ಪ್ರಚಲಿತ

ರಾಮಮಂದಿರದ ಬದಲಾಗಿ ಆಸ್ಪತ್ರೆ ನಿರ್ಮಿಸಿ ಎನ್ನುವವರು,ವಲ್ಲಭಭಾಯಿ ಪಟೇಲರ ಪ್ರತಿಮೆಯ ಬದಲು ಶಾಲೆಗಳನ್ನು ನಿರ್ಮಿಸಿ ಎನ್ನುವವರು ಅತ್ಯಂತ ನಿರುಪಯುಕ್ತ ಸ್ಥಳವಾದ ಜವಾಹರ್ ಲಾಲ್ ನೆಹರೂ ಯುನಿವರ್ಸಿಟಿ ಯನ್ನು ಹೇಗೆ ಉಪಯೋಗಿಸಬಹುದೆಂದು ತಿಳಿಸಬಹುದೇ..?? ಪ್ಲೀಸ್

ವಿದ್ಯಾ ದದಾತಿ ವಿನಯಂ’ ಎಂಬುದು ಪ್ರಾಚೀನ ಸಂಸ್ಕೃತ ವಾಣಿ..ಭಾರತದ ಇತಿಹಾಸವನ್ನು ಗಮನಿಸಿದಲ್ಲಿ ಈ ಮಾತುಗಳು ಸಾರ್ವಕಾಲಿಕ ಸತ್ಯವಾದದ್ದೆಂಬುದು ಮನದಟ್ಟಾಗುತ್ತದೆ. ಯಾವುದೇ ವಿದ್ವಾಂಸರನ್ನು ಉದಾಹರಣೆಗೆ ತೆಗೆದುಕೊಂಡಾಗಲೂ ಅವರ ಜ್ಞಾನಕ್ಕೆ ಸಿಗುವ ಗೌರವವವು ಮತ್ತೆಲ್ಲೂ ಸಿಗದು ಎಂಬುದು ಅರಿವಾಗುತ್ತದೆ..ಸಂಸ್ಕೃತ ಶುಭಾಷಿತವೊಂದರ ದ್ವಿತೀಯಾರ್ಧವು ಹೀಗೆ ಹೇಳುತ್ತದೆ ‘ಸ್ವದೇಶೇ ಪೂಜ್ಯತೆ ರಾಜ ವಿದ್ವಾನ್ ಸರ್ವತ್ರ ಪೂಜ್ಯತೆ‘ ..ಇದರ ಅರ್ಥ ರಾಜನಾದವನು ಸ್ವದೇಶದಲ್ಲಿ ಮಾತ್ರ ಗೌರವಿಸಲ್ಪಟ್ಟರೆ ವಿದ್ವಾಂಸನಾದವನು ಎಲ್ಲೆಡೆಯಲ್ಲೂ ಗೌರವಿಸಲ್ಪಡುತ್ತಾನೆ ಎಂದು.ಆದ್ದರಿಂದಲೇ ನಮ್ಮ ಹಿರಿಯರು ವಿದ್ಯೆಗೆ ಅತ್ಯಧಿಕ ಮಹತ್ವವನ್ನು ನೀಡಿದ್ದರು. ಆಗ ಶಿಕ್ಷಣವು ಗುರುಕುಲ ಪದ್ದತಿಯಲ್ಲಿ ನಡೆಯುತ್ತಿತ್ತು.ವಿದ್ಯಾರ್ಜನೆಯ ಉದ್ದೇಶ ಕೇವಲ ಹಣ ಮತ್ತು ಹೆಸರನ್ನು ಸಂಪಾದಿಸುವುದು ಮಾತ್ರವಾಗಿರಲಿಲ್ಲ.ವಿನಯವನ್ನೂ ಸಂಸ್ಕಾರವನ್ನೂ ಕಲಿಯುವುದು ಪ್ರತಿಯೊಬ್ಬ ವಿದ್ಯಾರ್ಥಿಯ ಕರ್ತವ್ಯವಾಗಿತ್ತು.

ಭಾರತದಲ್ಲಿ ಶಿಕ್ಷಣವೆಂದಿಗೂ ವ್ಯಾಪಾರವಾಗಿರಲಿಲ್ಲ.ಆದ್ದರಿಂದಲೇ ಗುರುಗಳು ವಿದ್ಯಾರ್ಥಿಗಳನ್ನು ತಮ್ಮ ಮಕ್ಕಳಂತೆಯೇ ಆದರಿಸುತ್ತಿದ್ದರು.ತಮ್ಮ ಗುರುಗಳ ಅಥವಾ ತಾವು ವಿದ್ಯಾಭ್ಯಾಸ ನಡೆಸಿದ ವಿದ್ಯಾಲಯದ ಹೆಸರನ್ನು ಹೇಳಿದ ತಕ್ಷಣವೇ ವ್ಯಕ್ತಿಯ ಸ್ಥಾನವನ್ನು ನಿರ್ಧರಿಸಬಹುದಾಗಿದ್ದ ದಿನಗಳಿದ್ದವು.ಆ ಪದ್ದತಿಯು ಇಂದಿಗೂ ಇದೆ.ಸತ್ಯಸಾಯಿ ಲೋಕಸೇವಾ ವಿದ್ಯಾ ಸಂಸ್ಥೆ,ಮಾತಾ ಅಮೃತಾನಂದಮಯಿ ವಿದ್ಯಾಸಂಸ್ಥೆ,ಚಿನ್ಮಯ ವಿದ್ಯಾಲಯ,ಶ್ರೀ ರಾಮ ವಿದ್ಯಾಕೇಂದ್ರ ,ಸಿದ್ದಗಂಗಾ ವಿದ್ಯಾಲಯಗಳು ಕೇವಲ ಶಾಲಾ ವಿದ್ಯಾಭ್ಯಾಸಗಳನ್ನು ಮಾತ್ರ ನೀಡುವುದರ ಬದಲಾಗಿ ವಿದ್ಯಾರ್ಥಿಗಳಲ್ಲಿ ಸಂಸ್ಕಾರಗಳನ್ನು ತುಂಬುತ್ತವೆ.ಐಐಎಂ ಕಾಲೇಜುಗಳಲ್ಲಿ ಕಲಿತವರಿಗೆ ಅನೇಕ ಸಂಸ್ಥೆಗಳು ಕರೆದು ಉದ್ಯೋಗ ನೀಡುತ್ತವೆ..ಇಂತಹಾ ವಿದ್ಯಾಲಯಗಳಲ್ಲಿ ಪ್ರವೇಶ ಸಿಗುವುದೂ ಸುಲಭದ ಮಾತಲ್ಲ..ಅನೇಕ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಉತ್ತೀರ್ಣರಾದ ಬಳಿಕ ಇಂತಹಾ ವಿದ್ಯಾಲಯಗಳಲ್ಲಿ ಪ್ರವೇಶಾತಿ ದೊರಕುತ್ತವೆ.

ಇಂತಹಾ ಪ್ರಸಿದ್ಧ ವಿದ್ಯಾನಿಲಯಗಳಲ್ಲಿ JNU ವಿಶ್ವವಿದ್ಯಾನಿಲಯವೂ ಒಂದು.ಜವಾಹರ್ಲಾಲ್ ನೆಹರೂ ಯೂನಿವರ್ಸಿಟಿ ಎಂಬುದು ಈ ಸಂಸ್ಥೆಯ ಪೂರ್ಣನಾಮ.ಈ ವಿದ್ಯಾಲಯದ ಬಗ್ಗೆ ಗೊತ್ತಿಲ್ಲದವರ್ಯಾರೂ ಇರಲಾರರು. ಇಲ್ಲಿ ಪ್ರತಿ ೧೫ ದಿನಗಳಿಗೊಮ್ಮೆ ಗಲಭೆಗಳು ನಡೆದು ಮಾಧ್ಯಮಗಳಲ್ಲಿ ಹಲವಾರು ದಿನಗಳು ಚರ್ಚೆಗೆ ಒಳಪಡುವ ಕಾಲೇಜಿದು ಎಂಬುದು ಬಹುಷಃ ಅಲ್ಲಿನ ವಿದ್ಯಾರ್ಥಿಗಳಿಗೆ ಹೆಮ್ಮೆಯ ವಿಷಯವಾಗಿರಬಹುದು ಆದರೆ ನಮ್ಮಂತಹಾ ಸಾಮಾನ್ಯ ಜನರಿಗಲ್ಲ,ಕೆಲವು ತಿಂಗಳ ಮೊದಲು ವಸತಿ ಶುಲ್ಕ ಏರಿಕೆಯ ವಿರುದ್ಧವಾಗಿ ಹೋರಾಟ!! ನಡೆಸಿ ಬೀದಿಗಿಳಿದು ಸುದ್ದಿಯಾಗಿದ್ದವರು,ಅದಕ್ಕೂ ಮೊದಲು ಹಾಜರಾತಿ ಕಡ್ಡಾಯವಾದಾಗಲೂ ಗಲಭೆ ಎಬ್ಬಿಸಿದ್ದರು. ಇಲ್ಲಿ ಗಮನಿಸಬೇಕಾದ ಅಂಶ ಶುಲ್ಕ ಹೆಚ್ಚಿಸಿದ ಬಳಿಕ ವಾರ್ಷಿಕ ೩,೬೦೦ ರೂಪಾಯಿ..ಹಿಂದುಳಿದ ಮತ್ತು ಬಡತನ ರೇಖೆಗಿಂತ ಕೆಳಗಿರುವ ವಿದ್ಯಾರ್ಥಿಗಳಿಗೆ ವಾರ್ಷಿಕ ಶುಲ್ಕ ೧೮೦೦ ರೂಪಾಯಿ..ಅಲ್ಲಿನ ವಿದ್ಯಾರ್ಥಿಗಳ ಪ್ರಕಾರ ಈ ಶುಲ್ಕವು ಶೋಷಣೆಯಂತೆ….ಅದೇ ದೆಹಲಿಯ IIT ಕಾಲೇಜಿನಲ್ಲಿ ೨೦೦೦೦ ಮತ್ತು ೧೫೦೦೦ ವಾರ್ಷಿಕ ಶುಲ್ಕವಿದೆ..ಐಐಎಂ ಇಂದೋರ್ ನಲ್ಲಿ ಮೂರು ವಿದ್ಯಾರ್ಥಿಗಳ ಕೊಠಡಿಯ ಶುಲ್ಕ ೨೫,೦೦೦ ವಾದರೆ ಒಬ್ಬರೇ ಇರುವ ಕೊಠಡಿಯ ಶುಲ್ಕ ೭೫,೦೦೦ ರೂಪಾಯಿ. jnu ವಸತಿ ನಿಲಯದಲ್ಲಿ ಮೊದಲಿನ ಶುಲ್ಕ ಕೇವಲ ೨೦ ರೂಪಾಯಿ ಇದ್ದಿತ್ತು.ಅದು ಕೂಡಾ ೨೦೧೯ ರ ವರೆಗೆ..೨೦ ರುಪಾಯಿಗೆ ಸಂಜೆಯ ತಿಂಡಿಯೂ ಲಭ್ಯವಾಗದ ಈ ಕಾಲದಲ್ಲಿ ದೆಹಲಿಯಲ್ಲಿ ಒಂದು ತಿಂಗಳಿಗೆ ೨೦ ರೂ ಶುಲ್ಕದಲ್ಲಿ ವಸತಿ ಲಭ್ಯವಿತ್ತು..ತಮಗೆ ಶುಲ್ಕ ಹೆಚ್ಚಳದಿಂದ ಆರ್ಥಿಕ ಹೊರೆಯಾಗುತ್ತದೆ ಎಂದು ಅರಚಾಡಿದ್ದ ವಿದ್ಯಾರ್ಥಿಗಳು ಅದರ ೨೦% ಹಣವನ್ನು ಮೊಬೈಲ್ ರೀಚಾರ್ಜ್ ಗೆ ಬಳಸುತ್ತಾರೆ.

ಅದೆಲ್ಲಾ ಹಳೆಯ ವಿಚಾರ ಬಿಡಿ..ಮೊನ್ನೆ NRC ಮತ್ತು CAA ಯ ವಿಚಾರದಲ್ಲಿ ಈ ವಿದ್ಯಾರ್ಥಿಗಳು ನಡೆಯಿದ ಪುಂಡಾಟಿಕೆ ಅನಾಗರೀಕರ ವರ್ತನೆಯಂತಿತ್ತು.ವಿದ್ಯಾರ್ಥಿಗಳಾಗಿ ತರಗತಿಯಲ್ಲಿ ಕುಳಿತುಕೊಳ್ಳಲು ಎಳ್ಳಷ್ಟೂ ಆಸಕ್ತಿ ಇವರಿಗಿದ್ದಂತೆ ಕಾಣಿಸುವುದಿಲ್ಲ.ಪೊಲೀಸರ ಮೇಲೆಯೇ ದಬ್ಬಾಳಿಕೆ ನಡೆಸಿ ಪೋಲೀಸರ ಮೇಲೆಯೇ ಗೂಬೆಕೂರಿಸುವ ಗೋಸುಂಬೆಯ ಬುದ್ದಿ ಇವರಿಗೆ ಕರಗತವಾಗಿದೆ.ಇದೀಗ ಈ ಎರಡು ಕಾಯ್ದೆಗಳ ವಿರುದ್ಧ ನಡೆಯುತ್ತಿರುವ ಪ್ರತಿಭಟನೆಗಳು ಕಡಿಮೆಯಾಗುತ್ತಿದೆ ಎಂದು ಅರಿವಾಗುತ್ತಿದ್ದಂತೆಯೇ ಇದೀಗ ಹೊಸ ನಾಟಕ ನಡೆಸಿದ್ದಾರೆ..ಈ ನಾಟಕ ನಡೆದದ್ದು ಮೊನ್ನೆ ರಾತ್ರೆ. ಮುಸುಕು ಧರಿಸಿ ಬಂದ ಹಲವಾರು ನಮ್ಮ ಮೇಲೆ ಹಲ್ಲೆ ನಡೆಸಿದ್ದಾರೆ.ಈ ಮುಸುಕುಧಾರಿಗಳು ಆರೆಸ್ಸೆಸ್ ಮತ್ತು ಎಬಿವಿಪಿ ಕಾರ್ಯಕರ್ತರು ಎಂಬುದು ಇವರ ವಾದ..ಮುಸುಕು ಧರಿಸಿದ್ದರೆಂಬುದನ್ನು ಹೇಳುವವರೂ ಇವರೇ ಹಲ್ಲೆ ನಡೆಸಿದವರು ಆರೆಸ್ಸೆಸ್ ನವರು ಎಂದು ಹೇಳುವವರೂ ಇವರೇ.ಹಲ್ಲೆ ನಡೆಸಿದವರು ಮುಸುಕುಧಾರಿಗಳಾಗಿದ್ದರೆ ಅವರು ಆರೆಸ್ಸೆಸ್ ನವರೋ ಇಲ್ಲಾ ಕಾಂಗ್ರೆಸ್ ನವರೋ ಅಲ್ಲ ಸಿಮಿ ಯವರೋ ಇವರಿಗೆ ಹೇಗೆ ಗೊತ್ತಾಗುವುದು..?? ಸರಿ ದಾಳಿ ನಡೆದಾಗ ಅವರು ಮೊದಲಿಗೆ ಪೊಲೀಸ್ ರಿಗೆ ಕರೆ ಮಾಡಿದ್ದರೋ ಅಥವಾ ಎಡ ಪಂಥೀಯ ಮಾಧ್ಯಮಗಳಿಗೂ?? ಏಕೆಂದರೆ ಅಲ್ಲಿಗೆ ಮೊದಲು ತಲುಪಿದ್ದು ಮಾಧ್ಯಮದವರು..ಅದು ಹೇಗೆ??ದಾಳಿ ನಡೆದ ಬಳಿಕ ಬರ್ಖಾ ದತ್ ಒಂದು ನಂಬರ್ ಅನ್ನು ಕಂಡುಹುಡುಕುತ್ತಾಳೆ…ಆದರೆ ಅದು ಕಾಂಗ್ರೆಸ್ ಪಕ್ಷದ ನಂಬರ್….ಅಲ್ಲಿ ದಾಳಿ ನಡೆದಾಕ್ಷಣ ಸ್ವರಾ ಭಾಸ್ಕರ್ ತಾಯಿ ಸಹಿತ ಅನೇಕರು ಅಲ್ಲಿ ತಲುಪುತ್ತಾರೆ.ಅಷ್ಟೇ ಅಲ್ಲದೆ ಮಧ್ಯರಾತ್ರೆಯಲ್ಲೇ ಹಲವಾರು ‘ಸೊ ಕಾಲ್ಡ್ ಸೆಲೆಬ್ರಿಟಿ’ಗಳು ಮೊಂಬತ್ತಿ ಹಿಡಿದು ರಸ್ತೆಯಲ್ಲಿ ಶಾಂತಿ ಮಂತ್ರ ಜಪಿಸುತ್ತಾರೆ.

ರಾಜಕೀಯದಲ್ಲಿ ಸಿಂಪತಿಯ ಮುಖಾಂತರ ಮತಗಳಿಸುವ ಒಂದು ತಂತ್ರವಿದೆ.ತನ್ನ ಮೇಲೆ ತಾನೇ ದಾಳಿ ನಡೆಸಿಕೊಂಡು ವಿಕ್ಟಿಮ್ ಕಾರ್ಡ್ ಆಡುವಂತಹದ್ದು.ಅತ್ಯಂತ ಹೆಚ್ಚು ರಾಜಕೀಯವನ್ನು ನಡೆಸುವ jnu ಈ ರೀತಿ ಮಾಡಿಲ್ಲವೆಂದು ನಾವು ಹೇಗೆ ನಂಬಬಹುದು..ದೇಶದಲ್ಲಿ ನೂರಾರು ವಿಶ್ವವಿದ್ಯಾಲಯಗಳಿವೆ..ಆದರೆ ಇಂತಹ ನಾಟಕಗಳು jnu ಮತ್ತು ಆಲಿಘಡ್ ಮುಸ್ಲಿಂ ಯುನಿವೆರ್ಸಿಟಿ ಯಲ್ಲಿ ಮಾತ್ರ ಯಾಕೆ ಜರಗುತ್ತಿವೆ?? ಕಾರಣ ಸಿಂಪಲ್ ಕಮ್ಯುನಿಸ್ಟರಿಗೆ ತಮ್ಮ ಅಸ್ತಿತ್ವ ಕಳೆದುಕೊಳ್ಳುವ ಭೀತಿ..ಶ್ರೀ ಕೆ ಕೆ ಮೊಹಮ್ಮದ್ ತಮ್ಮ ಆತ್ಮಚರಿತ್ರೆಯಲ್ಲಿ ಹೇಳಿದ್ದಾರೆ ನೀವು ಹಿಂದುವಾಗಿದ್ದು ಕಮ್ಯುನಿಷ್ಟ್ ತತ್ವವನ್ನು ಬೆಂಬಲಿಸದಿದ್ದಲ್ಲಿ ಅವರು ನಿಮ್ಮನ್ನು ಆರೆಸ್ಸೆಸ್ ಎಜೇಂಟ್ ಎಂದು ಕರೆಯುತ್ತಾರೆ ಮುಸಲ್ಮಾನನಾಗಿದ್ದು ಅವರನ್ನು ಬೆಂಬಲಿಸದಿದ್ದಲ್ಲಿ ನಿಮ್ಮನ್ನು ಮುಸ್ಲಿಂ ಎಸ್ಟ್ರಿಮಿಶ್ಟ್ ಎಂದು ಘೋಷಿಸುತ್ತಾರೆ..ಅವರ ಪರವಾಗಿಲ್ಲದವರನ್ನು ನಾಶಪಡಿಸಲು ಅವರು ಯಾವುದೇ ಹಂತಕ್ಕೂ ಇಳಿಯಬಲ್ಲರು ಎಂದು. ಇದು ನೂರಕ್ಕೆ ನೂರು ಸತ್ಯವಾದ ಮಾತು..ಇತ್ತೀಚಿಗೆ ಅಸ್ತಿತ್ವ ಕಳೆದುಕೊಳ್ಳುತ್ತಿರುವ ಕಾಂಗ್ರೆಸ್ ಕೂಡಾ jnu ನಲ್ಲಿ ತನ್ನ ಅಸ್ತಿತ್ವ ಕಂಡುಕೊಳ್ಳುವ ಪ್ರಯತ್ನ ನಡೆಸುತ್ತಿದೆ ಎಂಬುದಕ್ಕೆ ನಿನ್ನೆ ಅಲ್ಲಿದ್ದ ಪ್ರಿಯಾಂಕಾ ವಾದ್ರಾರ ಉಪಸ್ಥಿತಿಯೇ ಸಾಕ್ಷಿ..

jnu ೧ ಸಾವಿರ ಎಕರೆ ಪ್ರದೇಶದಲ್ಲಿ ಹರಡಿಕೊಂಡಿರುವ ವಿದ್ಯಾಸಂಸ್ಥೆ.ಈ ಸಂಸ್ಥೆಯಿರುವ ಪ್ರದೇಶದಲ್ಲಿ ಒಂದು ಎಕರೆ ಸ್ಥಳದ ಬೆಲೆ ೩೦೦ ಕೋಟಿ ರೂಪಾಯಿ..ಸಾಮಾನ್ಯ ಮೂರುಲಕ್ಷ ಕೋಟಿ ರೂಪಾಯಿ ಬೆಲೆಬಾಳುವ ಸ್ಥಳವದು. ಈ ವಿದ್ಯಾಲಯದಲ್ಲಿ ೪೭೦ ಅಧ್ಯಾಪಕರೂ,೭೩೦೦ ವಿದ್ಯಾರ್ಥಿಗಳೂ ಇದ್ದಾರೆ. ವಿದ್ಯಾಸಭ್ಯಾಸಕ್ಕೆ ಭಾರತದ ವಾರ್ಷಿಕ ಬಜೆಟ್ ೬೯,೦೭೪ ಕೊಟಿಯಾದರೆ ಕೇವಲ jnu ವಿನ ಮೇಲೆ ಸರಕಾರವು ವರ್ಷಾಮ್ಪ್ರತಿ ಸುಮಾರು ೨೦೦ ಕೋಟಿ ಹಣವನ್ನು ವ್ಯಯಿಸುತ್ತದೆ. ನಮ್ಮಂತಹಾ ಅನೇಕರ ತೆರಿಗೆ ಹಣದಿಂದ ಉತ್ಪತ್ತಿಯಾಗುತ್ತಿರುವುದು ಗಲಭೆಕೋರರು…ಒಂದೋ ಆ ಮೂರುಲಕ್ಷ ಕೋಟಿ ಬೆಲೆಬಾಳುವ ಸ್ಥಾನವನ್ನು ಮಾರಿ ಹಣವನ್ನು ಹಿಂದುಳಿದ ಪ್ರದೇಶಗಳಲ್ಲಿ ವಿದ್ಯಾಭ್ಯಾಸಕ್ಕೋ ಆಸ್ಪತ್ರೆಗಳಿಗೋ ಬಳಸಬಹುದು..ಇಲ್ಲದಿದ್ದಲ್ಲಿ ಅಲ್ಲಿ ಸೈನಿಕ ಶಾಲೆಯನ್ನು ತೆರೆಯಿರಿ..ದಯವಿಟ್ಟು ಜವಾಹರ್ಲಾಲ್ ಯುನಿವೆರ್ಸಿಟಿ ಎಂಬ ಕೆಸರನ್ನು ಸ್ವಚ್ಛಗೊಳಿಸಿ.

-Deepashree M

Tags

Related Articles

FOR DAILY ALERTS
Close