ಪ್ರಚಲಿತ

ಶಾಹೀನ್ ಭಾಗ್ ನ ಪ್ರತಿಭಟನೆಯ ಒಂದು ಮುಖವನ್ನಷ್ಟೇ ಮಾಧ್ಯಮಗಳು ನಮಗೆ ತೋರಿಸುತ್ತಿದೆ..ಇದರ ಇನ್ನೊಂದು ಮುಖದ ಬಗ್ಗೆ ನಿಮಗೆ ತಿಳಿದಿದೆಯೇ?

ದಕ್ಷಿಣ ದೆಹಲಿಯಲ್ಲಿರುವ ಶಾಹೀನ್ ಭಾಗ್ ಈಗ ದೇಶದಲ್ಲಿ ಮಾತ್ರವಲ್ಲದೆ ಅಂತಾರಾಷ್ಟ್ರೀಯ ಮಟ್ಟದಲ್ಲೂ ಸುದ್ದಿ ಮಾಡುತ್ತಿದೆ.ಕಳೆದ ಡಿಸೆಂಬರ್ ೨೦೧೯ ರಿಂದ ಇಂದಿನವರೆಗೂ ಈ ಸ್ಥಳ ಬಂಧ್ ಆಗಿದೆ..ಮೋದಿಜಿ ನೇತೃತ್ವದ ಬಿಜೆಪಿ ಸರಕಾರ CAA ಮತ್ತು NRc ಕಾಯಿದೆಗಳನ್ನು ಜಾರಿಗೆ ತಂಡ ಬಳಿಕ ಪ್ರಾರಂಭವಾದ ಪ್ರತಿಭಟನೆಯು ಇನ್ನೂ ನಿಂತಿಲ್ಲ..ಸರಿ ಅಷ್ಟಕ್ಕೂ ಇವರು ಶಾಹೀನ್ ಭಾಗ್ ಅನ್ನೇ ಆಯ್ಕೆ ಮಾಡಿರುವ ಉದ್ದೇಶವೇನಿದೆ ಗೊತ್ತೇ? ದೆಹಲಿಯನ್ನು ನೊಯ್ದಾ ಎಂಬ ವಾಣಿಜ್ಯ ವ್ಯವಹಾರವೇ ಪ್ರಮುಖವಾಗಿರುವ ಸ್ಥಳಕ್ಕೆ  ಸಂಪರ್ಕವಾಗಿರುವುದು ಈ ಶಾಹೀನ್ ಭಾಗ್.ಜಾಮಿಯಾ ಮಲಿಯ ಮತ್ತು ಜಾಮಿಯಾ ಹಂದರ್ದ್ ವಿದ್ಯಾಲಯಕ್ಕೂ ಶಾಹಿನ್ ಭಾಗ್ ಸಂಪರ್ಕ ಸೇತುವೆಯಾಗಿದೆ.ಇಷ್ಟು ಮಾತ್ರವಲ್ಲದೆ ಸರಿತಾ ವಿಹಾರ್,ನೆಹರೂ ಪ್ಯಾಲೇಸ್ ಒಖಾಲಾ ಕೈಗಾರಿಕಾ ಪ್ರದೇಶ ಮತ್ತು ಒಖಾಲಾ ರೈಲ್ವೆ ನಿಲ್ದಾಣಕ್ಕೂ ಇದುವೇ ಸಂಪರ್ಕ ಮಾರ್ಗವಾಗಿದೆ.ಅಷ್ಟೇ ಅಲ್ಲದೆ ದೆಹಲಿಯು ದೇಶದ ರಾಜಧಾನಿಯಾಗಿದೆ. ಅಂತರರಾಷ್ಟ್ರೀಯ ಕಂಪನಿ ಗಳ ಉತ್ಪಾದನಾ ಕೇಂದ್ರಗಳಿಗೆ ಹೋಗಬೇಕಾದರೆ ಇದೇ ಮಾರ್ಗದಿಂದ ಹೋಗಬೇಕು.ಅಂತರರಾಷ್ಟ್ರೀಯ ಪ್ರಮುಖರು ಆಗಮಿಸಿದರೆ ದೆಹಲಿಗೆ ಆಗಮಿಸುತ್ತಾರೆ ಮತ್ತು ಈ ಅಂತರರಾಷ್ಟ್ರೀಯ ಕಂಪನಯಗಳ ಪ್ರಮುಖರು ಅವರ ಕಂಪನಿ ಗೆ ಹೋಗಬೇಕಾದರೂ ಅವರಿಗಿರುವ ಮಾರ್ಗವು ಇದುವೇ ಆಗಿದೆ.ಈ ರೀತಿ ಮಾಡುವುದರಿಂದ ಅಂತರರಾಷ್ಟ್ರೀಯ ಸಮದಾಯದ ಗಮನವನ್ನು ಸೆಳೆಯುವುದು ಸುಲಭ..ದೇಶದ ರಾಜಧಾನಿಯಲ್ಲೇ ಈ ರೀತಿಯಾಗಿದೆ ಎಂದರೆ ದೇಶದ ಇತರ ಭಾಗಗಳಲ್ಲೂ ಇದೇ ರೀತಿಯ ಅರಾಜಕತೆ ಉಂಟಾಗಿದೆ ಎಂದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಕೇಂದ್ರದ ಮುಖಭಂಗ ಮಾಡುವುದು ಇವರ ಉದ್ದೇಶ.

ಭಾರತದ ಮುಸಲ್ಮಾನರಿಗೆ ಈ ಎರಡು ಕಾಯಿದೆಗಳಿಂದ ಯಾವುದೇ ತೊಂದರೆಗಳಿಲ್ಲ ಎಂದು ಕೇಂದ್ರಸರ್ಕಾರ ದೊಡ್ಡದನಿಯಲ್ಲಿ ಹೇಳಿದರೂ ಇವರು ಯಾಕೆ ಅರ್ಥಮಾಡಿಕೊಳ್ಳುತ್ತಿಲ್ಲ? ಮೊನ್ನೆ ಇವರ ಪ್ರತಿಭಟನೆಯನ್ನು ಚಿತ್ರೀಕರಿಸಲು  ಹೋದ avp  ನ್ಯೂಸ್ ನ ವರದಿಗಾರನನ್ನೂ ಕ್ಯಾಮರಾ ಮ್ಯಾನ್ ಅನ್ನೂ ದೂಡಿ ಹೊಡೆದು ಹೊರಗಟ್ಟಲಾಯಿತು..ಇದರಿಂದಾಗಿ ಜನರ ಮನಸ್ಸಲ್ಲಿ ಅವರ ಬಗ್ಗೆ ಇದ್ದ ಸಹಾನುಭೂತಿಯು ಇನ್ನೇನು ಕೋಪಕ್ಕೆ ತಿರುಗುತ್ತದೆ ಎನ್ನುವಾಗ ಅಂಕಣಕ್ಕೆ ndtv  ಪ್ರವೇಶಿಸಿ ಅಲ್ಲಿಯ ಪ್ರತಿಭಟನಾಕಾರರು ಮಾಧ್ಯಮದೊಂದಿಗೆ ಎಷ್ಟು ಚೆನ್ನಾಗಿ ವ್ಯವಹರಿಸುತ್ತಾರೆ ಎಂಬುದನ್ನು ವರದಿ ಮಾಡಿತು! ಅವರ ನಿಜವಾದ ಉದ್ದೇಶ ಪ್ರತಿಭಟನೆಯೇ ಆಗಿದ್ದಲ್ಲಿ ಅವರೇಕೆ ಎರಡು ಮಾಧ್ಯಮಗಳೊಂದಿಗೆ ವೈರುಧ್ಯದಿಂದ ವರ್ತಿಸಿದರು?ಅಷ್ಟಕ್ಕೂ ಒಂದು ಮಾಧ್ಯಮದೊಂದಿಗೆ ಕ್ರೂರವಾಗಿ ವರ್ತಿಸಿದವರು ಅದು ಹೇಗೆ ND ಟಿವಿ ಯಾ ಪತ್ರಕರ್ತರೊಂದಿಗೆ ಅಷ್ಟು ಆತ್ಮೀಯವಾಗಿ ವ್ಯವಹರಿಸಿದರೂ ಎಂಬುದು ಗಮನ ಹರಿಸಬೇಕಾದ ವಿಚಾರವೆಂದು ನಿಮಗೆ ಅನ್ನಿಸುತ್ತಿಲ್ಲವೇ.? ಅದೆಲ್ಲ ಪಕ್ಕಕ್ಕಿಟ್ಟರೂ ಇಷ್ಟು ದಿನಗಳಿಂದ ಪ್ರತಿದಿನ ಈ ಪ್ರತಿಭಟನಾಕಾರರಿಗೆ ಬಿರಿಯಾನಿ ಮತ್ತು  ಮಿನರಲ್ ವಾಟರ್ಗಳು ಎಲ್ಲಿಂದ ಬರುತ್ತಿದೆ? ಯಾರು ತಂದು ಕೊಡುತ್ತಿದ್ದಾರೆ ಎಂದು ಪ್ರತಿಭಟನಾಕಾರರಲ್ಲಿ ಕೇಳಿದರೆ ಅವರಲ್ಲೂ ಉತ್ತರವಿಲ್ಲ..ಅದೆಲ್ಲವೂ ನಮಗೆ ಒಂದು ಸ್ಥಳದಲ್ಲಿ ಇರಿಸಿದ್ದು ಕಂಡುಬರುತ್ತದೆ,ಬಹುಷಃ ಅಲ್ಲಾ ನೇ ನಮಗೆ ಸಹಾಯ ಮಾಡುತ್ತಿದ್ದಾರೆ ಎನ್ನುತ್ತಾರೆ..ಒಂದು ಕಡೆಯಿಂದ ನಾವೆಲ್ಲಾ ಬಡವರು ನಮ್ಮ ಹಿರಿಯರ ಬಳಿ ದಾಖಲೆ ಪತ್ರವನ್ನು ಮಾಡಲು ಹಣ ಮತ್ತು ಜ್ಞಾನ ಇರಲಿಲ್ಲ ಎನ್ನುವವರು ದಿನಗಟ್ಟಲೆ ಅಲ್ಲೇ ಕುಳಿತುಕೊಂಡು ಬಿರಿಯಾನಿ ತಿನ್ನಲು ಮತ್ತು ಮಿನರಲ್ ವಾಟರ್ ಕುಡಿಯಲು ಹೇಗೆ ಸಾಧ್ಯ? ಒಂದೋ ಇವರೆಲ್ಲಾ ತಾವು ಬಡವರೆಂದು ಹೇಳಿಕೊಳ್ಳುತ್ತಿರುವುದು ಸುಳ್ಳು..ಇಲವೇ ಇವರಿಗೆ ಹಣ ನೀಡಿ ಇವರನ್ನು ಪ್ರೋತ್ಸಾಹಿಸುವವರ್ಯಾರೋ ಇವರ ಹಿಂದೆ ಇದ್ದಾರೆ..ಎರಡರಲ್ಲಿ ಒಂದಂತೂ ಸತ್ಯವಾದ ವಿಷಯ.

ಮೊನ್ನೆ ೪ ತಿಂಗಳ  ಮಗುವೊಂದು ಪ್ರತಿಭಟನೆಯಲ್ಲಿದ್ದದ್ದು ಸುದ್ದಿಯಾಗಿತ್ತು ಆದರೆ ದೆಹಲಿಯ ಕೊರೆಯುವ ಚಳಿಯಲ್ಲಿ ರಾತ್ರೆಯನ್ನೂ ಕಳೆದ ಆ ಮಗು ಮೊನ್ನೆ ಶೀತ ಜ್ವರದಿಂದ ತೀರಿಕೊಂಡಿತು..ಇದಕ್ಕೆ ಆ ಮಗುವಿನ್ನ ಪಾಲಕರು ಕೇಂದ್ರ ಸರಕಾರವನ್ನು ಜವಾಬ್ದಾರರನ್ನಾಗಿಸುತ್ತಿದ್ದಾರೆ.ಆ ಮಗುವಿನ ತಾಯಿ ಮಗುವಿಗೆ ಹುತಾತ್ಮ ಪಟ್ಟವನ್ನೂ ಕಟ್ಟಿದ್ದಾಳೆ.ಬಾಲ್ಯವಿವಾಹ,ಬಾಲಕಾರ್ಮಿಕ ಇತ್ಯಾದಿಗಳನ್ನು ಗಮನಿಸುವ ಮಕ್ಕಳ ಕಲ್ಯಾಣ ಇಲಾಖೆಯವರ್ಯಾಕೆ ಇನ್ನೂ ಇತ್ತ ಗಮನ  ಹರಿಸಿಲ್ಲವೇಕೆಂಬುದೇ ಅರ್ಥವಾಗುತ್ತಿಲ್ಲ.ಏನೂ ಅರಿಯದ ಹಸುಗೂಸೊಂದು ಯಾರದ್ದೋ ಹಿತಾಸಕ್ತಿಗಾಗಿ ಬಲಿಯಾಯಿತು..ತಾಯಿಗೆ ಪ್ರತಿಭಟಿಸುವುದೇ ಮುಖ್ಯವಾಗಿದ್ದಲ್ಲಿ ಆ ಹಸುಗೂಸನ್ನು ಯಾರಾದರೂ ಸಂಬಂಧಿಕರ ಬಳಿಯಲ್ಲಿ ಬಿಟ್ಟು ಬರಬಹುದಾಗಿತ್ತಲ್ಲ..ಲೋಕವನ್ನೇ ಕಾಣದ ಹಸುಗೂಸನ್ನು ಹುತಾತ್ಮನನ್ನಾಗಿಸಲು ಇವರಿಗೆ ಅಧಿಕಾರ ನೀಡಿದವರು ಯಾರು.ಹಾಗಾದರೆ ಇದು ಕೊಲೆ ಅಲ್ಲವೇ? ಇಲ್ಲಿ ನಡೆದ ಪ್ರತಿಭಟನೆಯಲ್ಲಿ jnu  ವಿದ್ಯಾರ್ಥಿಯೊಬ್ಬ ಭಾರತದಿಂದ ಈಶಾನ್ಯರಾಜ್ಯಗಳನ್ನು ಕೋಳಿಯ ಕಟ್ಟು ಕತ್ತರಿಸಿದಂತೆ ಕತ್ತರಿಸಬೇಕು ಎಂದು ಹೇಳಿಕೆ ನೀಡಿದ್ದ..ರಾಷ್ಟ್ರಗೀತೆ  ಹಾಡುತ್ತಾ ರಾಷ್ಟ್ರಧ್ವಜ ಹಾರಿಸಿ ರಾಷ್ಟ್ರಪ್ರೇಮ ಪ್ರದರ್ಶಿಸುತ್ತಿರುವ ಯಾವುದೇ ಪ್ರತಿಭಟನಾಕಾರರು ಅಂದು ಅವನನ್ನು ತಡೆಯಲೂ ಇಲ್ಲ.ವಿರೋಧಿಸಲೂ ಇಲ್ಲ.ಯಾಕೆ?ಮೊದಲು ಈ ಪ್ರತಿಭಟನೆಯನ್ನು ದಾಳವಾಗಿ ಬಳಸಿಕೊಂಡ ಆಮ್ ಆದ್ಮಿ ಪಕ್ಷಕ್ಕೂ ಕಾಂಗ್ರೆಸ್ ಪಕ್ಷಕ್ಕೂ ಇದೀಗ ಬಿಸಿ ತುಪ್ಪವಾಗಿ ಪರಿವರ್ತಿತವಾಗಿದೆ.ನುಂಗಲೂ ಸಾಧ್ಯವಿಲ್ಲ ಉಗುಳಲೂ ಸಾಧ್ಯವಿಲ್ಲ ಅಂದರೆ ವಿರೋಧಿಸಲೂ ಸಾಧ್ಯವಿಲ್ಲ ಸಮರ್ಥಿಸಲೂ ಸಾಧ್ಯವಿಲ್ಲ.

ಇವೆಲ್ಲದರ ಮದ್ಯದಲ್ಲಿ ಉದಯೋನ್ಮುಖ ದೇಶಭಕ್ತ ಅಸಾದುದ್ದೀನ್ ಓವೈಸಿ ಒಂದು ಹೇಳಿಕೆ ನೀಡಿದ್ದಾನೆ. ಹಿಟ್ಲರ್ ಕೂಡಾ ಜರ್ಮನಿಯಲ್ಲಿ ಯಹೂದಿಗಳ ಸಾಮೂಹಿಕ ನರಹತ್ಯೆ ಮಾಡುವ ಮೊದಲು ಎರಡು ಬಾರಿ ಜನಗಣತಿ ನಡೆಸಿದ್ದ..ಶಾಹೀನ್ ಭಾಗ್ ಜಲಿಯನ್ ವಾಲಾಭಾಗ್ ಆಗಲಿದೆ ಎಂಬುದು ಅವನ ಹೇಳಿಕೆ.ಅಷ್ಟಕ್ಕೂ ಇಲ್ಲಿ ಜನಗಣತಿ ಮಾಡುವ ಯಾವುದೇ ಪ್ರಸ್ತಾಪವನ್ನು ಸರಕಾರ ಮಾಡಿಲ್ಲ..ಮೋದಿಜಿ ಹಿಟ್ಲರ್ ನಂತೆ ವರ್ತಿಸುತ್ತಿದ್ದಾರೆ ಎಂಬುದು ನಿಮ್ಮ ಅಭಿಪ್ರಾಯವಾದಲ್ಲಿ ನಿಜವಾಗಿಯೂ ಮೋದಿ ಹಿಟ್ಲರ್ ನಂತೆ ವರ್ತಿಸುತ್ತಿದ್ದರೆ ಕಳೆದ ೬ ವರ್ಷಗಳಿಂದ ದ್ವೇಷವನ್ನೇ ಹರಡುತ್ತಿರುವ ನೀವು ಇಂದು ಈ ಮಾತನ್ನಾಡಲು ಸಾಧ್ಯವಿತ್ತೇ ಎಂದು ನಿಮಗೆ ನೀವೇ ಕೇಳಿಕೊಳ್ಳಿ.ಅದಕ್ಕಿಂತಲೂ ಮುಖ್ಯವಾಗಿ ಶಹೀನಭಾಗ್ ಜಲಿಯನ್ ವಾಲಾ ಭಾಗ್ ಆಗಲು ಸಾಧ್ಯವೇ ಇಲ್ಲ ಯಾಕೆಂದರೆ ಜಲಿಯನ್ ವಾಲಾಭಾಗ್ ನಲ್ಲಿದ್ದದ್ದು ಭಾರತೀಯ ದೇಶಭಕ್ತ ಸ್ವಾತಂತ್ರ ಹೋರಾಟಗಾರರು..ಶಾಹೀನ್ ಭಾಗನಲ್ಲಿ ಇದ್ದವರೆಲ್ಲ ದೇಶಭಕ್ತರಾಗಿದ್ದಲ್ಲಿ ದೇಶವನ್ನು ತುಂಡು ಮಾಡುವ ಹೇಳಿಕೆ,ಜಿನ್ನಾವಾಲಿ ಆಜಾದಿ ಘೋಷಣೆಗಳು ಅಲ್ಲಿ ಕೇಳಿಬರುತ್ತಿರಲಿಲ್ಲ..ಇನ್ನೂ ಒಂದು ವಿಚಾರ ಗಮನಿಸಿ,ಕೇಂದ್ರ ಸರಕಾರ ಅಹಂಕಾರಕ್ಕೆ ಉದಾಸೀನವೇ ಮದ್ದು ಎಂಬುದನ್ನು ಖಂಡಿತವಾಗಿಯೂ ಅರಿತಿದೆ.ಅದಕ್ಕೆಂದೇ ಯಾವುದೇ ರೀತಿಯ ಪ್ರತಿಕ್ರಿಯೆಯನ್ನು ಕೇಂದ್ರಸರ್ಕಾರ ನೀಡುತ್ತಿಲ್ಲ..ಇನ್ನು ಉಳಿದ ಆಹಾರವನ್ನು ಗುರುದ್ವಾರಗಳಿಗೆ ಕಳುಹಿಸಿ,ನಿಧಾನವಾಗಿ ಸಿಖ್ ರ ಸಿಂಪತಿಯನ್ನು ಗಳಿಸಿ ಅವರನ್ನೂ ವಿಭಜಿಸಿ ಆಳುವ ನಿಮ್ಮ ನೀತಿಯೊಳಗೆ ಸೇರಿಸಿಕೊಳ್ಳಬಹುದೆಂಬ ಭ್ರಮೆ ಇದ್ದರೆ ಅದನ್ನು ಬಿಟ್ಟುಬಿಡಿ..ಯಾಕೆಂದರೆ ಅವರು ಪರಮ ದೇಶಭಕ್ತರೆಂಬುದು ನೆನಪಿರಲಿ..

Deepashree.M

Tags

Related Articles

FOR DAILY ALERTS
Close