ಪ್ರಚಲಿತ

ವೈದಿಕ ನಾಗರೀಕತೆ ಎಂಬ ಸರಸ್ವತೀ ನದಿ ನಾಗರೀಕತೆಯೂ..ಆರ್ಯರ ಆಕ್ರಮಣವೆಂಬ ಸುಳ್ಳಿನ ಕಂತೆಯೂ.. ಸತ್ಯವೇನೆಂದು ನಿಮಗೆ ಗೊತ್ತೇ?

ಳೆದ ಶತಮಾನದ ಆರಂಭದಲ್ಲಿ ನಡೆದ ಉತ್ಖತನಗಳಿಂದ ಹರಪ್ಪ ಮತ್ತು ಮೊಹೆಂಜದಾರೋ ಅವಶೇಷಗಳು ಬೆಳಕಿಗೆ ಬಂದು ಭಾರತದ ಇತಿಹಾಸದ ಅಧ್ಯಾಯಕ್ಕೆ ಹೊಸತೊಂದು ತಿರುವನ್ನು ನೀಡಿತು.೧೫ ಲಕ್ಷ ಚದರ ಕಿಲೋಮೀಟರು ಗಿಂತಲೂ ಹೆಚ್ಚು ವಿಸ್ತಾರವಾದ ಮತ್ತು ಈಜಿಪ್ಟ್ ಮೆಸಪಟೋಮಿಯಾಗಳಿಗಿಂತ ಹೆಚ್ಚು ಪ್ರಬುದ್ಧವಾದ ನಾಗರಿಕತೆಯೊಂದರ ಪರಿಚಯ ಜಗತ್ತಿಗೆ ಆಯಿತು. ಇದುವೇ ಪ್ರಸಿದ್ದವಾದ ಸಿಂಧೂ ಕಣಿವೆಯ ನಾಗರೀಕತೆ.ಆರ್ಯರ ಆಕ್ರಮಣ ಭಾರತದ ಮೇಲಾದ ಬಳಿಕ ಭಾರತದಲ್ಲಿ ನಾಗರೀಕತೆ ಬೆಳೆಯಿತು ಎಂಬ ಆಧಾರದಲ್ಲಿ ರಚಿಸಲಾಗಿದ್ದ ಭಾರತದ ಇತಿಹಾಸವು ಅಸಮರ್ಪಕವಾದುದೆಂಬುದನ್ನು ಈ ಅನ್ವೇಷಣೆಯು ಸಾಬೀತು ಪಡೆಸಿತು.ಮೊದಮೊದಲು ಇತಿಹಾಸತಜ್ಞರು ತಾವು ಆರ್ಯರ ಆಕ್ರಮಣ ದ ಕಾಲವೆಂದು ಸೂಚಿಸಿದ್ದ ಕ್ರಿಸ್ತಪೂರ್ವ ೧೫೦೦ ಹರಪ್ಪ ನಾಗರೀಕತೆಯ ಸಮಾಪ್ತಿಯ ಕಾಲ ಎಂದು ಸರಿಹೊಂದಿಸಲು ಪ್ರಯಾಸಪಟ್ಟರು.ಆದರೆ ಹರಪ್ಪ ನಾಗರೀಕತೆ ಕ್ರಿಸ್ತಪೂರ್ವ ೧೫೦೦ ವರ್ಷದ ಹಲವು ಶತಮಾನಗಳ ಮುಂಚೆಯೇ ಅಸ್ತಂಗತವಾಗಿತ್ತು.ಪ್ರಾಚೀನ ಅವಶೇಷಗಳ ಕಾಲ ನಿರ್ಣಯದಲ್ಲಿ ನ್ಯೂನ್ಯಾಧಿಗಳಿಗೆ ಗರಿಷ್ಟ ಅವಕಾಶ ನೀಡಿದರೂ ಹರಪ್ಪಾ ನಾಗರೀಕತೆಯ ಅಂತ್ಯವು ೧೬೦೦ ರರ ನಂತರಹರಪ್ಪ ನಡೆದಿರಲು ಖಂಡಿತಾ ಅಸಾಧ್ಯ.ಈ ತಿದ್ದುಪಡಿಗಳನ್ನು ಮತ್ತಷ್ಟು ಜಗ್ಗಿದರೂ ಲಭ್ಯವಾಗುವ ಕಾಲಕ್ಕೂ ಇತಿಹಾಸದ ಆಕ್ರಮವವಾದಿಗಳು ನೀಡುವ ಕಾಲಕ್ಕೂ ಒಂದೆರಡು ಶತಮಾನಗಳ ಅಂತರವು ಲಭ್ಯವಾಗುತ್ತದೆ.ಹರಪ್ಪಾ ನಾಗರೀಕತೆಯು ಪ್ರೌಢ ಹಂತವನ್ನು ತಲುಪಿದ್ದು ಕ್ರಿಸ್ತ ಪೂರ್ವ ೩೦೦೦ ದಿಂದ ೨೦೦೦ ವರೆಗಿನ ಅವಧಿಯಲ್ಲಿ.ಆ ಸಮಯದಲ್ಲಿ ಇತಿಹಾಸಗಾರರು ಹೇಳುವಂತಹಾ ಯಾವುದೇ ಆಕ್ರಮಣದ ವಿಧ್ವಂಸದ ಯಾವುದೇ ಕುರುಹುಗಳಾಗಲೀ ಅವಶೇಷಗಳಾಗಲಿ ದೊರಕಿಲ್ಲ.ಆದ್ದರಿಂದ ಈ ಆಕ್ರಮಣ ಎಂಬ ಕಲ್ಪನೆಯು ಸಂಪೂರ್ಣ ಅವೈಜ್ಞಾನಿಕವೆಂದು ಹೇಳಬಹುದು.

ಪ್ರಖ್ಯಾತ ಪುರಾತತ್ವ ಶಾಸ್ತ್ರಜ್ಞರಾದ ಜಿಮ್ ಶಾಫರ್ ಅವರು “ದಕ್ಷಿಣ ಏಷ್ಯಾದ ಪ್ರಾಚೀನ ಇತಿಹಾಸದ ಯಾವುದೇ ಹಂತದಲ್ಲಿ ಇಂಡೋಆರ್ಯನ್ನರಾಗಲಿ , ಯುರೋಪಿಯನ್ನರಾಗಲಿ ಆಕ್ರಮಣ ನಡೆಸಿದರೆನ್ನಲು ಯಾವುದೇ ಪುರಾತತ್ವ ಶಾಸ್ತ್ರೀಯ ಆಧಾರಗಳಿಲ್ಲ.ಪ್ರತಿಯಾಗಿ ಪ್ರಾಚೀನ ಕಾಲದಿಂದ ಇತಿಹಾಸಗೋಚರ ಕಾಲದ ವರೆಗೆ ಇಲ್ಲಿ ಸಾಂಸ್ಕೃತಿಕ ಬೆಳವಣಿಗೆಗೆ ಅನುಗುಣವಾದ ಸ್ಥಳೀಯ ಬದಲಾವಣೆಗಳಷ್ಟೇ ಆಗುತ್ತಾ ಬಂದಿವೆಯೆನ್ನಲು ಅನುಕ್ರಮವಾದ ಪುರಾತತ್ವ ದಾಖಲೆಗಳು ಇವೆ.” ಎಂದು ಹೇಳುತ್ತಾರೆ. ಹರಪ್ಪದಲ್ಲಿ ದೊರಕಿರುವುದು ವೈದಿಕ ಆರ್ಯ ನಾಗರೀಕತೆಯ ಭಾಗ ಎನ್ನಲು ಹಲವಾರು ಪ್ರತ್ಯಕ್ಷ ಸಾಕ್ಷಿಗಳು ದೊರಕಿವೆ.ಕೆಲವು ಇತಿಹಾಸಗಾರರ ಕಲ್ಪನೆಗೆ ವಿರುದ್ಧವಾಗಿ ಹರಪ್ಪ ಹರಹಿನ ಪ್ರದೇಶಗಳಲ್ಲೂ ಕುದುರೆಗಳ ಬಳಕೆಯೂ ಇದ್ದುದು ಈಗ ಧೃಡಪಟ್ಟಿದೆ. ಕುದುರೆಗಳು ವೈದಿಕ ನಾಗರೀಕತೆಯ ಹೊರಟಾದವೆಂದೂ,ಯುರೋಪಿನಲ್ಲೂ ಮಧ್ಯ ಏಷ್ಯಾದಲ್ಲೂ ಮಾತ್ರ ಕುದುರೆಗಳ ಬಳಕೆ ಇತ್ತೆಂದೂ ಇದು ಆರ್ಯರು ಆ ಪ್ರದೇಶದಿಂದ ಬಂದವರೆಂದೂ ಸೂಚಿಸುದಾಗಿ ವಾದಗಳಿದ್ದವು.ಆದರೆ ಆ ವಾದಗಳೀಗ ನಿರಾಧಾರವಾದದ್ದೆಂದು ಧೃಡ ಪಟ್ಟಿರುತ್ತದೆ.ಪಳಗಿಸಲ್ಪಟ್ಟ ಕುದುರೆ ಮತ್ತಿತರ ವನ್ಯಜೀವಿಗಳ ಅವಶೇಷವು ಭಾರತದ ಒಳನಾಡಿನ ಕೊಡಿವಾ,ಮಹಾಗಾರ ಮುಂತಾದ ಸ್ಥಳಗಳಲ್ಲಿ ದೊರೆತಿದ್ದು ಈ ಅವಶೇಷಗಳು ಕ್ರಿಸ್ತ ಪೂರ್ವ ೬೫೦೦ ವರ್ಷಕ್ಕೂ ಹಿಂದಿನವೆಂದು ಧೃಡಪಟ್ಟಿದೆ. .ಈ ಅವಶೇಷಗಳು ನವಶಿಲಾಯುಗಗ್ಗೆ ಸೇರಿದವುಗಳಾಗಿವೆ. ಇತಿಹಾಸಜ್ಞ ಎಸ್.ಆರ್ ರಾವ್ ಅವರು “ ಕುದುರೆ,ಭತ್ತ ಇವುಗಳು ಸಿಂಧೂ ನದೀ ನಾಗರೀಕತೆಯಲ್ಲಿ ಕಾಣದಿದ್ದುದರಿಂದ ಇವು ದ್ರಾವಿಡ ಮೂಲವೆಂಬುದನ್ನು ಸೂಚಿಸುತ್ತದೆ ಎಂದು ಇದುವರೆಗೆ ವಾದಿಸಲಾಗುತ್ತಿತ್ತು.ಆದರೆ ಈ ವಾದದ ಮಿಥ್ಯೆಯೂ ಈಗ ಸಾಕ್ಷ್ಯದೊಂದಿಗೆ ಧೃಡಪಟ್ಟಿದೆ.ಕುದುರೆ ಮೂಳೆಗಳ ಮತ್ತು ಭತ್ತದ ಅವಶೇಷಗಳು ಲೋಥಾಲ್,ಕಾಲಿಬಂಗನ್,ಸುರ್ಕೋಟದ,ರೊಪಾರ್ ಗಳಲ್ಲಿಯೂ ಮತ್ತು ಪಾಕಿಸ್ತಾನದ ಮೊಹೆಂಜದಾರೋವಿನಲ್ಲಿಯೂ ಲಭ್ಯವಾಗಿದೆ.ಇದಕ್ಕೆ ಸಂವಾದಿಯಾಗಿ,ಹರಪ್ಪ ಸಮಾಜದ ಧಾರ್ಮಿಕ ವಿಧಿಗಳ ಮತ್ತು ವೈದಿಕ ಆರ್ಯದ ವಿಧಿಗಳ ನಡುವೆ ಸಂಪೂರ್ಣ ಸಾದೃಶ್ಯ ಎದ್ದು ಕಾಣುತ್ತವೆ.ಧಾರ್ಮಿಕ ಕಲ್ಪನೆಗಳು,ದೇವತೆಗಳು,ಯಜ್ಞವೇದಿಗಳು ಎಲ್ಲವೂ ವೈದಿಕ ಆರ್ಯರವೇ ಆಗಿವೆ” ಎಂದು ಉಲ್ಲೇಖಿಸುತ್ತಾರೆ.

ಇವೆಲ್ಲದಕ್ಕಿಂತ ಹೆಚ್ಚ್ಚಾಗಿ ಉತ್ತರ ಭಾರತದಲ್ಲೂ ಪಶ್ಚಿಮ ಏಷ್ಯಾದಲ್ಲೂ ಉಂಟಾದ ವ್ಯಾಪಕ ಪ್ರಾಕೃತಿಕ ವ್ಯತ್ಯಾಸಗಳೇ ಹರಪ್ಪ ಮತ್ತು ಮೊಹೆಂಜದಾರೊದ ಅಕ್ಕೇಡಿಯನ್ ಸಾಮ್ರಾಜ್ಯದ ಕುಸಿತಕ್ಕೆ ಕಾರಣವಾಯಿತು ಎನ್ನಲು ಅನೇಕ ಪುರಾವೆಗಳು ೨೦ ನೇ ಶತಮಾನದಲ್ಲಿ ದೊರಕಿವೆ,ಕ್ರಿಸ್ತ ಪೂರ್ವ ೨೨೦೦ ರಲ್ಲಿ ಆರಂಭವಾದ ತೀವ್ರ ಕ್ಷಾಮ ಸುಮಾರು ಮೂರು ಶತಮಾನಗಳ ಕಾಲ ಮುಂದುವರೆದು ಭಾರತದಿಂದ ಏಜಿಯನ್ ಪ್ರದೇಶದ ವರೆಗಿನ ಎಲ್ಲಾ ಪ್ರಾಚೀನ ನಾಗರೀಕತೆಗಳ ಮೇಲೆ ಪರಿಣಾಮ ಬೀರಿತು.ಹರಪ್ಪಾ ನಾಗರೀಕತೆಯ ಅಂತ್ಯಕ್ಕೆ ಆರ್ಯರ ಆಕ್ರಮಣ ಕಾರಣವಲ್ಲ ಎನ್ನಲು ಅನೇಕ ಸಾಕ್ಷ್ಯಗಳು ಲಭಿಸಿವೆ.ಸರಸ್ವತೀ ನದಿಯು ಬತ್ತಿಹೋದದ್ದೇ ವೇದಕಾಲೀನ ನಾಗರೀಕತೆಯ ಅವಸಾನಕ್ಕೆ ಕಾರಣವೇ ಹೊರತು ಯಾವುದೇ ಆಕ್ರಮಣವಲ್ಲ.ಸರಸ್ವತೀ ನದಿಯು ಬತ್ತಿದ್ದು ಕ್ರಿಸ್ತಪೂರ್ವ ೧೬೦೦ ರಲ್ಲಿ ಎಂಬ ಮಿತ್ಯ ನಂಬಿಕೆಯಿತ್ತು ಆದರೆ ನದಿಯು ಕ್ರಿಸ್ತಪೂರ್ವ ೨೦೦೦ ಕ್ಕೂ ವರ್ಷಗಳಿಗೂ ಮೊದಲಾಗಿ ಬತ್ತಿಹೋಗಿತ್ತು.ಹೀಗೆ ವೈದಿಕ ನಾಗರೀಕತೆಯ ಕೊನೆಯ ಹಂತ ಹಾಗೂ ಹರಪ್ಪಾ ನಾಗರೀಕತೆಯ ಉಚ್ಛ್ರಾಯ ಸ್ಥಿತಿ ಎರಡೂ ಸಮಕಾಲೀನವಾಗಿದೆ.ಈ ಎರಡರ ಅವಸಾನಕ್ಕೂ ಕಾರಣ ಭೀಕರವಾದ ಕ್ಷಾಮವಾಗಿತ್ತು.ಹರಪ್ಪಾ ಸಾಮ್ರಾಜ್ಯದೊಂದಿಗೆ ವಾಣಿಜ್ಯ ವ್ಯವರಾಹವನ್ನು ಹೊಂದಿದ್ದ ಮೆಸಪಟೋಮಿಯಾದ ಅಕ್ಕೇಡಿಯನ್ ಸಾಮ್ರಾಜ್ಯವೂ ಸಹಾ ತೀವ್ರವಾದ ಕ್ಷಾಮದಿಂದಾಗಿ ಕ್ರಿಸ್ತ ಪೂರ್ವ ೨೨೦೦ ರ ಸಮಯದಲ್ಲಿ ಅಸ್ತಂಗತವಾಯಿತು.ಒಂದರಿಂದೊಂದು ಸಾವಿರಾರು ಮೈಲಿ ದೂರದಲ್ಲಿದ್ದ ಪ್ರತ್ಯೇಕ ನಾಗರೀಕತೆಗಳೂ ಏಕಕಾಲದಲ್ಲಿ ವಿನಾಶಹೊಂದಲು ಭೀಕರವಾದ ಕ್ಷಾಮವೇ ಕಾರಣವಾಗಿತ್ತು.

ಋಗ್ವೇದದಲ್ಲಿ ವರ್ಣಿಸಿರುವಂತೆ ಸರಸ್ವತೀ ನದಿಯು ಪರ್ವತ ಪ್ರದೇಶದಿಂದ ಸಮುದ್ರ ಪರ್ಯಂತ ಹರಿಯುತ್ತಿದ್ದದ್ದು ಕ್ರಿಸ್ತ ಪೂರ್ವ ೩೦೦೦ ವರ್ಷಗಳಿಗೂ ಮೊದಲು.ಏಕೆಂದರೆ ಸರಸ್ವತೀ ನದಿ ಮತ್ತು ಅದರ ಉತ್ತರದ ಉಪನದಿಯಾದ ದೃಷದ್ವತೀ ನದಿಯು ಕ್ರಿಸ್ತಪೂರ್ವ ೩೦೦೦ ವರ್ಷಗಳಿಗೂ ಬಹಳಷ್ಟು ಮೊದಲೇ ಬತ್ತಿ ಹೋಗಿತ್ತು.ಪಶ್ಚಿಮದ ಕಡೆಯಿಂದ ಆವರಿಸಿಕೊಂಡು ಬರುತ್ತಿದ್ದ ಮರುಭೂಮಿಯ ಕಾರಣದಿಂದ ಸರಸ್ವತೀ ನದಿಯು ಹಲವು ತುಂಡುಗಳಾಗಿ ಒಡೆದಿರಬಹುದು ಎನ್ನಲು ಮಹಾಭಾರತದಲ್ಲೂ ಆಧಾರಗಳಿವೆ.ಹರಪ್ಪದಲ್ಲಿ ಇದ್ದುದು ವೈದಿಕ ಆರ್ಯರ ನಾಗರೀಕತೆ ಎನ್ನಲು ಅನೇಕ ಸಾಂಸ್ಕೃತಿಕ ಸಾಕ್ಷ್ಯಗಳೂ ದೊರಕಿವೆ.ಭಾರತದ ಎಸ್.ಆರ್ ರಾವ್,ಪಾಕಿಸ್ತಾನದ ಎ.ಹೆಚ್ ದಾನಿ ಮುಂತಾದ ವಿಧ್ವಾಮ್ಸರು ವೈದಿಕ ಯಜ್ಞಗಳ ಮತ್ತು ಅಗ್ನಿ ಉಪಾಸನೆಯ ಸಾಕ್ಷ್ಯಗಳನ್ನು ಗುರುತಿಸಿದ್ದಾರೆ.ಕ್ರಿಸ್ತಪೂರ್ವ ೩೦೦೦ ದಿಂದ ೨೦೦೦ ರ ಹರಪ್ಪ ನಾಗರೀಕತೆಯು ವೇದಗಳ ಅನುಬಂಧವಾದ ಸೂತ್ರಗ್ರಂಥಗಳ ರಚನೆಯ ಕಾಲಕ್ಕೆ ಹೊಂದುತ್ತದೆ ಎಂದು ಭಾರತ ಮತ್ತು ಮೆಸಪೊಟೋಮಿಯಾದ ನಾಗರೀಕತೆಯನ್ನು ತುಲನೆ ಮಾಡಿ ಅಧ್ಯಯನ ನಡೆಸಿದ ಕೆ.ಡಿ ಸೇಟ್ನ ಮುಂತಾದವರು ಧೃಡ ಪಡಿಸಿದ್ದಾರೆ.ಸರಸ್ವತೀ ನದಿಯು ಬತ್ತಿಹೋದದ್ದು ಒಂದು ಪ್ರಾದೇಶಿಕ ಘಟನೆಯಲ್ಲ,ಹಲವು ನೂರು ವರ್ಷಗಳ ಅವಧಿಯಲ್ಲಿ ಸಾವಿರಾರು ಮೈಲಿ ಅಂತರದ ಹಲವಾರು ದೇಶಗಳನ್ನು ಆವರಿಸಿದ್ದ ವ್ಯಾಪಕ ಪ್ರಾಕೃತಿಕ ವ್ಯತ್ಯಯವಾಗಿತ್ತು .ಹೀಗೆ ಸರಸ್ವತೀ ನಾಗರೀಕತೆ ಎಂದು ಕರೆಯಬಹುದಾದ ವೈದಿಕ ನಾಗರೀಕತೆಯು ಪ್ರವರ್ಧಮಾನವಾಗಿದ್ದುದು ಹರಪ್ಪನಾಗರೀಕತೆಯ ಆರಂಭದಲ್ಲಿ ಅಂದರೆ ಸುಮಾರು ಕ್ರಿಸ್ತಪೂರ್ವ ೩೦೦೦ ವರ್ಷಗಳಿಗೂ ಮೊದಲು ಎಂಬುದು ಸ್ಪಷ್ಟವಾಗುತ್ತದೆ.

ಆಕರ ಲೇಖಕ:ನವರತ್ನ ಎಸ್ ರಾಜಾರಾಮ್

 

-Deepashree M

Tags

Related Articles

FOR DAILY ALERTS
Close