ಪ್ರಚಲಿತ

ನ್ಯಾಯ ಸಿಗಬೇಕು, ಹೌದು!ತ್ವರಿತವಾಗಿ ಸಿಗಬೇಕು, ಖಂಡಿತ! ಆದರೆ ನ್ಯಾಯ ಇಂತಹವರ ಪರವಾಗಿಯೇ ಇದೆ ಎಂದು ನಿರ್ಧರಿಸಿಕೊಂಡೇ ತನಿಖೆಗೆ ಇಳಿಯುವುದು, ಹೇಗೆ ಸರಿ?! ಮಂಗಳೂರಿನಲ್ಲೊಂದು ಅಣಕು ತನಿಖೆ!

ಪೌರತ್ವ ತಿದ್ದುಪಡಿ ಮಸೂದೆ,
ಉಭಯ ಸದನಗಳಲ್ಲಿ ಚರ್ಚೆಯಾಗಿ, ಸಂಸದರ, ರಾಜ್ಯಸಭಾ ಸದಸ್ಯರುಗಳ ಬೆಂಬಲ ಸಿಕ್ಕ ಬಳಿಕ, ರಾಷ್ಟ್ರಪತಿಯವರ ಅಂಕಿತವೂ ಬಿದ್ದು ಕಾಯ್ದೆಯಾಗಿ ಮಾರ್ಪಾಡಾಗಿದೆ. ನಮ್ಮಲ್ಲಿ ಕೆಲವು ಜನರ ಮನಸ್ಥಿತಿಯೇ ವಿಚಿತ್ರ ತಮಗೆ ಬೇಕಾದ, ತಮ್ಮ ಒಲವಿರುವ ಸಿದ್ಧಾಂತವನ್ನು ಬೆಂಬಲಿಸುವ ಪಕ್ಷ ಎಂತದ್ದೇ ಕಾನೂನು ತರಲು ಅದೊಂದು ಕ್ರಾಂತಿ. ಆದರೆ ಯಾರನ್ನು ಇವರುಗಳು ಅಸಹಿಷ್ಣು ಎನ್ನುತ್ತಾರೋ ಅವರ ಬಗ್ಗೆ ಇವರುಗಳ ಅಸಹಿಷ್ಣುತೆ ಯಾವ ಮಟ್ಟಕ್ಕೆ ಇರುತ್ತದೆ ಎಂದರೆ, ಯಾವುದೇ ಯೋಜನೆ ಬರಲಿ, ಕಾನೂನೇ ತರಲಿ, ಎಲ್ಲದಕ್ಕೂ ವಿರೋಧ. ಹೇಳಿಕೊಳ್ಳಲು, ಪತ್ರಕರ್ತರು, ಚಿಂತಕರು, ಪ್ರಗತಿಪರರು ಎಂಬೆಲ್ಲಾ ಬುದ್ಧಿವಂತ ಹೆಸರುಗಳು ಆದರೆ ಕನಿಷ್ಠ ಯೋಜನೆಯಾಗಲೀ, ಕಾಯ್ದೆ ಆಗಲಿ ಯಾವ ವಿಚಾರವನ್ನು ಮಂಡಿಸುತ್ತದೆ ಎಂದು ಓದಿ ತಿಳ್ಕೊಂಡು ಮಾತನಾಡುವ ಬುದ್ಧಿಯೇ ಇವರಿಗಿಲ್ಲ.
ಮುಚ್ಚು ಮರೆಯೇನು? ಇವರುಗಳಿಗೆ ಮೋದಿ ಅಂದ್ರೆ ಆಗಲ್ಲ, ಅಮಿತ್ ಷಾ ಬೇಡವೇ ಬೇಡ. ಎಲ್ಲಕ್ಕಿಂತ ಮುಖ್ಯ ವಿಷಯ ಅಂದ್ರೆ, ಇವರ್ಯರಿಗು ಹಿಂದೂ ಒಬ್ಬ ಜಾಗೃತನಾಗೋದು ಬೇಕಿರಲಿಲ್ಲ.
ಇಂತಹ ಕೆಲವು ಜನರೇ ಈಗ ಮಂಗಳೂರಿಗೆ ಕಾಲಿಟ್ಟಿದ್ದಾರೆ, ಸ್ವತಂತ್ರ ಸತ್ಯ ಶೋಧನೆಯ ಮಹತ್ ಕಾರ್ಯ ಹುಡುಕಿ ಕೊಂಡು. ಪ್ರಶ್ನೆ ಮಾಡಬೇಕು ಅಂತಾನೂ ಇಲ್ಲ, ಎಡ ಪಂಥೀಯ ಧೋರಣೆಯನ್ನು ಬೆಂಬಲಿಸುವ ಹಿರಿಯ ಪತ್ರಕರ್ತರು, ನ್ಯಾಯವಾದಿಗಳು ಬಂದಿದ್ದಾರೆ. ಅವರು ಸತ್ಯವನ್ನು ತೆಗೆಯುತ್ತಾರೆ ಅಂತೆ! ತೆಗೆಯಲಿ ಒಳ್ಳೆಯದೇ, ಅಂದು ಶಾಂತವಾಗಿದ್ದ ಮಂಗಳೂರಿನಲ್ಲಿ ಬೆಂಕಿ ಹಚ್ಚಿದವರು ಯಾರೂ ಎಂದು ಎಲ್ಲರಿಗೂ ಇನ್ನೂ ಸ್ಪಷ್ಟವಾಗಿ ತಿಳಿಯಲಿ. ಆದರೆ ಇವರ ಉದ್ದೇಶ ಸತ್ಯವನ್ನು ತಿಳಿಯುವುದು ಎಂದು ನಮಗೇಕೋ ಅನ್ನಿಸುತ್ತಿಲ್ಲ.
ಸತ್ಯ ಶೋಧನೆಯ ಬಂದವರು ನಾಣ್ಯದ ಎರಡು ಮುಖಗಳನ್ನು ನೋಡಬೇಕಿತ್ತು, ಅದು ಬಿಟ್ಟು ಮಂಗಳೂರಿಗೆ ಬಂದು, ಗಲಭೆಯಲ್ಲಿ ಮೃತಪಟ್ಟವರ ಕುಟುಂಬವನ್ನು ಆಹ್ವಾನಿಸಿ, ಅವರ ಪರವಾಗಿ ಸಾಮಾಜಿಕ ಕಾರ್ಯಕರ್ತರು ವಕಾಲತ್ತು ನಡೆಸುವ ಅವಕಾಶ ಮಾಡಿಕೊಟ್ಟರು. ಪೊಲೀಸರು ಕೊಲ್ಲಲೆಂದೇ ಗುಂಡು ಚಲಾಯಿಸಿದ್ದಾರೆ ಎನ್ನುತ್ತಾನೆ ಆತ. ಅವನ ಮಾತನ್ನು ಯಾವುದೇ ವಿರೋಧ ವ್ಯಕ್ತಪಡಿಸದೆ ಆಲಿಸಿದ ಇವರಿಂದ ಯಾವ ರೀತಿಯ ಸತ್ಯ ಶೋಧನೆಯನ್ನು ನಿರೀಕ್ಷಿಸಬಹುದು ನೀವೇ ಯೋಚಿಸಿ!
ಮಂಗಳೂರನ್ನು ಅಕ್ಷರಶಃ ಕಾಶ್ಮೀರದ ರೀತಿಯಲ್ಲಿ ಬದಲಾಯಿಸಿದ ಗಲಭೆ ಕೋರರಿಗೆ ಕಾನೂನಿನ ನೆರವು ನೀಡುವ ಉದ್ದೇಶ ವಂತೆ ಇವರದ್ದು. ಮುಖಕ್ಕೆ ಬಟ್ಟೆ ಕಟ್ಟಿಕೊಂಡು ಬಂದು, ಸಿಸಿಟಿವಿ ಕ್ಯಾಮರಾಗಳನ್ನು ಹಾಳುಮಾಡಿ ಗಲಭೆ ಎಬ್ಬಿಸಿ, ಗೂಡ್ಸ್ ಆಟೋ ಒಂದರಲ್ಲಿ ಕಲ್ಲು ತುಂಬಿಕೊಂಡು ಬಂದು ಪೊಲೀಸರತ್ತ ಎಸೆದರಲ್ಲಾ, ಕಂಡ ಕಂಡ ವಾಹನಗಳಿಗೆ ಬೆಂಕಿ ಇಟ್ಟರಲ್ಲ ಆ ವಾಹನ ಮಾಲೀಕರನ್ನು ಭೇಟಿಯಾಗಿ ಮಾತಡಬೇಕಿತ್ತು.
ಮಾತೆತ್ತಿದರೆ ಸಂವಿಧಾನ, ನ್ಯಾಯ, ನೀತಿ. ಮಂಗಳೂರು ಗೋಲಿಬಾರ್ ಪ್ರಕರಣ ಕುರಿತು ಮಾಜಿ ಸ್ಟ್ರೇಟ್ ತನಿಖೆ ಈಗಾಗಲೇ ಪ್ರಾರಂಭಗೊಂಡಿದೆ. ಪ್ರಕರಣವನ್ನು ಸಿಐಡಿ ತನಿಖೆಗೆ ಒಪ್ಪಿಸಲಾಗಿದೆ. ಸಂವಿಧಾನದ ಮಾರ್ಗ ಸೂಚಿಯಂತೆ ನಡೆಯುತ್ತಿರುವ ಈ ತನಿಖೆ ಮೇಲೆ ನಿಮಗೆ ಇಲ್ಲದ ಭರವಸೆ, ಸಂವಿಧಾನದ ಮೇಲಿದೆ ಎಂದರೆ ಯಾರು ನಂಬುತ್ತಾರೆ ಸ್ವಾಮಿ?
ಸುಗತ ಶ್ರೀನಿವಾಸರಾಜು ಅವರೇ ನೀವೊಬ್ಬ ಹಿರಿಯ ಪತ್ರಕರ್ತರು ತಾನೇ? ಸಾಮಾಜಿಕ ನ್ಯಾಯ ಎಂದರೆ ಬರೀ ಅಲ್ಪ ಸಂಖ್ಯಾತರ ನ್ಯಾಯ ಎಂದು ಅದು ಹೇಗೆ ಭಾವಿಸಿಕೊಂಡು ಬಂದಿರಿ? ಸತ್ತವ ಹಿಂದುವಾದರೆ ನಿಮ್ಮ ತನಿಖೆಯೂ ಇಲ್ಲ, ಪತ್ರಿಕೆಗಳಲ್ಲಿ ಉದ್ದುದ್ದ ಲೇಖನವೂ ಇಲ್ಲ. ತನಿಖೆ ಮಾಡಿ, ಮಾಡಿದ ತನಿಖೆಯ ವರದಿಯನ್ನು ಕೊಡಿ ಸ್ವಾಮಿ, ಮೈಸೂರು ರೂಸ್ಟ್ ರೆಸಾರ್ಟ್ ಬಗ್ಗೆ ನಿಮ್ಮ ತನಿಖೆ ಎಲ್ಲಿಯವರೆಗೆ ಬಂತು? ಒಂದು ತನಿಖೆ ನೀವು ಸುವರ್ಣ ಮಾಧ್ಯಮದಿಂದ ಹೊರಬಂದ ಬಗ್ಗೆಯೂ ಮಾಡಿನೋಡಿ.
ತನಿಖೆ ಮಾಡಲು ವಿಷಯಗಳು ಬೇಕೆ ಬೇಕಾಷ್ಟಿವೆ, ನಿಮ್ಮೊಂದಿಗೆ ಉತ್ತಮ ಸಂಬಂಧ ಹೊಂದಿದ್ದ ಮಾಜಿ ಮುಖ್ಯಮಂತ್ರಿಗಳ, ಮಾಜಿ ಮಾಧ್ಯಮ ಸಲಹೆಗಾರರು, ಸಾಮಾನ್ಯ ಜನರನ್ನು ಅವರ ವಾಕ್ ಸ್ವಾತಂತ್ರವನ್ನು ತುಳಿದ ಬಗ್ಗೆಯೂ ನಡೆಯಲಿ ಒಂದು ತನಿಖೆ. ಅದೇನು ವಿಶೇಷ ನೌಶಾದ್ ಎಂಬ ಹೆಸರಲ್ಲಿ, ರುದ್ರೇಶ್ ಎಂಬ ಹೆಸರಲ್ಲಿ ಇಲ್ಲದ್ದು? ಶರತ್ ಬಗ್ಗೆ ಯಾವ ತನಿಖೆ ಕೈಗೊಂಡು ಯಾವ ಕ್ರಮ, ಯಾವ ನ್ಯಾಯಕ್ಕೆ ಒತ್ತಾಯ ಮಾಡಿದಿರಿ ನಮಗೂ ಹೇಳಿ ನೋಡೋಣ.
ಶರತ್ ಶವವನ್ನು ಆಸ್ಪತ್ರೆಯಲ್ಲಿ ಒಂದು ಇಡೀ ದಿನ ಕೊಳೆಹಾಕಲಾಯಿತು. ಸಿದ್ಧರಾಮಯ್ಯ ನವರ ಕಾರ್ಯಕ್ರಮ ಮುಗಿದ ಮತ್ತೆ ಆತನ ಸಾವಿನ ಸುದ್ಧಿ ಹೊರ ನೀಡಿದರು. ಆತನಿಗಾಗಿ ಮಾತನಾಡಲು ಯಾವ ಕೈ ನಿಮ್ಮ ಬಾಯಿ ಮುಚ್ಚಿಸಿತ್ತು?
ಪತ್ರಕರ್ತರಾದ ನಾವು ಪತ್ರಕರ್ತರಾಗಿ ವ್ಯವಹರಿಸಬೇಕು. ಸುದ್ದಿ, ಸಿದ್ಧಾಂತ, ವಿಚಾರ, ವಿಸ್ಮಯ ಮತ್ತು ವೃತ್ತಿ ಸಂಕಷ್ಟಹಂಚಿಕೊಳ್ಳಲು ನಾವು ಸ್ವತಂತ್ರ ಗುಂಪು, ಸಂಸ್ಥೆಗಳನ್ನು ಪೋಷಿಸಬೇಕೇ ಹೊರತು, ಜಾತಿ, ಧರ್ಮ, ರಾಜಕೀಯ ಪಕ್ಷಗಳನ್ನಾಧರಿಸಿದ ಗುಂಪುಗಳನ್ನಲ್ಲ.  ಈ ಮಾತುಗಳನ್ನು ಹೇಳಿದವರು ನೀವೇ ಅಲ್ಲವೇ ಸುಗತ ಶ್ರೀನಿವಾಸರಾಜು ರವರೇ, ಮತ್ತೆ ಈಗೇಕೆ ಕೇವಲ ಒಂದು ಗುಂಪಿನ ಅಹವಾಲು ಕೇಳಲು ಮಂಗಳೂರಿಗೆ ಬಂದಿದ್ದು?
ಮಾಜಿಸ್ಟ್ರೇಟ್ ತನಿಖೆ ನಡೆಯುತ್ತಿದೆ. ಸಿಐಡಿ ತನಿಖೆಗೆ ಮಂಗಳೂರಿನ ಗಲಭೆ ಪ್ರಕರಣವನ್ನು ಹಸ್ತಾಂತರಿಸಲಾಗಿದೆ.
ಅವರ್ಯಾರೂ ಕೇವಲ ಒಂದು ಕಡೆಯ ಜನರ ಪರವಾಗಿ ತನಿಖೆ ನಡೆಸುವುದಿಲ್ಲ. ಜನತಾ ಅದಾಲತ್ ಎಂದು ಹೇಳಿಕೊಂಡು, ಗಲಭೆ ಮಾಡಿದವರ ಪರ ಮಾತ್ರ ನಿಂತರೆ ಹೇಗೆ? ಗಲಭೆಯಿಂದ ಇಡೀ ಮಂಗಳೂರು ಸ್ತಬ್ಧವಾಯಿತಲ್ಲಾ, ಸಾರ್ವಜನಿಕರ ಆಸ್ತಿ ಪಾಸ್ತಿಗೆ ಹಾನಿ ಆಯಿತಲ್ಲ ಅದರ ಬಗ್ಗೆ ಏಕೆ ಮಾತನಾಡುವುದಿಲ್ಲ?
ಅಂದು ಪೊಲೀಸ್ ಕಮಿಷನರ್ ಮಾತಿಗೆ ಇಡೀ ಮಂಗಳೂರು ಸ್ಪಂದಿಸಿತು. ಎಲ್ಲರೂ ತಮ್ಮ ಬಳಿ ಇದ್ದ ಗಲಭೆಯ ಫೋಟೋ ಹಾಗೂ ವಿಡಿಯೋಗಳನ್ನು ಹಂಚಿಕೊಂಡಿದ್ದಾರೆ. ಅವುಗಳಲ್ಲಿ ನೋಡಿ ನೀವು ಇಂದು ಯಾರ ಪರ ನಿಲ್ಲಲು ಬಂದಿದ್ದಿರೋ ಅವರ ಹಣೆಬರಹ!
ಸರಿ, ನಿಮ್ಮ ಪ್ರಕಾರ ಕೆಲವು ವಿಡಿಯೋ ಸಾಕ್ಷಿಗಳು ಇಲ್ಲ ಎಂದೇ ಇಟ್ಟುಕೊಂಡರು, ನೀವು ಅದರ ಮಾತನಾಡ ಬೇಕಾದ್ದು ಪೊಲೀಸರ ಬಳಿ, ಗಲಭೆಯಲ್ಲಿ ಭಾಗಿಯದವರನ್ನೇ ಕೇಳಿದರೆ ನಿಮಗೆ ಸತ್ಯ ತಿಳಿಯುತ್ತಾ? ಹೋಗಲಿ ಬಿಡಿ ಇರುವ ವಿಡಿಯೋಗಳ ಬಗ್ಗೆ ಮಾತೆತ್ತದೇ ಬರೀ ತಮ್ಮ ಪೂರ್ವಗ್ರಹ ನಿಲುವುಗಳಿಗೆ, ನ್ಯಾಯ ನೀಡುವ ಮುಖವಾಡ ತೊಡಿಸಿ, ಯಾರನ್ನು ಮೂರ್ಖರನ್ನಾಗಿಸುವ ಪ್ರಯತ್ನ ನಡೆಯುತ್ತಿದೆ?
ಸ್ವತಂತ್ರ ಪತ್ರಕರ್ತರೇ ಉತ್ತರಿಸಿ!
ನೀವು ಮಂಗಳೂರಿಗೆ ಬಂದ ಉದ್ದೇಶ ಸ್ಪಷ್ಟ. ಅಂದು ಮಂಗಳೂರನ್ನು ರಕ್ಷಿಸಿದ, ದೊಡ್ಡ ಅನಾಹುತ ಒಂದನ್ನು ತಪ್ಪಿಸಿದ ಮಂಗಳೂರು ಪೊಲೀಸರಿಗೆ ಅಭೂತಪೂರ್ವ ಬೆಂಬಲ ರಾಜ್ಯಾದ್ಯಂತ ವ್ಯಕ್ತವಾಯಿತು. ನೀವು ಅಮಾಯಕ ಎಂದು ಬಿಂಬಿಸಲು ಹೊರಟ ಮನುಷ್ಯ ಮುಖಕ್ಕೆ ಬಟ್ಟೆ ಕಟ್ಟಿಕೊಂಡು ಇರುವಾಗಲೇ ಪೊಲೀಸರ ಗುಂಡು ಅವನಿಗೆ ತಾಗಿತ್ತು. ಗಲಭೆ ನಿರತರ ನಿಜವಾದ ಬಂಡವಾಳ ಎಲ್ಲರ ಕಣ್ಣೆದುರಿಗೆ ಇತ್ತು, ಹಾಗಾಗಿ ನೀವೊಂದು ವ್ಯವಸ್ಥಿತ ಷಡ್ಯಂತ್ರವನ್ನು ರೂಪಿಸಿಕೊಂಡೇ ಬಂದಿದ್ದೀರಾ! ಇಲ್ಲಿ ಬಂದು ಸ್ವತಂತ್ರ ತನಿಖೆ ಎನ್ನುವುದು, ಅದಕ್ಕೆ ಸಂವಿಧಾನದಲ್ಲಿ ಅವಕಾಶವಿದೆ ಎನ್ನುವುದು. ತಮಗೆ ಬೇಕಾದವರ ಮಾತ್ರ ಗುಂಪು ಕಟ್ಟಿಕೊಂಡು ಅವರಲ್ಲಿ ಅಭದ್ರತೆ ಮೂಡುವ ಹಾಗೆ ಮಾಡುವುದು ಅವರಿಂದ Victim card ಆಟ ಆಡಿಸುವುದು. ಜೀವ ರಕ್ಷಕರಾಗಿ ಬಂದ ಪೊಲೀಸರ ಮೇಲೆ ಗೂಬೇ ಕೂರಿಸುವ ಪ್ರಯತ್ನ ಮಾಡುವುದು.
ನಿಮ್ಮ ನಿಲುವುಗಳು ನಿಮಗೇ ಇರಲಿ, ನಿಮ್ಮ ವಿರೋಧ ಮೋದಿ ಬಗ್ಗೆ, ಹಿಂದೂಗಳ ಬಗ್ಗೆ, ನಿಮ್ಮ ನಿಲುವು ಎಡ ಪಂಥೀಯ ಸರಿ ಇರಲಿ ಹೋಗಲಿ, ಆದರೆ, ಮೋದಿ ವಿರೋಧ ಮಾಡುವ ಭರಾಟೆಯಲ್ಲಿ ಸಮಾಜ ಘಾತುಕ ಶಕ್ತಿಗಳ ಕೈ ಬಲ ಪಡಿಸದೇ ಇರಿ! ದೇಶಾದ್ಯಂತ ನಿಮ್ಮ ನಾಟಕಗಳು ಮಕಾಡೆ ಮಲಗಿವೆ. ಈಗಲೂ ಅದೇ ಆಗಲಿದೆ.
ಮಂಗಳೂರು ಪೊಲೀಸರ ಬೆಂಬಲಕ್ಕಿದೆ ಹೊರತು, ಅವರ ಮೇಲೆ ಕಲ್ಲು ತೂರಿ ಇಡೀ ನಗರದ ನೆಮ್ಮದಿ ಹಾಳು ಮಾಡಿದವರ ಜೊತೆಯಲ್ಲ.
ಕೊನೆ ಮಾತು,
ದೀಪಕ್ ರಾವ್ ಎಂಬ ಅಮಾಯಕನನ್ನು ನಡು ಬೀದಿಯಲ್ಲಿ ಕೊಚ್ಚಿ ಕೊಲ್ಲಲಾಗಿತ್ತು. ಅಂದು ನಿಮ್ಮನ್ನು ಅಹವಾಲು ಸ್ವೀಕರಿಸಿ ದೀಪಕ್ ಮನೆಯವರ ಜೊತೆ ಮಾತನಾಡಿದ್ದು ನಾವಂತೂ ನೋಡಿಲ್ಲ. ನಿಮ್ಮ ಜನತಾ ನ್ಯಾಯಾಲಯದಲ್ಲಿ, ಜನತೆ ಎಂದರೆ ಒಂದು ಕೋಮಿಗೆ ಸೇರಿದ ಜನ ಅಷ್ಟೇ ಹಾಗಾಗಿ ಅಲ್ಲಿ ನ್ಯಾಯವು ಮರೀಚಿಕೆ!

Tags

Related Articles

FOR DAILY ALERTS
Close