ಪ್ರಚಲಿತ

ಒಂದೇ ಒಂದು ಸಂದೇಶ ಮುಸಲ್ಮಾನರ ತಂತ್ರವನ್ನೇ ಬುಡಮೇಲು ಮಾಡಿ ಬಿಡ್ತು!

ಸುಳ್ಯದ ಚೆನ್ನಕೇಶವ ದೇವಾಲಯದ ಜಾತ್ರೆ ಸದ್ಯ ಸುದ್ದಿ ಯಲ್ಲಿರುವ ಪ್ರಮುಖ ವಿಚಾರ. ಇಲ್ಲಿ ಎಲ್ಲಾ ಧರ್ಮದ ಜನರಿಗೆ ಜಾತ್ರಾ ಗದ್ದೆಯಲ್ಲಿ ಮುಕ್ತ ವ್ಯಾಪಾರಕ್ಕೆ ಅವಕಾಶ ನೀಡಬೇಕು ಎಂಬ ವಿಚಾರದಲ್ಲಿ ವಾಗ್ವಾದ ಎದ್ದಿತ್ತು. ಈ ಹಿಂದೆ ದೇವಾಲಯದ ಆಡಳಿತ ಸಮಿತಿ ಸಹ ಎಲ್ಲಾ ಧರ್ಮದ ವ್ಯಾಪಾರಿಗಳಿಗೂ ವ್ಯಾಪಾರಕ್ಕೆ ಮುಕ್ತ ಅವಕಾಶ ನೀಡುವುದಾಗಿ ಹೇಳಿದ್ದು.

ಆದರೆ ದೇವಾಲಯದ ಈ ನಿಲುವು ಹಿಂದೂ ಸಂಘಟನೆಗಳ ಕೆಂಗಣ್ಣಿಗೆ ಗುರಿಯಾಗಿತ್ತು. ಅನ್ಯ ಧರ್ಮದವರಿಗೆ ವ್ಯಾಪಾರಕ್ಕೆ ಅವಕಾಶ ನೀಡದಂತೆ ಕೋರಿ ದೇವಾಲಯದ ಆಡಳಿತ ಸಮಿತಿಯವರಿಗೆ ಮನವಿ ಮಾಡಿತ್ತು. ಅಲ್ಲದೆ ಅನ್ಯ ಧರ್ಮದ ವ್ಯಾಪಾರಿಗಳಿಗೆ ಅವಕಾಶ ನೀಡಿದ್ದಕ್ಕೆ ವಿರೋಧವನ್ನು ಸಹ ವ್ಯಕ್ತಪಡಿಸಿತ್ತು.

ಹಿಂದೂ ಸಂಘಟನೆಗಳ ವಿರೋಧಕ್ಕೆ ಮಣಿದಿರುವ ಆಡಳಿತ ಸಮಿತಿ, ಅನ್ಯ ಧರ್ಮದ ಜನರಿಗೆ ವ್ಯಾಪಾರ ನಡೆಸುವ ಅವಕಾಶದ ನಿರ್ಧಾರದಿಂದ ಹಿಂದೆ ಸರಿದಿದೆ. ಅನ್ಯ ಮತೀಯರಿಗೆ ವ್ಯಾಪಾರಕ್ಕೆ ಅವಕಾಶ ಇಲ್ಲ ಎಂದು ಹೇಳಿದ್ದು, ಆ ಮೂಲಕ ಹಿಂದೂ ಸಂಘಟನೆಗಳ ನಿಲುವಿಗೆ ದೊಡ್ಡ ಮಟ್ಟದ ಜಯ ಸಿಕ್ಕಂತಾಗಿದೆ. ಹಿಂದೂಗಳಿಗೆ ಮಾತ್ರವೇ ಜಾತ್ರಾ ಗದ್ದೆಯಲ್ಲಿ ವ್ಯಾಪಾರಕ್ಕೆ ಅವಕಾಶ ನೀಡಲಾಗಿದ್ದು, ಆ ಮೂಲಕ ಜಿಹಾದಿ ಶಕ್ತಿಗಳಿಗೆ ಆರ್ಥಿಕ ಹೊಡೆತ ನೀಡಲು ಮುಂದಾಗಿರುವುದು, ಹಿಂದೂ ಧರ್ಮಕ್ಕೆ ಸಿಕ್ಕ ಜಯವಾಗಿದೆ.

ಇನ್ನು ಈ ಜಾತ್ರೆಯಲ್ಲಿ ಹಿಂದೂಗಳ ಜೊತೆಗೆ ಇತರ ಧರ್ಮದ ಜನರಿಗೂ ವ್ಯಾಪಾರಕ್ಕೆ ಮುಕ್ತ ಅವಕಾಶ ನೀಡಿದ್ದ ನಿರ್ಣಯವನ್ನು ಕೆಲ ಜಿಹಾದಿ ಶಕ್ತಿಗಳು, ಜಿಹಾದಿ ಮಾಧ್ಯಮಗಳು ವಿಜೃಂಬಿಸಿ ಸುದ್ದಿ ಮಾಡಿದ್ದವು. ಇದು ಹಿಂದೂ ಸಂಘಟನೆಗಳಿಗೆ ಆದ ಮುಖಭಂಗ ಎಂದು ಹೇಳಿದ್ದವು. ಅಂತಹ ಜಿಹಾದಿ ಕ್ರಿಮಿಗಳಿಗೂ ದೇವಾಲಯದ ಈ ನಿರ್ಣಯ ನುಂಗಲಾರದ ತುತ್ತಾಗಿ ಪರಿಣಮಿಸಿದೆ.

Tags

Related Articles

Close