ಪ್ರಚಲಿತ

ಮಾಜೀ ಮುಖ್ಯಮಂತ್ರಿಗಳು ಇನ್ನೂ ಎಚ್ಚೆತ್ತುಕೊಳ್ಳದೆ ಹೋದಲ್ಲಿ ಮುಂಬರುವ ಚುನಾವಣೆಯ ವೇಳೆಗೆ ಪ್ರಾದೇಶಿಕ ಪಕ್ಷವು ಅಸ್ಥಿತ್ವ ಕಳೆದುಕೊಂಡು ‘ಇತರರು‘ ಎಂಬ ಹೆಸರಿನೊಂದಿಗೆ ಸ್ಪರ್ಧಿಸಬೇಕಾದೀತು.

ನಮಗೆಲ್ಲರಿಗೂ ತಿಳಿದಿರುವಂತೆ ಭಾರತವು ಪ್ರಪಂಚದಲ್ಲೇ ಅತ್ಯಂತ ದೊಡ್ಡ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಹೊಂದಿರುವ ದೇಶ..ಅತ್ಯಂತ ದೊಡ್ಡ ಸಂವಿಧಾನವೂ ನಮ್ಮದೆಂಬ ಹೆಮ್ಮೆಯೂ ನಮಗಿದೆ.ಸಂವಿಧಾನ ಶಿಲ್ಪಿ ಎಂದು ನಾವು ಅಂಬೇಡ್ಕರರನ್ನು ಗೌರವಿಸುತ್ತೇವೆ. ಸಂವಿಧಾನವು ನಮಗೆ ಹಲವಾರು ಹಕ್ಕುಗಳನ್ನು ನೀಡಿದೆ,ಹಾಗೆಯೇ ನಮ್ಮ ಕರ್ತವ್ಯಗಳನ್ನೂ ನೀಡುತ್ತದೆ..ಹಿಂದೂಗಳೇ ಬಹು ಸಂಖ್ಯಾತರಾಗಿರುವ ರಾಷ್ಟ್ರವನ್ನು ಜಾತ್ಯಾತೀತ ರಾಷ್ಟ್ರವನ್ನಾಗಿಸಿದರು.. ಎಲ್ಲಾ ಕ್ಷೇತ್ರಗಳಲ್ಲಿ ಮೀಸಲಾತಿಯನ್ನು ತುಂಬಿದರು..ಸಾಮಾನ್ಯ ಭಾರತೀಯ ಈ ಯಾವುದೇ ವಿಚಾರಕ್ಕೂ ತಲೆ ಕೆಡಿಸಿಕೊಳ್ಳಲಿಲ್ಲ..ಅಲ್ಪ ಸಂಖ್ಯಾತರಿಗೆ ಮೀಸಲಾತಿ,ಹಿಂದುಳಿದ ವರ್ಗದವರಿಗೆ ಮೀಸಲಾತಿ…ಆದರೆ ಆರ್ಥಿಕವಾಗಿ ಹಿಂದುಳಿದ ಮೇಲ್ವರ್ಗದ ವಿದ್ಯಾರ್ಥಿಗಳು ಹಣ ನೀಡಿ ವಿದ್ಯಾಭ್ಯಾಸ ಮುಂದುವರೆಸಲೂ ಸಾಧ್ಯವಾಗದೆ,ಇತ್ತ ಮೀಸಲಾತಿಯಿಂದಾಗಿ ತಮಗಿಂತ ಕಡಿಮೆ ಅಂಕ ಗಳಿಸಿದ ವಿದ್ಯಾರ್ಥಿ ತನ್ನ ಸೀಟ್ ಪಡೆಯುವುದನ್ನು,ತನಗೆ ದೊರಕಬೇಕಾದ ನೌಕರಿ ಬೇರೆಯವರಿಗೆ ದೊರಕುವುದನ್ನು ನೋಡಿಯೂ ಸುಮ್ಮನಿದ್ದರು..ಆದರೂ ಕೆಸರೆರಚುವುದು ಮೇಲ್ವರ್ಗದವರೆಂದು ಕರೆಸಿಕೊಳ್ಳುವ ಜಾತಿಯ ಮೇಲೆಯೇ ಏಕೆ?? ಆರೆಸ್ಸೆಸ್ ಮತ್ತು ಬಿಜೆಪಿ ಯನ್ನು ದಲಿತ ವಿರೋಧಿ ಎನ್ನುವುದು ಮೇಲ್ವರ್ಗದವರ ಪಕ್ಷ ಎನ್ನುವುದು ಇವೆಲ್ಲದರ ಹಿಂದೆಯೂ ಬ್ರಿಟಿಷರಿಂದ ಎರವಲು ಪಡೆದಿರುವ ಒಡೆದು ಆಳುವ ನೀತಿಯಿದೆ ಎಂಬುದು ಇಂತಹಾ ಮೂರ್ಖನಿಗೂ ಅರ್ಥವಾಗುವ ವಿಚಾರ..ಮೀಸಲಾತಿ,ಒಡೆದು ಆಳುವ ನೀತಿಗಳನ್ನೆಲ್ಲಾ ಪಕ್ಕಕ್ಕಿರಿಸಿ ನೋಡಿದರೆ ಸಂವಿಧಾನವು ರಾಜಕೀಯ ವಿಚಾರಗಳಲ್ಲೂ ಸ್ಪಷ್ಟತೆಯನ್ನು ಹೊಂದಿದೆ.ರಾಜಕೀಯ ಪಕ್ಷಗಳ ಕುರಿತಾಗಿಯೂ ರಾಷ್ಟ್ರೀಯ ಪಕ್ಷ ಮತ್ತು ಪ್ರಾದೇಶಿಕ ಪಕ್ಷಗಳ ಕುರಿತಾಗಿಯೂ ಅನೇಕ ವಿವರಗಳನ್ನು ಸಂವಿಧಾನದಲ್ಲಿ ವಿವರಿಸಲಾಗಿದೆ.

ಯಾವುದೇ ಒಂದು ರಾಜಕೀಯ ಪಕ್ಷವು ರಾಷ್ಟ್ರೀಯ ಪಕ್ಷವೆಂಬ ಹಣೆಪಟ್ಟಿ ಹೊಂದಲು ಮೂರು ವಿವಿಧ ರಾಜ್ಯಗಳಲ್ಲಿ ೨% ಸೀಟ್ ಗಳನ್ನು ಗೆಲ್ಲಬೇಕು, ಜನರಲ್ ಎಲೆಕ್ಷನ್ ನಲ್ಲಿ ಲೋಕಸಭೆಯಲ್ಲಿ ನಾಲ್ಕು ಅಥವಾ ಅದಕ್ಕಿಂತ ಹೆಚ್ಚು ರಾಜ್ಯಗಳಲ್ಲಿ ೪ ಸೀಟ್ ಗೆಲ್ಲುವುದರೊಂದಿಗೆ ೬% ಕ್ಕಿಂತ ಹೆಚ್ಚು ಮತಗಳಿಕೆಯನ್ನೂ ಹೊಂದಿರಬೇಕು..ಈ ಎರಡು ನಿಬಂಧನೆಗಳೊಂದಿಗೆ ಪಕ್ಷವು ನಾಲ್ಕು ರಾಜ್ಯಗಳಲ್ಲಿ ಪ್ರಾದೇಶಿಕ ಪಕ್ಷವೆಂಬ ಹೆಸರನ್ನೂ ಹೊಂದಿರಬೇಕು.ಭಾರತದಲ್ಲೀಗ ೮ ರಾಷ್ಟ್ರೀಯ ಪಕ್ಷಗಳಿವೆ ತೃಣಮೂಲ ಕಾಂಗ್ರೆಸ್,ಬಹುಜನ ಸಮಾಜವಾದೀ ಪಾರ್ಟಿ,ಭಾರತೀಯ ಜನತಾ ಪಕ್ಷ,ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ,ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ(ಮಾರ್ಕಿಸ್ಟ್),ಇಂಡಿಯನ್ ನ್ಯಾಷನಲ್ ಕಾಂಗ್ರೆಸ್,ನ್ಯಾಷನಲ್ ಪೀಪಲ್ ಪಾರ್ಟಿ..ಆದರೆ ಇದರಲ್ಲಿ ಕಮ್ಯುನಿಸ್ಟ್ ಪಾರ್ಟಿ ಬಹಷ್ಟು ಕಡೆ ತನ್ನ ಅಸ್ತಿತ್ವನನ್ನು ಕಳೆದುಕೊಂಡು ಈಗ ಕೇರಳದಲ್ಲಿ ಮಾತ್ರ ಅಸ್ತಿತ್ವವನ್ನು ಹೊಂದಿದೆ.

ಯಾವುದೇ ಒಂದು ಪಕ್ಷವು ರಾಜ್ಯ ಪಕ್ಷವೆಂಬ ಹೆಸರನ್ನು ಹೊಂದಬೇಕಾದರೆ ಪಕ್ಷವು ರಾಜ್ಯದ ಚುನಾವಣೆಯಲ್ಲಿ ೩% ಸೀಟ್ ಅಥವಾ ಕಡಿಮೆಯೆಂದರೆ ೩ ಸೀಟ್ ಗಳನ್ನು ಗೆಲ್ಲಬೇಕು,ಲೋಕಸಭಾ ಚುನಾವಣೆಯಲ್ಲಿ ಪ್ರತೀ ೨೫ ರಲ್ಲಿ ಒಂದು ಸೀಟ್ ಗೆಲ್ಲಬೇಕು,ಲೋಕಸಭೆಯ ಚುನಾವಣೆಯ ಚುನಾವಣಾ ಅಥವಾ ರಾಜ್ಯದ ಚುನಾವಣೆಯಲ್ಲಿ ೬% ಮತಗಳಿಕೆಯನ್ನು ಹೊಂದಿರಬೇಕು ಅಷ್ಟು ಮಾತ್ರವಲ್ಲದೆ ೧ ಲೋಕಸಭೆ ಮತ್ತು ಎರಡು ವಿಧಾನಸಭೆಯ ಸೀಟ್ಗಳನ್ನು ಗೆಲ್ಲಬೇಕು.ಅಷ್ಟು ಮಾತ್ರವಲ್ಲದೆ ವಿಧಾನಸಭಾ ಚುನಾವಣೆಯಲ್ಲಿ ೮% ಮತಗಳಿಕೆಯನ್ನು ಹೊಂದಿರಬೇಕು. ಆಮ್ ಆದ್ಮಿ ಪಾರ್ಟಿ,ಪೀಪಲ್ ಡೆಮೊಕ್ರೆಟಿಕ್ ಫ್ರಂಟ್,ರಾಷ್ಟ್ರೀಯ ಜನತಾದಳ,ಸಮಾಜವಾದೀ ಪಕ್ಷ,ಶಿವ ಸೇನಾ,ತೆಲುಗುದೇಶಂ ಪಾರ್ಟಿ,ಜನತಾದಳ ಪಕ್ಷ..ಪ್ರಮುಖ ಪ್ರಾದೇಶಿಕ ಪಕ್ಷಗಳು.

ಇಷ್ಟೆಲ್ಲಾ ಪಕ್ಷಗಳ ಕುರಿತಾದ ಸಂವಿಧಾನದ ನೀತಿಗಳನ್ನು ಗಮನಿಸಿದಾಗ,ಪ್ರಾದೇಶಿಕ ಪಕ್ಷಗಳ ಪಟ್ಟಿಯನ್ನು ಗಮನಿಸಿದಾಗ ಕರ್ನಾಟಕವು ಕೇವಲ ಒಂದೇ ಪ್ರಾದೇಶಿಕ ಪಕ್ಷವನ್ನು ಹೊಂದಿದೆ…ಅದುವೇ ಜನತಾದಳ.೧೯೯೯ ರಲ್ಲಿ ಹೆಚ್.ಡಿ ದೇವೇಗೌಡರಿಂದ ಸ್ಥಾಪಿಸಲ್ಪಟ್ಟ ಪಕ್ಷವಿದು..ಅರುಣಾಚಲ ಪ್ರದೇಶ ಮತ್ತು ಕರ್ನಾಟಕದಲ್ಲಿ ನೋಂದಾಯಿಸಲ್ಪಟ್ಟಿರುವ ಈ ಪಕ್ಷವು ೧೯೯೯ ರಲ್ಲಿ ಜನತಾದಳವು ವಿಭಜಿಸಲ್ಪಟ್ಟಾಗ ಮಾಜಿ ಪ್ರಧಾನಿ ದೇವೇಗೌಡರಿಂದ ಸ್ಥಾಪಿಸಲ್ಪಟ್ಟಿತು.ಕೇರಳದಲ್ಲಿ ಈ ಪಕ್ಷವು ಕಮ್ಮ್ಯುನಿಸ್ಟ್ ಪಕ್ಷದೊಂದಿಗೆ ಮೈತ್ರಿಯನ್ನು ಹೊಂದಿದೆ.ಜೆಡಿಎಸ್ ಎಂಬುದರ ಎಸ್ ಎಂದರೆ ಸೆಕ್ಯುಲರ್..ಈ ಪಕ್ಷವು ಲೋಕಸಭೆಯಲ್ಲಿ ೫೪೩ ರಲ್ಲಿ ಒಂದು ಸೀಟ್,ಕೇರಳದ ವಿಧಾನಸಭೆಯಲ್ಲಿ ೩ ಸೀಟ್ ಮತ್ತು ಕರ್ನಾಟಕ ವಿಧಾನಸಭೆಯಲ್ಲಿ ೩೪ ಸೀಟ್ ಗಳನ್ನು ಹೊಂದಿದೆ. ಇದನ್ನೆಲ್ಲಾ ಬದಿಗಿರಿಸಿ ನೋಡಿದರೆ ದಕ್ಷಿಣ ಕನ್ನಡದಲ್ಲಾಗಲಿ ಉಡುಪಿಯಲ್ಲಾಗಲಿ ಉತ್ತರ ಕನ್ನಡ ಜಿಲ್ಲೆಗಳಲ್ಲಾಗಲೀ ಜೆಡಿಎಸ್ ಪಕ್ಷವು ಅಸ್ತಿತ್ವವನ್ನೇ ಹೊಂದಿಲ್ಲ.ಕಾಂಗ್ರೆಸ್ ನೊಂದಿಗೆ ಸೇರಿಕೊಂಡು ಸರಕಾರ ರಚಿಸಿ ಮುಖ್ಯಮಂತ್ರಿಗಳಾಗಿದ್ದ ಕುಮಾರಸ್ವಾಮಿ ಕಣ್ಣೀರುಹಾಕದೆ ಒಂದೇ ಒಂದು ಸಭೆಯನ್ನು ನಡೆಸಿಲ್ಲ.ಮೊದಲಿಗೆ ನಾನು ಕರ್ನಾಟಕ ಜನರ ಅಲ್ಲ ಬದಲಾಗಿ ರಾಹುಲ್ ಗಾಂಧಿ ಮತ್ತು ಸೋನಿಯಾ ಗಾಂಧಿಯ ಮುಲಾಜಿನಲ್ಲಿದ್ದೇನೆ ಎಂದು ಹೇಳುವುದರಿಂದ ಪ್ರಾರಂಭಿಸಿ ಒಂದಕ್ಕಿಂತ ಒಂದು ವಿವಾದಾತ್ಮವ ಹೇಳಿಕೆಗಳನ್ನು ನೀಡುತ್ತಾ ಸಾಗಿದರು.

ಒಂದು ಬಾರಿ ಕಾಂಗ್ರೆಸ್ ನನಗೆ ಕೆಲಸ ಮಾಡಲು ಬಿಡುತ್ತಿಲ್ಲ ಎಂದರೆ ಮತ್ತೊಂದುಬಾರಿ ನಾನು ಪರಿಸ್ಥಿತಿಯ ಕೂಸು ಎಂದರು.ಪ್ರತಿಷ್ಠೆಗಾಗಿ ಲೋಕಸಭಾ ಚುನಾವಣೆಗೆ ಮಂಡ್ಯದಿಂದ ತನ್ನ ಮಗನನ್ನು ನಿಲ್ಲಿಸಿ ಸುಮಲತಾ ಅಂಬರೀಷ್ ಅನ್ನು ಸೋಲಿಸಲು ಪಡಬಾರದ ಪಾಡು ಪಟ್ಟರು,ಸುಮಲತಾ ಪರವಾಗಿ ಪ್ರಚಾರಕ್ಕೆ ಬಂದ ನಟರಿಬ್ಬರನ್ನು ಜೋಡೆತ್ತುಗಳೆಂದು ಕರೆದರು..ಇಷ್ಟೆಲ್ಲಾ ಆಗುವಾಗ ಜನರು ಇವರ ಪಕ್ಷವನ್ನು ಕುಟುಂಬ ಪಕ್ಷವೆಂದು ಕರೆಯಲು ಪ್ರಾರಂಭಿಸಿದರು.ಯಾವ ಕಾರ್ಯಕರ್ತರ ಶ್ರಮದಿಂದಾಗಿ ಇವರ ಕುಟುಂಬವು ಅಧಿಕಾರವನ್ನು ಅನುಭವಿಸುತ್ತಿದೆಯೋ ಅಂತಹಾ ಕಾರ್ಯಕರ್ತರನ್ನೇ ಸೋಂಬೇರಿಗಳು ಎಂದರು.ದಕ್ಷಿಣ ಕನ್ನಡ ಜಿಲ್ಲೆಯವರನ್ನು ಅಸುಶಿಕ್ಷಿತರು ಎಂದೂ ಕರೆದರು.ತಮ್ಮ ಪಕ್ಷದ ಕಾರ್ಯಕರ್ತರ ಸುದ್ದಿಗೆ ಬಂದು ಮುಂದೇನಾದರೂ ಅನಾಹುತವಾದರೆ ನನ್ನನ್ನು ಕೇಳಬೇಡಿ ಎಂದು ಪೊಲೀಸರಿಗೆ ಧಮಕಿ ಹಾಕಿದ ಮೊದಲ ಮುಖ್ಯ ಮಂತ್ರಿ ಎನಿಸಿಕೊಂಡರು.ತಮ್ಮ ಪಕ್ಷದ ಕಾರ್ಯಕರ್ತರು ಕೊಲೆಯಾದಾಗ,ಕೊಲೆಗಾರರನ್ನು ಕೊಂದು ಹಾಕಿ ಎಂದು ಪೊಲೀಸರಿಗೆ ಆಜ್ಞಾಪಿಸಿದರು..ಇದೆಲ್ಲಾ ಅವರ ಸರಕಾರವಿದ್ದಾಗದ ವಿಚಾರಗಳಾದರೆ,ಬಿಜೆಪಿ ಸರಕಾರ ಅಧಿಕಾರಕ್ಕೆ ಬಂದಬಳಿಕ ಅವರು ಮಾಡುತ್ತಿರುವುದು ರಾಜಕಾರಣದ ಅಸಹ್ಯ ರೂಪವನ್ನು.

ಮೊನ್ನೆ CAA ವಿರುದ್ದದ ಮಂಗಳೂರಿನಲ್ಲಿ ನಡೆದ ಪ್ರತಿಭಟನೆಯ ಸಂದರ್ಭದಲ್ಲಿ ಪ್ರತಿಭಟನೆಯು ಗಲಭೆಯಾಗಿ ಮಾರ್ಪಡುವ ಹಂತದಲ್ಲಿ ಪೊಲೀಸರು ಗುಂಡುಹಾರಿಸಿದಾಗ ಇಬ್ಬರು ಬಲಿಯಾದರು. ಗುಂಡು ಹಾರಿಸಬೇಕಾಗಿ ಬಂದುದರ ಅನಿವಾರ್ಯತೆಯನ್ನು ಪೊಲೀಸರು ಸ್ಪಷ್ಟಪಡಿಸಿದರು ಮಾತ್ರವಲ್ಲದೆ ಅದಕ್ಕೆ ಪೂರಕ ಅನೇಕ ವಿಡಿಯೋ ಗಳನ್ನೂ ಬಿಡುಗಡೆ ಮಾಡಿದ್ದರು. ಇಷ್ಟರಲ್ಲೇ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಆ ವಿಡಿಯೋಗಳು ಮಂಗಳೂರಿನದ್ದೇ ಎನ್ನಲು ಏನು ಸಾಕ್ಷ್ಯವಿದೆ? ಬೆಂಗಳೂರಿನಲ್ಲಿ ಲಕ್ಷ ಜನರು ಸೇರಿದರೂ ಶಾಂತಿಯುತವಾಗಿ ಪ್ರತಿಭಟನೆ ನಡೆದಿತ್ತು ಮಂಗಳೂರಿನಲ್ಲೇಕೆ ವಿಕೋಪಕ್ಕೆ ಹೋಯಿತು?ಮಂಗಳೂರನ್ನು ಕೋಮು ಪ್ರಯೋಗಶಾಲೆಯನ್ನಾಗಿಸಿರುವ ಬಿಜೆಪಿ ಇಬ್ಬರು ಅಮಾಯಕರನ್ನು ಏಕೆ ಬಲಿ ತೆಗೆದುಕೊಂಡಿತು?ಕಲ್ಲು ತೂರಾಟಕ್ಕೆ ತಂಡ ವಾಹನದ ವಿಡಿಯೋ ಮಂಗಳೂರಿನ ಗಲಭೆಯದ್ದೋ ಅಥವಾ ಬೇರೆಡೆಯದ್ದೋ?ಸರಕಾರದ ಕುಮ್ಮಕ್ಕಿನಿಂದ ಪೊಲೀಸರೇ ಪಿತೂರಿ ನಡೆಸಿದ್ದಾರೆ ಇತ್ಯಾದಿ ಟ್ವಿಟ್ ಗಳನ್ನು ಮಾಡಿ ಪೊಲೀಸರನ್ನೇ ತಪ್ಪಿತಸ್ಥರನ್ನಾಗಿ ಮಾಡಲು ಹೊರಟರು..ಇದಾದ ಬಳಿಕ ಬೆಂಗಳೂರಿನಲ್ಲಿ ವರುಣ್ ಎಂಬಾತನ ಮೇಲೆ ನಡೆದ ಮಾರಣಾಂತಿಕ ಹಲ್ಲೆಯ ಹಿಂದೆ ಚಿಂತಕ ಚಕ್ರವರ್ತಿ ಸೂಲಿಬೆಲೆ ಮತ್ತು ಯುವ ಸಂಸದ ತೇಜಸ್ವಿ ಸೂರ್ಯರ ಹತ್ಯೆಯ ಸಂಚಿತ್ತು ಎಂಬುದನ್ನು ಬಹಿರಂಗಪಡಿಸಿ ಹಿಂದೂ ಮುಖಂಡರ ಕೊಲೆಯ ಸಂಚು ನಡೆಸುತ್ತಿದ್ದ ೬ ಕೊಲೆಗಾರರನ್ನು ಬಂಧಿಸಿದಾಗಲೂ ಇಂಥದ್ದೇ ಅವಿವೇಕತನದ ಹೇಳಿಕೆ ನೀಡಿದ್ದಾರೆ..ತೇಜಸ್ವಿ ಸೂರ್ಯ ಮತ್ತು ಸೂಲಿಬೆಲೆಯನ್ನು ಕೊಳ್ಳಲು ಅವರೇನು ಯುಗ ಪುರುಷರೇ ಎಂದು ಲೇವಡಿ ಮಾಡಿದ್ದಾರೆ.ಅವರಿಬ್ಬರೂ ದೇಶಭಕ್ತರೂ ಅಲ್ಲ ಹುತಾತ್ಮರಾಗಲು ಹೋದವರೂ ಅಲ್ಲ ಇವರೇನು ಸಾಧನೆ ಮಾಡಿದ್ದಾರೆಂದು ಅವರ ಕೊಲೆಗೆ ಯತ್ನಿಸುತ್ತಿದ್ದಾರೆ ಎಂದು ಕೂಡಾ ಪ್ರಶ್ನಿಸಿದ್ದಾರೆ.

ಅಷ್ಟೇ ಅಲ್ಲದೆ ಯಾರೋ ಮಾಡಿದ ಕೃತ್ಯಕ್ಕೆ ಒಂದು ಸಮುದಾಯದ ಮೇಲೆ ತಪ್ಪು ಹೊರಿಸಬಾರದೆಂಬ ಧರ್ಮೋಪದೇಶವನ್ನೂ ಮಾಡಿದ್ದಾರೆ.ಅಷ್ಟೇ ಅಲ್ಲದೆ ಮಂಗಳೂರಿನ ಹಿಂಸಾಚಾರದ ವಿಡಿಯೋ ಬಿಡುಗಡೆ ಮಾಡಿದ್ದೇನೆ ಅಲ್ಲಿನ ಮೂವರು ಅಧಿಕಾರಿಗಳನ್ನು ಅಮಾನತು ಮಾಡಬೇಕು ಇಲ್ಲದಿದ್ದರೆ ಸದನ ನಡೆಸಲು ಬಿಡುವುದಿಲ್ಲವೆಂಬ ಧಮಕಿಯನ್ನೂ ನೀಡಿದ್ದಾರೆ.ನಿನ್ನೆ ಮಂಗಳೂರಿನ ವಿಮಾನ ನಿಲ್ದಾಣದಲ್ಲಿ ಬಾಂಬ್ ದೊರಕಿತು,ಪೊಲೀಸ್ ಮತ್ತು ಯೋಧರ ಸಮಯೋಜಿತ ಕಾರ್ಯಕ್ಕೆ ಬೆನ್ನು ತಟ್ಟುವ ಬದಲಾಗಿ “ ಪೊಲೀಸರು ತನಿಖೆ ನಡೆಸದೆ ೧೫ ದಿನಗಳ ನಂತರ ಅಮಾಯಕರನ್ನು ಬಂಧಿಸುತ್ತಾರೆ.ಪೊಲೀಸರು ಸುಳ್ಳು ಕಥೆಗಳನ್ನು ಸೃಷ್ಟಿಸುತ್ತಾರೆ,ನಾನು ಪೊಲೀಸರನ್ನು ನಂಬುವುದಿಲ್ಲ “ ಎಂದು ಹೇಳಿದ್ದಾರೆ..ಕಣ್ಣೀರು ಹಾಕಿ,ಸುಳ್ಳು ಭರವಸೆ ನೀಡಿ ಚುನಾವಣೆ ಗೆದ್ದಷ್ಟು ಸುಲಭವಲ್ಲ ತನಿಖೆ ನಡೆಸಿ ತಪ್ಪಿತಸ್ಥರನ್ನು ಹಿಡಿಯುವುದು.ಅಮಾಯಕರನ್ನು ಬಂಧಿಸಿದರೆ ನ್ಯಾಯಾಲಯದಲ್ಲಿ ಸಾಕ್ಷ್ಯ ನೀಡಬೇಕು ಇಲ್ಲದಿದ್ದರೆ ನ್ಯಾಯಾಲಯ ಪೊಲೀಸರಿಗೆ ಛೀಮಾರಿ ಹಾಕುತ್ತದೆ..ಜೆಡಿಎಸ್ ನ ಎಸ್ ಅಂದರೆ ಸೆಕ್ಯುಲರ್ ಅಂತೇ….ಇವರ ಜಾತ್ಯಾತೀತ ಜನತಾದಳದ ಜಾಸ್ತ್ಯಾತೀತ ತತ್ವ ಒಂದು ಸಮುದಾಯದವರಿಗೆ ಮಾತ್ರ ಅನ್ವಯವಾಗುತ್ತದೆ..ಇನ್ನಾದರೂ ಬದಲಾಗಿ,ಮಾಡಿದ ತಪ್ಪು ತಿದ್ದಿಕೊಳ್ಳದಿದ್ದಲ್ಲಿ ಮುಂಬರುವ ಚುನಾವಣೆಯ ಫಲಿತಾಂಶದಲ್ಲಿ ಜೆಡಿಎಸ್ ನ ಬದಲಾಗಿ ಇತರರು ಎಂಬ ಹೆಸರಿನೊಂದಿಗೆ ಸ್ಪರ್ಧಿಸಬೇಕಾದೀತು…

-Deepashree M

Tags

Related Articles

FOR DAILY ALERTS
Close