ಪ್ರಚಲಿತ

ಇತಿಹಾಸದಲ್ಲೇ ಮೊದಲ ಬಾರಿಗೆ ಬಂತು ಕಣ್ತೆರೆಸುವ ಚಿತ್ರ: ಪರ ವಿರೋಧ ಯಾಕೆ?

ದೇಶದಾದ್ಯಂತ ‘ದಿ ಕೇರಳ ಸ್ಟೋರಿ’ ಚಲನಚಿತ್ರ ಸಂಚಲನ ಮೂಡಿಸಿದೆ. ಕೇರಳದಲ್ಲಿ ಕೆಲವು ಹಿಂದೂ ಯುವತಿಯರ ಮತಾಂತರ, ಅವರನ್ನು ಭಯೋತ್ಪಾದಕರನ್ನಾಗಿಸಿದ್ದು, ನೈಜ ಘಟನೆಯ ಚಲನಚಿತ್ರದ ಮೂಲಕ ಸಾರ್ವಜನಿರಕಲ್ಲಿ ಜಾಗೃತಿ ಮೂಡಿಸಲು ಹೊರಟಿದ್ದು ಈ ಚಿತ್ರಕ್ಕೆ ಪ್ರಚಾರದ ಜೊತೆಗೆ ಪ್ರಖ್ಯಾತಿ ತಂದು ಕೊಟ್ಟಿದೆ ಎನ್ನುವುದು ಸತ್ಯ.

ಈ ಚಲನಚಿತ್ರ ಪ್ರೇಕ್ಷಕರಿಂದಲೂ ಸಹ ಬಿ ಬಾ ಸ್‌ ಗಿರಿ ಪಡೆದಿದ್ದು, ಹಿಂದೂಗಳಲ್ಲಿ ಮತಾಂತರದ ಕರಾಳತೆಯ ಬಗ್ಗೆ, ಮತಾಂತರದ ಬಳಿಕ ಎದುರಿಸಬೇಕಾಗುವ ಆಪತ್ತು – ವಿಪತ್ತುಗಳ ಬಗ್ಗೆ ಒಂದು ಬಗೆಯ ಎಚ್ಚರಿಕೆಯನ್ನು ಮೂಡಿಸುವಲ್ಲಿ ಸಫಲವಾಗಿದೆ ಎನ್ನುವುದರಲ್ಲಿ ಎರಡು ಮಾತಿಲ್ಲ.

ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಪಡೆದಿರುವ ಈ ಚಿತ್ರದ ಬಗ್ಗೆ ಚಿತ್ರದ ನಾಯಕಿ ಅದಾ ಶರ್ಮ ಅವರು ಪ್ರತಿಕ್ರಿಯೆ ನೀಡಿದ್ದು, ಈ ಚಲನಚಿತ್ರ ಸಮಾಜದಲ್ಲಿ ಮೂಡಿಸಿರುವ ಎಚ್ಚರಿಕೆಯಿಂದ ಅನೇಕ ಯುವತಿಯರ ಜೀವ ಉಳಿಯಲಿದೆ. ಈ ಚಿತ್ರಕ್ಕಾಗಿ ನಮಗೆ ದೊಡ್ಡ ಮಟ್ಟದ ಬೆಂಬಲ ದೊರೆತಿದ್ದು, ಇದಕ್ಕಾಗಿ ನಾವು ಕೃತಜ್ಞರಾಗಿದ್ದೇವೆ ಎಂದು ಹೇಳಿದ್ದಾರೆ. ಇಡೀ ದೇಶವೇ ನಮ್ಮ ತಂಡಕ್ಕೆ ಬೆಂಬಲ ನೀಡಿದೆ. ಹಾಗೆಯೇ ಈ ಚಿತ್ರದಲ್ಲಿ ನಾನು ನಿರ್ವಹಿಸಿರುವ ಪಾತ್ರ ಭಾವನಾತ್ಮಕವಾಗಿ ಮತ್ತು ದೈಹಿಕವಾಗಿ ಹೆಚ್ಚು ಭಯಮಿಶ್ರಿತವಾಗಿತ್ತು‌. ಈ ಭಯ ಈಗಲೂ ಆಳವಾಗಿ ಬೇರೂರಿದೆ ಎಂದು ಅದಾ ಹೇಳಿದ್ದಾರೆ.

ಒಟ್ಟಿನಲ್ಲಿ ಮತಾಂತರ, ಲವ್ ಜಿಹಾದ್, ಭಯೋತ್ಪಾದನೆ ಹೀಗೆ ಹತ್ತು ಹಲವು ಸಾಮಾಜಿಕ ಪಿಡುಗುಗಳು ಮತ್ತು ಮುಖ್ಯವಾಗಿ ಹಿಂದೂ ಧರ್ಮದ ಮೇಲೆ ಹೆಚ್ಚು ಅಪಾಯವನ್ನು ತಂದೊಡ್ಡಬಲ್ಲ, ಹಿಂದೂ ಯುವತಿಯರನ್ನು ಬಲಿ ಪಡೆಯಬಲ್ಲ ವಿಷಯಗಳ ಬಗ್ಗೆ ಹಲವಾರು ಚಿತ್ರಗಳು, ಜಾಗೃತಿ ಕಾರ್ಯಕ್ರಮಗಳು ಬರುತ್ತಲೇ ಇವೆ. ದಿ ಕೇರಳ ಸ್ಟೋರಿ ಚಿತ್ರವಂತೂ ಮತಾಂತರ, ಭಯೋತ್ಪಾದನೆ ಸುಳಿಯಲ್ಲಿ ಸಿಕ್ಕು ಬದುಕು ಕಳೆದುಕೊಂಡ ಹಿಂದೂ ಬೆನ್ ಮಕ್ಕಳ ರೋಗ ನೆಯ ಮೂಲಕ ಉಳಿದ ಹಿಂದೂ ಯುವತಿಯರಿಗೆ ಎಚ್ಚರಿಕೆಯ ಸಂದೇಶವನ್ನು ನೀಡಿದೆ ಎನ್ನುವುದರಲ್ಲಿ ಎರಡು ಮಾತಿಲ್ಲ.

Tags

Related Articles

Close