ಪ್ರಚಲಿತ

ಭಾರತದ ಅತೀ ದೊಡ್ಡ ಕುಂಭಮೇಳದ ಒಟ್ಟು ಆದಾಯ ಎಷ್ಟು ಗೊತ್ತಾ? ಕುಂಭಮೇಳವನ್ನು ವ್ಯರ್ಥ ಎಂದ ವಿರೋಧಿಗಳು ಗಪ್-ಚುಪ್!

ಭಾರತದ ಅತೀ ದೊಡ್ಡ ಧಾರ್ಮಿಕ ಮೇಳ ಎಂದೇ ಹೆಸರಾದ ಕುಂಭಮೇಳ ಈ‌ ಬಾರಿ ಹಿಂದೆಂದಿಗಿಂತಲೂ ಅದ್ದೂರಿಯಾಗಿ ನಡೆಯುತ್ತಿದೆ. ಉತ್ತರ ಪ್ರದೇಶದ ಪ್ರಯಾಗ್‌ರಾಜ್ ನಲ್ಲಿ ನಡೆಯುತ್ತಿರುವ ಇತಿಹಾಸ ಪ್ರಸಿದ್ಧ ಕುಂಭಮೇಳಕ್ಕೆ‌ ಈ ಬಾರಿ ಕೋಟಿ‌ ಕೋಟಿ ಭಕ್ತರು ಮತ್ತು ಹಿಂದೂ ಸಾಧು ಸಂತರು ಆಗಮಿಸುತ್ತಿದ್ದಾರೆ. ಉತ್ತರ ಪ್ರದೇಶ ಯೋಗಿ ಆದಿತ್ಯನಾಥ್ ಸರಕಾರ ಮತ್ತು ಕೇಂದ್ರದ ಮೋದಿ ಸರಕಾರದ ನೇತೃತ್ವದಲ್ಲಿ ಆಯೋಜಿಸಿರುವ ಈ ಕುಂಭಮೇಳವನ್ನು ವ್ಯರ್ಥ ಎಂದಿರುವ ಕೆಲ ವಿರೋಧಿಗಳಿಗೆ ಇದೀಗ ಕಪಾಳಮೋಕ್ಷ ಮಾಡಿದಂತಾಗಿದೆ. ಯಾಕೆಂದರೆ ಕುಂಭಮೇಳ ಎಂದರೆ ದೇಶ ವಿದೇಶಗಳಿಂದ ಕೋಟ್ಯಾಂತರ ಭಕ್ತರು ಆಗಮಿಸುತ್ತಾರೆ, ಅಷ್ಟೇ ಅಲ್ಲದೆ ಕುಂಭಮೇಳಕ್ಕಾಗಿ ಕಿಮೀ ಉದ್ದದ ಒಂದು ನಗರವನ್ನೇ ನಿರ್ಮಿಸಿದ ಯೋಗಿ ಸರಕಾರ, ಹೊಸ ಇತಿಹಾಸ ನಿರ್ಮಿಸಿದೆ. ಯಾಕೆಂದರೆ ಕುಂಭಮೇಳ ಆರಂಭವಾಗಿ ಕೇವಲ 7 ದಿನಗಳಾಗಿವೆ, ಆದರೆ ಆದಾಯದ ಪ್ರಮಾಣ ಕೇಳಿದರೆ ಯಾರೆಲ್ಲ ವಿರೋಧಿಸಿದ್ದಾರೋ ಅವರೆಲ್ಲಾ ಮೂಗಿನ ಮೇಲೆ ಬೆರಳಿಟ್ಟು ಕೂರುವುದು ಗ್ಯಾರಂಟಿ.!

ಖರ್ಚಾಗಿದ್ದು ಸಾವಿರ ಕೋಟಿ , ಗಳಿಸಿದ್ದು ಲಕ್ಷ ಕೋಟಿ!

ಉತ್ತರ ಪ್ರದೇಶದ ಪ್ರಯಾಗ್‌ರಾಜ್ ನಲ್ಲಿ ನಡೆಯುತ್ತಿರುವ ಕುಂಭ ಮೇಳಕ್ಕೆ ಸರಕಾರ ೪,೨೦೦ ಕೋಟಿ ರೂಪಾಯಿ ವೆಚ್ಚದಲ್ಲಿ ವ್ಯವಸ್ಥೆ ಮಾಡಿತ್ತು. ಈ ವಿಚಾರ ತಿಳಿದ ವಿರೋಧಿಗಳು ಮೋದಿ ಮತ್ತು ಯೋಗಿ‌ ಸರಕಾರದ ವಿರುದ್ಧ ಟೀಕೆ ಮಾಡಲು ಆರಂಭಿಸಿದ್ದರು. ಕುಂಭಮೇಳ ಒಂದು ವ್ಯರ್ಥ ಕಾರ್ಯಕ್ರಮ, ಇಷ್ಟೊಂದು ಕೋಟಿ ಖರ್ಚು ಮಾಡಿ ಇಂತಹ ಕಾರ್ಯಕ್ರಮ ಮಾಡುವುದರ ಬದಲು ಬಡಜನರಿಗೆ ಬೇಕಾದ ಯೋಜನೆ ರೂಪಿಸಬಹುದು ಎಂದು ಟೀಕೆ ಮಾಡಿದ್ದರು. ಆದರೆ ಯಾವ ಟೀಕೆಗೂ ಕ್ಯಾರೇ ಅನ್ನದ ಮೋದಿ-ಯೋಗಿ ಸರಕಾರ ಬಹಳ ಅದ್ದೂರಿಯಾಗಿ ಕುಂಭಮೇಳ ಆಯೋಜಿಸಿತ್ತು. ಇದೀಗ ಕುಂಭಮೇಳದಿಂದ‌ ಸರಕಾರಕ್ಕೆ ಬಂದ ಒಟ್ಟು ಆದಾಯ ಬರೋಬ್ಬರಿ 1.20 ಲಕ್ಷ ಕೋಟಿ ಎಂಬುದು ಸ್ವತಃ ಭಾರತೀಯ ಉದ್ಯಮಗಳ ಒಕ್ಕೂಟ ತಿಳಿಸಿದೆ. 50 ದಿನಗಳ ಕಾಲ ನಡೆಯುವ ಈ ಕುಂಭಮೇಳ ಕೇವಲ 7 ದಿನ ಮಾತ್ರ ಪೂರೈಸಿದೆ, ಈ ಏಳು ದಿನದಲ್ಲೇ ಇಷ್ಟೊಂದು ಆದಾಯ ಗಳಿಸಿದ್ದು, ಇನ್ನೂ 42/43 ದಿನ‌ ನಡೆಯುವ ಕಾರ್ಯಕ್ರಮದಲ್ಲಿ ಮತ್ತಷ್ಟು ಹೆಚ್ಚಾಗಲಿದೆ ಎಂದು ಹೇಳಲಾಗಿದೆ.!

ಮೋದಿ ಏನೇ ಮಾಡಿದರೂ ಅದರ ಹಿಂದೆ ಒಂದು ಬಲವಾದ ಉದ್ದೇಶ ಇದ್ದೇ ಇರುತ್ತದೆ ಎಂಬುದನ್ನು ಪ್ರತಿಯೊಬ್ಬರೂ ಅರ್ಥ ಮಾಡಿಕೊಳ್ಳಲೇಬೇಕು. ಕುಂಭಮೇಳ ಎಂಬುದು ಭಾರತದ ಮತ್ತು ಹಿಂದೂ ಸಂಸ್ಕೃತಿಯನ್ನು ಜಗತ್ತಿಗೆ ಸಾರುವ ಒಂದು‌ ಮಾರ್ಗ. ಅದೆಷ್ಟೋ ಸಾವಿರ ಸಾಧು ಸಂತರು ಈ ಮೇಳದಲ್ಲಿ ಪಾಲ್ಗೊಳ್ಳುತ್ತಾರೆ, ಗಂಗಾ ನದಿಯಲ್ಲಿ ಮಿಂದೆದ್ದು ಭಕ್ತ ಸಮೂಹವೇ ಪಾಪ ವಿಮೋಚನ ಮಾಡಿಕೊಳ್ಳುತ್ತವೆ. ಹೀಗಿರುವಾಗ ಕುಂಭಮೇಳವನ್ನು ವ್ಯರ್ಥ ಎಂದಿರುವ ವಿರೋಧಿಗಳು ಇದೀಗ ನಾಪತ್ತೆಯಾಗಿದ್ದಾರೆ. ಯಾಕೆಂದರೆ ಕೇವಲ ಏಳು ದಿನದಲ್ಲೇ ಗಳಿಸಿದ ಆದಾಯ ವಿರೋಧಿಗಳ ಊಹೆಗೂ ಮೀರಿದ್ದಾಗಿದೆ.

ಅಷ್ಟೇ ಅಲ್ಲದೆ ಕುಂಭಮೇಳದ ವಿಶೇಷತೆಯನ್ನು ತಿಳಿಸುತ್ತಾ ಹೋದರೆ, ಇದೊಂದು ಬಹಳ ವಿಶೇಷ ಮೇಳ ಎಂದರೂ ತಪ್ಪಾಗದು. ‌ಯಾಕೆಂದರೆ ಮೇಳದಲ್ಲಿ ಪಾಲ್ಗೊಂಡ ಸಾಧು ಸಂತರು ಹೇಳುವ ಪ್ರಕಾರ, ನಾವು ಹಲವಾರು ಕುಂಭಮೇಳದಲ್ಲಿ ಭಾಗವಹಿಸಿದ್ದೇವೆ, ಆದರೆ ಇಷ್ಟೊಂದು ಸ್ವಚ್ಛ ಗಂಗಾ ನದಿಯನ್ನು ನಾವು ಹಿಂದೆಂದೂ ಕಂಡಿರಲಿಲ್ಲ ಎಂದು ಹೇಳಿಕೊಂಡಿದ್ದಾರೆ. ‌ಇವೆಲ್ಲವೂ ಮೋದಿ‌‌ ಸರಕಾರದ ಆಡಳಿತಕ್ಕೆ ಹಿಡಿದ ಕನ್ನಡಿಯೇ ಹೊರತು ಮತ್ತಿನ್ನೇನೂ ಅಲ್ಲ. ಅದೇನೇ ಇರಲಿ ಕುಂಭಮೇಳವನ್ನು ಆಯೋಜಿಸಿರುವುದೇ ತಪ್ಪು ಎಂದು ವಿರೋಧಿಸಿದವರಿಗೆ ತಕ್ಕ ಉತ್ತರ ಸಿಕ್ಕಿದ್ದು ಎಲ್ಲಾ ವಿರೋಧಿಗಳು ಬಿಲಸೇರುವಂತಾಗಿದೆ.!

-ಅರ್ಜುನ್

Tags

Related Articles

FOR DAILY ALERTS
Close