ಪ್ರಚಲಿತ

ಪಠ್ಯಪುಸ್ತಕದಲ್ಲಿ ಸ್ವಲ್ಪ ಸ್ಥಾನ ನೀಡಿದರೂ ಜನರ ಹೃದಯದ ತುಂಬಾ ರಾಜನಾಗಿ ಮೆರೆಯುವ ಭಾರತೀಯ ಸೈನ್ಯದ ಪಿತಾಮಹನೆಂದು ಕರೆಯಲ್ಪಡಬೇಕಿದ್ದ, ಸ್ವತಂತ್ರ ಭಾರತದಲ್ಲಿ ಪ್ರಥಮ ಸರಕಾರ ಸ್ಥಾಪಿಸಿದ್ದ ನೇತಾಜಿ ಸುಭಾಷ್ ಚಂದ್ರ ಬೋಸ್ ಜಯಂತಿಯ ಶುಭಾಶಯಗಳು.

ಸ್ವಾತಂತ್ರವನ್ನು ಯಾರೂ ಕೊಡುವುದಿಲ್ಲ,ಅದನ್ನು ನಾವು ಪಡೆದುಕೊಳ್ಳಬೇಕು” ಈ ಸತ್ಯವನ್ನು ನೇತಾಜಿ ಸುಭಾಶ್ಚಂದ್ರ ಬೋಸ್ ರಿಗಿಂತ ಚೆನ್ನಾಗಿ ಅರಿತವರು ಮತ್ಯಾರೂ ಇಲ್ಲ.ಭಾರತೀಯ ಸೈನ್ಯದ ಪಿತಾಮಹರೆಂದು ಕರೆದು ಪೂಜಿಸಬೇಕಾಗಿದ್ದ ವ್ಯಕ್ತಿಯೊಬ್ಬರನ್ನು ಕೇವಲ ತೀವ್ರಗಾಮಿ ಸ್ವಾತಂತ್ರ ಹೋರಾಟಗಾರರನ್ನಾಗಿ ಪಠ್ಯಪುಸ್ತಕದಲ್ಲಿ ಸೀಮಿತಗೊಳಿಸಲಾಗಿದೆ. ಈ ವ್ಯವಸ್ಥಿತ ಸಂಚಿನ ಹಿಂದೆ ಇರುವವರ್ಯಾರೆಂದು ಎಲ್ಲರಿಗೂ ತಿಳಿದಿದೆ.ವಿಮಾನ ಅಪಘಾತದಲ್ಲಿ ನಡೆದ ಅವರ ಮರಣವನ್ನು ಯಾವೊಬ್ಬ ಭಾರತೀಯನೂ ಇಂದಿಗೂ ಸ್ವೀಕರಿಸಿಲ್ಲ..ಅವರು ಇಂದಿಗೂ ಎಲ್ಲೂ ಜೀವಿಸಿದ್ದಾರೆ ಎಂಬುದೇ ಅನೇಕ ಭಾರತೀಯರ ಭಾವನೆ.ಜನರ ನೆನಪಿನಿಂದ,ಪಠ್ಯಪುಸ್ತಕಗಳಿಂದ ಅವರನ್ನು ದೂರಸರಿಸಿದಷ್ಟು ಸುಲಭವಲ್ಲ ಅವರನ್ನು ಜನರ ಹೃದಯದಿಂದ ದೂರ ಮಾಡುವುದು ಎಂಬುದನ್ನು ಹಲವಾರು ಇಂದಿಗೂ ಅರಿತಿಲ್ಲ..ಸ್ವತಂತ್ರ ಭಾರತದ ಪ್ರಥಮ ಸರಕಾರವನ್ನು ಸ್ಥಾಪಿಸಿದ ಶಿಲ್ಪಿ ನಮ್ಮ ನೇತಾಜಿ ಸುಭಾಷ್ ಚಂದ್ರ ಬೋಸ್. ಹಲವರ ಜನ್ಮದಿನ ಜಾಯತಿಯಾದರೂ,ಇಲಿಯನ್ನು ಹುಳಿಯಾಗಿಸಿ ಜಯಂತಿ ಆಚರಿಸುವ ಸರಕಾರವೂ ಇತ್ತು.ಆದರೆ ಸಿಂಹದ ಜನ್ಮದಿನವನ್ನು ಜಾಯತಿಯಾಗಿ ಜಾರ್ಖಂಡ್ ಸರಕಾರ ಆಚರಿಸಲು ನಾಂದಿ ಹಾಡಿದೆ..ನಿಧಾನವಾಗಿಯಾದರೂ ನೇತಾಜಿಗೆ ಅವರಿಗೆ ದೊರಕಬೇಕಾದ ಗೌರವ ದೊರಕಲು ಪ್ರಾರಂಭವಾಗಿದೆ..ನೇತಾಜಿ ಸುಭಾಷ್ ಚಂದ್ರ ಬೋಸ್ ಜಯಂತಿಯ ಶುಭಾಶಯಗಳು.

ನೇತಾಜಿ ಸುಭಾಶ್ಚಂದ್ರ ಬೋಸ್ ಅವರು ಜನವರಿ ೨೩,೧೮೯೭ ರಂದು ಅಂದಿನ ಬಂಗಾಲದ ಕಟಕ್,ಒರಿಸ್ಸಾದಲ್ಲಿ ತಮ್ಮ ಕುಟುಂಬದ ೯ ನೇ ಮಗನಾಗಿ ಜನಿಸಿದರು.ಅವರ ತಂದೆ ಜಾನಕೀನಾಥ ಬೋಸ್ ಒಬ್ಬ ಶ್ರೀಮಂತ ವಕೀಲರಾಗಿದ್ದರು ಮಾತ್ರವಲ್ಲದೆ ಬಂಗಾಲದ ವಿಧಾನ ಪರಿಷತ್ತಿನ ಸದಸ್ಯರೂ ಆಗಿದ್ದರು.ಪ್ರತಿಭಾನ್ವಿತ ವಿದ್ಯಾರ್ಥಿಯಾಗಿದ್ದ ಸುಭಾಷ್ ಚಂದ್ರರು ಕಲ್ಕತ್ತಾದ ಪ್ರೆಸಿಡೆನ್ಸಿ ಕಾಳಿಜಿನಿಂದ ತತ್ವಶಾಸ್ತ್ರದಲ್ಲಿ ಪದವಿಯನ್ನು ಪಡೆದಿದ್ದರು.ಸ್ವಾಮೀ ವಿವೇಕಾನಂದರಿಂದ ಅತ್ಯಂತ ಪ್ರಭಾವಿತರಾಗಿದ್ದ ಅವರು ವಿದ್ಯಾರ್ಥಿ ದೆಸೆಯಲ್ಲೇ ಅಪೂರ್ವ ದೇಶಭಕ್ತಿಯನ್ನು ಬೆಳೆಸಿಕೊಂಡಿದ್ದರು. ೧೯೨೦ ರಲ್ಲಿ ಇಂಗ್ಲೆಂಡ್ ನಲ್ಲಿ ಇಂಡಿಯನ್ ಸಿವಿಲ್ ಸರ್ವಿಸ್ ಪರೀಕ್ಷೆಯಲ್ಲಿ ನಾಲ್ಕನೇ ಸ್ಥಾನದೊಂದಿಗೆ ತೇರ್ಗಡೆಗೊಂಡ ನೇತಾಜಿ ೧೯೨೧ ರ ಏಪ್ರಿಲ್ ೨೩ ರಂದು ತಮ್ಮ ನೌಕರಿಗೆ ರಾಜೀನಾಮೆಯನ್ನು ನೀಡಿ ಭಾರತಕ್ಕೆ ಮರಳಿದರು.೧೯೨೧ ರ ಡಿಸೆಂಬರ್ ನಲ್ಲಿ ಪ್ರಿನ್ಸ್ ಆಫ್ ವೇಲ್ಸ್ ಅವರ ಭಾರತೀಯ ಭೇಟಿಗೆ ಬಹಿಷ್ಕಾರವನ್ನು ಆಚರಿಸಿದ್ದಾಗಿ ಅವರನ್ನು ಬಂಧಿಸಿ ಸೆರೆಮನೆಗೆ ತಳ್ಳಲಾಯಿತು.ಆರಂಭದಲ್ಲಿ ಸುಭಾಷ್ ಚಂದ್ರ ಕಲ್ಕತ್ತಾದ ಕಾಂಗ್ರೆಸ್ ನ ಸಕ್ರಿಯ ಸದಸ್ಯ ಚಿತ್ತರಂಜನ್ ದಾಸ್ ಅವರ ನೇತೃತ್ವದಲ್ಲಿ ಕೆಲಸ ಮಾಡಿದರು.ಸುಭಾಷ್ ಚಂದ್ರ ಬೋಸ್ ಚಿತ್ತರಂಜನ್ ದಾಸ್ ಅವರನ್ನು ತಮ್ಮ ರಾಜಕೀಯ ಗುರುಗಳನ್ನಾಗಿ ಪರಿಗಣಿಸಿದ್ದರು.ಕಲ್ಕತ್ತಾದ ವಿದ್ಯಾರ್ಥಿಗಳು,ಯುವಕರು ಮತ್ತು ಕಾರ್ಮಿಕರನ್ನು ಪ್ರಬುದ್ಧಗೊಳಿಸುವಲ್ಲಿ ಬೋಸ್ ರ ಪಾತ್ರ ದೊಡ್ಡದು.೧೯೨೮ರಲ್ಲಿ ಕಾಂಗ್ರೆಸ್ ನ ಗವಾಹಾಟಿ ಅಧಿವೇಶನದಲ್ಲಿ ಕಾಂಗ್ರೆಸ್ ನ ಹಳೆಯ ಮತ್ತು ಹೊಸ ಸದಸ್ಯರ ನಡುವೆ ಭಿನ್ನಾಭಿಪ್ರಾಯ ಮೂಡಿತು.ಹಿರಿಯ ನಾಯಕರು ‘ಬ್ರಿಟಿಷ್ ಆಡಳಿತದೊಳಗೆ ಭಾರತಕ್ಕೆ ಪ್ರಾಬಲ್ಯದ ಸ್ಥಾನಮಾನ’ ದ ಪರವಾಗಿದ್ದರೆ ಯುವ ನಾಯಕರು ‘ಯಾವುದೇ ರಾಜಿಯಿಲ್ಲದೆ ಸಂಪೂರ್ಣ ಸ್ವ ಆಡಳಿತ’ ವನ್ನು ಬಯಸಿದ್ದರು..ಶಾಂತಿಯ ಪ್ರತಿಪಾದಿ ಗಾಂಧೀ ಮತ್ತು ಆಕ್ರಮಣಕಾರೀ ಸುಭಾಷ್ ಚಂದ್ರನ ನಡುವಿನ ಅಭಿಪ್ರಾಯ ಬೇಧ ಹೊಂದಾಣಿಕೆ ಸಾಧ್ಯವೇ ಇಲ್ಲವೆನ್ನುವ ಮಟ್ಟಕ್ಕೆ ಬೆಳೆಯಿತು.೧೯೩೯ ರಲ್ಲಿ ಬೋಸ್ ಪಕ್ಷಕ್ಕೆ ರಾಜೀನಾಮೆ ನೀಡಿ ಫಾರ್ವರ್ಡ್ ಬ್ಲಾಕ್ ಅನ್ನು ರಚಿಸಿದರು.ಅವರು ಬ್ರಿಟಿಷ್ ಲೇಬರ್ ಪಕ್ಷದ ಮುಖಂಡರು ಮತ್ತು ರಾಜಕೀಯ ಚಿಂತಕರನ್ನು ಭೇಟಿಯಾಗಿ ಭಾರತವು ಸ್ವಾತಂತ್ರ ಹೊಂದಬಹುದಾದ ಸಾಧ್ಯತೆಗಳ ಬಗ್ಗೆ ಚರ್ಚಿಸಿದರು.

ಎರಡನೆಯ ಮಹಾಯುದ್ಧದಲ್ಲಿ ಬ್ರಿಟೀಷರನ್ನು ಬೆಂಬಲಿಸುವ ಕಾಂಗ್ರೆಸ್ ನ ನಿರ್ಧಾರವನ್ನು ಸುಭಾಶ್ಶ್ ರು ತೀವ್ರವಾಗಿ ವಿರೋಧಿಸಿದರು ಮಾತ್ರವಲ್ಲದೆ ಬೃಹತ್ ಆಂದೋಲನವನ್ನು ಪ್ರಾರಂಭಿಸುವ ಉದ್ದೇಶದಿಂದ ‘ನೀವು ನನಗೆ ರಕ್ತ ನೀಡಿ,ನಾನು ನಿಮಗೆ ಸ್ವಾತಂತ್ರವನ್ನು ನೀಡುತ್ತೇನೆ’ ಎಂದು ಅವರು ನೀಡಿದ ಕರೆಗೆ ಭಾರೀ ಪ್ರತಿಕ್ರಿಯೆ ವ್ಯಕ್ತವಾಯಿತು.ಇದರಿಂದ ಹೆದರಿದ ಬ್ರಿಟೀಷರು ಅವರನ್ನು ಬಂಧಿಸಿ ಸೆರೆಮನೆಯಲ್ಲಿರಿಸಿದರು.ಅವರ ಆರೋಗ್ಯವು ಹದಗೆಟ್ಟಾಗ ಹೆದರಿ ಅವರನ್ನು ಬಿಡುಗಡೆ ಮಾಡಿ ಗೃಹಬಂಧನದಲ್ಲಿರಿಸಿದರು.೧೯೪೧ ರ ಜನವರಿಯಲ್ಲಿ ಸುಭಾಷ್ ಚಂದ್ರರು ಸಂಚು ಹೂಡಿ ಪೇಶಾವರದ ಬಳಸುದಾರಿ ಹಿಡಿದು ಜರ್ಮನಿಯ ಬರ್ಲಿನ್ ತಲುಪಿದರು.ಅವರ ಪ್ರಯತ್ನಗಳಿಗೆ ಜರ್ಮನ್ ಸಂಪೂರ್ಣ ಬೆಂಬಲದ ಭರವಸೆಯನ್ನೂ ನೀಡಿತು.ಅಲ್ಲಿಂದ ಅವರು ಜಪಾನ್ ತಲುಪಿದರು.ಅಲ್ಲಿ ಸಿಂಗಾಪುರ್ ಮತ್ತು ಇತರ ಆಗ್ನೇಯ ಏಷ್ಯಾದ ಪ್ರದೇಶಗಳಿಂದ ನೇಮಕಗೊಂಡ ೪೦,೦೦೦ ಸೈನಿಕರನ್ನು ಒಳಗೊಂಡ ‘ಇಂಡಿಯನ್ ನ್ಯಾಷನಲ್ ಆರ್ಮಿ’ ಯನ್ನು ಸ್ಥಾಪಿಸಿದರು.ಇದನ್ನುಪಯೋಗಿಸಿ ಅವರು ಅಂಡಮಾನ್ ನಿಕೋಬಾರ್ ದ್ವೀಪಗಳನ್ನು ಬ್ರಿಟೀಷರಿಂದ ವಶಪಡಿಸಿಕೊಂಡು ಶಹೀದ್ ಮತ್ತು ಸ್ವರಾಜ್ ದ್ವೀಪಗಳು ಎಂದು ಮರುನಾಮಕರಣ ಮಾಡಿದರು. ಅಲ್ಲಿ ತಾತ್ಕಾಲಿಕ ಆಜಾದ್ ಹಿಂದ್ ಸರಕಾರ ಕಾರ್ಯನಿರ್ವಹಿಸಲು ಪ್ರಾರಂಭಿಸಿದರು.ಆದರೆ ದುರದೃಷ್ಟವಶಾತ್ ಜರ್ಮನಿ ಮತ್ತು ಜಪಾನ್ ಎರಡನೇ ಮಹಾಯುದ್ಧದಲ್ಲಿ ಸೋತಾಗ ಆಜಾದ್ ಹಿಂದ್ ಫೌಜ್ ಕೂಡಾ ತಾತ್ಕಾಲಿಕವಾಗಿ ಹಿಮ್ಮೆಟ್ಟಿತ್ತು.ಈ ಸಂದರ್ಭದಲ್ಲಿ ನೇತಾಜಿ ಕಣ್ಮರೆಯಾದರು.ಮುಂದೆ ಆಗಸ್ಟ್ ೧೮ ೧೯೪೫ ರಲ್ಲಿ ನಡೆದ ವಿಮಾನ ಅಪಘಾತದಲ್ಲಿ ಅವರು ಗಾಯಗೊಂಡರು ಮತ್ತು ಆಗಸ್ಟ್ ೨೦ ರಂದು ತೈಹೋಕು ಶವಾಗಾರದಲ್ಲಿ ಅವರ ಅಂತ್ಯಕ್ರಿಯೆ ನಡೆಸಿ ಚಿತಾಭಸ್ಮವನ್ನು ಟೋಕಿಯೋದ ಬೌದ್ಧ ದೇವಾಲಯದಲ್ಲಿ ಸಮಾಧಿ ಮಾಡಲಾಯಿತು.ಆದರೆ ಅವರ ಅಪಘಾತದಿಂದ ಗಾಯಾಳುವಾದ ಅಥವಾ ಮರಣವನ್ನಪ್ಪಿದ ಮೃತದೇಹದ ಚಿತ್ರವನ್ನು ಅವರ ಒಡನಾಡಿಗಲ್ಯಾರೂ ನೋಡಲಿಲ್ಲ .ಮುಂದೆ ಗಾಂಧೀಜಿ ಕೂಡಾ ಅವರ ಸಾವಿನ ಕುರಿತು ಸಂದೇಹ ವ್ಯಕ್ತಪಡಿಸಿದರು ಎನ್ನಲಾಗುತ್ತದೆ.

೧೯೫೬ ರಲ್ಲಿ ನೆಹರೂ ಸರಕಾರ ಈ ಪ್ರಕರಣದ ತನಿಖೆಗಾಗಿ ನೇಮಿಸಿದ ಸಮಿತಿಯು ಅಪಘಾತದಲ್ಲಿ ಮೃತಪಟ್ಟದ್ದು ಹೌದೆಂದು ವಾದಿಸಿದರೆ ೨೦೦೬ ರಲ್ಲಿ ನ್ಯಾಯಮೂರ್ತಿ ಮುಖರ್ಜಿಯವರ ಆಯೋಗವು ನೇತಾಜಿ ವಿಮಾನ ಅಪಘಾತದಲ್ಲಿ ಮರಣ ಹೊಂದಲಿಲ್ಲ,ರೆಂಕೋಜಿ ದೇವಾಲಯದಲ್ಲಿರುವ ಚಿತಾಭಸ್ಮವೂ ಅವರದ್ದಲ್ಲ ಎಂದು ವರದಿ ನೀಡಿತು.ಆದರೆ ೨೦೧೬ ರಲ್ಲಿ ಜಪಾನ್ ಸರಕಾರ ಟೋಕಿಯೊದಲ್ಲಿನ ಭಾರತೀಯ ರಾಯಭಾರ ಕಚೇರಿಗೆ ದಿವಂಗತ ಸುಭಾಷ್ ಚಂದ್ರರ ಸಾವಿನ ಕಾರಣ ಮತ್ತು ಒಂತರ ವಿಷಯಗಳ ತನಿಖೆಎಂಬ ಶೀರ್ಷಿಕೆಯೊಂದಿಗೆ ನೇತಾಜಿಯವರ ಮರಣವನ್ನು ಧೃಢಪಡಿಸಿತು.ರಾಷ್ಟ್ರ ನಿರ್ಮಾಣದ ಜವಾಬ್ದಾರಿಯುತ ಸ್ಥಾನದಲ್ಲಿದ್ದು ದುರ್ಬಲವಾದ ನೀತಿಯನ್ನು ಹೊಂದಿರಬಾರದೆಂಬುದು ಸುಭಾಷ್ ಚಂದ್ರರ ದಿಟ್ಟ ನಿಲುವಾಗಿತ್ತು.ಕಾಂಗ್ರೆಸ್ ನ ಬಲಹೀನ ನಾಯಕತ್ವ,ದುರ್ಬಲ ಒಪ್ಪಂದಗಳು ಸ್ವಾಭಿಮಾನ್ಯ ಶೂನ್ಯ ವರ್ತನೆಗೆ ಎದುರಾಗಿ ಸ್ವಾಭಿಮಾನದ ಸ್ವರಾಜ್ಯ ಹೋರಾಟಕ್ಕೆ ನೇತಾಜಿ ಬಲವನ್ನು ತುಂಬಿದ್ದರು. ಶೀಘ್ರ ಸ್ವಾತಂತ್ರ ಪ್ರಾಪ್ತಿಗಾಗಿ ಅವರು ಮಂಡಿಸುತ್ತಿದ್ದ ವಾದಗಳು ಅದಕ್ಕಾಗಿ ಮಾಡಬೇಕಾದ ಸರ್ವ ಸಿದ್ದತೆಗಳು ಇತ್ಯಾದಿಗಳ ಕುರಿತಾಗಿ ನೇತಾಜಿಗಿದ್ದ ನಿಲುವುಗಳೆಲ್ಲ ಶಾಂತಿಯ ಹೆಸರಲ್ಲಿ ಮಂದಗಾಮಿಗಳಾಗಿದ್ದ ಕಾಂಗ್ರೆಸ್ ನಾಯಕರಿಗೆ ಅಸಹನೀಯವಾಗಿತ್ತು. ಸ್ವತಃ ಗಾಂಧೀ ನೇತಾಜಿಯವರಿಗೆ ದೂರಗಾಮಿ ಚಿಂತನೆ ಇಲ್ಲ ಎಂದು ಟೀಕಿಸಿದ್ದರು.ಆದರೆ ನೇತಾಜಿ ೧೯೩೮ ರಲ್ಲೇ ಬ್ರಿಟೀಷ್ ಮತ್ತು ಮುಸಲೀಮ್ ಲೀಗ್ ನ ಕುತಂತ್ರಗಳ ಕುರಿತಾಗಿ ಬಹಿರಂಗವಾಗಿಯೇ ಎಚ್ಚರಿಸಿದ್ದರೂ ತಾವೇ ಸ್ವತಃ ದೂರದರ್ಶಿ ಚಿಂತನೆಯ ಪ್ರತಿರೂಪ ಎಂದು ಭ್ರಮಿಸುತ್ತಿದ್ದ ಗಾಂಧಿ ಮತ್ತು ನೆಹರೂ ಅದಕ್ಕೆ ಕಿವಿಗೊಡಲಿಲ್ಲ.ಪರಿಣಾಮವಾಗಿ ೯ ವರ್ಷಗಳ ಬಳಿಕ ಧರ್ಮಧ ಆಧಾರದಲ್ಲಿ ದೇಶವು ಹೋಳಾಯಿತು.

ಬ್ರಿಟೀಷರ ಒಡೆದು ಆಳುವ ನೀತಿಯ ಕುರಿತಾಗಿಯೂ ನೇತಾಜಿಗೆ ಅರಿವಿತ್ತು.೧೯೩೮ ರಲ್ಲಿ ಆರೆಸ್ಸೆಸ್ ನ ಸಂಘ ಶಿಕ್ಷಾವರ್ಗಕ್ಕೆ ಭೇಟಿನೀಡಲು ಸಮ್ಮತಿಸಿದ್ದ ಅವರು ಸಂಘದ ಧ್ಯೇಯ ಅನುಶಾಸನ ಕಾರ್ಯಪದ್ಧತಿಯನ್ನೂ ಶ್ಲಾಘಿಸಿದ್ದರು.ಕಾಂಗ್ರೆಸ್ ನ ಅಧ್ಯಕ್ಷರಾಗಿ ಚುನಾಯಿತರಾಗಿದ್ದರೂ ಗಾಂಧೀಜಿಯ ಅನಗತ್ಯ ಟೀಕೆಗಳು ಮತ್ತು ಬ್ರಿಟೀಷರೊಂದಿಗಿನ ಕಾಂಗ್ರೆಸ್ ನ ಅತಾರ್ಕಿಕ ದುರ್ಬಲ ನಡೆಗಳಿಂದ ಬೇಸತ್ತು ಅವರು ಕಾಂಗ್ರೆಸ್ ಗೆ ರಾಜೀನಾಮೆ ನೀಡಿದ್ದರು.೧೯೪೦ ರ ಜೂನ್ ನಲ್ಲಿ ಹೆಗಡೆವಾರರನ್ನು ಭೇಟಿಯಾಗಿದ್ದರೂ ಅವರೊಂದಿಗೆ ಮಾತುಕತೆ ಸಾಧ್ಯವಾಗಿರಲಿಲ್ಲ.ಮುಂದೆ ಅವರು ಸಾವರ್ಕರರನ್ನೂ ಭೇಟಿಯಾಗಿದ್ದರು.ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಗೆ ನೇತಾಜಿ ಎರಡು ಬಾರಿ ಅಧ್ಯಕ್ಷರಾಗಿದ್ದರು.ಆದರೆ ಸ್ವಾತಂತ್ರ ದೊರಕಿದ ಬಳಿಕ ನೆಹರೂ ಬೋಸ್ ರ ಕುಟುಂಬವನ್ನು ಗೌರವಯುತವಾಗಿ ನಡೆಸಿಕೊಳ್ಳಲಿಲ್ಲ.ಹಲವಾರು ವರುಷಗಳ ಕಾಲ ಅವರ ಕುಟುಂಬದ ಮೇಲೆ ಗೂಡಾಚಾರಿಕೆಯನ್ನು ನಡೆಸಿತು..ಗಾಂಧೀಜಿ ಹೇಗೆ ಭಗತ್ ಸಿಂಗ್ ನ ಪ್ರಖ್ಯಾತಿಯ ಕುರಿತಾಗಿ ಭಯವನ್ನು ಹೊಂದಿದ್ದಾರೋ ಹಾಗೆ ನೆಹರೂ ನೇತಾಜಿ ಸುಭಾಷ್ ಚಂದ್ರ ಬೋಸ್ ರ ಜನಪ್ರಿಯತೆಯ ಬಗ್ಗೆ ಭಯ ಹೊಂದಿದ್ದರು.ಯಾಕೆಂದರೆ ಭಾರತಕ್ಕೆ ಸ್ವಾತಂತ್ರ ತಂದುಕೊಡುವಲ್ಲಿ ಮಹತ್ತರ ಪಾತ್ರ ವಹಿಸಿದ್ದ ಬೋಸ್ ಏನಾದರೂ ಹಿಂತಿರುಗಿ ಬಂದಿದ್ದೆ ಆದಲ್ಲಿ ಜನರು ಅವರನ್ನು ಪ್ರಾಧಾನಿಯಾಗಿ ನೋಡಲು ಆಶಿಸಬಹುದು ಎಂಬ ಭಯ ನೆಹರೂ ಅವರನ್ನು ಕಾಡುತ್ತಿತ್ತೆಂದು ನೇತಾಜಿಯವರ ಕುಟುಂಬಸ್ಥರು ನೆನೆಸಿಕೊಳ್ಳುತ್ತಾರೆ.ಪ್ರತಿಯೊಂದು ಊರಿನಲ್ಲೂ ಎರಡು ಮೂರು ಎಂ ಜಿ ರಸ್ತೆಗಳಿದೆಯಾದರೂ ನೇತಾಜಿಯ ರಸ್ತೆಯೂ ವೃತ್ತವೋ ಪ್ರತಿಮೆಯೋ ಕಾಣಸಿಗುವುದು ಅಪರೂಪ. ಬ್ರಿಟಿಷರಿಂದ ವಶಪಡಿಸಿಕೊಂಡು ಮರುನಾಮಕರಣ ಮಾಡಿದ್ದ ಶಹೀದ್ ಮತ್ತು ಸ್ವರಾಜ್ ದ್ವೀಪಗಳನ್ನು ಅದೇ ಹೆಸರಿನೊಂದಿಗೆ ಗುರುತಿಸಿ ನೇತಾಜಿಗೆ ಗೌರವಸಲ್ಲಿಸಬಹುದಾದ ಅವಕಾಶವನ್ನೂ ಹಾಳು ಮಾಡಿ ನೆಹರೂ ಅದನ್ನು ಅಂಡಮಾನ್ ನಿಕೋಬಾರ್ ದ್ವೀಪಗಳೆಂದೇ ಗುರುತಿಸುವ ಮೂಲಕ ನೇತಾಜಿಯನ್ನು ಸಾಮಾನ್ಯರ ನೆನಪಿನಿಂದ ಅಳಿಸುವ ಕಾರ್ಯಕ್ಕೂ ನೆಹರೂ ಮುಂದಾಗಿದ್ದರು.ನೇತಾಜಿ ಕಮ್ಮ್ಯುನಿಷ್ಟರಾಗಿದ್ದರೆಂದು ಹೇಳಿಕೊಳ್ಳುವ ಭಾರತೀಯ ಕಮ್ಯುನಿಷ್ಟ್ ಪಕ್ಷವೂ ನೇತಾಜಿಗೆ ಲಭಿಸಬೇಕಾದ ಕನಿಷ್ಠ ಗೌರವವನ್ನು ದೊರಕಿಸಲು ಪ್ರಯತ್ನಿಸಲಿಲ್ಲ..ಅದಕ್ಕೂ ಮೋದಿಯೇ ಬರಬೇಕಾಯಿತು.

-Deepashree M

Tags

Related Articles

FOR DAILY ALERTS
Close