ಅಂಕಣ

18 ನೇ ಶತಮಾನದಲ್ಲಿ ಡಾರ್ವಿನ ಕಂಡು ಹಿಡಿದದ್ದನ್ನು, ಭಾರತೀಯರು ಸಹಸ್ರಾರು ವರ್ಷಗಳ ಹಿಂದೆಯೇ ಕಂಡುಹಿಡಿದಿದ್ದರು! ಭಾರತೀಯರ ಪುಣ್ಯ ಪುರಾವೆಗಳಿಗೊಂದು ಸಲಾಮ್!

ಚಾರ್ಲ್ಸ್ ಡಾರ್ವಿನ್ ಯಾರು ಅಂತ ನಮಗೆ ಕೇಳಿದರೆ ನಾವು ” ಡಾರ್ವಿನ್ ಥಿಯರಿ ಮೂಲಕ ಆತ ಜೀವ ಉಗಮ ವಿಕಾಸ ಕಂಡು ಹಿಡಿದವನು” ಅಂತ ಥಟ್ಟನೆ ಹೇಳಿಬಿಡ್ತೀವಿ. ಆದರೆ 18 ನೆ ಶತಮಾನದಲ್ಲಿ ಡಾರ್ವಿನ್ ಸಂಶೋಧನೆ ನಡೆಸಿ ಕೊಟ್ಟಿದ್ದ ಜೀವ ಉಗಮ ವಿಕಾಸದ ವರದಿಯ ಬಗ್ಗೆ ಜಗತ್ತಿಗೆ ತಿಳಿದಿರಲೇ ಇಲ್ಲವಾ?

ಜಗತ್ತಿಗೆ ಗೊತ್ತಿರದಿರಬಹುದು ಆದರೆ ಭಾರತೀಯರಿಗೆ ಮಾತ್ರ ಅದು ಸಾವಿರಾರು ವರ್ಷಗಳ ಹಿಂದೆ ಹಿಂದೆಯೇ ಗೊತ್ತಿತ್ತು.

ಅದನ್ನ ತಾಯಿ ಮಗನ ಒಂದು ಸಂಭಾಷಣೆಯಿರುವ ಚಿಕ್ಕ ಕಥೆಯ ಮೂಲಕ ತಿಳಿಯೋಣ ಬನ್ನಿ

ಮಗ : “ಅಮ್ಮ ನಾನೊಬ್ಬ ದೊಡ್ಡ Genetic scientist, ನಾನು ಅಮೆರಿಕದಲ್ಲಿ ಜೀವ ವಿಕಸನದ ಮೇಲೆ ರಿಸರ್ಚ್ ಮಾಡ್ತಿದೀನಿ. ಅದನ್ನ theory of evolution ಅಂತಾರೆ. ಚಾರ್ಲ್ಸ್ ಡಾರ್ವಿನ್ ಅನ್ನೋ ಹೆಸರನ್ನ ನೀನು ಕೇಳಿದೀಯ?”

ತಾಯಿ: (ಪಕ್ಕದಲ್ಲಿ ಕೂತಿದ್ದ ನಸುನಗುತ್ತ ಹೇಳ್ತಾಳೆ) ಹಾಂ ನನಗೆ ಡಾರ್ವಿನ್ ಬಗ್ಗೆ & ಆತ ಮಾಡಿದ್ದ ಸಂಶೋಧನೆ ಬಗ್ಗೆ ಗೊತ್ತು. ಆದರೆ ನಿನಗೆ ‘ದಶಾವತಾರ’ದ ಬಗ್ಗೆ ಗೊತ್ತಾ? ಅದೇ ವಿಷ್ಣುವಿನ ಹತ್ತು ಅವತಾರಗಳ ಬಗ್ಗೆ?

ಮಗ: ‘ಇಲ್ಲ’ ಅಮ್ಮ

ತಾಯಿ : ಸರಿ ಹಾಗಿದ್ರೆ ನಿನಗೆ ಹಾಗು ನಿನ್ನ ಡಾರ್ವಿನ್ ಗೂ ಗೊತ್ತಿರದ ಆ ದಶಾವತಾರದ ಬಗ್ಗೆ ಹೇಳ್ತೀನಿ ಕೇಳು.

ದಶಾವತಾರದಲ್ಲಿನಮೊದಲನೆ ಅವತಾರವೆ ‘ಮತ್ಸ್ಯ’ ಅವತಾರ. ಮತ್ಸ್ಯ ಅಂದರೆ ‘ಮೀನು’

ಜಗತ್ತಿನ ಸೃಷ್ಟಿಯಾದಾಗ ಪೂರ್ತಿ ನೀರಿನಿಂದಾವರಿಸಿತ್ತು ಅಲ್ವ?

ಅಮ್ಮನ ಮಾತುಗಳನ್ನೇ ತದೇಕಚಿತ್ತದಿಂದ ಮಗ ಕೇಳುತ್ತಿದ್ದ

ಜಗತ್ತು ನೀರಿನಿಂದಾವೃತವಾಗಿತ್ತು ಹಾಗಾಗಿ ನೀರಿನಲ್ಲಷ್ಟೇ ವಾಸಿಸುವ ಪ್ರಾಣಿಯೇ ಮೀನಾಗಿತ್ತು. ಅದನ್ನ ನಾವು ಜಲಚರ ಅಂತ ಕರೀತಿವಿ.

ಇನ್ನು ಎರಡನೆ ಅವತಾರ ‘ಕೂರ್ಮ’ ಅವತಾರ. ಕೂರ್ಮ ಅಂದರೆ ‘ಆಮೆ’. ಮೊದ ಮೊದಲು ನೀರಿನಿಂದಾವೃತವಾಗಿದ್ದ ಜಗತ್ತಿನ ಕೆಲ ಭಾಗ ನಂತರದಲ್ಲಿ ಭೂಮಿಯಾಗಿ ಪರಿವರ್ತಿತವಾಯಿತು. ನೀರು ಹಾಗು ಭೂಮಿ ಎರಡರ ಮೇಲೂ ವಾಸಿಸುವ ಪ್ರಾಣಿ ‘ಆಮೆ’ಯಾಗಿತ್ತು. ಅದಕ್ಕೆ ಅದನ್ನ ನಾವು ‘ಉಭಯವಾಸಿ’ ಪ್ರಾಣಿ ಅಂತಲೂ ಕರೀತೀವಿ.

ಮೂರನೆ ಅವತಾರ ‘ವರಾಹ’ ಅವತಾರ. ಅಂದರೆ ಕಾಡು ‘ಹಂದಿ’ ಅದನ್ನೇ ಅಲ್ವ ನೀವು ಡೈನೊಸಾರಸ್ ಅಂತ ಕರೆಯೋದು?

ಮಗ ಅಮ್ಮನ ಮಾತುಗಳನ್ನೇ ಕೇಳುತ್ತಿದ್ದ. . . ಅಮ್ಮ ತನ್ನ ಮಾತುಗಳನ್ನ ಮುಂದುವರೆಸುತ್ತ “ನಾಲ್ಕನೆ ಅವತಾರವೇ ‘ನರಸಿಂಹ’ ಅವತಾರ. ಅದೇ
ಅರ್ಧ ಮನುಷ್ಯ ಅರ್ಧ ಪ್ರಾಣಿಯ ದೇಹರಚನೆಯುಳ್ಳ ಪ್ರಾಣಿ. ಅಂದರೆ ವಿವೇಚನೆಯಿರದ ಪ್ರಾಣಿಯಿಂದ ವಿವೇಚನೆಯಿರುವ ಪ್ರಾಣಿಯಡೆಗಿನ ವಿಕಸನದ ಕ್ರಿಯೆ.”

ಐದನೆ ಅವತಾರ ‘ವಾಮನ’ ಅವತಾರ. ವಾಮನ ಅಂದರೆ ಕುಳ್ಳಗಿನ ಪ್ರಾಣಿ. ಅದೇ ಪ್ರಾಣಿ ಮುಂದೆ ದೊಡ್ಡದಾಗಿ ಬೆಳೆಯಬಲ್ಲ ಪ್ರಾಣಿಯ ವಿಕಸನ.

ಇದ್ಯಾಕೆ ಗೊತ್ತಾ? ಯಾಕಂದ್ರೆ ಆಗ ಎರಡು ವಿಧದ ಮನುಷ್ಯರಿದ್ದರು. ಒಂದು ಹೋಮೊ ಎರೆಕ್ಟಸ್(Homo Erectus) ಹಾಗು ಹೋಮೋ ಸೇಪಿಯನ್ಸ್(Homo Sepians), ಅವೆರಡರ ಯುದ್ಧದ ಮಧ್ಯೆ ಗೆದ್ದು ಉಳಿದದ್ದು ಹೋಮೋ ಸೇಪಿಯನ್ಸ್.

ಆರನೆಯ ಅವತಾರ ‘ಪರಶುರಾಮ’. ಆ ಮನುಷ್ಯ ಕೋಪಿಷ್ಟ, ಗುಹೆಗಳಲ್ಲಿ ವಾಸಿಸುತ್ತ ಕೈಯಲ್ಲಿ ಆಯುಧವಿಟ್ಟುಕೊಂಡು ಕಾಡಿನಲ್ಲಿ ಬದುಕುತ್ತಿದ್ದ ವ್ಯಕ್ತಿ.

ಏಳನೆಯ ಅವತಾರ ‘ರಾಮ’ಅಂದರೆ ಸಮಾಜದ ಬಗ್ಗೆ ಚಿಂತಿಸುವ ಹಾಗು ಜನಗಳ ಒಳಿತಿಗಾಗಿ ಕಾನೂನುಗಳನ್ನ ತಂದ ಸುಸಂಕೃತ ವ್ಯಕ್ತಿ.

ಎಂಟನೆಯ ಅವತಾರ ‘ಬಲರಾಮ’, ಒಳ್ಳೆ ಕೃಷಿಕ, ಜನರಿಗೆ ಕೃಷಿಯ ಬಗ್ಗೆ ಮನವರಿಕೆ ಮಾಡಿಕೊಟ್ಟಂತಹ ವ್ಯಕ್ತಿಗೆ ‘ಬಲರಾಮ’ನಾಗಿದ್ದ

ಒಂಭತ್ತನೇ ಅವತಾರ ‘ಕೃಷ್ಣ’, ಆತನೊಬ್ಬ ರಾಜಕಾರಣಿ, ರಾಜತಂತ್ರಜ್ಞ, ರಾಯಭಾರಿ, ಪ್ರಕೃತಿ ಪ್ರೇಮಿ, ಜನರನ್ನ ಪ್ರೀತಿಸುವುದನ್ನ ಕಲಿಸಿದಾತ, ಅಧರ್ಮವನ್ನ ಮೆಟ್ಟಿ ನಿಲ್ಲುವ ಪಾಠ ಹೇಳಿಕೊಟ್ಟ ವ್ಯಕ್ತಿ.

ಕೊನೆಯ ಅವತಾರ ‘ಕಲ್ಕಿ’, ನೀನು ಸಂಶೋಧನೆ ಮಾಡಲು ಹೊರಟಿರುವ ಸದ್ಯ ಜೆನೆಟಿಕಲಿ ಶ್ರೇಷ್ಟ ಬುದ್ಧಿಮತ್ತೆ ಹೊಂದಿರುವ ವ್ಯಕ್ತಿ, ಅಂದರೆ ಈಗಿರುವ ಮನುಷ್ಯರು.

ಅಮ್ಮನ ಮಾತನ್ನ ಕೇಳುತ್ತ ದಂಗುಬಡಿದಂತಾಗಿದ್ದ ಮಗ ಹೇಳ್ತಾನೆ “ಅದ್ಭುತ ಅಮ್ಮ, ನಿನಗ್ಹೇಗೆ ಇದರ ಬಗ್ಗೆಯೆಲ್ಲ ತಿಳಿಯಿತು? ಇದೇ ಸಂಶೋಧನೆಯನ್ನೇ ಡಾರ್ವಿನ್ ಮಾಡಿದ್ದ & ಅದರ ಮೇಲೆಯೇ ನಾನೂ ರಿಸರ್ಚ್ ಮಾಡ್ತಿರೋದು”

ಅಮ್ಮ ಹೇಳ್ತಾಳೆ “ಮಗನೇ ಈ ಎಲ್ಲಾ ವಿಷಯಗಳೂ ನಾವು ಭಾರತೀಯರಿಗೆ ಸಾವಿರಾರು ವರ್ಷಗಳಿಂದಲೇ ಪುರಾಣಗಳು ಅನ್ನೋ ಕಥೆಗಳ ಮೂಲಕ ನಮ್ಮ ಋಷಿ ಮುನಿಗಳು ತಿಳಿಸಿ ಹೋಗಿದ್ದಾರೆ, ಆದರೆ ಜಗತ್ತು ಹಾಗು ನಮ್ಮ ದೇಶದ ಜನರೇ ಈ ಪುರಾಣಗಳನ್ನು, ವೇದಗಳನ್ನ, ಉಪನಿಷತ್ತುಗಳನ್ನ, ಸನಾತನ ಗ್ರಂಥಗಳನ್ನ ಹೀಗಳೆಯೋಕೆ ತುದಿಗಾಲಲ್ಲಿ ನಿಂತಿರಬೇಕಾದರೆ ಅವುಗಳಲ್ಲಿ ಅಡಗಿರೋ ಅದ್ಭುತವಾದ ಮಾಹಿತಿಗಳನ್ನು ಜಗತ್ತು ಅರಿಯೋದಾದರೂ ಯಾವಾಗ?

ಜನ ನಮ್ಮ ಗ್ರಂಥಗಳನ್ನು ಒಂದು ಧರ್ಮಕ್ಕೆ ಸೀಮಿತ ಮಾಡಿ ಅವುಗಳು ಹಿಂದುಗಳಿಗೆ ಮಾತ್ರ ಸೀಮಿತವಾದದ್ದು, ಅವುಗಳನ್ನ ಬೇರೆ ಧರ್ಮದ ಮಕ್ಕಳು ಓದಬಾರದು ಅಂತೆಲ್ಲ ನಿರ್ಬಂಧನೆಗಳನ್ನ ಹೇರಿರುವ ಕಾರಣ ಆ ಗ್ರಂಥಗಳಲ್ಲಿ, ಪುರಾಣಗಳಲ್ಲಿರೋ ಜಗತ್ತಿನ ಎಲ್ಲ ಸಂಶೋಧನೆಗಳಿಗೂ ವೈಜ್ಞಾನಿಕವಾದ ಉತ್ತರಗಳು ಹಾಗೆಯೇ ಉಳಿದಿವೆ.

ರೆಡಿಮೇಡ್ ಉತ್ತರಗಳು ನಮ್ಮಲ್ಲೇ ಇಟ್ಟುಕೊಂಡು ನಾವು ಸಂಶೋಧನೆ ಸಂಶೋಧನೆ ಅಂತ ಹೊರಟಿರೋದು ಮಾತ್ರ ದುರ್ದೈವವೇ ಸರಿ”

ಅಮ್ಮನ ಮಾತುಗಳನ್ನು ಕೇಳಿದ ಮಗ ತನ್ನಮ್ಮನ ಪಾದಕ್ಕೆ ನಮಸ್ಕರಿಸಿ ತನ್ನ ವೈಜ್ಞಾನಿಕ ಸಂಶೋಧನೆಗಳಲ್ಲಿ ಭಾರತೀಯ ಪುರಾತನ ಗ್ರಂಥಗಳನ್ನೂ
ಓದಿ ಅರ್ಥೈಸಿಕೊಳ್ಳುತ್ತೇನೆಂದು ತನ್ನ ರಿಸರ್ಚ್ ಲ್ಯಾಬ್ ಕಡೆಗೆ ತೆರಳಿದ.

ಎಂತಹ ಸುಂದರ ಸತ್ಯಗಳು ಹಾಗು ವೈಜ್ಞಾನಿಕ ಮನೋಭಾವನೆಗಳು ನಮ್ಮ ಗ್ರಂಥಗಳಲ್ಲಿವೆಯಲ್ವ?

ಆದರೆ ಇವುಗಳನ್ನು ಓದಿದರೆ ನಮ್ಮದೇ ಜನಗಳಾದ ಬುದ್ಧಿಜೀವಿಗಳು, ಪ್ರಗತಿಪರ, ವಿಚಾರವಾದಿಗಳು ಮಾತ್ರ ನಮ್ಮನ್ನ ಕೋಮುವಾದಿಗಳೆಂದು ಕರೆಯುವುದು ವಿಪರ್ಯಾಸವೇ ಅಲ್ಲವೇ?

ಜಗತ್ತಿನ ಪ್ರತಿಯೊಂದು ಸಮಸ್ಯೆಗೂ ನಮ್ಮ ಸನಾತನ ಗ್ರಂಥಗಳಲ್ಲಿ ಉತ್ತರಗಳಿವೆ, ನಾವು ಅವುಗಳ ಅಧ್ಯಯನ ಮಾಡಿ ಮನುಕುಲದ ಒಳಿತಿಗೆ ಪ್ರಯತ್ನಪಡಬೇಕಷ್ಟೇ.

ನಮ್ಮ ಸನಾತನ ಗ್ರಂಥಗಳು ಇಂದು ನಮಗೆ ಬೇಡವಾಗಿವೆ ಆದರೆ ಪಾಶ್ಚಾತ್ಯ ರಾಷ್ಟ್ರಗಳು ನಮ್ಮ ಗ್ರಂಥಗಳನ್ನು ಪೇಟೆಂಟ್ ಪಡೆದುಕೊಂಡಿವೆ ಅಂದರೆ ನೀವು ನಂಬುತ್ತೀರಾ? ಯೆಸ್ ಅಮೇರಿಕಾ ಹಾಗು ಜರ್ಮನಿ ನಮ್ಮ ದೇಶದ ನಮಗೆ ಬೇಡವಾಗಿರುವ ಗ್ರಂಥಗಳ ಮೇಲೆ ಪೇಟೆಂಟ್ ಪಡೆದು ದುಡ್ಡು ಮಾಡಿಕೊಳ್ಳುತ್ತಿವೆ. ಆದರೆ ನಾವು ಮಾತ್ರ ಅವುಗಳನ್ನು ದೂರ ತಳ್ಳುತ್ತಿದ್ದೇವಡ. ಇನ್ನಾದರೂ ಸನಾತನ ಹಿಂದೂ ಧರ್ಮದ ಪ್ರಾಮುಖ್ಯತೆ ನಮಗರಿವಾಗಲಿ. ಅದಾದರೆ ಭಾರತ ವಿಶ್ವಗುರುವಾಗುವುದನ್ನ ಯಾರೂ ತಪ್ಪಿಸಲಾರು.

 

Tags

Related Articles

Close