ಪ್ರಚಲಿತ

ಲಿಂಗಾಯಿತ ಮತದ ಸಿದ್ಧಾಂತಗಳೇನು? ಸಾಂಖ್ಯಾಶಾಸ್ತ್ರಕ್ಕೂ ಲಿಂಗಾಯಿತ ಸಿದ್ಧಾಂತಗಳಿಗೂ ಇರುವ ಸಾಮ್ಯತೆಗಳೇನು?.

ಮಗೆಲ್ಲಾ ತಿಳಿದಿರುವಂತೆ ವೀರಶೈವ ಮತ್ತು ಲಿಂಗಾಯತ ಮತಗಳ ಕುರಿತಾಗಿ ನಡೆದ ಚರ್ಚೆ,ಪ್ರತಿಭಟನೆಗಳು ಸಿದ್ದರಾಮಯ್ಯನವರ ಆಳ್ವಿಕೆಯ ಸಮಯದಲ್ಲಿ ಬಹಳಷ್ಟು ಚರ್ಚಿತವಾಗಿತ್ತು. ಶಾರದಾ ಎನ್ನುವ ಹೆಣ್ಣುಮಗಳನ್ನು ಜೈಲಿಗಟ್ಟಿ ಮಾನಸಿಕವಾಗಿ ಹಿಂಸಿಸಿದ ಘಟನೆಗಳೂ ನಡೆದಿದ್ದು ಸುಳ್ಳಲ್ಲ.ಇಷ್ಟೆಲ್ಲಾ ಚರ್ಚೆಗೊಳಗಾದ ಬಳಿಕವೂ ನಮ್ಮಲ್ಲಿ ಬಹಳಷ್ಟು ಜನರಿಗೆ ವೀರಶೈವ ಮತವೆಂದರೇನು? ವೀರಶೈವ ಮತದ ಸಿದ್ದಾಂತಗಳೇನು ? ಎಂದು ತಿಳಿದಿಲ್ಲ.ವೇದಾಂತ ಸಂಪ್ರದಾಯದಲ್ಲಿ ಅದ್ವೈತ, ವಿಶಿಷ್ಟಾದ್ವೈತ, ದ್ವೈತ ಮತ್ತು ಅಚಿಂತ್ಯಾ ಭೇದಾಭೇದ ಮುಂತಾದ ಸಂಪ್ರದಾಯಗಳು ಪ್ರಸಿದ್ಧವಾಗಿರುವಂತೆ ವೀರಶೈವ ಅಥವಾ ಶಕ್ತಿ ವಿಶಿಷ್ಟಾದ್ವೈತವೂ ಶೈವ ಮತದಲ್ಲಿ ವಿಶಿಷ್ಟವಾದ ಸ್ಥಾನವನ್ನು ಹೊಂದಿದೆ.ಇದು ಕೂಡಾ ವೇದಾಂತದ ಒಂದು ಪ್ರಧಾನ ಸಂಪ್ರದಾಯವಾಗಿದೆ.ಇದನ್ನು ಅಂಗೀಕೃಸುವವರು ಬಹಳಷ್ಟು ಸಂಖ್ಯೆಯಲ್ಲಿದ್ದಾರೆ.ಈ ಸಂಪ್ರದಾಯವನ್ನು ಶಿವಾದ್ವೈತ, ದ್ವೈತಾದ್ವೈತ, ವೀರಶೈವ, ವಿಶೇಷಾದ್ವೈತ ಹಾಗೂ ಶಕ್ತಿವಿಶಿಷ್ಟಾದ್ವೈತ ಎಂಬ ಹೆಸರಿನಿಂದಲೂ ಕರೆಯುತ್ತಾರೆ.ಆದರೆ ಈ ಸಂಪ್ರದಾಯಕ್ಕೆ ಪ್ರಧಾನವಾಗಿ ವೀರಶೈವ ಅಥವಾ ಶಕ್ತಿ ವಿಶಿಷ್ಟಾದ್ವೈತವೆಂದು ಹೆಸರು.ಶ್ರೀ ಶಂಕರಾಚಾರ್ಯರ ಅದ್ವೈತಮಾರ್ಗವು ತ್ಯಾಗ ಪ್ರಧಾನವು.ಅವರು ಕರ್ಮವನ್ನು ತ್ಯಜಿಸಿ ಬ್ರಹ್ಮವಾದವನ್ನು ಸ್ಥಾಪಿಸಿದ್ದಾರೆ,ಆದರೆ ಈ ಶಕ್ತಿವಿಶಿಷ್ಟಾದ್ವೈತ ಸಿದ್ಧಾಂತವು ಕರ್ಮ ಪ್ರಧಾನವಾದುದು.ಇದು ನಿಷ್ಕಾಮ ಕರ್ಮದ ಮಾರ್ಗವನ್ನು ಪ್ರದರ್ಶಿಸುತ್ತದೆ.ಈ ಕಾರಣದಿಂದಲೇ ಇದನ್ನು ವೀರಧರ್ಮ ಅಥವಾ ವೀರಮಾರ್ಗವೆಂದು ಕರೆಯುತ್ತಾರೆ.ಈ ಸಂಪ್ರದಾಯದಲ್ಲಿ ಶಿವನು ಪ್ರಧಾನ ದೇವತೆಯಾದುದರಿಂದ ಈ ಮತಕ್ಕೆ ವೀರಶೈವ ಎಂಬ ಹೆಸರು ಬಂದಿತು.ಶಕ್ತಿ ವಿಶಿಷ್ಟಾ ದ್ವೈತವೆಂದರೆ ಶಕ್ತಿ ವಿಶಿಷ್ಟಜೀವ ಮತ್ತು ಶಕ್ತಿ ವಿಶಿಷ್ಟ ಶಿವ..ಇವೆರಡರ ಸಾಮರಸ್ಯ ಅಂದರೆ ಪರಸ್ಪರ ಏಕಾಕಾರವಾಗುವುದು.

ಶಕ್ತಿ

ಶಕ್ತಿಯೆಂದರೆ ಪರಶಿವನು ಬ್ರಹ್ಮನಿಗಿಂತ ಬೇರೆಯಾಗಿ ಸಿದ್ಧನಾಗಿರದೆ ಇರುವ ವಿಶೇಷಣ ಎಂದು ಅರ್ಥ.ಶಕ್ತಿವಿಶಿಷ್ಟಾದ್ವೈತ ಮತದಲ್ಲಿರುವ ಶಕ್ತಿಯಲ್ಲಿ ‘ಸೂಕ್ಷ್ಮ ಚಿದಚಿದ್ವಿಶಿಷ್ಟ ಶಕ್ತಿ‘ ಮತ್ತು ‘ಸ್ಥೂಲ ಚಿದಚಿದ್ವಿಶಿಷ್ಟ ಶಕ್ತಿ‘ ಎಂಬ ಎರಡು ಭೇಧಗಳಿರುತ್ತವೆ. ಇದರಲ್ಲಿ ಮೊದಲನೆಯ ಶಕ್ತಿಯೇ ಪರಶಿವ ಮತ್ತು ಎರಡನೆಯದೇ ಜೀವ.ಶಕ್ತಿವಿಶಿಷ್ಟಾದ್ವೈತ ಪದದಿಂದ ಶಕ್ತಿವಿಶಿಷ್ಟ ಪರಮಾತ್ಮ ಮತ್ತು ಜೀವಾತ್ಮಗಳ ಐಕ್ಯವು ತಿಳಿದು ಬರುತ್ತದೆ. ಪರಮಾತ್ಮನಿಂದ ಬೇರೆಯಾದ ಶಕ್ತಿ ಹಾಗೂ ಶಕ್ತಿಯಿಂದ ಪ್ರತ್ಯೇಕವಾದ ಪರಮಾತ್ಮನಿಲ್ಲ.ಚರಾಚರಾತ್ಮಕವಾದ ಈ ಜಗತ್ತು ಪರಮಾತ್ಮನ ಶಕ್ತಿ ರೂಪಕವಾಗಿರುತ್ತದೆ.ಈ ಶಕ್ತಿಯಿಂದ ಉತ್ಪನ್ನನಾದವನೇ ಪರಮಾತ್ಮ.

ವೀರಶೈವ ಸಿದ್ಧಾಂತದಲ್ಲಿ ಶಿವ ಮತ್ತು ಶಕ್ತಿಯರಲ್ಲಿ ಅವಿನಾಭಾವವಾದ ಸಂಬಂಧವನ್ನು ವರ್ಣಿಸುತ್ತಾರೆ.. ಯಾವಸಂಬಂಧವನ್ನು ಬೇರ್ಪಡಿಸಲು ಸಾಧ್ಯವಿಲ್ಲವೋ ಅದನ್ನು ಸಮವಾಯ ಸಂಬಂಧವೆಂದು ಹೇಳುತ್ತಾರೆ. ಸೂರ್ಯನಲ್ಲಿ ತೇಜಸ್ಸು ಮತ್ತು ಚಂದ್ರನಲ್ಲಿ ಬೆಳದಿಂಗಳೂ ಇರುವಂತೆ .ಈ ಕಾರಣದಿಂದಲೇ ಈ ಮತ ಅಥವಾ ಪಂಥದಲ್ಲಿ ಬ್ರಹ್ಮ ಮತ್ತು ಶಕ್ತಿಯರಲ್ಲಿ ನಿತ್ಯಸಂಬಂಧದವನ್ನು ಅಂಗೀಕರಿಸುತ್ತಾರೆ.ಚರಾತ್ಮಕ ವಿಮರ್ಶಾ ಶಕ್ತಿಯು ತತ್ವ,ರಾಜ ಮತ್ತು ತಮೋಗುಣಗಳಿಂದ ಕೂಡಿರುವುದಾರುತ್ತದೆ.ತಮೋಗುಣ ಶಕ್ತಿಯನ್ನೇ ಜಡವಾದ ಮಾಯಾ ಎಂದು ಕರೆಯುತ್ತಾರೆ. ಸೂರ್ಯಕಾಂತಮಣಿಯ ಸಂಪರ್ಕವಾಗುತ್ತಲೇ ಸೂರ್ಯನ ಕಿರಣವು ಅಗ್ನಿಕಣದ ರೂಪವನ್ನು ಧರಿಸಿ ಹತ್ತಿಗೆ ಅಂಟಿಕೊಂಡು ಅಗ್ನಿಯಾಗುವಂತೆ, ಶಿವನ ವಿಮರ್ಶಾ ಶಕ್ತಿಯು ಜಡವಾದ ಮಾಯಾಶಕ್ತಿಯಲ್ಲಿ ಪ್ರತಿಸ್ಪುರಾಣಗಣತಿಯಿಂದ ಪ್ರವೇಶಿಸಿ ಸುಖ,ದುಃಖ,ಮೋಹಗಳನ್ನು ಉಂಟುಮಾಡುವ ತ್ರಿಗುಣಾತ್ಮಕ ರೂಪವನ್ನು ಪ್ರಕೃತಿ ಎಂದು ಕರೆಯುತ್ತಾರೆ.ಈ ಪ್ರಕೃತಿಯನ್ನು ವೀರಶೈವಾಚಾರ್ಯರುಗಳು ಚಿತ್ತವೆಂದು ಕರೆಯುತ್ತಾರೆ.ಚಿತ್ತ ಶಕ್ತಿವಿಶಿಷ್ಟವಾದ ಶಿವಪ್ರಕಾಶರೂಪವಾದ ಈ ಶಿವಾಂಶವನ್ನೇ ಜೀವ ಎಂದು ಕರೆಯುತ್ತಾರೆ.ಸಂಕ್ಷೇಪವಾಗಿ ವೀರಶೈವ ಮತಾನುಸಾರವಾಗಿ ಇದೇ ಶಕ್ತಿಯ ಸ್ವರೂಪವಾಗಿರುತ್ತದೆ.

ಜಗತ್

ವೀರಶೈವ ಮತಾನುಸಾರವಾಗಿ ಈ ಜಗತ್ತು ಸತ್ಯವಾಗಿರುತ್ತವೆ.ಶಕ್ತಿ ವಿಶಿಷ್ಟವಾದ ಪರಶಿವನಿಂದ ಉತ್ಪನ್ನವಾದ ಚರಾಚರಸ್ತ್ಮಕವಾದ ಈ ಜಗತ್ತೆಲ್ಲವೂ ಮಿಥ್ಯೆಯಲ್ಲ,ಬದಲಾಗಿ ಸತ್ಯವಾದುದೆಂದು ವೀರಶೈವ ಮಾತಾಯುಯಾನಿಗಳು ಹೇಳುತ್ತಾರೆ.ಶ್ರೀ ಶಂಕರರ ಅದ್ವೈತವಾದವು ಬ್ರಹ್ಮಸತ್ಯಮ್ ಜಗನ್ಮಿಥ್ಯ ಎಂದು ಉಪದೇಶ ಕೊಡುವೆಡೆ ವೀರಶೈವಮತವು ಬ್ರಹ್ಮನೊಡನೆ ಜಗತ್ತೂ ಸತ್ಯವೆಂದು ತಿಳಿಸುತ್ತದೆ.

ಸೃಷ್ಟಿ

ಸಂಸಾರದ ಉತ್ಪತ್ತಿಯ ವಿಷಯದಲ್ಲಿ ವೇದಾಂತ ಸಂಪ್ರದಾಯಗಳಲ್ಲಿ ಬೇರೆ ಬೇರೆಯಾದ ಮತಗಳು ಪ್ರಚಲಿತವಾಗಿದೆ . ಅವುಗಳನ್ನು ಪ್ರಧಾನವಾಗಿ ಎರಡು ಭಾಗಗಳಾಗಿ ವಿಂಗಡಿಸಬಹುದು..ಮೊದಲನೆಯದು ಪರಿಣಾಮವಾದ ಮತ್ತು ಎರಡನೆಯದು ವಿತರ್ವವಾದ.ಪರಮಾತ್ಮನು ತನ್ನ ಸ್ವರೂಪವನ್ನೇ ಜಗತ್ತಿನ ರೂಪದಲ್ಲಿ ನಿರ್ಮಾಣ ಮಾಡಿದಾಗ ಅದನ್ನು ವಿವರ್ತವಾದವೆಂದು ಕರೆಯುತ್ತೇವೆ.ಈ ಸಿದ್ದಾಂತ ಅನುಸಾರವಾಗಿ ಜಗತ್ತು ಮಿಥ್ಯಾಭೂತವಾದುದು,ಏಕೆಂದರೆ ಅದು ಬ್ರಹ್ಮನಿಂದ ಹೊರತಾಗಿ ತನ್ನ ಸ್ಥಿತಿಯನ್ನು ಹೊಂದಲು ಸಾಧ್ಯವಿಲ್ಲ.

ಜೀವ

ವೀರಶೈವಮತದಲ್ಲಿ ಜೀವವನ್ನು ಶಿವಾಂಶರೂಪವೆಂದು ಅಂಗೀಕರಿಸುತ್ತಾರೆ.ಈ ಮತದಲ್ಲಿ ಶಿವ ಮತ್ತು ಜೀವರುಗಳ ಪಾರಮಾರ್ಥಿಕ ಭೇದಾಭೇದವನ್ನು ತಿಳಿಸಲಾಗಿದೆ.ಅಂದರೆ ಒಂದು ದೃಷ್ಟಿಯಿಂದ ಭೇದ ಮತ್ತೊಂದು ದೃಷ್ಟಿಯಿಂದ ಅಭೇದ.ಅಗ್ನಿಯಿಂದ ಉತ್ಪನ್ನವಾದ ಕಿಡಿಗಳಲ್ಲಿ ಹೇಗೆ ಭೇದವಾಗಲೀ ಅಥವಾ ಅಭೇದವಾಗಲೀ ಇರುವುದಿಲ್ಲವೋ ಅದೇ ರೀತಿಯಲ್ಲಿ ಶಿವನಿಂದ ಆವೀರಭೂತರಾದ ಶಿವಾಂಶರೂಪ ಜೀವರಲ್ಲಿ ಮತ್ತು ಶಿವನಲ್ಲಿ ಆತ್ಯಂಕಿತವಾದ ಭೇಧವಾಗಲೀ ಅಥವಾ ಅಭೇದವಾಗಲೀ ಇರುವುದಿಲ್ಲ.ಈ ಕಾರಣದಿಂದಲೇ ಮತವನ್ನು ಭೇದಾಭೇದವೆಂದು ಕರೆಯುತ್ತಾರೆ.

ಶಿವತತ್ವ

ಸಚ್ಚಿದಾನಂದ ಸ್ವರೂಪ,ಸತ್ಯ,ನಿತ್ಯ,ಆದ್ಯಂತರಹಿತ ಮತ್ತು ಸರ್ವಶಕ್ತಿ ಸಮನ್ವಿತನಾದ ಆ ಪರಶಿವಬ್ರಹ್ಮನಲ್ಲಿ ಅವಿನಾಭಾವ ಸಂಭಂದದಿಂದ ವಿದ್ಯಮಾನನಾಗಿರುವ ವಿಮರ್ಶಾಶಕ್ತಿಯ ಸ್ಪುರಣವೇ ತತ್ವರೂಪದಿಂದ ಪರಿಣತವಾಗುತ್ತವೆ.ಈ ತತ್ವವು ೩೬ ಪ್ರಕಾರವಾಗಿರುತ್ತವೆ. ಇವುಗಳಲ್ಲಿ ಮುಖ್ಯವಾಗಿ ಶಿವ,ಶಕ್ತಿ,ಸದಾಶಿವ,ಈಶ್ವರ,ಮಾಯಾ,ವಿದ್ಯಾ,ಪುರುಷ,ಪ್ರಕೃತಿ ಮನ ಮತ್ತು ಅಹಂಕಾರಗಳು ಪ್ರಸಿದ್ಧವಾಗಿವೆ.ವೀರಶೈವ ಮತದ ಈ ೩೬ ತತ್ವಗಳು ಸಾಂಖ್ಯರ ೨೫ ತತ್ವಗಳಿಗೆ ಸಮಾನವಾಗಿವೆ. ಪರಶಿವನು ಜ್ಞಾನಶಕ್ತಿಯೊಂದಿಗೆ ಏಕಾಕಾರ ಹೊಂದಿ ನಾನು ಸರ್ವಜ್ಞ ಎಂಬ ಪ್ರಕಾರದ ಅಭಿಮಾನವನ್ನು ಹೊಂದುತ್ತಾನೆಯೋ ಆಗ ಅವನಿಗೆ ಶಿವತತ್ವ ಎಂದು ಕರೆಯುತ್ತಾರೆ.ಪರಶಿವನು ಕ್ರಿಯಾಶಕ್ತಿಯೊಂದಿಗೆ ಲೀನನಾಗಿ ನಾನು ಸರ್ವಕಾರ್ತಾ ಎಂಬುದಾಗಿ ಅಭಿಮಾನದಿಂದ ಕೂಡಿರುತ್ತಾನೋ,ಆಗ ಅವನಿಗೆ ಶಕ್ತಿ ಎಂದು ಕರೆಯುತ್ತಾರೆ.ಈ ಪ್ರಕಾರವಾಗಿ ಪರಶಿವನಲ್ಲಿ ಬೇರೆಬೇರೆ ಶಕ್ತಿಗಳು ಸೇರುವುದರಿಂದ ಬೇರೆ ಬೇರೆ ತಂತ್ರಗಳ ಉತ್ಪತ್ತಿಯಾಗುತ್ತವೆ ಎಂದು ತಿಳಿಯುತ್ತದೆ.ವೀರಶೈವ ಸಿದ್ಧಾಂತದಲ್ಲಿ ಪರಬ್ರಹ್ಮನನ್ನು ಸ್ಥಳ ಎಂದು ಕರೆಯುತ್ತಾರೆ.ಚರಾಚರಾತ್ಮವಾದ ಈ ಜಗತ್ತು ಉತ್ಪತ್ತಿ ಹಾಗೂ ಲಯವನ್ನು ಹೊಂದುವ ಬ್ರಹ್ಮನನ್ನು ಸ್ಥಲ ಎಂಬುದಾಗಿ ಕರೆಯುತ್ತಾರೆ. ಸ್ಥಳರೂಪಿಯಾದ ಈ ಪರಶಿವನನ್ನು ಅವನ ಲೀಲೆಗನುಗುನುವಾಗಿ ಅಂಗಸ್ಥಳ ಮತ್ತು ಲಿಂಗಸ್ಥಳ ಎಂಬುದಾಗಿ ಕರೆಯುತ್ತಾರೆ.ಇದೇ ವಿಧದಲ್ಲಿ ಲಿಂಗ ಮತ್ತು ಅಂಗಗಳಲ್ಲಿ ಮೂರು ಬೇಧಗಲುಂಟಾಗುತ್ತವೆ.ಆದರೆ ಕೊನೆಯಲ್ಲಿ ಶುದ್ದಾತ್ಮವೂ ಅಂಗನಾಮಕನಾದ ಜೀವನು ಲಿಂಗ ನಾಮಕನಾದ ಶಿವನಲ್ಲಿ ಸಾಮರಸ್ಯ ಹೊಂದುವುದನ್ನೇ ಲಿಂಗಾಂಗ ಸಾಮರಸ್ಯ ಎಂದು ಕರೆಯುತ್ತಾರೆ.ಇದುವೇ ಶಿವ ಮತ್ತು ಜೀವದ ಐಕ್ಯ ಹಾಗೂ ಶಕ್ತಿ ವಿಶಿಷ್ಟಾದ್ವೈತಮತದ ಸಾರವಾಗಿರುತ್ತದೆ.

-Deepashree M

Tags

Related Articles

FOR DAILY ALERTS
Close