ಅಂಕಣ

ಇರಾನಿನ ಮತಾಂಧರ ದಾಳಿಯಿಂದ ತಪ್ಪಿಸಿಕೊಂಡು ಬಂದ ಪಾರ್ಸಿಗಳೆಂಬ ಅಲ್ಪಸಂಖ್ಯಾತ ಸಮುದಾಯ ಭಾರತದ ಅಭಿವೃದ್ದಿಗೆ ನೀಡಿದ ಕೊಡುಗೆ ಬಗ್ಗೆ ಕೇಳಿದರೆ ಈ ಸಮುದಾಯದ ಬಗ್ಗೆ ಹೆಮ್ಮೆ ಅನಿಸುವುದು!!

ಭಾರತದ ಅಲ್ಪ ಸಂಖ್ಯಾತರಲ್ಲಿ-ಅಲ್ಪಸಂಖ್ಯಾತ ಸಮುದಾಯ ಪಾರ್ಸಿಗಳದ್ದು. ಇರಾನಿನ ಪಾರಸ್(ಪರ್ಶಿಯಾ) ಎಂಬ ಪ್ರದೇಶದ ಝೋರಾಸ್ಟ್ರಿಯನ್ ಸಮುದಾಯದ ವಂಶಸ್ಥರು, ಎಂಟನೇ ಶತಮಾನದ ಆಸುಪಾಸು ಇಸ್ಲಾಮಿನ ಮತಾಂಧರ ದಾಳಿಯಿಂದ ತಪ್ಪಿಸಿಕೊಂಡು ಪ್ರಾಣ ರಕ್ಷಣೆಗಾಗಿ ಭಾರತದಲ್ಲಿ ಆಶ್ರಯ ಪಡೆದುಕೊಳ್ಳುತ್ತಾರೆ. ಭಾರತದ ಗುಜರಾತ್ ಮತ್ತು ಸಿಂಧ್ ಪ್ರಾಂತ್ಯದಲ್ಲಿ ತಮ್ಮ ನೆಲೆಗಳನ್ನು ಸ್ಥಾಪಿಸಿಸುವ ಸಣ್ಣ ಸಮುದಾಯವೊಂದು ಮುಂದೊಂದು ದಿನ ಈ ದೇಶದ ಭಾಗ್ಯವನ್ನೆ ಬದಲಾಯಿಸಬಹುದು ಎನ್ನುವುದನ್ನು ಯಾರು ಊಹಿಸಿದ್ದರು?! ಆಧುನಿಕ ಭಾರತದ ಕರ್ತೃ ಪಾರ್ಸಿಗಳು ಎಂದರೆ ತಪ್ಪಾಗಲಾರದು.

ಭಾರತದ ಅಭಿವೃದ್ದಿಯಲ್ಲಿ ಪಾರ್ಸಿಗಳ ಕೊಡುಗೆ ಅತ್ಯಂತ ಮಹತ್ವಪೂರ್ಣ. ಭಾರತದ ದಂತಹ ಚಾತುರ್ವಣ್ಯ ವ್ಯವಸ್ಥೆಯ ಅತಿ ದೊಡ್ಡ ದೇಶದಲ್ಲಿ ಎಲ್ಲರೊಳಗೊಂದಾಗಿ ಬದುಕುತ್ತಾ ಯಾರಿಗೂ ತಂಟೆ ಕೊಡದೆ ಬದುಕುವ ಈ ಪಾರ್ಸಿಗಳು ಇಸ್ಲಾಮಿನ ಮತಾಂಧರಂತೆ-ಕ್ರಿಶ್ಚಿಯನ್ ಮಿಶನರಿಗಳಂತೆ ಉಂಡ ಮನೆಗೆ ಕನ್ನವಿಕ್ಕುವುದಿಲ್ಲ. ಮೂಲ ಇರಾನಿಗರಾದರೂ ಈಗಲೂ ಅಪ್ಪಟ ಭಾರತೀಯರಂತೆ ಬದುಕುತ್ತಿರುವ ಏಕೈಕ ಸಮುದಾಯ ಪಾರ್ಸಿಗಳದ್ದು. ದೇಶಪ್ರೇಮವನ್ನು ಇವರಿಂದ ಕಲಿತುಕೊಳ್ಳಬೇಕು ಉಳಿದವರು.

ತನಗೆ ಆಶ್ರಯ ನೀಡಿ, ಅನ್ನ ನೀರು ಕೊಟ್ಟು ಸಾಕಿ ಸಲಹಿದ ಭಾರತಕ್ಕೆ ಎಂದೂ ದ್ರೋಹ ಎಸಗಿಲ್ಲ ಈ ಸಮುದಾಯ. ಭಾರತದ ಅಭಿವೃದ್ದಿಯಲ್ಲಿ ತಮ್ಮಿಂದಾದಷ್ಟು ಕೊಡುಗೆಯನ್ನು ಕೊಡುತ್ತಲೆ ಬಂದಿದ್ದಾರೆ ಪಾರ್ಸಿಗಳು. ಅವರಲ್ಲಿ ಕೆಲವು ಹೆಸರುಗಳು:

-ಭಿಕಾಜಿ ಕಾಮಾ: ಸ್ವತಂತ್ರ ಸೇನಾನಿ, ರಾಷ್ಟ್ರೀಯ ಧ್ವಜದ ಸಹ-ಸೃಷ್ಟಿಕರ್ತ ಮತ್ತು ರಾಜಕೀಯ ಕಾರ್ಯಕರ್ತ
-ದಾದಾಭಾಯಿ ನವೊರೊಜಿ: ಅರ್ಥಶಾಸ್ತ್ರಜ್ಞ, ರಾಜಕೀಯ ಕಾರ್ಯಕರ್ತ, ಬ್ರಿಟನಿನ ಹೌಸ್ ಆಫ್ ಕಾಮನ್ಸ್ (ಲಿಬರಲ್) ಗೆ ಚುನಾಯಿತರಾದ ಪ್ರಥಮ ಭಾರತೀಯ. ಭಾರತಕ್ಕೆ ಸ್ವಾತಂತ್ರ್ಯ ದೊರಕಬೇಕೆಂದು ಮೊತ್ತ ಮೊದಲು ಸಾರ್ವಜನಿಕವಾಗಿ ಬೇಡಿಕೆ ಇಟ್ಟವರು
-ಆರ್ದಸೀರ್ ಕರ್ಸೇಟ್ ಜಿ: ರಾಯಲ್ ಸೊಸೈಟಿಯ ಮೊದಲ ಭಾರತೀಯ ಚುನಾಯಿತ ಫೆಲೋ, ವಾಡಿಯಾ ಹಡಗು ನಿರ್ಮಾಣ ಕುಟುಂಬದ ಪ್ರಮುಖ
-ಪಿರೋಜ್ ಗೊದ್ರೆಜ್-ಅರ್ದೆಶಿರ್ ಗೊದ್ರೆಜ್ : ಗೊದ್ರೆಜ್ ಕೈಗಾರಿಕಾ ಸಾಮ್ರಾಜ್ಯದ ಸ್ಥಾಪಕರು
-ಜಮ್ಸೆಟ್ಜಿ ಜೀಜೀಬಾಯ್: ಚೀನಾದೊಂದಿಗೆ ಸಮುದ್ರ ವ್ಯಾಪಾರವನ್ನು ಪ್ರಾರಂಭಿಸಿದವರು ಮತ್ತು ಜೆ ಜೆ ಆಸ್ಪತ್ರೆ ಕಟ್ಟಿಸಿದವರು


-ದಿನ್ ಶಾ ಮಾನೆಕ್ಜಿ ಪೆಟಿಟ್: ಭಾರತದಲ್ಲಿ ಮೊತ್ತ ಮೊದಲ ಜವಳಿ ಕಾರ್ಖಾನೆಗಳನ್ನು ಸ್ಥಾಪಿಸಿದವರು
-ಹೋಮಿ ಜಹಾಂಗೀರ್ ಭಾಭಾ: ಪರಮಾಣು ವಿಜ್ಞಾನಿ; ಭಾರತೀಯ ಪರಮಾಣು ಶಕ್ತಿ ಆಯೋಗದ ಮೊದಲ ಅಧ್ಯಕ್ಷರು
-ಹೋಮಿ ನುಸೆರ್ವಾಂಜಿ ಸೇಥಾನ: ಪದ್ಮ ವಿಭೂಷನ್ ಪ್ರಶಸ್ತಿ ವಿಜೇತ, ರಾಸಾಯನಿಕ ಇಂಜಿನಿಯರ್; ಭಾರತದ ಮೊದಲ ಪರಮಾಣು ಸ್ಫೋಟಕ ಸಾಧನದ ಅಭಿವೃದ್ಧಿಗೆ ಮಾರ್ಗದರ್ಶನ ನೀಡಿದವರು
-ಜಹಾಂಗೀರ್ ರತನ್ಜಿ ದಾದಾಭಾಯ್ (ಜೆ.ಆರ್.ಡಿ.) ಟಾಟಾ: ಕೈಗಾರಿಕೋದ್ಯಮಿ; ಭಾರತದ ಮೊದಲ ವಾಣಿಜ್ಯ ವಿಮಾನ ಏರ್ ಇಂಡಿಯಾ ಸಂಸ್ಥಾಪಕ
-ಜಮ್ಸೆಟ್ಜಿ ನುಸೆರ್ವಾಂಜಿ ಟಾಟಾ: ಕೈಗಾರಿಕೋದ್ಯಮಿ; ಟಾಟಾ ಸಮೂಹ ಕಂಪನಿಗಳ ಸಂಸ್ಥಾಪಕ
-ಫೀಲ್ಡ್ ಮಾರ್ಷಲ್ ಸ್ಯಾಮ್ ಮನೇಕ್ ಶಾ: ಮಾಜಿ ಭಾರತೀಯ ಸೇನಾ ಸಿಬ್ಬಂದಿ ಮುಖ್ಯಸ್ಥ ಮತ್ತು ಫೀಲ್ಡ್ ಮಾರ್ಷಲ್ ಶ್ರೇಣಿ ಪಡೆದ ಮೊತ್ತ ಮೊದಲ ಭಾರತೀಯ
-ಡಯಾನಾ ಎಡ್ಲುಜೀ: 1978 ರಿಂದ 1993 ರವರೆಗೆ ಭಾರತೀಯ ಮಹಿಳಾ ಕ್ರಿಕೆಟ್ ತಂಡದ ಮೊತ್ತ ಮೊದಲ ನಾಯಕಿ
-ಡಾಲಿ ನಝೀರ್: 1952 ರ ಹೆಲ್ಸಿಂಕಿ ಒಲಿಂಪಿಕ್ಸ್ ನಲ್ಲಿ ಭಾರತವನ್ನು ಪ್ರತಿನಿಧಿಸಿದ್ದರು.
-ಫಾಲಿ ಸ್ಯಾಮ್ ನರಿಮನ್: ಪದ್ಮಭೂಷಣ ಮತ್ತು ಪದ್ಮ ವಿಭೂಷಣ ಪ್ರಶಸ್ತಿ ಸ್ವೀಕರಿಸುವ ನ್ಯಾಯವಾದಿ
-ಶೈಮಾಕ್ ದಾವರ್: ಬಾಲಿವುಡ್ ನೃತ್ಯ ನಿರ್ದೇಶಕ
-ಜಾನ್ ಅಬ್ರಹಾಮ್: ಬಾಲಿವುಡ್ ನಟ

ಹೀಗೆ ಪಟ್ಟಿ ಬೆಳೆಯುತ್ತಲೆ ಹೋಗುತ್ತದೆ. ಭಾರತದ 130 ಕೋಟಿ ಜನಸಂಖ್ಯೆಯಲ್ಲಿ ಪಾರ್ಸಿಗಳ ಜನಸಂಖ್ಯೆ ಕೇವಲ 61,000 ಎಂದು ಅಂದಾಜಿಸಲಾಗಿದೆ! ದಿನೇ ದಿನೇ ಈ ಸಮುದಾಯದ ಜನಸಂಖ್ಯೆಯಲ್ಲಿ ಇಳಿತ ಕಂಡುಬರುತ್ತಿದೆ. ಭಾರತದಲ್ಲಿ ಅಲ್ಪ ಸಂಖ್ಯಾತರಲ್ಲಿ ಅಲ್ಪ ಸಂಖ್ಯಾತರಾಗಿರುವ ಈ ಸಮುದಾಯ ಮೀಸಲಾತಿ ಬೇಡುವುದಿಲ್ಲ, ಸೇನೆಯ ಮೇಲೆ ಕಲ್ಲು ತೂರುವುದಿಲ್ಲ, ವಂದೆ ಮಾತರಂ ಅನ್ನುವುದಿಲ್ಲ ಎಂದು ಹೇಳುವುದಿಲ್ಲ, ಹಿಂದೂಗಳನ್ನು ಕೊಲ್ಲುತ್ತೇವೆ ಅನ್ನುವುದಿಲ್ಲ, ಭಾರತ್ ತೇರೆ ಟುಕಡೇ ಹೋಂಗೆ ಎಂದು ಘೋಷಣೆ ಕೂಗುವುದಿಲ್ಲ!! ತನ್ನ ಸಮುದಾಯ ಅಳಿವಿನಂಚಿನಲ್ಲಿದ್ದರೂ ಕೂಗಾಡಿ ರಂಪ ಮಾಡಿ, ಸರಕಾರದ ಮೇಲೆ ಗೂಬೆ ಕೂರಿಸುವುದಿಲ್ಲ. ತನ್ನ ಸಮುದಾಯದ ಜನಸಂಖ್ಯೆ ಹೆಚ್ಚಲೆಂದು ಅನ್ಯ ಸಮುದಾಯದವರನ್ನು ಮತಾಂತರ ಮಾಡುವುದಿಲ್ಲ.

ಭಾರತದಲ್ಲಿ ಭಾರತೀಯರಾಗಿ ಶಾಂತಿ ನೆಮ್ಮದಿಯಿಂದ ಬದುಕುತ್ತಾ ದೇಶದ ಅಭಿವೃದ್ಧಿಯಲ್ಲಿ ಅಂದಿನಿಂದಲೂ ತಮ್ಮಿಂದಾದಷ್ಟು ಕೊಡುಗೆ ನೀಡುತ್ತಲೆ ಬಂದಿದೆ ಈ ಪಾರ್ಸಿ ಸಮುದಾಯ. ಭಾರತವನ್ನು ತಾಯಿ ಎಂದು ಪರಿಗಣಿಸಿ ಅದಮ್ಯವಾಗಿ ಪ್ರೀತಿಸುವ, ಭಾರತದ ಬೆಳವಣಿಗೆಯಲ್ಲಿ ತಮ್ಮಿಂದಾದಷ್ಟು ಕೊಡುಗೆಯನ್ನು ನೀಡಿದ ಪಾರ್ಸಿ ಸಮುದಾಯದ ಮಹಾ ನಾಯಕರಿಗೊಂದು ನಮನ. ದೇಶವನ್ನು ಹೇಗೆ ಪ್ರೀತಿಸಬೇಕು ಎನ್ನುವುದನ್ನು ಪಾರ್ಸಿಗಳನ್ನು ನೋಡಿ ನಾವು ಕಲಿಯಬೇಕು…

-ಶಾರ್ವರಿ

Tags

Related Articles

Close