಾರ! ಇಡೀ ದೇಶ ಜೈಲಾಗಿ ಮಾರ್ಪಟ್ಟಿತ್ತು! ಭಾರತೀಯನ ಧ್ವನಿಯನ್ನೇ ಅಡಗಿಸಲಾಗಿತ್ತು! ದೇಶದ ಆಡಳಿತದ ಚುಕ್ಕಾಣಿ ಹಿಡಿದಿದ್ದ ಕಾಂಗ್ರೆಸ್ ಭಾರತೀಯನಿಗಿದ್ದ ಸ್ವಾತಂತ್ರ್ಯವನ್ನೇ ಕಸಿದುಕೊಂಡಿತ್ತು! ನ್ಯಾಯಾಂಗ, ರಾಜಕೀಯ, ಮಾಧ್ಯಮ, ವಿದ್ಯಾರ್ಥಿ ಸಂಘ,. ಯಾವುದರ ಮೇಲೂ ಭಾರತೀಯರಿಗೆ ಹಿಡಿತವಿರಲಿಲ್ಲ!! ಇದಕ್ಕಿಂತ ದುರಂತ ಇನ್ನಾವುದಿರಲಿಕ್ಕೆ ಸಾಧ್ಯ ಹೇಳಿ!!

ತುರ್ತು ಪರಿಸ್ಥಿತಿ ಹೇರಿಕೆಯಾದಾಗ ಭಾರತೀಯರ ಮೇಲೆ ಸ್ವತಃ ದೇಶವನ್ನಾಳುವವರೇ ನಡೆಸಿದ ಕ್ರೂರತೆ ಒಂದಿದೆಯಲ್ಲವಾ?! ಯಾವ ಭಾರತೀಯ ಕ್ಷಮಿಸುವುದಕ್ಕೆ ಸಾಧ್ಯ ಹೇಳಿ?! ಹೇಳಲೇ ಬೇಕೆಂದರೆ, ಭಾರತೀಯರಿಗೆ ನೀಡಿದ ಹಿಂಸೆ, ಕಿರುಕುಳಗಳ ಬಗ್ಗೆ ಯಾರೂ ವರದಿ ಮಾಡಲೂ ಸಾಧ್ಯವಾಗಲಿಲ್ಲ! ಕೆಲವೊಂದಷ್ಟು ಕಾಲಗರ್ಭದಲ್ಲಿ ಮುಚ್ಚಿ ಹೋದವು! ಭಾರತೀಯರ ಮೇಲೆ ಯಾವ್ಯಾವ ಕಾರಣಕ್ಕೆ ಬಲಪ್ರಯೋಗ ಮಾಡಲಾಗಿತ್ತೆಂದು ಅರಿತರೆ, ಸ್ವತಃ ಇತಿಹಾಸ ಬೆಚ್ಚಿ ಬೀಳುತ್ತದೆ! ಬಲಪ್ರಯೋಗ ಮಾಡಿಸಿಕೊಂಡು ಬದುಕುಳಿದವರು ಬೆಚ್ಚುತ್ತಾರೆ!

ಯಾವಾಗಾಯಿತು, ಯಾವ ಕಾರಣಕ್ಕಾಯಿತು ಅಥವಾ ಯಾರ ಮೇಲಾಯಿತು ಎಂಬುದು ಬಹಳ ಮುಖ್ಯವಾಗುತ್ತದೆಯೇ ಹೊರತು, ಆಗಿತ್ತೋ ಇಲ್ಲವೋ
ಎಂಬ ಚರ್ಚೆಯ ಅವಶ್ಯಕತೆಯೇ ಇಲ್ಲ! ಬದಲಾಗಿ, ಅದೆಷ್ಟು ಕ್ರೂರವಾಗಿ ಭಾರತೀಯರನ್ನು ಹಿಂಸಿಸಲಾಗಿತ್ತು ಎಂಬುದಷ್ಟೇ ಪ್ರಶ್ನೆಗೆ ಉತ್ತರ ಹುಡುಕಬೇಕಾದೀತು! ಯಾಕೆಂದರೆ, ಈ ಕ್ರೌರ್ಯಕ್ಕೆ ರೂವಾರಿಯಾಗಿದ್ದ ಇಂದಿರಾ ಗಾಂಧಿ ಮತ್ತು ಮಗರಾಯನಾದ ಸಂಜಯ್ ಗಾಂಧಿ ಮಾಡಿದ ಘನಘೋರ ಅಪರಾಧಕ್ಕೆ, ಇವತ್ತು ಶಿಕ್ಷೆ ವಿಧಿಸಬೇಕೆಂದರೂ ಸಹ ಅವರು ಜೀವಂತವಾಗಿಲ್ಲ!

Under the guise of the government reforms in order to do birth control Sanjay Gandhi did the heinous crime of “Sterilisation”. He launched the programme of forced “vasectomies” and “Tubectomies”- It means that all the people(men &women) were forced to go under treatments that would have barred them from growing their family.

ನಂಬಿದರೆ ನಂಬಿ! ಬಿಟ್ಟರೆ ಬಿಡಿ!! ಸತ್ಯ ಮಾತ್ರ ಯಾವತ್ತೂ ಸತ್ಯವೇ!

ಭಾರತದಲ್ಲಿ, ಜನಸಂಖ್ಯಾ ಸ್ಫೋಟವಾಗುತ್ತಿದೆ! ಜನನ ನಿಯಂತ್ರಣವಾಗುತ್ತಿಲ್ಲ ಎಂಬ ಭ್ರಮೆಗೆ ಬಿದ್ದ ಸಂಜಯ್ ಗಾಂಧಿ ಸಮಾಜ ಸುಧಾರಣೆಯ ನೆಪದಲ್ಲಿ, ಒಂದು ಸುತ್ತೋಲೆಯನ್ನು ಹೊರಡಿಸಿದರು! ಪ್ರತೀ ಮಹಿಳೆ ಮತ್ತು ಪುರುಷರು, ವಸೆಕ್ಟೋಮಿಸ್ ಮತ್ತು ಟ್ಯೂಬ್ ಕ್ಟೋಮಿಸ್ ಎಂಬ ಚಿಕಿತ್ಸೆ ಪಡೆದುಕೊಳ್ಳಬೇಕು ಎಂಬ ಸುತ್ತೋಲೆ! ಪಾಪ! ಜನರಿಗೆ ಈ ಸಂಜಯ್ ಗಾಂಧಿ ಎಂಬ ದೇಶ ಕಂಡಂತಹ ದರಿದ್ರ ರಾಜಕಾರಣಿ ಬಲವಂತವಾಗಿಯಾದರೂ ನಮ್ಮ ಆರೋಗ್ಯ ಕಾಳಜಿ ಮಾಡುತ್ತಿದ್ದಾರೆಂದು ಭ್ರಮಿಸಿ ಚಿಕಿತ್ಸೆ ಪಡೆದುಕೊಳ್ಳಲು ಹೋದರು! ಕೊನೆಗೆ, ಅವರ ಸಂತಾನ ಶಕ್ತಿಯ ಹರಣವಾಗಿ ಹೋಗಿತ್ತು! ನೆನಪಿಡಿ! ಇದು ಸ್ವ ಇಚ್ಛೆಯಿಂದ ಮಾಡಿಸಿಕೊಂಡದ್ದಲ್ಲ! ಬದಲಿಗೆ, ಬಲವಂತದ ಸಂತಾನ ಶಕ್ತಿ ಹರಣದ ಚಿಕಿತ್ಸೆ!!

ಈ ಘಟನೆಯೊಂದನ್ನು ಕೇವಲ ಓದಿದರೆ ಮಾತ್ರ ಸಾಲದು! ಪ್ರತೀ ಪುರುಷ ಮತ್ತು ಮಹಿಳೆಯ ಪರಮೋಚ್ಛ ಘಟ್ಟದ ಹಕ್ಕನ್ನೇ ಕಸಿದುಕೊಂಡ ಸರಕಾರದ ವಿರುದ್ಧ ನಿಲ್ಲಲೂ ಆಗದೇ, ಅನುಭವಿಸಲೂ ಆಗದೆ, ಕೊನೆ ಕೊನೆಗಾದ ಸೋಂಕು, ಸಾವು, ರೋಗ ರುಜಿನಗಳನ್ನನುಭವಿಸಿ ಅನುಭವಿಸಿ ಸುಸ್ತಾದ ಭಾರತೀಯರ ವಂಶವೇ ನಿರ್ವಂಶವಾಗಿ ಹೋಗಿತ್ತು!!

ಆತ ಅಳುತ್ತ ನಿಂತಿದ್ದ! ವೃದ್ದ ಕೃಷ ಕಾಯದ ಮನುಷ್ಯ! ಮೇಜಿನ ಮುಂದೆ ಕುಳಿತಿದ್ದ ವ್ಯಕ್ತಿ ಕೋಪಗೊಂಡಿದ್ದಾನೆ!! ವೃದ್ಧನ ಮುಂದೆ ಅರಚುತ್ತಿದ್ದಾನೆ! “ಒಂದೋ ಈ ಕಾಗದ ಪತ್ರಗಳಿಗೆ ಸಹಿ ಹಾಕು, ಇಲ್ಲವೇ ಅರ್ಜಿಯನ್ನು ತೆಗೆದುಕೊಂಡು ಬಾ. ನಿನಗೆ ಹಣ ಕೊಡುತ್ತೇವೆ ಬೇಕಾದರೆ! ನೀನೇನನ್ನೂ ಪಾವತಿಸಬೇಕಾಗಿಲ್ಲ! ಸುಮ್ಮನೆ ನಿನ್ನ ಹೆಬ್ಬೆಟ್ಟು ಒತ್ತು ಇಲ್ಲಿ!”

ಸುತ್ತಲಿದ್ದ ಜನ ಏನಾಗುತ್ತಿದೆ ಎಂದು ನೋಡಲು ನಿಂತರು! ಮೇಜಿನ ಬದಿ ಕೂತಿದ್ದ, ಬಿಳಿ ಕೋಟು ಹಾಕಿದ್ದವ ಅರಚುತ್ತಿದ್ದ! ಅಷ್ಟರಲ್ಲಿ, ಇನ್ನೊಬ್ಬ ಬಿಳಿ ಕೋಟು ಹಾಕಿದವನು ಕಾರಿನಿಂದಿಳಿದು ಬಂದು ಏನಾಯಿತು ಎಂದು ಈ ಕೃಷಕಾಯದವನನ್ನು ಕೇಳಿದಾಗ, ಆತ ಅಳತೊಡಗಿದ!!

“ಡಾಕ್ಟರ್ ಸಾಬ್! ನನಗೆ ಸಹಾಯ ಮಾಡಿ! ಈ ಜನ ನನ್ನನ್ನು ಸರತಿಯಲ್ಲಿ ನಿಲ್ಲಲು ಬಿಡುತ್ತಿಲ್ಲ! ನಾನು ನನ್ನ ಜ್ವರಕ್ಕೆ ಔಷಧಿ ತೆಗೆದುಕೊಳ್ಳಲು ಸಾಧ್ಯವಿಲ್ಲ ಎನುತ್ತಿದ್ದಾರೆ! ನಾನು, ನನ್ನ ನಸ್ ಬಂದಿ ಶಸ್ತ್ರಚಿಕಿತ್ಸೆಯನ್ನು ಮಾಡಿಸಿಕೊಳ್ಳದ ಹೊರತು ನಾನು ಯಾವುದಕ್ಕೂ ಔಷಧಿ ತೆಗೆದುಕೊಳ್ಳಲು ಸಾಧ್ಯವಿಲ್ಲವಂತೆ! ಆದರೆ, ನನಗೆ ನಸ್ ಬಂದಿ ಬೇಡ! ನನಗೆ ನನ್ನ ಜ್ವರಕ್ಕೆ ಔಷಧಿ ಬೇಕಿದೆ! ನಾನು ವೃದ್ಧ! ನನಗೆ ಇದರ ಅವಶ್ಯಕತೆಯಿಲ್ಲ ಎಂದು ಕೇಳಿದರೂ ಬಿಡುತ್ತಿಲ್ಲ! ನನ್ನ ಮೇಲೆ ಬಲಪ್ರಯೋಗ ಮಾಡುತ್ತಿದ್ದಾರೆ ಸಾಬ್”! ಎಂದಾಗ ಆ ವೈದ್ಯನಿಗೆ ರೇಗಿ ಹೋಗಿತ್ತು! ಮೇಜಿನ ಬದಿ ಕುಳಿತ ವೈದ್ಯನಿಗೆ ಕೂಗಿದ! ” ಮೂರ್ಖ! ಈತನನ್ನು ಬಿಡು! ನಿನಗೆ ನಸ್ಬಂದಿ ಮಾಡಲೇ ಬೇಕೆಂದಿದ್ದರೆ, ನಿನ್ನ ಮನೆಯವರನ್ನು ಕರೆದುಕೊಂಡು ಬಾ!”

A vasectomy in progress at a family planning camp held in a government hospital in New Delhi in May 1976. Photo: Hindustan Times

ಈ ಕಥೆಯನ್ನು ಯಾಕೆ ಹೇಳಿದೆನೆಂದರೆ, ಪರಿಸ್ಥಿತಿಯ ಆಳ ಅರ್ಥವಾಗಲಿ ಎಂದಷ್ಟೇ!! ಆ ವೃದ್ಧ ಜ್ವರಕ್ಕೆ ಔಷಧಿ ತೆಗೆದುಕೊಳ್ಳುವ ಸಲುವಾಗಿ ಬಂದವನಿಗೆ ಸಂತಾನಶಕ್ತಿ ಹರಣ ಮಾಡಿಸಿಕೊಂಡರೆ ಮಾತ್ರ ಉಳಿದ ಔಷಧಿ ಲಭ್ಯವಾಗುವಾಗ ಕಲ್ಪಿಸಿಕೊಳ್ಳಿ! ಇದರ ಬಗ್ಗೆ ಗೊತ್ತಿಲ್ಲದಿದ್ದ ಅದೆಷ್ಟೋ ಅನಕ್ಷರಸ್ಥರು ಅದೇನನ್ನುಭವಿಸಿರಬಹುದು? ಅದೆಷ್ಟು ಹಿಂಸಾತ್ಮಕವಾಗಿ, ಬಲಪ್ರಯೋಗದಿಂದ , ಅವರ ಸಂತಾನ ಶಕ್ತಿ ಹರಣ ಮಾಡಿ ಕೊಂದಿರಬಹುದು? ಕೇವಕ ಈ ವೃದ್ಧನ ಕಥೆ ಮಾತ್ರವಲ್ಲ, ಬದಲಾಗಿ ಅದೆಷ್ಟೋ ಭಾರತೀಯರನ್ನು ಒತ್ತಾಯ ಪೂರ್ವಕವಾಗಿ ಸಂತಾನ ಶಕ್ತಿ ಹರಣ ಕ್ರಿಯೆಗೆ ಒಳಪಡಿಸಲಾಯಿತು! ಕತ್ತರಿ ತಾಗಿಸಿಕೊಂಡವರಿಗೆ ಮಾತ್ರ ವೈದ್ಯಕೀಯ ಸೌಲಭ್ಯವಷ್ಟೇ ಹೊರತು, ಬೇರೆ ಯಾರಿಗೂ ಇಲ್ಲ! ಮದುವೆಯಾಗದಿದ್ದವರಿಗೂ ಕತ್ತರಿ ತಾಗಿಸಲಾಗಿಯಿತು! ಅದೆಷ್ಟೋ ಹೆಣ್ಣು ಮಕ್ಕಳು ಮದುವೆಗೂ ಮುನ್ನ ಬಂಜೆಯಾಗಿ ಹೋದರು! ಭಾರತೀಯರ ಸುಂದರ ಕುಟುಂಬದ ಕಲ್ಪನೆಯೇ ಭಗ್ನವಾಗಿ ಹೋಗಿತ್ತು!

The order was passed from Raj Nivas. In future, free medical facilities would be available to only those who had acted on the national programme to limit families. The rest would have to pay. The proof of a sterilization would be the certificate issued at the clinic and the proof that a person did not come in the “eligible” category would be the ration card with the name of two children or more. Those who fail to produce the ration cards will be deemed to have more than two children and will be liable to all charges.

The sterilizations had been mainly done in a massive way around Delhi and suburbs. Even the women were not spared. The government officials, especially from the health department were asked to fill a daily quota of vasectomy. Those who would refuse had the fear of losing their jobs.

ದುರಂತವೆಂದರೆ, ಕಡ್ಡಾಯವಾದ ಸಂತಾನ ಶಕ್ತಿ ಹರಣದ ಸುತ್ತೋಲೆ ಹೊರಟಿದ್ದು ಮತ್ತಿದೇ ರಾಜ್ ನಿವಾಸದಿಂದ! ಸಂತಾನ ಶಕ್ತಿ ಹರಣ ಕ್ರಿಯೆಗೊಳಗಾದವರಿಗೆ ಉಚಿತ ವೈದ್ಯಕೀಯ ಸೌಲಭ್ಯದ ಸರ್ಟಿಫಿಕೇಷನ್ನು ಕೊಡಲಾಯಿತು! ಯಾರು ಮಾಡಿಸಿಕೊಳ್ಳಲಿಲ್ಲವೋ, ಅವರಿಗೆ ಯಾವ ಸೌಲಭ್ಯವೂ ಸಿಗಲಿಲ್ಲದಂತಾಯಿತು! ಪ್ರತೀ ಉಚಿತ ಸೌಲಭ್ಯಗಳು ರದ್ದಾಯಿತು!! ಅದರಲ್ಲಿಯೂ, ದೆಹಲಿಯ ಸುತ್ತಮುತ್ತ ಬಹುಸಂಖ್ಯೆಯಲ್ಲಿ ಈ ಬಲಪ್ರಯೋಗದ ಕ್ರಿಯೆಗೆ ಜನ ಒಳಗಾದರು! ಸರಕಾರೀ ನೌಕರರೇನಾದರೂ ಇದಕ್ಕೆ ವಿರೋಧ ವ್ಯಕ್ತಪಡಿಸಿದರೆ ತಮ್ಮ ಕೆಲಸ ಕಳೆದುಕೊಳ್ಳುವ ಭೀತಿಯಿತ್ತಲ್ಲದೇ, ವಿರೋಧಿಸಿದರೆ ಪ್ರಾಣ ಬೆದರಿಕೆಯನ್ನೂ ಒಡ್ಡಲಾಗಿತ್ತು! ಮಹಿಳೆಯರನ್ನೂ ಬಿಡದ ಸಂಜಯ್ ಗಾಂಧಿಯ ಯೋಜನೆ, ಹರ್ಯಾಣಾ, ಉತ್ತರಪ್ರದೇಶ, ರಾಜಸ್ಥಾನ, ಮಧ್ಯಪ್ರದೇಶ ಮತ್ತು ಬಿಹಾರದಲ್ಲಿ ವ್ಯಾಪಕವಾಗಿ ಜಾರಿಯಾಗಿದ್ದಲ್ಲದೇ, ಅಮಾನವೀಯ ಯೋಜನೆಯೊಂದು ಯಶಸ್ವಿ ಕಂಡಿತು!!

ಬಿಡಿ! ಸಂಜಯ್ ಗಾಂಧಿಯ ಈ ಸರಕಾರದ ಸಮಾಜ ಸುಧಾರಣೆಯ ಯೋಜನೆಯಿದೆಯಲ್ಲವಾ?! ಸಂತಾನ ಶಕ್ತಿ ಹರಣ ಶಸ್ತ್ರಕ್ರಿಯೆಯನ್ನು ಸರತಿಯಂತೆ ನಡೆಸಲಾಯಿತು! ಅದರಲ್ಲೂ, ತೀರಾ ಹೀನಾಯವಾದ, ಅನಾರೋಗ್ಯಕರವಾದ ರೀತಿಯಲ್ಲಿ ನಡೆಸಿದ ಈ ಕೃತ್ಯವೊಂದು ಯಾರ ಆರೋಗ್್ಯದ ಬಗ್ಗೆಯೂ ಮತುವರ್ಜಿಯನ್ನು ಪರಿಗಣಿಸಲಿಲ್ಲ! ಲೆಕ್ಕವಿಲ್ಲದಷ್ಟು ಮಹಿಳೆಯರು ಮತ್ತು ಪುರುಷರು ಸೋಂಕು ತಗುಲಿ ಮೃತಪಟ್ಟರು! ಅದೆಷ್ಟೋ ಮಹಿಳೆಯರು ರಕ್ತಸ್ರಾವವಾಗಿ ಮೃತಪಟ್ಟರು!! ಬರೋಬ್ಬರಿ, ೧೮೦೦ ಕುಟುಂಬಗಳು ಹೇಳ ಹೆಸರಿಲ್ಲದಂತೆ ಸಾರ್ವತ್ರಿಕವಾಗಿ ನಾಶವಾಗಿ ಹೋಯಿತು!! ಭಾರತದಲ್ಲಿ, ಮರಣ ಮೃದಂಗ ಬಾರಿಸಿತು! ಅದೆಷ್ಟೋ ಜನ ನರಳಿ ನರಳಿ ಸತ್ತರು!

೮.೩ ಮಿಲಿಯನ್ನಿನಷ್ಟು ಭಾರತೀಯರ ಸಂತಾನ ಶಕ್ತಿ ಹರಣವಾದಾಗ , ಸಂಜಯ್ ಗಾಂಧಿ ನಾಝೀಗಳನ್ನು ಮೀರಿಸಿ ಸಾಧನೆ ಮಾಡಿದ್ದ!! ಯಹೂದಿಗಳ ಸಂತಾನಶಕ್ತಿ ಹರಣ ಗಳನ್ನು ಮಾಡಿದ್ದ ನಾಝಿಗಳಿಗಿಂತ ಹದಿನೈದು ಪಟ್ಟು ಜಾಸ್ತಿ ಭಾರತೀಯರು ಸಂತಾನಶಕ್ತಿ ಹರಣಕ್ಕೊಳಗಾಗಿದ್ದರೆಂದರೆ ಊಹಿಸಿಕೊಳ್ಳಿ! ಸೈನ್ಸ್ ವರದಿಗಾರನ ಪ್ರಕಾರ, “ಈ ಶಸ್ತ್ರಕ್ರಿಯೆ ನಡೆಯುತ್ತಲೇ ಎರಡು ಸಾವಿರ ಪುರುಷರು ಸಾವನ್ನಪ್ಪಿದ್ದರು! ಜರ್ಮನಿಯಲ್ಲಾದ ಹಿಟ್ಲರ್ ನ ಸಂತಾನಶಕ್ತಿ ಹರಣದ ಅಭಿಯಾನವನ್ನೂ ಮೀರಿಸಿದ್ದ ಸಂಜಯ್ ಗಾಂಧಿ!!”

The sterilizations were performed in assembly-line fashion, in great haste, and in unhygienic conditions. There was no “follow-up care” offered whatsoever. Many men and women died from subsequent infections. Some 1,800 families filed wrongful death lawsuits on behalf of deceased relatives, but the actual death toll was much higher.

An astonishing 8.3 million Indians were sterilised in just a year, which was “15 times the number of people sterilised by the Nazis”, according to science journalist Mara Hvistendahl. Two thousand men died from botched operations. Even Sanjay Gandhi crossed the Hitler campaign in Germany.

ಏನೇ ಇರಲಿ ಕಾರಣಗಳು!! ಜನನ ಸಂಖ್ಯೆ ನಿಯಂತ್ರಣ ಮಾಡಲು ಈ ನಿರ್ಧಾರವನ್ನು ತೆಗೆದುಕೊಂಡಿದ್ದರು ಸಂಜಯ್ ಎಂಬ ಸಮರ್ಥನೆಯಾಗಲಿ, ಅಥವಾ ಭಾರತದಲ್ಲಿ ಅನಿವಾರ್ಯವಾಗಿತ್ತು ಎಂಬುದಾಗಲಿ! ಏನೇ ಇದ್ದರೂ ಸಹ, ಸಮಾಜದಲ್ಲಿ ಕುಟುಂಬ ಯೋಜನೆಯ ಬಗ್ಗೆ ಅರಿವು ಮೂಡಿಸುವುದಷ್ಟಕ್ಕೇ ಸರಕಾರಕ್ಕೆ ಸೀಮಿತವಾಗಿರುತ್ತದೆ ಬಿಟ್ಟರೆ, ದೇಶವಾಸಿಗಳ ಪ್ರಾಣ ತೆಗೆಯುವುದು , ಸಾಮೂಹಿಕವಾಗಿ ಹಿಂಸಿಸುವುದು, ಮಹಿಳೆಯರ ಬದುಕಿನ ಅತ್ಯಮೂಲ್ಯವಾದ ಹಕ್ಕನ್ನೇ ಕಸಿಯುವುದಕ್ಕೆ ಪ್ರಜಾಪ್ರಭುತ್ವ ದೇಶದಲ್ಲಿ ಅವಕಾಶವಿತ್ತೇ?! ಅದೂ, ಈ ರೀತಿ ಅಮಾನುಷವಾಗಿ?! ಅದೆಷ್ಟೋ ಮಿಲಿಯನ್ನುಗಟ್ಟಲೇ ಭಾರತೀಯರ ಬದುಕನ್ನೇ ನರಕಗೊಳಿಸಿದಂತಹ ಸಂಜಯ್ ಗಾಂಧಿಯ ಸುತ್ತೋಲೆ ಮತ್ತು ಸಹಿ ಹಾಕಿದ ಇಂದಿರಾ ಗಾಂಧಿ!! ಎಂತಹ ಘೋರ ಅಪರಾಧಿಗಳು ಎಂಬುದು ಇವತ್ತು ಪ್ರತಿಯೊಬ್ಬ ಭಾರತೀಯನಿಗೂ ಅರ್ಥವಾಗಲೇ ಬೇಕಿದೆ!!

ಸರಕಾರದ ಯಾವುದೇ ಯೋಜನೆಯಾಗಲಿ, ಅಥವಾ ಇನ್ನೇನಿರಲಿ! ಅದು ಯಾವತ್ತೂ ಸಹ ಶ್ರೀ ಸಾಮಾನ್ಯನ ಬದುಕಿನ ಅರ್ಥವನ್ನು ಕಸಿಯಬಾರದು! ಯಾವುದೇ ಯೋಜನೆಯಾಗಲಿ, ಪ್ರಜಾಪ್ರಭುತ್ವವನ್ನೇ ಮೆಟ್ಟುವಂತಹ ಸ್ಥಿತಿಗಿಳಿದು ಬಿಡಬಾರದಲ್ಲವೇ?! ಆದರೆ, ಈ ಕಾಂಗ್ರೆಸ್ ಅಥವಾ
ಅದರ ನಾಯಕತು ಮಾಡಿದ್ದೇನು ಸ್ವಾಮಿ?! ಜನನ ನಿಯಂತ್ರಣದ ಹೆಸರಿನಲ್ಲಿ ಅದೆಷ್ಟೋ ಭಾರತೀಯರ ಮಾರಣ ಹೋಮ! ಅದೆಷ್ಟೋ ಮಹಿಳೆಯರಿಗತೆ ಬಂಜೆಯೆಬ ಬಿರುದು! ಅದೆಷ್ಟೋ ಭಾರತೀಯ ಕುಟುಂಬಗಳ ನಿರ್ನಾಮ! ಇದೇ ಅಲ್ಲವೇ?!! ಕೇವಲ, ರಾಜಕೀಯದಲ್ಲಿ ತನ್ನ ಪ್ರಾಧಾನ್ಯತೆಯನ್ನು ಸೃಷ್ಟಿಸಿಕೊಳ್ಳುವ ಹಠಕ್ಕೆ ಬಿದ್ದ ಸಂಜಯ್ ಗಾಂಧಿ ಮಾಡಿದ್ದಿದನ್ನೇ ಎಂದಾದರೆ ಯೋಚಿಸಿ! ಭಾರತದಲ್ಲಿ ರಕ್ತಪಾತವಾಗಿದ್ದು ಕೇವಲ ಈ ನೆಹರೂ ಕುಟುಂಬದಿಂದ ಮತ್ತು, ಆ ಮಹಾತ್ಮನೆಂಬ ಗಾಂಧಿಯಿಂದ ಅಷ್ಟೇ!

– ಅಜೇಯ ಶರ್ಮಾ

Tags

Related Articles

Close