ದೇಶ

ಇತಿಹಾಸದಲ್ಲಿ ಮೊದಲ ಬಾರಿಗೆ ಭಾರತೀಯ ರೈಲ್ವೆಗೆ ಬಂತು ಸುವರ್ಣ ಯುಗ!! ಮೋದಿ ಸರಕಾರದಲ್ಲಿ ರೈಲ್ವೆಗೆ ಬಂತು ಅಚ್ಚೆ ದಿನ್!! ಕಂಡು ಕೇಳರಿಯದ ರೀತಿಯಲ್ಲಾಯ್ತು ರೈಲ್ವೆಯ ಕಾಯಕಲ್ಪ!!

67,368-ಕಿಲೋಮೀಟರ್ ಮಾರ್ಗದಲ್ಲಿ 121,407 ಕಿಲೋಮೀಟರ್ ಟ್ರ್ಯಾಕ್ ಹೊಂದಿರುವ ಭಾರತೀಯ ರೈಲ್ವೆ ವಿಶ್ವದ ನಾಲ್ಕನೇ ಅತಿದೊಡ್ಡ ರೈಲ್ವೆ ನೆಟ್ವರ್ಕ್ ಎನ್ನುವ ಹೆಗ್ಗಳಿಕೆ ಪಾತ್ರವಾಗಿದೆ. ದೇಶದ ಸಾರಿಗೆ ವ್ಯವಸ್ತೆಯ ಬೆನ್ನುಲುಬೆ ಭಾರತೀಯ ರೈಲ್ವೆ. ಅದೊಂದು ಕಾಲವಿತ್ತು ಭಾರತೀಯ ರೈಲುಗಳು ಕಿತ್ತೋದ ಹಳೆ ಚಪ್ಪಲಿಯಂತಿದ್ದವು. ಊರುಗೋಲು ಹಿಡಿದು ನಡೆಯುವ ಅಜ್ಜನಂತೆ ನಿಧಾನವಾಗಿ ಸಾಗುತ್ತಿದ್ದವು. ಹೆಚ್ಚು ಕಡಿಮೆ ಎಲ್ಲಾ ರೈಲುಗಳು ಗಬ್ಬು ನಾರುತ್ತಿದ್ದವು. ಹಿಂದಿನ ಸರಕಾರಗಳ ಘೋರ ನಿರ್ಲಕ್ಯಕ್ಕೊಳಗಾಗಿದ್ದ ರೈಲ್ವೆ ಇಲಾಖೆಯಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿತ್ತು. ಭಾರತೀಯ ರೈಲ್ವೆ ಎಂದರೆ ಮೂಗು ಮುರಿಯುವ ಕಾಲವಿತ್ತು. ಆದರೆ ಯಾವಾಗ ಮೋದಿ ಸರಕಾರ ಬಂತೋ ಭಾರತೀಯ ರೈಲ್ವೆಯ ಕಾಯಾಕಲ್ಪವಾಯಿತು.

ಭಾರತೀಯ ರೈಲ್ವೆಯ ಇತಿಹಾಸದಲ್ಲಿ ಇಂತಹ ಸ್ವರ್ಣಯುಗ ದಾಖಲಾಗಿರಲಿಕ್ಕಿಲ್ಲ. ವಿಮಾನವೂ ನಾಚಬೇಕು ಅಂಥ ಸೌಲಭ್ಯಗಳು ಭಾರತೀಯ ರೈಲ್ವೆಯಲ್ಲಿ ಲಭ್ಯ, ಅದೂ ಕೂಡಾ ಕೈಗೆಟಕುವ ಬೆಲೆಯಲ್ಲಿ!! ಇಚ್ಚಾಶಕ್ತಿಯೊಂದಿದ್ದರೆ ಅಸಾಧ್ಯವಾದನ್ನೂ ಸಾಧಿಸಬಹುದೆನ್ನುವುದಕ್ಕೆ ಮೋದಿಯೆ ಸಾಕ್ಷಿ.

ರೈಲ್ವೆಯ ಕಾಯಕಲ್ಪದ ಪರಿ ನೋಡಿ

ವೇಗ: 2014ರ ವರೆಗೂ ಆಮೆಗತಿಯಲ್ಲಿ ಸಾಗುತ್ತಿದ್ದ ರೈಲುಗಳೀಗ ಚಿರತೆಯಂತೆ ಓಡಲಿವೆ!! ಭಾರತದ ಅತಿವೇಗದ ರೈಲು ಶತಾಬ್ದಿ ಎಕ್ಸ್ಪ್ರೆಸ್ ನ ಗರಿಷ್ಠ ವೇಗ 75 ಕಿಮೀ / ಗಂ. ಇಡಿಯ ದೇಶದಲ್ಲೆ ಇದುವೆ ಅತಿ ಹೆಚ್ಚು ವೇಗ ಹೊಂದಿರುವ ಏಕೈಕ ರೈಲು. ಆದರೆ 300+ ಕಿಮಿ / ಗಂ ಓಡುವ ಹೈ-ಸ್ಪೀಡ್-ರೈಲು, 160+ ಕಿಮಿ / ಗಂ ಚಲಿಸುವ ಸೆಮಿ-ಹೈ-ಸ್ಪೀಡ್ ರೈಲು ಮತ್ತು ಡೆಡಿಕೇಟೆಡ್ ಫ್ರೈಟ್ ಕಾರಿಡಾರ್ಗಳೊಂದಿಗೆ ರೈಲುಗಳ ವೇಗ ಹೆಚ್ಚಿಸಿ ಚೀನಾ-ಜಪಾನ್ ಗಳಿಗೆ ಸಡ್ಡು ಹೊಡೆಯಲಿವೆ ಭಾರತೀಯ ರೈಲ್ವೆ.

ಮುಂಬೈ-ಅಹಮದಾಬಾದ್ ಮಾರ್ಗದಲ್ಲಿ ಈಗಾಗಲೇ ಬುಲೆಟ್ ಟ್ರೈನ್ ಇಳಿಸುವ ಕಾರ್ಯ ಭರದಿಂದ ಸಾಗುತ್ತಿದೆ. ದೇಶದಲ್ಲಿ ಒಟ್ಟು 10,000+ ಬುಲೆಟ್ ಟ್ರೈನ್ ಮಾರ್ಗಗಳನ್ನು ತಯಾರಿಸುವ ಇರಾದೆ ಹೊಂದಿದೆ ಮೋದಿ ಸರಕಾರ. ಈಗಾಗಲೆ ಗತಿಮಾನ್ ಮತ್ತು ತೇಜಸ್ ರೈಲುಗಳನ್ನು ಮೇಲ್ದರ್ಜೆಗೇರಿಸಲಾಗಿದೆ. ಇನ್ನು ಸ್ವದೇಶೀ ತಂತ್ರಜ್ಞಾನದ ಟ್ರೈನ್ 18 ಮತ್ತು ಟ್ರೈನ್ 20 ಕೋಡ್ ಹೆಸರು ಹೊಂದಿರುವ ಎರಡು ರೈಲುಗಳ ನಿರ್ಮಾಣ ಕಾರ್ಯವೂ ನಡೆಯುತ್ತಿದೆ. ಗಂಟೆಗೆ 160 ಕಿ.ಮೀ ಓಡುವ ಈ ರೈಲುಗಳಲ್ಲಿ ಟ್ರೈನ್ 18, 2018 ಅಂತ್ಯದೊಳಗೆ ಪಟ್ರಿಗಿಳಿದರೆ, ಟ್ರೈನ್ 20 ಯ ನಿರ್ಮಾಣ 2020ರಲ್ಲಿ ಪೂರ್ಣಗೊಳ್ಳಲಿದೆ.

ಸುರಕ್ಷತೆ ಮತ್ತು ವೇಳಾಪಟ್ಟಿ: ಪ್ರಸ್ತುತ, ದೇಶದಲ್ಲಿ ನಾಗರಿಕ ರೈಲುಗಳು ಮತ್ತು ಗೂಡ್ಸ್ ರೈಲುಗಳು ಒಂದೆ ಟ್ರ್ಯಾಕ್ ನಲ್ಲಿ ಓಡುತ್ತಿರುವುದರಿಂದ ರೈಲುಗಳು ಸಮಯಕ್ಕೆ ಸರಿಯಾಗಿ ತಲುಪುತ್ತಿಲ್ಲ. ಈ ಸಮಸ್ಯೆಗೆ ಮಂಗಳ ಹಾಡಲು ನಿರ್ಧರಿಸಿರುವ ಮೋದಿ ಸರಕಾರ ಸರಕು ರೈಲುಗಳಿಗಾಗಿಯೆ 3,300 ಕಿ.ಮೀ ಉದ್ದದ ಮೀಸಲು ಸರಕು ಕಾರಿಡಾರ್ ನಿರ್ಮಿಸಲಿದೆ. ಈ ಟ್ರ್ಯಾಕ್ಗಳು ಪೂರ್ಣಗೊಂಡ ಮೇಲೆ ಗೂಡ್ಸ್ ರೈಲುಗಳು ಈ ಮಾರ್ಗದಲ್ಲಿ ಸಾಗುವುದರಿಂದ ನಾಗರಿಕ ರೈಲು ಮಾರ್ಗಗಳು ಜನರ ಸೇವೆಗಾಗಿ ಮುಕ್ತವಾಗುತ್ತವೆ ಹಾಗೂ ರೈಲುಗಳು ಸರಿಯಾದ ಸಮಯಕ್ಕೆ ತಲುಪಲಿವೆ ಮತ್ತು ದುರ್ಘಟನೆಗಳೂ ಕಡಿಮೆ ಆಗುತ್ತವೆ.

2018 ರಿಂದ, ಹಳೆಯ ಸಿಗ್ನಲ್ ವ್ಯವಸ್ಥೆಯನ್ನು ಕಿತ್ತು ಬಿಸಾಕಿ ಹೊಸ ಯುರೋಪಿಯನ್ ಟ್ರೈನ್ ಕಂಟ್ರೋಲ್ ಸಿಸ್ಟಮ್ -2 ಅನ್ನು ಅಳವಡಿಸುವ ಕಾರ್ಯ ಕೈಗೊಳ್ಳಲಾಗುತ್ತಿದೆ. ಸುರಕ್ಷತೆಯನ್ನು ಹೆಚ್ಚಿಸಲು ರೈಲ್ವೇ ಇಲಾಖೆ 3,330 ಕಿ.ಮೀ. ಟ್ರ್ಯಾಕ್ಗಳಲ್ಲಿ ಟ್ರೈನ್ ಪ್ರೊಟೆಕ್ಷನ್ ಮತ್ತು ವಾರ್ನಿಂಗ್ ಸಿಸ್ಟಮ್ ಅನ್ನು ಕೂಡಾ ಅಳವಡಿಸುವ ಕಾರ್ಯ ಕೈಗೊಂಡಿದೆ. ಟ್ರ್ಯಾಕ್ ಬದಿಯಲ್ಲಿ ಸ್ಥಾಪಿಸಲಾದ ಸಂವೇದಕಗಳ ಮೂಲಕ ಹೊರಸೂಸುವ ಸಂಕೇತಗಳಿಂದಾಗಿ ರೈಲುಗಳು ನಿರಂತರ ಸಂಪರ್ಕದಲ್ಲಿರುತ್ತವೆ ಮತ್ತು ಅವಘಡಗಳು ತಪ್ಪುತ್ತವೆ.

ಪರಿಸರ ಮತ್ತು ಶುಚಿತ್ವ: ಕೇಂದ್ರ ಸರಕಾರವು ಸೌರ ವಿದ್ಯುತ್ ಯೋಜನೆಗೆ ಮಹತ್ವ ಕೊಡುತ್ತಿರುವುದರಿಂದ ರೈಲುಗಳಲ್ಲಿ ಮತ್ತು ರೈಲು ನಿಲ್ದಾಣಗಳಲ್ಲಿ ಸೋಲಾರ್ ಪ್ಯಾನಲ್ ಅಳವಡಿಸಲಾಗುತ್ತಿದೆ. ಪ್ರಸ್ತುತ ಆರು ಗಾಡಿಗಳಲ್ಲಿ ಸೌರ ಶಕ್ತಿಯನ್ನು ಬಳಸುವುದರಿಂದ ರೈಲ್ವೇಸ್ ಪ್ರತಿವರ್ಷ 21,000 ಲೀಟರ್ ಡೀಸೆಲ್ ಅನ್ನು ಉಳಿಸುತ್ತಿವೆ ಮತ್ತು ಇಂಗಾಲದ ಹೆಜ್ಜೆಗುರುತನ್ನು ಪ್ರತಿವರ್ಷ 54 ಟನ್ಗಳಷ್ಟು ಕಡಿಮೆಗೊಳಿಸುತ್ತಿದೆ.

ಮೋದಿ ಸರಕಾರದ ಮತ್ತೊಂದು ಗಮನಾರ್ಹವಾದ ಪ್ರಯತ್ನದಲ್ಲಿ, ರೈಲು ಬೋಗಿಗಳಲ್ಲಿ 1,25,000 ಜೈವಿಕ ಶೌಚಾಲಯಗಳನ್ನು ಸ್ಥಾಪಿಸಲಾಗಿದೆ. ಮೊದಲೆಲ್ಲ ಕಸ ಕೊಳಕು ತುಂಬಿ ತುಳುಕುತ್ತಿದ್ದ ರೈಲುಗಳು ಈಗ ಲಕ ಲಕ ಹೊಳೆಯುತ್ತಿವೆ. ಭಾರತೀಯ ರೈಲ್ವೆ ಮತ್ತು DRDO ಎಂಜಿನಿಯರ್ ಗಳು ಜಂಟಿಯಾಗಿ ಅಭಿವೃದ್ಧಿಪಡಿಸಿರುವ ಈ ತಂತ್ರಜ್ಞಾನ ಮಾನವ ತ್ಯಾಜ್ಯವನ್ನು ನೀರು ಮತ್ತು ಅನಿಲಗಳಾಗಿ ಪರಿವರ್ತಿಸುತ್ತದೆ! ಇದರಿಂದಾಗಿ ಇನ್ನು ಮುಂದೆ ರೈಲ್ವೆ ಟ್ರ್ಯಾಕ್ ಗಳು ಗಬ್ಬು ನಾರುವುದಿಲ್ಲ.

2018ರ ಅಂತ್ಯದೊಳಗೆ ಪ್ರಪ್ರಥಮ ಬಾರಿಗೆ ದೇಶದಲ್ಲಿ ವಿಶ್ವ ದರ್ಜೆಯ “ರೈಲ್ವೆ ವಿಶ್ವವಿದ್ಯಾಲಯ” ಸ್ಥಾಪಿಸಲಾಗುತ್ತದೆ. ವಡೋದರಾದಲ್ಲಿ ಸ್ಥಾಪಿಸಲಾಗುವ ಈ ವಿಶ್ವವಿದ್ಯಾಲಯ ಪ್ರಪಂಚದಾದ್ಯಂತದ 3,000 ವಿದ್ಯಾರ್ಥಿಗಳಿಗೆ ತನ್ನ ಬಾಗಿಲನ್ನು ತೆರೆಯಲಿದೆ!! ರೈಲುಗಳಿಗೆ ಸಂಬಂಧ ಪಟ್ಟ ಎಲ್ಲಾ ವಿಷಯಗಳಲ್ಲೂ ಇಲ್ಲಿ ತರಬೇತಿ ನೀಡಲಾಗುತ್ತದೆ ಎಂದು ಹೇಳಲಾಗುತ್ತಿದೆ. ಈಗ ಹೇಳಿ ಇದಕ್ಕೂ ಮುನ್ನ ಯಾವ ಸರಕಾರ ದೇಶದ ಬೆನ್ನುಲುಬಾದ ರೈಲ್ವೆಯ ಬಗ್ಗೆ ಇಷ್ಟೊಂದು ಕಾಳಜಿ ವಹಿಸಿದೆ? ಅಚ್ಚೆ ದಿನ್ ಎಲ್ಲುಂಟು ಅನ್ನುವವರಿಗೆ ಭಾರತೀಯ ರೈಲ್ವೆಯ ಕಾಯಕಲ್ಪವನ್ನೊಮ್ಮೆ ತೋರಿಸಿ. ಕಣ್ಬಿಟ್ಟು ನೋಡಲಿ ಅಂಧ ಗುಲಾಮರು. ನಾಲ್ಕು ವರ್ಷಗಳಲ್ಲಿ ಮೋದಿ ಸರಕಾರ ಏನು ಮಾಡಿದೆ ಎಂದು ಕೇಳುವವರಿಗೆ ದೇಶದಲ್ಲಾಗುತ್ತಿರುವ ಅಭಿವೃದ್ದಿಯನ್ನು ತೋರಿಸಿ, ಅವರು ತಮ್ಮ ಮುಸುಡಿಯನ್ನೊಮ್ಮೆ ಕನ್ನಡಿಯಲ್ಲಿ ನೋಡಿಕೊಳ್ಳುವಂತೆ ಮಾಡಿ.

-ಶಾರ್ವರಿ

Related Articles

Close