ಪ್ರಚಲಿತ

ವಂದೇಮಾತರಂ ಹಾಡು ನಾವು ಹಾಡುವಷ್ಟೇ ಇರೋದಾ.? ಭಾರತಾಂಬೆಯನ್ನು ವರ್ಣಿಸುವ ಅದ್ಭುತ ಸಾಲುಗಳನ್ನು ತುಂಡರಿಸುವಷ್ಟು ಅಸಹಿಷ್ಣುತೆ ಇತ್ತೇ ನಮ್ಮ ರಾಜಕಾರಣಿಗಳಿಗೆ.?

ಇಂದು ಯಾವುದೇ ಮಕ್ಕಳನ್ನು ರಾಷ್ಟ್ರಗೀತೆ ಹಾಡಲು ಹೇಳಿ ಜನಗಣ ಮನ ಹಾಡುತ್ತಾರೆ.ವಂದೇ ಮಾತರಂ ಹಾಡಲು ಹೇಳಿದರೆ ಹಲವಷ್ಟು ಮಕ್ಕಳಿಗೆ ಗೊತ್ತೇ ಇಲ್ಲದಿದ್ದರೆ ಇನ್ನು ಕೆಲವು ಮಕ್ಕಳು ಕೇವಲ ಮೊದಲಿನ ಎರಡು ಪ್ಯಾರಾಗ್ರಾಫ್ ಗಳನ್ನೂ ಹಾಡಿ ಸುಮ್ಮನಾಗುತ್ತಾರೆ. ವಂದೇ ಮಾತರನ್ನು ಬರೆದವರ್ಯಾರೆಂದು ಹೆಚ್ಚಿನ ಮಕ್ಕಳಿಗೆ ತಿಳಿದಿಲ್ಲ. ಒಂದು ಕಾಲದಲ್ಲಿ ಸ್ವಾತಂತ್ರ ಹೋರಾಟಗಾರರ ಉಸಿರಾಗಿದ್ದ ವಂದೇ ಮಾತರಂ ಇಂದು ಮೆಲ್ಲಗೆ ತೆರೆಮರೆಗೆ ಸರಿಯುತ್ತಿದೆ. ಯಾವ ಸಾಲುಗಳನ್ನು ಕೇಳುತ್ತಿದ್ದರೆ ಮಕ್ಕಳಿಂದ ಮುದುಕ ಭಾರತೀಯರ ನರನಾಡಿಗಳು ಎದ್ದು ನಿಲ್ಲುತ್ತಿದ್ದವೋ,ಯಾವ ಹಾಡು ಹಾಡುವಾಗ ರೋಮಾಂಚನದಿಂದ ಕಣ್ಣಂಚು ತೇವಗೊಳ್ಳುತ್ತಿದ್ದವೋ ಇಂದು ಆ ಹಾಡು ಹಲವರ ನೆನಪಿನಿಂದ ಮರೆಯಾಗುತ್ತಿದೆ. ಭಾರತದ ಸ್ವಾತಂತ್ರಕ್ಕಾಗಿ ತಮ್ಮ ಪ್ರಾಣವನ್ನೇ ಬಲಿದಾನವಾಗಿ ಅರ್ಪಿಸಿದ ಅನೇಕ ಪುರುಷ ಸಿಂಹರ ಕೊನೆಯ ಮಾತು ಅಥವಾ ಕೊನೆಯ ಘೋಷಣೆಯು ವಂದೇ ಮಾತರಂ ಎಂಬುದೇ ಆಗಿತ್ತು.೧೯೮೨ ರಲ್ಲಿ ಬಂಕಿಮ ಚಂದ್ರ ಚಟ್ಟೋಪಾಧ್ಯಾಯರು “ ಆನಂದಮಠ” ಎಂಬ ತಮ್ಮ ಬಂಗಾಲೀ ಭಾಷೆಯ ಕಾದಂಬರಿಯಲ್ಲಿ ಸಂಸ್ಕೃತ ಮತ್ತು ಬಂಗಾಳಿ ಭಾಷೆಯಲ್ಲಿ ವಂದೇ ಮಾತರಂ ಗೀತೆಯನ್ನು ರಚಿಸಿದರು.೧೯೦೬ ರಲ್ಲಿ ನರೇಶ್ ಚಂದ್ರ ಸೆನ್ ಗುಪ್ತ ಅವರು ಇದನ್ನು ಆಂಗ್ಲಭಾಷೆಗೆ ಅನುವಾದಿಸಿದರು.೧೯೦೯ ರಲ್ಲಿ ಅರಬಿಂದೋ ಘೋಷ್ ಅವರು ಗೀತೆಯನ್ನು ಗದ್ಯಕ್ಕೆ ಅನುವಾದಿಸಿದರು ೧೯೦೭ ರಲ್ಲಿ ಮೇಡಂ ಭಿಕಾಜಿ ಕಾಮ ಅವರು ರಚಿಸಿದ ಭಾರತೀಯ ಧ್ವಜದ ಮೊದಲ ಆವೃತ್ತಿಯಲ್ಲಿ ವಂದೇ ಮಾತರಂ ಎಂದು ಬರೆಯಲಾಗಿತ್ತು.ಜಂದಾನಾಥ್ ಭಟ್ಟಾಚಾರ್ಯ ಅವರು ಮೊದಲ ಬಾರಿಗೆ ವಂದೇ ಮಾತರಂ ಗೆ ರಾಗ ಸಂಯೋಜನೆ ಮಾಡಿದರು. ಲಾಲಾ ಲಜಪತ್ ರಾಯ್ ಲಾಹೋರ್ನಲ್ಲಿ ಪ್ರಾರಂಭಿಸಿದ ಪತ್ರಿಕೆಗೆ ವಂದೇ ಮಾತರಂ ಎಂಬ ಹೆಸರನ್ನೇ ಇರಿಸಿದ್ದರು.

ಇಷ್ಟೆಲ್ಲಾ ಇತಿಹಾಸವಿರುವ ವಂದೇ ಮಾತರಂ ಗೀತೆಯನ್ನು ಪೂರ್ತಿಯಾಗಿ ಅರಿತಿರುವುದು ನಮ್ಮೆಲ್ಲರ ಕರ್ತವ್ಯ.ಬಂಕಿಮಚಂದ್ರರು ಬರೆದಿರುವ ಸಂಪೂರ್ಣವಾದ ವಂದೇ ಮಾತರಂ ಗೀತೆಯು ಹೀಗಿದೆ.

ವಂದೇಮಾತರಂ ಸುಜಲಾಂ
ಸುಫಲಾಂ ಮಲಯಜ ಶೀತಲಾಂ
ಸಸ್ಯ ಶ್ಯಾಮಲಾಂ ಮಾತರಂ !!ವಂದೇ ಮಾತರಂ!!

೧. ಶುಬ್ರಜ್ಯೋತ್ಸ್ನಾ ಪುಳಕಿತ ಯಾಮಿನೀಂ
ಪುಲ್ಲಕುಸುಮಿತ ಧೃಮದಲ ಶೋಭಿನೀಂ
ಸುಹಾಸಿನೀಂ ಸುಮಧುರ ಭಾಷಿಣೀಮ್
ಸುಖದಾಂ ವರದಾಂ ಮಾತರಂ!! ವಂದೇ ಮಾತರಂ!!

೨. ಕೋಟಿ ಕೋಟಿ ಕಂಠ ಕಾಲಕಾಲನಿನಾದ ಕರಾಲೇ
ಕೋಟಿ ಕೋಟಿ ಭುಜೈಧೃತ ಖರ ಕರವಾಲೇ
ಅಬಲಾ ಕೆನೋ ಮಾ ಏತೋ ಬಲೇ
ಬಹುಬಲಧಾರಿಣೀಮ್ ನಮಾಮಿ ತಾರಿಣೀಮ್
ರಿಪುದಲ ವಾರಿಣೀಮ್ ಮಾತರಂ!! ವಂದೇ ಮಾತರಂ!!

೩. ತುಮಿ ವಿದ್ಯಾ ತುಮಿ ಧರ್ಮ
ತುಮಿ ಹೃದಿ ತುಮಿ ಮರ್ಮ
ತ್ವಂಹಿ ಪ್ರಾಣಃ ಶರೀರೇ
ಬಾಹುತೇ ತುಮಿ ಮಾ ಶಕ್ತಿ
ಹೃದಯೇ ತುಮಿ ಮಾ ಭಕ್ತಿ
ತೋಮಾರಾಯಿ ಪ್ರತಿಮಾ ಗಡಿ
ಮಂದಿರೇ ಮಂದಿರೇ!! ವಂದೇ ಮಾತರಂ!!

೪. ತ್ವಂ ಹಿ ದುರ್ಗಾ ದಶಪ್ರಹರಣ ಧಾರಿಣೀ
ಕಮಲಾ ಕಮಲದಲವಿಹಾರಿಣೀ
ವಾಣೀ ವಿದ್ಯಾದಾಯಿನೀ
ನಾಮಾಮಿತ್ವಾಮ್ ನಮಾಮಿ ಕಾಮಲಾಂ
ಅಮಾಲಾಂ ಅತುಲಾಂ
ಸುಜಲಾಂ ಸುಫಲಾಂ ಮಾತರಂ !! ವಂದೇ ಮಾತರಂ!!

೫. ಶ್ಯಾಮಲಾಂ ಸರಲಾಂ ಸುಸ್ಮಿತಾಂ ಭೂಷಿತಾಂ
ಧರಣೀಮ್ ಭರಣೀಮ್ ಮಾತರಂ!!ವಂದೇ ಮಾತರಂ!!

ತಾಯಿ ಭಾರತ ಮಾತೆಯನ್ನು ವಿವಿಧರೀತಿಯಲ್ಲಿ ವರ್ಣಿಸಲಾಗುವ ಸಾಲುಗಳಿವು.ಭಾರತದ ಸ್ವಾತಂತ್ರಸಂಗ್ರಾಮದಲ್ಲಿ ಕ್ರಾನಿಯನ್ನೆಬ್ಬಿಸಿದ್ದ ಈ ಗೀತೆಯ ಸೃಷ್ಟಿಯು ಒಂದು ಅಧ್ಭುತ. ಬಂಕಿಮ ಚಂದ್ರ ಚಟರ್ಜಿಯವರು ಒಮ್ಮೆ ರೈಲಿನಲ್ಲಿ ಪಯಣಿಸುತ್ತಿದ್ದಾಗ ನೋಡಿದ ಪ್ರಕೃತಿ ಸೌಂದರ್ಯವು ಅವರನ್ನು ಮೈಮರೆಯುವಂತೆ ಮಾಡಿತು. ಭಾರತ ಮಾತೆ ತನ್ನೆಲ್ಲ ಸೌಂದರ್ಯದೊಂದಿಗೆ ಮೆರೆಯುತ್ತಿದ್ದಾಳೆಂಬ ಕಲ್ಪನೆಯೇ ಅವರ ಕವನಕ್ಕೆ ಕಾರಣವಾಯಿತು. ೧೮೭೫ ರಲ್ಲೇ ರಚಿತವಾದರೂ ಆನಂದಮಠ ಕಾದಂಬರಿಯಲ್ಲಿ ಕಾಣಿಸಿಕೊಳ್ಳುವ ವರೆಗೂ ಈ ಗೀತೆಯು ಜನಪ್ರಿಯತೆಯನ್ನು ಪಡೆದಿರಲಿಲ್ಲ.ಸನ್ಯಾಸಿಗಳು ಬ್ರಿಟೀಷರವಿರುದ್ದ ಬಂಡಾಯವೇಳುವ ಕಥಾವಸ್ತುವನ್ನು ಹೊಂದಿದ್ದ ಈ ಕಾದಂಬರಿಯನ್ನು ಬ್ರಿಟೀಷ್ ಸರಕಾರವು ಬ್ಯಾನ್ ಮಾಡಿತ್ತು. “ ತಾಯೆ, ನಿನಗೆ ನಮಿಸುವೆ.ಸಮೃದ್ಧವಾದ ನದಿಗಳಿಂದ,ಫಲ ಪುಷ್ಪಗಳಿಂದ,ಮಲಯಾ ಪರ್ವತದಿಂದ ಬೀಸಿ ಬರುವ ಶೀತಲ ಮಾರುತಗಳಿಂದ ಸಸ್ಯಶಾಮಲೆಯಾಗಿ ಶೋಭಿಸುತ್ತಿರುವ ನಿನಗೆ ವಂದಿಸುವೆ. ಶುಭ್ರವಾದ ಬೆಳದಿಂಗಳಿಂದ ಸಂಪನ್ನವಾದ ಇರುಳುಗಳು,ಮರಗಳಲ್ಲಿ ಬಿಟ್ಟ ಚಿಗುರು ಹೂವುಗಳಿಂದ ಶೋಭಿಸುವ, ಮುಗುಳು ನಗೆಯುಳ್ಳ,ಸುಮಧುರವಾದ ರೀತಿಯಲ್ಲಿ ಸಂಭಾಷಿಸುವ,ಸುಖಪ್ರದಾಯಿನಿಯಾದ,ವರವನ್ನು ನೀಡಲು ಶಕ್ತಿಯುಳ್ಳ ನಿನ್ನ ಅಡಿಗಳಿಗೆ ನಮಿಸುತ್ತೇನೆ” ಎಂಬುದು ಅತ್ಯಂತ ಪ್ರಸಿದ್ಧ ಮೊದಲೆರಡು ಚರಣಗಳ ಅರ್ಥವಾಗಿದೆ.

ಇಷ್ಟು ಅಮೋಘವಾಗಿ ತಾಯಿ ಭಾರತಿಯನ್ನು ವರ್ಣಿಸಿರುವ ಗೀತೆಯೊಂದು ಮರೆಯಾಗುತ್ತಾ ಸಾಗುತ್ತಿದೆ. ಕಳೆದ ಕೆಲವು ವರ್ಷಗಳಿಂದ ಕತ್ತರಿ ಪ್ರಯೋಗಗೊಂಡು ಕೇವಲ ಎರಡು ಚರಣಗಳಿಗೆ ಇಳಿಸಲ್ಪಟ್ಟಿರುವ ಗೀತೆಯು ಮುಂದೊಂದುದಿನ ನಮ್ಮ ನಡುವಿಂದ ಮಾಯವಾದರೂ ಅಚ್ಚರಿ ಇಲ್ಲ. ಆದ್ದರಿಂದ ಇಂದಿನಿಂದಲೇ ನಾವು ಮನೆಯಲ್ಲಿ ಮಕ್ಕಳಿಗೆ ಪೂರ್ಣ ವಂದೇ ಮಾತರಂ ಗೀತೆಯನ್ನು ಕಂಠಪಾಠ ಮಾಡಿಸೋಣ.ಸ್ವಾತಂತ್ರ ಹೋರಾಟಗಾರರ ಉಸಿರಾಗಿದ್ದ ಗೀತೆಯೊಂದು ಮರೆತುಹೋಗಬಾರದೆಂಬ ಉದ್ದೇಶವು ಸದಾ ನಮ್ಮ ಮನದಲ್ಲಿರಲಿ. ರವೀಂದ್ರನಾಥ್ ಟ್ಯಾಗೋರ್ ರಿಗೆ ಸಲ್ಲಿಸುವ ಗೌರವವನ್ನು ನಾವು ಬಂಕಿಮಚಂದ್ರ ಚಟರ್ಜಿ ಎಂಬ ಮಹಾ ಕವಿಗೂ ಸಲ್ಲಿಸೋಣ..ಕತ್ತೆಗೇನು ಗೊತ್ತು ಕಸ್ತೂರಿ ಪರಿಮಳ ಎಂಬಂತೆ ಯಾರೋ ಅಲ್ಪ ಬುದ್ದಿಯ ಜನರು ವಂದೇ ಮಾತರಂ ಅನ್ನು ಹಾಡುವುದಿಲ್ಲ ಎಂದು ಬೊಬ್ಬೆ ಹೊಡೆಯುತ್ತಿದ್ದಾರೆ.ಹೆತ್ತ ತಾಯಿಗೂ ಹೊತ್ತ ತಾಯಿಗೂ ಪೊರೆಯುತ್ತಿರುವ ಭಾರತ ಮಾತೆಗೂ ನಮಸ್ಕರಿಸುವುದಕ್ಕೂ ವಂದನೆ ಸಲ್ಲಿಸುವುದಕ್ಕೂ ಕಷ್ಟ ಎನ್ನುವವರನ್ನು ಆ ದೇವರಿಗೂ ಸುಧಾರಿಸಲು ಸಾಧ್ಯವಿಲ್ಲ.. ಸಾವಿರ ಓವೈಸಿಗಳು ವಿರೋಧಿಸಿದರೂ ಭಾರತದ ಧ್ವಜ ಬಾನೆತ್ತರದಲ್ಲಿ ಹಾರಾಡುವಂತೆ ವಂದೇ ಮಾತರಂ ಗೀತೆಯೂ ಹಾಡಲ್ಪಡುತ್ತದೆ..ಏಕೆಂದರೆ ವಂದೇ ಮಾತರಂ ಕೇವಲ ಹಾಡಲ್ಲ..ಅದೊಂದು ಭಾವನೆ..ಅದೊಂದು ಭಕ್ತಿ…ಅದೊಂದು ಗೌರವ ಮತ್ತು ಅದೊಂದು ಪ್ರೀತಿ..

-Deepashree M

Tags

Related Articles

FOR DAILY ALERTS
Close