ಪ್ರಚಲಿತ

50 ವರ್ಷಗಳ ಹಳೆಯ ಸಮಸ್ಯೆ ಪರಿಹಾರ ಮಾಡಲೂ ಮೋದಿ- ಶಾ ಬರಬೇಕಾಯಿತು! ಅಸ್ಸಾಂ ರಾಜ್ಯದಲ್ಲಿ ಶಾಂತಿಗೆ ಮುನ್ನುಡಿ ಬರೆದ ಮೋದಿ ಸರ್ಕಾರ!

ಫೋಟೋವನ್ನೊಮ್ಮೆ ನೋಡಿ, ಹಿಂದೆ ಚಿತ್ರದಲ್ಲಿ ಕಾಣುವ ಸರ್ದಾರ್ ಪಟೇಲರನ್ನೊಮ್ಮೆ ನೆನೆಯಿರಿ, ಅವರ ಉಕ್ಕಿನ ವ್ಯಕ್ತಿತ್ವ ಹರಿದು ಹಂಚಿಹೋಗುತ್ತಿದ್ದ ಭಾರತವನ್ನು ಅಂದು ಒಂದುಗೂಡಿಸಿತು. ಆ ಮಹಾನುಭಾವನಿಗೆ ಮತ್ತೆ ಅದೇಷ್ಟು ಸಂತೋಷ ಹೆಮ್ಮೆ ಅನ್ನಿಸರಬಹುದು ಅಲ್ಲವೇ?!
ಪ್ರತ್ಯೇಕತೆಯ ಅಗ್ನಿ ಶಮನ ಕೊಂಡು, ಅಸ್ಸಾಂನಲ್ಲಿ ಶಾಂತಿಯ ತಂಗಾಳಿ ಬೀಸಲಿದೆ!

೫೦ ವರ್ಷಗಳ ಹಳೆಯ ಬೋಡೋ ಸಮಸ್ಯೆಗೆ ಕೊನೆಗೂ ನಾಂದಿ ಹಾಡಿದ ಮೋದಿ ಟೀಮ್ ! ಹೌದು ನಿನ್ನೆ ಈಶಾನ್ಯ ಭಾಗದ ಜನರ ಬಹು ವರ್ಷಗಳ ಕನಸು ನನಸಾಗಿಸುವ ಸಲುವಾಗಿ ಹೊಸ ಒಪ್ಪಂದಕ್ಕೆ ಸಹಿ ಹಾಕುವ ಮೂಲಕ ಮೋದಿಜೀ ನೇತೃತ್ವದ ಕೇಂದ್ರ ಸರ್ಕಾರ ಮುನ್ನುಡಿ ಬರೆದಿದೆ

ಅದಕ್ಕೂ ಮೊದಲು ಬೋಡೋ ಸಮಸ್ಯೆ ಅಂದರೆ ಏನು ಹೊಸ ಒಪ್ಪಂದಗಳಿಂದಾಗುವ ಪ್ರಯೋಜನಗಳೇನು ಅಂತಾ ತಿಳಿದುಕೊಳ್ಳುವುದು ಅಗತ್ಯವಾಗಿದೆ. ಬ್ರೂ- ರಿಯಾಂಗ್ಸ್ ನಿರಾಶ್ರಿತರ ಸಮಸ್ಯೆಯು ೨೩ ವರ್ಷಗಳಿಂದ ಕಾಡುತ್ತಿರುವ ಸಮಸ್ಯೆಯಾಗಿದ್ದು,೧೯೯೭ ರಲ್ಲಿ ಮಿಜೋರಾಂನಲ್ಲಿ ಸ್ಪೋಟಗೊಂಡ ಜನಾಂಗೀಯ ಉದ್ವಿಗ್ನತೆ ಇದರ ಮೂಲವಾಗಿದ್ದು ಸುಮಾರು ೩೦,೦೦೦ ಜನರ ಸರಿ ಸುಮಾರು ೫೦೦೦ ಕುಟುಂಬಗಳು ಆ ರಾಜ್ಯದಿಂದ ಓಡಿಹೋಗಿ ತ್ರಿಪುರಾದಲ್ಲಿ ಆಶ್ರಯ ಪಡೆದವು. ಈ ಜನರನ್ನು ಆ ಸಮಯದಲ್ಲಿ ಉತ್ತರ ತ್ರಿಪುರಾದ ತಾತ್ಕಾಲಿಕ ಶಿಬಿರಗಳಲ್ಲಿ ಇರಿಸಲಾಗಿತ್ತು. ಸ್ಥಳಾಂತರಗೊಂಡ ಬುಡಕಟ್ಟು ಜನಾಂಗದವರ ಸಮಸ್ಯೆ ಬಿಗಡಾಯಿಸಿದಂತೆ ಬ್ರೂ- ರಿಯಾಂಗ್ಸ್ ಪುನರ್ವಸತಿಗೆ ೨೦೧೦ ರಿಂದ ಕೆಲವು ಪ್ರಯತ್ನಗಳು ನಡೆದವು ೫೦೦೦ ಕುಟುಂಬಗಳಲ್ಲಿ ಸುಮಾರು ೧೬೦೦ ಕುಟುಂಬಗಳನ್ನು ಮಿಜೋರಾಂಗೆ ವಾಪಾಸ್ ಕಳುಹಿಸಲಾಯಿತು ಮತ್ತು ತ್ರಿಪುರಾ ಮತ್ತು ಮಿಜೋರಾಂಗೆ ಸರ್ಕಾರದಿಂದ ನೆರವು ನೀಡಲು ಕೇಂದ್ರ ಸರ್ಕಾರ ಮುಂದಾಯಿತು. ಇದರ ಸಲುವಾಗಿ ಮೋದಿ ಸರ್ಕಾರದವು ೨೦೧೮ ರ ಜುಲೈ ನಲ್ಲಿ ಕೆಲ ಒಪ್ಪಂದ್ಕೆ ಸಹಿ ಹಾಕಿತು, ಇದರಿಂದಾಗಿ ಈ ಕುಟುಂಬಗಳಿಗೆ ನೀಡಲಾಗುವ ನೆರವು ಕೂಡ ಹೆಚ್ಚಾಯಿತು. ನಂತರ ೩೨೮ ಕುಟುಂಬಗಳ ೧೩೬೯ ಜನರು ಮಿಜೋರಾಂಗೆ ಮರಳಿದರು. ಆದಾಗ್ಯೂ ಬ್ರೂ ಬುಡಕಟ್ಟಿನವರು ತ್ರಿಪುರಾದಲ್ಲಿ ಶಾಶ್ವತವಾಗಿ ನೆಲೆಸಲು ಅನುವು ಮಾಡಿಕೊಡಬೇಕೆಂದು ಬಯಸಿದ್ದರು. ತಾವು ಆ ರಾಜ್ಯದಲ್ಲಿ ಹೆಚ್ಚು ಸುರಕ್ಷಿತವಾಗಿರುತ್ತೇವೆ ಎಂಬ ಭಾವನೆ ಅವರಿಗಿತ್ತು. ಅದಲ್ಲದೇ ಇತ್ತೀಚಿನ ಒಪ್ಪಂದದಿಂದ ತ್ರಿಪುರಾದ ಆರು ಶಿಬಿರಗಳಲ್ಲಿರುವ ಸುಮಾರು ೩೪,೦೦೦ ಬ್ರೂ  – ರಿಯಾಂಗ್ಸ್ ಗೆ ಪ್ರಯೋಜನವಾಗುತ್ತದೆ. ಬೋಡೋ ಜನಾಂಗೀಯ ಸಂಘರ್ಷವು ಇಲ್ಲಿಯವರೆಗೆ ೪೦೦೦ ಕ್ಕೂ ಹೆಚ್ಚು ಜನರನ್ನು ಬಲಿ ತೆಗೆದುಕೊಂಡಿದೆ. ಆದರೆ ಇತ್ತೀಚಿನ ಒಪ್ಪಂದದಿಂದಾಗಿದೆ. ಭಾರತ ಸರ್ಕಾರ, ಅಸ್ಸಾಂ ಸರ್ಕಾರ ಮತ್ತು ಬೋಡೋ ಪ್ರತಿನಿಧಿಗಳ ನಡುವಿನ ಐತಿಹಾಸಿಕ ಒಪ್ಪಂದದ ಪ್ರಕಾರ, ಬೋಡೋ ಪ್ರದೇಶಗಳಲ್ಲಿ ನಿರ್ದಿಷ್ಟ ಯೋಜನೆಗಳನ್ನು ಅಭಿವೃದ್ಧಿ ಪಡಿಸಲು ಕೇಂದ್ರವು ೧೫೦೦ ಕೋಟಿ ರೂ ಗಳ ಅಭಿವೃದ್ಧಿ ಪ್ಯಾಕೇಜ್‌ಗೆ ಬದ್ಧವಾಗಿದೆ. ಇದಕ್ಕೆ ಪ್ರತಿಯಾಗಿ ಸುಮಾರು ೧೫೦೦ ಸಶಸ್ತ್ರ ಕಾರ್ಯಕರ್ತರು ಹಿಂಸಾಚಾರವನ್ನು ತ್ಯಜಿಸಿ ಮುಖ್ಯವಾಹಿನಿಗೆ ಸೇರುತ್ತಾರೆ. ಬೋಡೋಗಳು ಮಂಡಿಸಿದ ಬೇಡಿಕೆಗಳಿಗೆ ಸಮಗ್ರ ಮತ್ತು ಅಂತಿಮ ಪರಿಹಾರ ದೊರೆತಿದೆ ಎಂದು ಒಪ್ಪಂದದ ನಂತರ ಸರ್ಕಾರ ಹೇಳಿದೆ. ಈಗ ಬಹಳ ವರ್ಷಗಳ ಸಂಘರ್ಷದ ನಂತರ, ಬೋಡೋ ಬಣಗಳು ಹಿಂಸೆಯ ಹಾದಿಯನ್ನು ಬಿಟ್ಟು ಶಸ್ತ್ರಾಸ್ತ್ರಗಳನ್ನು ತ್ಯಜಿಸಿ ಶರಣಾಗುತ್ತೇವೆ,ಮತ್ತು ತಮ್ಮ ಸಂಘಟನೆಗಳನ್ನು ವಿಸರ್ಜಿಸುತ್ತೇವೆ ಎನ್ನುತ್ತಿವೆ. ಈ ೧೫೦೦ ಕಾರ್ಯಕರ್ತರಿಗೆ ಪುನರ್ವಸತಿ ಕಲ್ಪಿಸಲು ಕೇಂದ್ರ ಮತ್ತು ಅಸ್ಸಾಂ ಸರ್ಕಾರಗಳು ಕ್ರಮಕೈಗೊಳ್ಳಲಿದೆ

ನಮಗೆಲ್ಲರಿಗೂ ಗೊತ್ತಿರುವಂತೆ ಈ ಮಧ್ಯೆ ದೇಶದೆಲ್ಲೆಡೆ ಪೌರತ್ವ ತಿದ್ದುಪಡಿ ಕಾಯ್ದೆ ( ಸಿಎಎ) ಕುರಿತ ಸುಳ್ಳು ಮಾಹಿತಿಗಳು ಅಪಪ್ರಚಾರಗಳಿಂದ ಮೋದಿ ಸರ್ಕಾರದ ಹೆಸರು ಕೆಡಿಸುವ ಶತ ಪ್ರಯತ್ನಗಳು ಕೂಡ ನಡೆಯುತ್ತಿವೆ. ಅಭಿವೃದ್ಧಿ ಎಂಬ ಅಸ್ತ್ರಗಳನ್ನು ಕೈಗೆತ್ತಿಕೊಂಡವರಿಗೆ ಏಳು ಬೀಳು ಇದ್ದದ್ದೇ ಅದೇ ರೀತಿ ಇಂತಹ ವಿಚಾರಗಳಿಗೆಲ್ಲ ತಲೆಕೆಡಿಸಿಕೊಳ್ಳೊವ ಜಾಯಮಾನ ನಮ್ಮದಲ್ಲವೆಂದು ಮೋದಿಜೀ ಪದೇ ಪದೇ ಸಾಬೀತು ಪಡಿಸುತ್ತಿದ್ದಾರೆ. ಇವೆಲ್ಲವುದರ ನಡುವೆಯು ಈಶಾನ್ಯದಲ್ಲಿ ಅಲ್ಪಸಂಖ್ಯಾತರಿಗೆ ಸಂಭಂದಿಸಿದ ದೀರ್ಘಕಾಲದ ಸಮಸ್ಯೆಗಳು ಹಾಗೂ ಜನಾಂಗೀಯ ಸಂಘರ್ಷಗಳಿಗೆ ಪರಿಹಾರ ನೀಡುವ ಕಾರ್ಯವನ್ನು ಮೋದಿಜೀ ಸರ್ಕಾರ ಮೌನವಾಗಿಯೇ ಮಾಡುತ್ತಿದೆ ಎಂಬುದು ಹೆಮ್ಮೆಯ ವಿಚಾರ. ಪೌರತ್ವ ಕಾಯ್ದೆ ಪ್ರಮುಖ ಸುದ್ಧಿಯಾಗಿ ದೇಶದೆಲ್ಲೆಡೆ ಪ್ರಸರಿಸುತ್ತಿರುವಾಗಲೇ ನಮ್ಮ ಕೇಂದ್ರ ಗೃಹ ಸಚಿವರಾದ ಅಮಿತ್ ಶಾಜೀ ೫೦ ವರ್ಷಗಳ ಹಿಂದಿನ ಬೋಡೋ ಸಮಸ್ಯೆಯನ್ನು ಕೊನೆಗೊಳಿಸಲು ಮತ್ತು ೨೩ ವರ್ಷಗಳಷ್ಟು ಹಳೆಯದಾದ ತ್ರಿಪುರಾದಲ್ಲಿನ ಬ್ರೂ – ರಿಯಾಂಗ್ಸ್ ನ ಪುನರ್ವಸುವ ಕುರಿತು ಎರಡು ಮಹತ್ವದ ಒಪ್ಪಂದಗಳಿಗೆ ಸಹಿ ಹಾಕುವ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದರು.

ಐತಿಹಾಸಿಕ ಬೋಡೋ ಒಪ್ಪಂದದಿಂದಾಗುವ ಅಲ್ಪಸಂಖ್ಯಾತ ನಿರಾಶ್ರಿತರಿಗಾಗುವ ಪ್ರಯೋಜನಗಳು.

ಈ ಒಪ್ಪಂದವು ತ್ರಿಪುರಾದಲ್ಲಿ ವಾಸಿಸುವ ಪ್ರತಿಯೊಂದು ಬೋಡೋ ಕುಟುಂಬಕ್ಕೆ ಜಮೀನು ಸಹಿತ, ೪ ಲಕ್ಷ ರೂಗಳ ಸ್ಥಿರ ಠೇವಣಿ ಎರಡು ವರ್ಷಗಳವರೆಗೆ ಉಚಿತ ಪಡಿತರ ಮತ್ತು ಮನೆಗಳನ್ನು ನಿರ್ಮಿಸಿಕೊಳ್ಳಲು ತಲ ೧.೫ ಲಕ್ಷ ರೂ ನೀಡಲಾಗುತ್ತದೆ. ಇದು ಪ್ರಧಾನಿ ಮೋದಿಯವರ ಸಬ್ಕಾ ಸಾಥ್ ಸಬ್ಕಾ ವಿಕಾಸ್, ಸಬ್ಕಾ ವಿಶ್ವಾಸ್ ನೀತಿಯ ಭಾಗವಾಗಿದ್ದು ಈಶಾನ್ಯದಲ್ಲಿ ಬಾಕಿ ಉಳಿದಿರುವ ಸಮಸ್ಯೆಗಳನ್ನು ಪರಿಹರಿಸಲು ಹಗಲಿರುಳು
ಶ್ರಮಿಸುತ್ತಿರುವ ನಮ್ಮ ಕೇಂದ್ರ ಸರ್ಕಾರಕ್ಕೆ ಸಲಾಂ.. ಅದೇನೇ ಅಡೆ ತಡೆಗಳು ಮುಂದಾದರು ತಲೆಕಡೆಸಿಕೊಳ್ಳದೆ ದೇಶದೆಲ್ಲೆಡೆ ತನ್ನ ಗೆಲುವಿನೊಂದಿಗೆ ಅಭಿವೃದ್ಧಿಯ ಪತಾಕೆಯನ್ನು ಹಾರಿಸುತ್ತಿರುವ ಮೋದಿ ಬಳಗ ಒಂದೆಡೆಯಾದರೆ, ತನ್ನ ಸೋಲಿನ ಪ್ರತಿಕಾರವಾಗಿ ಕೇಂದ್ರದ ಮೋದಿ ಸರ್ಕಾರದ ಬೆಳವಣಿಗೆಯನ್ನು ನೋಡಿ ಅವರ ಹೆಸರು ಕೆಡಿಸಿ ಜನರನ್ನು ರೊಚ್ಚಿಗೆಬ್ಬಿಸಿ ಗಲಭೆ ಸೃಷ್ಟಿಸುವ ಗುಂಪು ಇನ್ನೊಂದೆಡೆ. ಅದೇನೇ ಇರಲಿ ದೇಶದ ಪರಿಸ್ಥಿತಿ ಬದಲಾಗುತ್ತಿದೆ ಆದರೆ ಜನರ ಮನಸ್ಥಿತಿ ಬದಲಾಗುತ್ತಿಲ್ಲವೆನ್ನುವುದೇ ಬೇಸರದ ಸಂಗತಿ. ಇನ್ನಾದರೂ ಎಲ್ಲಾ ಭಾರತೀಯರೂ ಒಂದಾಗಿ ಭಾರತವನ್ನು ವಿಶ್ವಗುರುವಾಗಿಸುವಲ್ಲಿ ಪಣತೊಡುವಂತಾಗಲಿ ಅನ್ನೋದೇ ನಮ್ಮ ಆಶಯ.

 

Tags

Related Articles

FOR DAILY ALERTS
Close