ಅಂಕಣಇತಿಹಾಸ

ದಲಿತರ ಮತಾಂತರಗಳಲ್ಲಿಯೂ ಅಡಗಿದೆ ರಾಜಕಾರಣ! ಮತಾಂತರದ ಹಿಂದಿದೆ ಭೀಕರ ರಾಜಕೀಯ ಕುತಂತ್ರ!!

ಪ್ರಾರಂಭಿಸುವ ಮೊದಲೇ ಹೇಳುತ್ತೇನೆ! ನನಗೆ, ಯಾರನ್ನೂ ನೋಯಿಸಬೇಕೆಂಬ ಉದ್ದೇಶವೂ ಇಲ್ಲ! ಮತ್ತು , ಯಾವ ದಲಿತರಿಗೂ ಅವಹೇಳನ ಮಾಡುತ್ತಿಲ್ಲ!!ನಡ ಹಾಗಂತಹ, ವಾಸ್ತವವನನ್ನು ಹೇಳ‌ದೇತ ಹೋದರೆ, ಅದಿನ್ನೂ ತಪ್ಪಾಗುತ್ತದೆ!! ವಿಷಯ ಇಷ್ಟೇ!! ಇದೇ ಒಂದು ಎಂಟೊಭತ್ತು ವರ್ಷಗಳ ಹಿಂದೆ,ಹಿಂದೂ ದಲಿತರೆನ್ನಿಸಿಕೊಂಡ ನೂರಾರು ಜನ ಬೌದ್ಧ ಧರ್ಮಕ್ಕೆ ಅಥವಾ ಕ್ರೈಸ್ತ ಮತಕ್ಕೆ ಮತಾಂತರವಾಗುವಂತಹ ಕಾರ್ಯಕ್ರಮವನ್ನು
ಇದೇ ಬಿಬಿಸಿ ವರದಿಯೊಂದು ಯಶಸ್ವಿಯಾಗಿ ಮರೆಯಾಗಿಸಿತ್ತು! ಬಿಡಿ! ಯಾವ ಸತ್ಯವಾದರೂ ಹೊರಗೆ ಬರಲೇಬೇಕಿರುವಾಗ, ಇನ್ನು ಮತಾಂತರ ಕಾರ್ಯಕ್ರಮವನ್ನು ಇನ್ಯಾವುದೋ ಕಾರ್ಯಕ್ರಮದ ಹಾಗೆ ತೋರಿಸಿದ್ದು ಇವತ್ತಲ್ಲ ನಾಳೆ ಹೊರಗೆ ಬೀಳಲೇಬೇಕಲ್ಲವೇ?!

ಹಾಸ್ಯಾಸ್ಪದವೇನೆಂದರೆ, ಹಿಂದೂ ಧರ್ಮದಲ್ಲಿ ದಲಿತರಿಗೆ ಶೋಷಣೆಯಾಗುತ್ತಿದೆ, ದಲಿತರಿಗೆ ವಿರುದ್ಧವಾದ ಅದೆಷ್ಟೋ ಕಾನೂನುಗಳು ಹಿಂದೂ ಧರ್ಮದಲ್ಲಿದೆಯಾದ್ದರಿಂದ (?) ದಲಿತರೆನ್ನಿಸಿಕೊಂಡವರು ಹಿಂದೂ ಧರ್ಮದಿಂದ ಹೊರ ಹೋಗಿ, ಸಮಾನ ಧರ್ಮವನ್ನು ಪ್ರತಿಪಾದಿಸುವಂತಹ ಧರ್ಮಕ್ಕೆ ಮತಾಂತರವಾಗುವುದು ಸರಿ ಎಂಬ ರೀತಿಯಲ್ಲಿಯೂ ಕೂಡ ವರದಿಯಲ್ಲಿ ನೀಡಿತು! ಅಂದರೆ, ಹಿಂದೂ ಧರ್ಮದಲ್ಲಿ ಸಮಾನತೆ ಇಲ್ಲ! ಆದ್ದರಿಂದ., ಹಿಂದೂ ದಲಿತರು ಮತಾಂತರವಾಗುವುದು ಅವರ ಹಕ್ಕು ಎಂಬ ತುಕ್ಕು ಹಿಡಿದ ಸಮಜಾಯಿಷಿಯೊಂದಿದೆಯಲ್ಲವಾ?! ಛೀ!!  ಅದಕ್ಕಿಂತ, ಅವಿವೇಕತನದ ವರದಿಯೊಂದನ್ನು ಹಿಂದೂ ಸಮಾಜ ನೋಡಿರಲೇ ಇಲ್ಲವಾದರೂ, ಇವತ್ತು ಆ ವರದಿಯೊಂದು ನಮಗೆ ಪರಿಗಣನೆಗೆ ಅರ್ಹವೂ ಅಲ್ಲ ಬಿಡಿ!

ರಾಜಕೀಯದ ಬೇಳೆ ಬೇಯಿಸಿಕೊಳ್ಳುವ ಹುನ್ನಾರಕ್ಕೆ ಬಲಿಯಾದವರು ಮಾತ್ರ ದಲಿತರೇ!

ಇದನ್ನು ನಿಸ್ಸಂಶಯವಾಗಿ ಒಪ್ಪಲೇಬೇಕಿದೆ ನಾವುಗಳು! ಅದರಲ್ಲಿಯೂ ಸಹ, ಬುದ್ಧನಿಂದ ಸೃಷ್ಟಿಯಾದ ಮತವೊಂದು ಮುಂಚೆ ಭಾರತದಲ್ಲಿ ಅಷ್ಟಾಗಿ ಬೇರೂರದೇ ಇದ್ದರೂ ಸಹ, ಕೊನೆ ಕೊನೆಗೆ ನೂರು, ಸಾವಿರ, ಲಕ್ಷ ಅನುಯಾಯಿಗಳನ್ನು ಪಡೆದುಕೊಂಡು, ಹಿಂದೂ ಧರ್ಮದಿಂದ ಬೇರೆಯಾಗಿಯೇ ಮತ್ತು ಭಿನ್ನವಾಗಿಯೇ ನಿಂತ ಪರಿ ನಿಜಕ್ಕೂ ಅಚ್ಚರಿ ಹುಟ್ಟಿಸುವಂತಹದ್ದೇ! ಭಾರತ ನಮ್ಮ ತಾಯಿ ಎನ್ನುವ ಯಾವುದೇ ಬೌದ್ಧ ಧರ್ಮೀಯನೂ ನಾನೊಬ್ಬ ಹಿಂದೂ ಧರ್ಮದಿಂದ ಕವಲೊಡೆದ ಮತದವನು ಎನ್ನುವುದನ್ನಾದರೂ ಒಪ್ಪುತ್ತಾನೆಯೇ?! ಖಂಡಿತವಾಗಿಯೂ ಇಲ್ಲ! ಹಿಂದುತ್ವವೇ ಬೇರೆ! ನನ್ನ ಬೌದ್ಧ ಧರ್ಮವೇ ಬೇರೆ ಎನ್ನುವಷ್ಟೂ ಬೌದ್ಧ ಧರ್ಮೀಯರನ್ನು ಇವತ್ತಿಗೂ ಕೂಡ ಹಿಂದುತ್ವದಿಂದ ಸಿಡಿದೆದ್ದು ನ್ಯಾಯ ದಕ್ಕಿಸಿಕೊಂಡ ಸಮಾನತೆಯ ಧರ್ಮವದು ಎಂಬ ಯಾವುದೋ ಮಿಥ್ಯೆಯನ್ನು ಒಪ್ಪಿ, ಅದೆಷ್ಟೋ ಸಹಸ್ರ ದಲಿತರನ್ನು ಮತಾಂತರವನ್ನಾಗಿಸುವಾಗ, ನಿಜಕ್ಕೂ ಖೇದವೆನಿಸುತ್ತದೆ! ಅದರಲ್ಲಿಯೂ, ತಮ್ಮ ತಮ್ಮ ರಾಜಕೀಯ ನಿಲುವುಗಳನ್ನೂ ಬೌಧ್ದ ಧರ್ಮೀಯರ ಮೇಲೆ ಎತ್ತಿ ಹಿಡಿದು, ಮತ್ತದೇ ಮತಾಂತರಕ್ಕೆ ಪ್ರಚೋದಿಸಿ, ಮತ್ತದೇ ಸಮಾನತೆ ಎನ್ನುವ ನಿಟ್ಟಿನಲ್ಲಿ, ರಾಜಕೀಯವಾಗಿ, ಸಾಮಾಜಿಕವಾಗಿ ಅತಿ ದೊಡ್ಡದಾಗಿ ಬೆಳೆಯಬೇಕೆನ್ನುವುದಕ್ಕೆ ದಲಿತರನ್ನೇ ಗುರಿಯಾಗಿಸುವಾಗಲೂ ಸಹ, ಇದು ಬುದ್ಧ ಸ್ಥಾಪಿಸಿದ ಧರ್ಮವೇ ಎನ್ನಿಸುವುದೂ ಸುಳ್ಳಲ್ಲ!

ನೋಡಿ! ಇಂತಹ ಸೂಕ್ಷ್ಮ ವಿಚಾರಗಳು ಯಾವತ್ತಿಗೂ ವಿವಾದಾತ್ಮಕವೇ ಆದರೂ ಸಹ, ನಮಗೆ ನಿಜಕ್ಕೂ ಸಾಕಾಗಿ ಹೋಗಿದೆ! ಯಾಕಾಗಿ ಗೊತ್ತೇನು?! ಬೌದ್ಧ ಧರ್ಮೀಯರ ಪ್ರವಚನಗಳ ಒಳನೋಟಗಳಾಗಲಿ, ಅಥವಾ ಅರ್ಥೈಸುವ ವಿಧಾನಗಳಾಗಲಿ, ದಲಿತರ ಸಮಕಾಲೀನ ಪರಿಸ್ಥಿತಿಗೆ ತಕ್ಕನಾಗಿಯೇ ಇರುವಂತಹ ತತ್ವಗಳು, ಆದರ್ಶಗಳೆಲ್ಲವೂ ಸಹ ಜವಾಹರಲಾಲ್ ವಿಶ್ವ ವಿದ್ಯಾನಿಲಯದ ವಿದ್ಯಾರ್ಥಿಗಳಿಂದ ಬಹಳವಾಗಿಯೇ ಪ್ರಶಂಸೆಗೊಳಗಾಗಿದ್ದರೂ
ಸಹ, ಬಹುತೇಕವಾಗಿರುವ ಎಡಪಂಥೀಯ ಅಥವಾ, ಮುಸಲ್ಮಾನ ಆಕ್ರಮಣಕಾರರನ್ನು ಸಮರ್ಥಿಸಿಕೊಳ್ಳುವವರು ಬೌಧ್ಧ ಧರ್ಮಕ್ಕೆ ವಿಶೇಷವಾದ ಗೌರವ ನೀಡುವಾಗ ಅಚ್ಚರಿಯಾಗುವುದು ಸಹಜವೇ ಆದರೂ ಸಹ ಭಾರತದ ಸಂಸ್ಕೃತಿಯನ್ನು ಮತ್ತು, ಹಿಂದೂಸ್ಥಾನವನ್ನು ಮುಸಲ್ಮಾನರಿಗೆ ಆಕ್ರಮಿಸಲು ಸಹಾಯ ಮಾಡಿದಂತಹ ಕೀರ್ತಿ ಸಲ್ಲುವುದೂ ಸಹ ಬೌದ್ಧರಿಗೇ!!!

ಹೌದು!! ಬೌದ್ಧ ಮತದ ಇತಿಹಾಸವನ್ನು ಗಮನಿಸಿದರೆ, ಮುಸಲ್ಮಾನ ಆಕ್ರಮಣಕಾರರನ್ನೆದುರಿಸಲಾಗದೇ ಹೋದ ಹೀನಾಯ ಪರಿಸ್ಥಿತಿ ನಮಗೆ ಗೋಚರಿಸುವುದರಲ್ಲಿ ತಪ್ಪೇ ಇಲ್ಲ! ರಾಜಕೀಯವಾಗಿಯೂ ಮತ್ತು, ಸೈನ್ಯದಲ್ಲಿಯೂ ಸಹ ಬೌದ್ಧರು ಮೊಘಲರನ್ನು ಎದುರಿಸಲಾಗದೇ, ಭಾರತಕ್ಕೆ ದಾರಿಯನ್ನೆಡೆ ಮಾಡಿಕೊಟ್ಟಿದ್ದರು ಸರಿ! ಆದರೆ, ಅದಕ್ಕಿಂತ ಮುಖ್ಯವಾಗಿ, ಮಾರ್ಕ್ಸಿಸ್ಟ್ ರು ಪಸರಿಸಿದಂತಹ ಮನೋಭಾವನೆ! ಭಾರತದಲ್ಲಿ, ಬೌಧ್ದ ಧರ್ಮ ಕುಸಿಯುವುದಕ್ಕೆ ಕಾರಣವಾಗಿದ್ದೇ ಆದಿ ಶಂಕರಾಚಾರ್ಯರು ಎನ್ನುವಂತಹ ಕಾರಣಗಳು ಇನ್ನೊಂದಿಷ್ಟು ಕವಲು ಸೃಷ್ಟಿಸಿದವು!  ಅದಲ್ಲದೇ, ಬೌದ್ಧ  ಮತದಲ್ಲಿ ಪ್ರಾಪಂಚಿಕವಾದ ಬದುಕನ್ನು ತ್ಯಜಿಸುವುದಕ್ಕೆ ಹೆಚ್ಚು ಒತ್ತಡವನ್ನು ಹೇರುವುದರ ಜೊತೆಗೇ ಪ್ರಾಶಸ್ತ್ಯವನ್ನೂ ನೀಡಲಾಗುತ್ತದೆ! ಜ್ಞಾನ ಮತ್ತು ಮೋಹ ರಹಿತವಾದ ಬದುಕಿನ ಸಾರ ತಿಳಿಸುವ ಪಠ್ಯಗಳನ್ನು ಓದಿದ ಪ್ರತಿಯೊಬ್ಬನ ಬೌದ್ಧನ ತಲೆಯಲ್ಲಿಯೂ ಸಹ ತಾನೊಬ್ಬ ಸಂನ್ಯಾಸಿ ಯಾಗಬೇಕೆಂಬುದೇ ಇರುತ್ತದೆ ವಿನಃ ಕುಟುಂಬಕ್ಕೆ ಆಸರೆಯಾಗಿ ನಿಲ್ಲಬೇಕೆಂದಲ್ಲ. ಇವಿಷ್ಟನ್ನೂ, ಬಿಟ್ಟರೆ ಬೌದ್ಧ ಮತದ ‘ಅಹಿಂಸಾ’ ನೀತಿ! ಇಡೀ ಬೌದ್ಧ ಮತಕ್ಕೆ ಅಹಿಂಸಾ ನೀತಿ ಭೋಧಿಸುತ್ತ ಹೋದ ಭಿಕ್ಕುಗಳು ತಮ್ಮ ಹಾಗೆಯೇ ಭಿಕ್ಕುಗಳನ್ನೂ ತಯಾರಿಸಿದರು! ಪರಿಣಾಮ ಮಾತ್ರ ಭೀಕರವಾಯಿತು! ಯೋಧರೇ ಇಲ್ಲವಾಗಿ ಹೋದರು! ಜೊತೆಗೆ ಕೃಷಿಯನ್ನೂ ಮಾಡುವುದು ಬಿಟ್ಟ ಬೌದ್ಧರು ಭಿಕ್ಷೆ ಬೇಡುತ್ತ ನಡೆದರು!

ಅದರಲ್ಲಿಯೂ, ಯಾವಾಗ ಮೊಘಲರ ಆಕ್ರಮಣ ಭಾರತದ ದಿಕ್ಕಿನೆಡೆ ಪ್ರಾರಂಭವಾಯಿತೋ, ಮೊದಲು ಸಿಕ್ಕವರೇ ಇವರು! ನಿರಾಶಾದಾಯಕ
ಬೌದ್ಧರು ಜಪಿಸುತ್ತ ಕುಳಿತು, ಹೆಣವಾದರು.! ಬುದ್ಧಿವಂತರು, ಟಿಬೆಟ್ಟಿನ ಕಡೆಗೆ ಓಡಿದರು! ತೀರಾ ಹೀನಾಯವಾಗಿ ತಮ್ಮ ಬದುಕನ್ನು ಅಂತ್ಯಗೊಳಿಸಿದ್ದೂ ಸಹ, ಭಾರತದಲ್ಲಿ ಬೌದ್ಧರ ಸಂಖ್ಯೆ ಅವತ್ತು ಕಡಿಮೆಯಾಗಲು ಕಾರಣವಷ್ಟೇ!

ತದನಂತರ, ಬಂದದ್ದೇ ಬ್ರಿಟಿಷರು! ನಿಧಾನವಾಗಿಯೇ ಪ್ರಾರಂಭವಾದ ಕ್ರೈಸ್ತ ಧರ್ಮದ ಪಸರಿಸುವಿಕೆ ಕೂಡಾ, ಮೊದಲು ಆವರಿಸಿದ್ದು ದಲಿತರನ್ನೇ! ಬ್ರಿಟಿಷರ ಜೊತೆ ಮಿಶನರಿಗಳೂ ಬಂದರು! ಶಿಲುಬೆ ಕೊಟ್ಟು ಪೂಜಿಸು ಎಂದರು! ನಿನ್ನ ಕುಟುಂಬ ಬದುಕಬೇಕಾ?! ಶಿಲುಬೆ ಹಿಡಿ ಎಂದರು! ಕೆಳವರ್ಗದ ಜನರು ನಂಬಿದರು! ಬ್ರಿಟಿಷರ ಜಾಲಕ್ಕೆ ಬಲಿಯಾದರು! ಯಾವ ಧರ್ಮ ಯಾವ ಸಂಸ್ಕೃತಿಯ ಅರಿವೂ ಆಗದಂತಹ ಪರಿಸ್ಥಿತಿ! ಜೊತೆ ಜೊತೆಗೆ, ಮೇಲ್ವರ್ಗದ ಜನರನ್ನೂ ಸಹ ಬುಟ್ಟಿಗೆ ಹಾಕಲು ಪ್ರಾರಂಭಿಸಿದ ಬ್ರಿಟಿಷರಿಗೆ ಕಂಡದ್ದು ಬ್ರಾಹ್ಮಣರು! ಬಿಡಿ! ಬ್ರಿಟಿಷರು ತಮ್ಮ ಕಾಲದಲ್ಲಿ ಕಟ್ಟಿದ ಚರ್ಚುಗಳಿಗೆ ತಕ್ಕ ಹಾಗೆ, ಭಾರತೀಯರೂ ಅಷ್ಟೇ ಶ್ರದ್ಧೆಯಿಂದ ನಡೆದುಕೊಂಡಿದ್ದಾರೆ! ಬಿಡಿ! ಹಿಂದೂಗಳು ಒಂದೇ ಕ್ರೈಸ್ತ ಮತವೂ ಒಂದೇ ಎಂದದ್ದನ್ನೇ ನಂಬಿದ
ಭಾರತೀಯ ದಲಿತರು ಮಾತ್ರ, ಇವತ್ತಿಗೂ ಅದೇ ನಂಬಿಕೆಯನ್ನಿಟ್ಟು ಕೊಂಡಿರುವುದು ಮಾತ್ರ ದುರಂತ!

ಇದಕ್ಕೆಲ್ಲ, ಅಂತ್ಯ ಹಾಡಿದ್ದು ದಯಾನಂದ ಸರಸ್ವತಿ ಶ್ರೀಗಳು! ಜೊತೆಗೆ, ವಿವೇಕಾನಂದರಂತಹ ಅದ್ಭುತ ಮಹಾಪುರುಷರು! ಕ್ರೈಸ್ತ ಧರ್ಮದ ನಿಜವಾದ ಬಣ್ಣ ತೋರಿಸಿದ ಹಿಂದೂ ಸಮಾಜ ಸುಧಾರಕರೆಲ್ಲರೂ ಸಹ, ಮೊದಲು ಜಾಗೃತಿ ಮೂಡಿಸಿದ್ದು ದಲಿತರಲ್ಲಿ. ಹಿಂದೂ ಧರ್ಮದ ಆಚಾರಗಳ ಬಗ್ಗೆ, ವಿಚಾರಗಳ ಬಗ್ಗೆ ನಿರಂತರವಾಗಿ ಜಾಗೃತಿ ಮೂಡಿಸಿದ ಇಂತಹ ವ್ಯಕ್ತಿಗಳು, ಸಾಮೂಹಿಕವಾಗಿ ಮತಾಂತರವಾಗುತ್ತಿದ್ದ ದಲಿತರನ್ನು ಮತ್ತೆ ವಾಪಾಸು ತರಲು ಅದೆಷ್ಟು ಶ್ರಮಿಸಿದರೋ ಗೊತ್ತಿಲ್ಲ! ಬಹಳ ಅಧ್ಯಯನದ ನಂತರ, ಎಲ್ಲರಿಗೂ ಕೂಡ ಅದೊಂದು ಅರ್ಥವಾಗಿ ಹೋಗಿತ್ತು! “ತಾತ್ವಿಕವಾಗಿ ಮತ್ತು ಜ್ಞಾನದಲ್ಲಾಗಲಿ, ಹಿಂದೂಗಳನ್ನು ಅಥವಾ ಹಿಂದುತ್ವವನ್ನು ನಾಶ ಪಡಿಸಲು ಸಾಧ್ಯವೇ ಇಲ್ಲ!” ಎಂಬುವಂತಹದ್ದು!

ಅಷ್ಟಕ್ಕೂ, ಸಹ ಈ ದಲಿತ ಮತಾಂತರದ ವಾಸ್ತವವೇನು ಗೊತ್ತಾ?!

ಬೌದ್ಧ ಮತಕ್ಕಾಗಲಿ ಅಥವಾ ಕ್ರೈಸ್ತ ಮತಕ್ಕಾಗಲೀ ದಲಿತರನ್ನು ಮತಾಂತರವಾಗಿಸಲು ಇದ್ದದ್ದು ಕೆಲವೇ ಕಾರಣಗಳಾದರೂ ಸಹ, ರಾಜಕೀಯವಾಗಿ ಬೆಳೆಯಲು ಅವೇ ಸಾಧನಗಳಾಗಿದ್ದವಷ್ಟೇ!

ಮೊದಲನೆಯದಾಗಿ, ರಾಜಕೀಯದಲ್ಲಿ ದಲಿತರ ಅಧಿಕಾರವೊಂದನ್ನು ಪ್ರಬಲವಾಗಿಸುವುದು! ಎರಡನೆಯದಾಗಿ, ಬೌದ್ಧ ಧರ್ಮದ ಬಗೆಗೆ ಡಾ.ಬಿ.ಆರ್.ಅಂಬೇಡ್ಕರಿಗೆ ಇದ್ದ ಒಲವು! ಮೂರನೆಯದಾಗಿ, ಹಿಂದೂ ಧರ್ಮದ ಕೆಲವು ಕಾಲಘಟ್ಟದಲ್ಲಿ ನಡೆದ ದೌರ್ಜನ್ಯಗಳ ಉದಾಹರಣೆ ಯನ್ನಿಟ್ಟುಕೊಂಡು, ಬೌಧ್ಧಿಕವಾಗಿ ಮತಾಂತರದ ಮೂಲಕ ಹಿಂದುತ್ವಕ್ಕೆ ಕೊಡಲಿಯೇಟು ನೀಡುವುದು!

ಪ್ರಸ್ತುತವಾಗಿ, ಇವತ್ತಿನ ಮತಾಂತರವೊಂದಿದೆಯಲ್ವಾ?! ಅದು ಯಾವುದೇ ಸಿದ್ಧಾಂತಗಳ ಮೇಲೆ ನಡೆಯುವುದೂ ಇಲ್ಲ! ಬದಲಾಗಿ, ರಾಜಕೀಯ ಮತ್ತು ಹಣದ ಆಮಿಷಕ್ಕೆ ಮಾತ್ರವೇ!! ಬದಲಾಗಿ,ಗೌತಮ ಬುದ್ಧ ಏನು ಹೇಳಿರಬಹುದು ಎನ್ನುವ ಆಧಾರದ ಮೇಲಂತೂ ಅಲ್ಲವೇ ಅಲ್ಲ! ಅಥವಾ, ಆತನ ಸಿದ್ಧಾಂತಗಳನ್ನು ತಿಳಿದೂ ಆಗುವ ಮತಾಂತರವೂ ಅಲ್ಲ!

ಇವತ್ತು, ಬೌದ್ಧರು ಮತ್ತು, ಕ್ರೈಸ್ತರನ್ನೊಮ್ಮೆ ಗಮನಿಸಿ! ಅದರಲ್ಲೂ, ಮೊದಲು ಹಿಂದೂವಾಗಿದ್ದು, ಕೊನೆಗೆ ಸಾರ್ವತ್ರಿಕವಾಗಿ ಮತಾಂತರ ಹೊಂದಿದ ದಲಿತರನ್ನು ಗಮನಿಸಿ.! ಯಾವುದೇ ಸಿದ್ಧಾಂತಗಳ ಆಧಾರದ ಮೇಲೆ ಮತಾಂತರವಾದದ್ದಲ್ಲ! ಯಾವುದೇ, ತತ್ವ, ನಂಬಿಕೆಗಳ ಮೇಲಾದ ಮತಾಂತರವೂ ಅಲ್ಲ! ಕ್ರಿಸ್ತ ನ ಸಿದ್ಧಾಂತಗಳಾಗಲಿ, ಅಥವಾ ಬುದ್ಧನ ತತ್ವಗಳನ್ನಾಗಲಿ, ಯಾವುದನ್ನೂ ಅರಿಯದೇ ತೀರಾ ಎನ್ನುವಷ್ಟು ಕುರುಡಾಗಿ ಆದ ಮತಾಂತರವಿದು ಅಷ್ಟೇ! ಅಚ್ಚರಿಯೆಂದರೆ ಅದೇ! ಅವತ್ತು, ಮತಾಂತರವಾದ ದಲಿತರಿಗೆ, ಕ್ರೈಸ್ತ ಮತದ ಆಗು ಹೋಗುಗಳು ಚೆನ್ನಾಗಿಯೇ ಮನದಟ್ಟಾಗಿದ್ದರೂ ಸಹ, ಇನ್ನೂ ಇವತ್ತಿಗೂ ಸಹಿಸಿ ಹೀನಾಯ ಪರಿಸ್ಥಿತಿಯಲ್ಲಿಯೇ ಬದುಕು ಕಳೆಯುತ್ತಿರುವುದು ಒಂದು ಕಡೆಯಾದರೆ, ಇನ್ನು ಬೌದ್ಧ ಮತ ಸ್ವೀಕರಿಸಿದವರ ಪಾಡು ಇನ್ನೊಂದಷ್ಟೇ!

ಹಾಸ್ಯಾಸ್ಪದವೆಂದರೆ, ಯಾವುದೋ ಕಾಲದಲ್ಲಿ ಆಮಿಷಕ್ಕೊಳಗಾಗಿ ಮತಾಂತರವಾದ ದಲಿತರ ಪರಿಸ್ಥಿತಿಗೆ ಬ್ರಾಹ್ಮಣರು ಅಥವಾ ಮೇಲ್ವರ್ಗದವರೇ ಕಾರಣ ಎಂದು ದೂಷಿಸಿದ್ದು! ಅದಲ್ಲದೇ, ಇವತ್ತಿಗೂ ಅವರನ್ನು ದಲಿತ ಕ್ರೈಸ್ತರೆಂದೇ ಕರೆಯುವಾಗ ಅತಿಶಯೋಕ್ತಿ ಎನ್ನಿಸದೇ ಇರಲು ಕಾರಣವೇ ಇಲ್ಲ! ಅದ್ಯಾವುದೂ ಬೇಡ! ಅಂಬೇಡ್ಕರರ ಬೆಂಬಲಿಗರೆಂದು ಕೊಚ್ಚುವ ಒಂದಷ್ಟು ಜನರಿಗೆ, ಮತಾಂತರವನ್ನು ಸಮರ್ಥಿಸುವವರಿಗೆ ಅಂಬೇಡ್ಕರರ ತತ್ವಗಳಾದರೂ ಅರ್ಥವಾಗಿದೆಯೇ?! ಹೋಗಲಿ! ಅಂಬೇಡ್ಕರ್ ಮತಾಂತರವಾಗಿದ್ದಾರಾ?! ಉಹೂಂ! ಒಂದು ಮತದ ತತ್ವಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸುವುದಕ್ಕೂ, ಮತಾಂತರವಾಗುವುದಕ್ಕೂ ಬಹಳಷ್ಟು ವ್ಯತ್ಯಾಸವಿದೆ!

ಅದರಲ್ಲೂ, ಪ್ರಸ್ತುತ ಭಾರತದ ದಲಿತರ ಮತಾಂತರ, ತುಷ್ಟೀಕರಣ ಮತ್ತು, ಮುಸ್ಲಿಂ ಧರ್ಮದ ಬಗೆಗಿನ ಒಲವು, ಇವೆಲ್ಲವೂ ಸಹ ‘ಬ್ರಾಹ್ಮಣ ವಿರೋಧಿ’ ತತ್ವದಿಂದಲೇ ಉದ್ಭವಿಸಿದ್ದಷ್ಟೇ!  ಅದು ಇವತ್ತಿಗೂ ಸತ್ತಿಲ್ಲ! ಇನ್ನೂ ಜ್ವಲಿಸುತ್ತಲೇ ಇದೆ ತನ್ನನ್ನೂ ದಹಿಸಿ, ಹಿಂದುತ್ವವನ್ನೂ ದಹಿಸುತ್ತಾ! ಇನ್ನಾದರೂ, ಈ ‘ಶೋಷಣೆ’, ದೌರ್ಜನ್ಯ, ಮೆಟ್ಟುವಿಕೆ, ತುಳಿಯುವಿಕೆ ಎನ್ನುವುದನ್ನು ಬಿಟ್ಟು ಪ್ರಜ್ಞಾವಂತರಾದರೆ ಮಾತ್ರ ಹಿಂದುತ್ವವೆನ್ನುವುದಕ್ಕೊಂದು ಅರ್ಥವುಳಿಯಬಹುದೇನೋ! ಇಲ್ಪವೇ, ಮತ್ತದೇ ಬ್ರಾಹ್ಮಣ ವಿರೋಧಿ ನಿಲುವೊಂದು ತಿರುಗಿ ಬಡಿಯುಗುದು ಮತ್ತದೇ ಸಮಾಜಕ್ಕೇ ಹೊರತು ಇನ್ಯಾರ ಮೇಲೂ ಅಲ್ಲ! ಅದನ್ನಿವತ್ತು, ಅಧಿಕಾರ ದಾಹದ ರಾಜಕೀಯ ನಾಯಕರು ಅರ್ಥ ಮಾಡಿಕೊಂಡಿದ್ದಾರಷ್ಟೇ! ಅದಕ್ಕೇ, ಜಾತ್ಯಾತೀತ ಎನ್ನುತ್ತಲೇ ದಲಿತರನ್ನು ರಾಜಕೀಯವಾಗಿ ಇನ್ನೂ ಹಿಂದುಳಿದ ವರ್ಗದವರನ್ನಾಗೇ ಉಳಿಸಿದ್ದು ಅಷ್ಟೇ!

Source :http://www.sanskritimagazine.com/india/christian-missionaries-india/politics-dalit-conversions/

– ತಪಸ್ವಿ

Tags

Related Articles

Close