ಪ್ರಚಲಿತ

ಅಧ್ಯಾಯ ೬: ಕಾಶ್ಮೀರದಲ್ಲಿ ಯಾವುದು ಆಗಬಾರದಿತ್ತೋ ಅದು ಆಗಿಯೇ ಹೋಗಿತ್ತು.! ಅಲ್ಲಿ ಧರೆಗುರುಳಿದ ದೇವಾಲಯಗಳಿಗೆ ಲೆಕ್ಕವೇ ಇಲ್ಲ…

ಅಧ್ಯಾಯ ೬:

ಮೀರ್ ಮೊಹಮದ್ ಹಮದಾನಿಯವರ ನೇರ ಸೂಚನೆಯ ಮೇರೆಗೆ ಸುಲ್ತಾನ್ ಸಿಕಂದರ್ ನೀರಿನಿಂದ ಮೀನುಗಳನ್ನು ಹೊರತೆಗೆಯುವಂತೆ ದೇವಾಲಯಗಳಿಂದ ವಿಗ್ರಹಗಳನ್ನು ಮುರಿದು ಹೊರತೆಗೆಯಲು ಪ್ರಾರಂಭಿಸಿದ.ಮಾರ್ತಾಂಡ ಸೂರ್ಯ ದೇವಾಲಯ,ವಿಜಯೇಶನ್,ಚಕ್ರಬ್ರಾಟ್,ತ್ರಿಪುರೇಶ್ವರ,ಸುರೇಶ್ವರಿ,ವರಾಹಾ ಮತ್ತು ಇತರ ಅಧ್ಭುತ ದೇವಾಲಯಗಳನ್ನು ನೆಲಕ್ಕುರುಳಿಸಿ ನಾಶಪಡಿಸಿದ್ದಕ್ಕಾಗಿ ಮುಸ್ಲಿಂ ಚರಿತ್ರೆಕಾರರು ಹೆಮ್ಮೆ ಮತ್ತು ಸಂತೋಷದಿಂದ ಸುಲ್ತಾನ್ ಸಿಕಂದರ್ ನನ್ನು ‘ಐಕಾನ್ ಕ್ಲಾಸ್ಟ್’ ಎಂದು ಕರೆಯುತ್ತಾರೆ.ಹಿಂದೂ ಸಂಸ್ಕೃತಿಯ ನಾಗರೀಕತೆ ಮತ್ತು ಜಲವಿಜ್ಞಾನದಲ್ಲಿ ಅವರಿಗಿದ್ದ ಔನತ್ಯವನ್ನು ಸೂಚಿಸುವ ಹಿಂದೂ ವಾಸ್ತುಶಿಲ್ಪದ ಪ್ರತೀಕವಾದ ಮಾರ್ತಾಂಡ ಸೂರ್ಯ ದೇವಾಲಯದ ಅಡಿಪಾಯದ ಕಲ್ಲುಗಳನ್ನು ಕತ್ತರಿಸಿ ತೆಗೆದು ಅಲ್ಲಿ ಮರದ ತುಂಡುಗಳನ್ನು ತುಂಬಿಸಿ ಬೆಂಕಿ ಹಚ್ಚಲಾಯಿತು.ಅದಕ್ಕೂ ಮೊದಲು ಹಿಂದೂ ಕಲಾಕೃತಿ ಮತ್ತು ವಾಸ್ತುಶಿಲ್ಪಗಳನ್ನು ಮುರಿದು ಹಾಳುಗೆಡವುವ ಉದ್ದೇಶದಿಂದಲೇ ಒಂದು ಬೃಹತ್ ಸುತ್ತಿಗೆಯನ್ನು ತಯಾರಿಸಲಾಗಿತ್ತು.ದೇಶ ಮತ್ತು ಪ್ರಪಂಚದ ಎಲ್ಲಾ ಭಾಗಗಳಿಂದ ವಿಧ್ವಾಮ್ಸರು ಮತ್ತು ವಿದ್ಯಾರ್ಥಿಗಳನ್ನು ಆಕರ್ಷಿಸುತ್ತಿದ್ದ ವಿಶ್ವಪ್ರಸಿದ್ಧ ವಿಶ್ವವಿದ್ಯಾನಿಲಯವನ್ನು ಹೊಂದುದ್ದ ಬಿಜ್ ಬೇಹೆರಾದಲ್ಲಿದ್ದ ಮತ್ತೊಂದು ಬೃಹತ್ ದೇವಾಲಯವನ್ನು ಸಂಪೂರ್ಣವಾಗಿ ನೆಲಸಮ ಮಾಡಲಾಯಿತು ಈ ದೇವಾಲಯವನ್ನು ಇನ್ನೂ ವಿಜಯೇಶ್ವರ ದೇವಾಲಯ ಎಂದು ಕರೆಯಲಾಗುತ್ತದೆ.ಈ ದೇವಾಲಯವನ್ನು ಶಹಾಬ್-ಉದ್- ದೀನ್ ಲೂಟಿ ಮಾಡಿ ನಾಶಗೊಳಿಸಲು ಪ್ರಯತ್ನಿಸಿದ್ದರು.ದೇವಾಲಯದ ಅಡಿಪಾಯದಿಂದ ಸರ್ದಾ ಅಕ್ಷರಗಳಲ್ಲಿ ‘ ಬಿಸ್ಮಿಲ್ಲಾ ಮಂತ್ರದಿಂದ ವಿಜಯೇಶ್ವರ ದೇವಾಲಯವನ್ನು ನಾಶಗೊಂಡ ದೇವಾಲಯವನ್ನು ಮರುನಿರ್ಮಿಸಲಾಗಿದೆ ’ ಎಂಬ ಬರಹವುಳ್ಳ ಕಲ್ಲು ಚಪ್ಪಡಿಯೂ ದೊರಕಿದೆ ಇದು ಹಿಂದೂ ವಾಸ್ತುಶಿಲ್ಪವನ್ನು ನಾಶಪಡಿಸಿದ ಬಳಿಕ ಕುಕೃತ್ಯವನ್ನು ಸಮರ್ಥಿಸಿಕೊಳ್ಳುವ ಪ್ರಯತ್ನವಾಗಿತ್ತು.

ಸುಸಂಸ್ಕೃತ ಜೀವನದ ಎಲ್ಲಾ ರೂಪುರೇಷೆಗಳನ್ನು ಉಲ್ಲಂಘಿಸಿ ತನ್ನ ಜೀವನವನ್ನು ಮೀರ್ ಮೊಹಮ್ಮದರ ಆಜ್ಞೆಗಳಿಗನುಸಾರವಾಗಿ ರೂಪಿಸಿಕೊಂಡಿದ್ದ ಸಿಕಂದರ್ ಹಿಂದೂಗಳಿಗೆ ಒಂದೋ ಮತಾಂತರಗೊಳ್ಳಿ ಇಲ್ಲದಿದ್ದಲ್ಲಿ ಕಾಶ್ಮೀರದಿಂದ ಪಲಾಯನ ಮಾಡಿ ಅಥವಾ ನಾಶಹೊಂದಿ ಎಂಬ ಅತ್ಯಂತ ಕ್ರೂರ ರಾಜಾಜ್ಞೆಯನ್ನು ಹೊರಡಿಸಿದನು.ಇದರ ಪರಿಣಾಮವಾಗಿ ಸಾವಿರಾರು ಹಿಂದುಗಳನ್ನು ಕ್ರೂರವಾಗಿ ಹತ್ಯೆಗಯ್ಯಲಾಯಿತು.ಸಾವಿರಾರು ಜನರು ಮತಾಂತರಗೊಂಡರು ಸಾವಿರಾರು ಜನರು ಸಿಂಥಾನ್ ಪಾಸ್ ಮೂಲಕ ನೆರೆಯ ಕಿಷ್ಟಾವರ ಮತ್ತು ಭದ್ರವಾ ಗಳಿಗೆ ಮತ್ತು ಬಟೋತೆ ಎಂಬ ಕಾಶ್ಮೀರಿ ಹಿಂದುಗಳ ಮಾರ್ಗದಿಂದ ಭಾರತದ ಇತರ ರಾಜ್ಯಗಳಿಗೆ ಪಲಾಯನ ಮಾಡಿದರು…ಕಾಶ್ಮೀರಿ ಸುಲ್ತಾನನ ಈ ಮತಾಂಧ ಸುಗ್ರೀವಾಜ್ಞೆಯು ಕಾಶ್ಮೀರಿ ಹಿಂದೂಗಳ ವಲೆಸೆಯ ಮೊದಲ ಅಧ್ಯಾಯವಾಗಿ ಪ್ರಾರಂಭವಾಯಿತು.ಮನೆಯನ್ನೂ ಒಲೆಯನ್ನೂ ಬಿಟ್ಟು ಎಲ್ಲಾ ಹಿಂದೂಗಳು ತಮ್ಮ ಧರ್ಮ ಮತ್ತು ನಂಬಿಕೆಗಳನ್ನು ಉಳಿಸಿಕೊಳ್ಳಲು ಭಾರತದ ಇತರೆಡೆ ವಲಸೆ ಹೋದರು..ಕಾಶ್ಮೀರಿ ಇತಿಹಾಸದ ಪ್ರಕಾರ ಕೇವಲ ೧೧ ಹಿಂದೂ ಕುಟುಂಬಗಳು ಮಾತ್ರ ಕಾಶ್ಮೀರದಲ್ಲಿ ಉಳಿದುಕೊಂಡಿತ್ತು

ಈ ವಲಸೆಗಳ ಆಘಾತಕಾರೀ ಚಿತ್ರಣವನ್ನು ಇತಿಹಾಸಗಾರ ಜೊನ್ರಾಜ್ ಈ ರೀತಿಯಾಗಿ ಚಿತ್ರಿಸಿದ್ದಾರೆ “ ಹಿಂದೂಗಳ ಗುಂಪುಗಳು ರಸ್ತೆಗಳ ಮೂಲಕ ವಿಭಿನ್ನ ದಿಕ್ಕುಗಳಲ್ಲಿ ಚದುರಿ ಹೋದರು,ಅವರ ಸಾಮಾಜಿಕ ಜೀವನವು ಸಂಪೂರ್ಣವಾಗಿ ಅಸ್ತವ್ಯಸ್ತಗೊಂಡಿತು,ಅವರ ಜೀವನವು ಆಯಾಸ ಮತ್ತು ಹಸಿವೆಗಳಿಂದ ಶೋಚನೀಯವಾಯಿತು,ಅನೇಕರು ಸಾವನ್ನಪ್ಪಿದ್ದರು,ಸುಡುವ ಶಾಖ ಮತ್ತು ಪೌಷ್ಟಿಕಾಂಶಗಳ ಕೊರತೆಯಿಂದಾಗಿ ಅನೇಕರು ತಲ್ಲಣಗೊಂಡರು..ಅನೇಕರು ಇತರ ಹಳ್ಳಿಗಳಲ್ಲಿ ಮುಸ್ಲಿಮರಂತೆ ವೇಷಬದಲಿಸಿ ಜೀವಿಸಿದರೆ ಇನ್ನೂ ಹಲವಾರು ತಮ್ಮ ಕುಟುಂಬದವರನ್ನು ಹುಡುಕುತ್ತಾ ದೇಶವಿಡೀ ಓಡಾಡುತ್ತಿದ್ದರು.ಅವರ ಶಿಕ್ಷಣ ಮತ್ತು ಜೀವನೋಪಾಯವನ್ನು ಕಸಿದು ಅವ್ರಾಸ್ಥೈರ್ಯವನ್ನೇ ಕಸಿದುಕೊಳ್ಳಲಾಗಿತ್ತು”

ಸುಲ್ತಾನ ಸಿಕಂದರ್ ಮಾನವೀಯತೆಯನ್ನು ಮರೆತು ಅಮಾನವೀಯವಾಗಿ ತೆಗೆದುಕೊಂಡ ನಿರ್ಧಾರಗಳು
೧. ಸುಲ್ತಾನನು ಸಂಗೀತ,ನೃತ್ಯ,ನಾಟಕ,ಚಿತ್ರಕಲೆ ಮತ್ತು ಹಿಂದೂಗಳ ಇತರ ಸೃಜನಶೀಲ ಮತ್ತು ಸಾಂಸ್ಕೃತಿಕ ಚಟುವಟಿಕೆಗಳನ್ನು ನಿಷೇಧಿಸಿದನು.

೨. ಸುಲ್ತಾನನು ಹಿಂದೂಗಳನ್ನು ಕೊಂಡು ಸುಮಾರು ೩೭ ಕಿಲೋಗಳಷ್ಟು ಜನಿವಾರವನ್ನು ಬೆಂಕಿಗೆ ಹಾಕಿ ಸುತ್ತಿದ್ದನು.

೩. ಹಣೆಯ ಮೇಲೆ ತಿಲಕ ಧರಿಸಿದ್ದ ಹಿಂದೂಗಳನ್ನು ಕೊಂಡರು.

೪. ಮರಣಹೊಂದಿದ ಹಿಂದೂಗಳ ದೇಹವನ್ನು ಸುಡಬಾರದೆಂದು ಆದೇಶಿಸಿದನು.

೫. ಪ್ರಾರ್ಥನೆ ಮತ್ತು ಪೂಜೆಯನ್ನು ಸಲ್ಲಿಸಲು ದೇವಾಲಯಗಳಿಗೆ ಹೋಗುವುದನ್ನು ಹಿಂದೂಗಳಿಗೆ ನಿಷೇಧಿಸಿದನು.

೬. ಹಿಂದೂಗಳಿಗೆ ಶಂಖವನ್ನೂದಲೂ ಮತ್ತು ಘಂಟೆಯನ್ನು ಬಾರಿಸಲೂ ಅವಕಾಶವನ್ನು ನಿರಾಕರಿಸಲಾಯಿತು.

೭. ಸುಲ್ತಾನನ ಆಜ್ಞೆಯಂತೆ ದೇವಾಲಯಗಳನ್ನು ಕೆಡವಿ ನಾಶಗೊಳಿಸಿದರು ಮತ್ತು ಅವುಗಳ ಸಾಮಗ್ರಿಯಿಂದ ಮಸೀದಿಗಳನ್ನು ನಿರ್ಮಿಸಿದರು.ಮೀರ್ ಅಲಿ ಅಹಮದಾನಿಯ ಮಸೀದಿಯನ್ನು ಕಾಲಿಶ್ರೀ ದೇವಾಲಯವನ್ನು ನಾಶಪಡಿಸಿ ನಿರ್ಮಿಸಿದರೆ ಶ್ರೀನಗರದ ಜಾಮಿಯಾ ಮಸೀದಿಯನ್ನು ಬೌದ್ಧ ವಿಹಾರದ ಅಡಿಪಾಯದಲ್ಲಿ ನಿರ್ಮಿಸಲಾಯಿತು.ಹೆಚ್ಚಿನ ಎಲ್ಲಾ ಮಸೀದಿಗಳನ್ನು ದೇವಾಲಯದ ಅಡಿಪಾಯದಲ್ಲಿ ನಿರ್ಮಿಸಲಾಗಿದೆ.

೮. ಸುಲ್ತಾನನ ಸೇನಾಧಿಪತಿ ಮಲಿಕ್ ಸೈಫ್ ಕಾಶ್ಮೀರದ ಹಿಂದೂಗಳನ್ನು ಇಸ್ಲಾಮ್ ಗೆ ಮತಾಂತರಗೊಳಿಸಲು ಸೈನ್ಯದ ಬಲವನ್ನು ಕೂಡಾ ಉಪಯೋಗಿಸಿದ್ದನು.

೯.ಹಿಂದೂಗಳು ತಮ್ಮ ಧಾರ್ಮಿಕ ಹಬ್ಬಗಳು ಮತ್ತು ಇತರ ಆಚರೆಣಗಳನ್ನು ಮಾಡುವುದನ್ನು ನಿಷೇಧಿಸಲಾಯಿತು.

೧೦. ಸಿಕಂದರ್ ಹಿಂದೂಗಳ ಮೇಲೆ ಜಝಿಯ ತೆರಿಗೆಯನ್ನು ಹೇರಿದ್ದನು.

೧೧.ಅವಳಿಮಕ್ಕಳಿಗೆ ಜನ್ಮ ನೀಡುವ ಹಿಂದೂ ಮಹಿಳೆಯ ಮೇಲೂ ಜಝಿಯಾ ವನ್ನು ಹೇರಲಾಯಿತು.

೧೨. ಅಮಾವಾಸ್ಯೆಯೆಯಂದು ಹಿಂದೂಗಳಿಗೆ ಪೂಜಿಸಲು ಮತ್ತು ಮೆರವಣಿಗೆ ನಡೆಸಲು ಅವಕಾಶ ನಿರಾಕರಿಸಲಾಯಿತು.

೧೩. ಸಿಕಂದರ್ ಮತ್ತು ಮಲಿಕ್ ಸೈಫ್ ರ ಆಜ್ಞೆಯಂತೆ ರಾಜ್ಯದ ಗಡಿಗಳಲ್ಲಿ ಸೈನಿಕರನ್ನು ನೇಮಿಸುವ ಮೂಲಕ ಹಿಂದೂಗಳಿಗೆ ಮತಾಂತರದಿಂದ ಪಲಾಯನಗೊಳ್ಳಲೂ ಅವಕಾಶವಿಲ್ಲದಂತೆ ಮಾಡಿ ಮತಾಂತರಗೊಳ್ಳುವುದು ಮತ್ತು ಮರಣಹೊಂದುವುದು ಎಂಬ ಎರಡೇ ಆಯ್ಕೆಯನ್ನು ನೀಡಲಾಯಿತು.

೧೪. ಪ್ರಾಚೀನ ದಾಲ್ ಸರೋವರದ ನೀರಿನಲ್ಲಿ ಸಿಕಂದರ್ ನೂರಾರು ಹಿಂದೂಗಳನ್ನು ಮುಳುಗಿಸಿ ಜಲಸಮಾಧಿಯಾಗಿಸಿದ್ದನು.

೧೬. ಕಾಶ್ಮೀರ ಇತಿಹಾಸಗಾರ ಶ್ರೀವರ “ ಸುಡುವ ಹುಲ್ಲಿನಂತೆ ಸಿಕಂದರ್ ಕಾಶ್ಮೀರದ ಹಿಂದೂಗಳ ಎಲ್ಲಾ ಪುಸ್ತಕಗಳನ್ನು ಸುಟ್ಟುಹಾಕಿದ್ದ” ಎಂದು ದಾಖಲಿಸಿದ್ದಾರೆ.

ಹೀಗೆ ಸಿಕಂದರ್ ಅನಾಗರೀಕ ವರ್ತಿಸುವ ಮೂಲಕ ಕಾಶ್ಮೀರಿ ಹಿಂದೂಗಳ ಪಾಲಿನ ರಕ್ಕಸನೂ ಪಿಶಾಚಿಯೂ ಆಗಿ ಸಾವಿರಾರು ಹಿಂದೂಗಳ ಮಾರಣ ಹೋಮಕ್ಕೂ ನೂರಾರು ದೇವಾಲಯಗಳ ನಾಶಕ್ಕೂ ಕಾರಣನಾಗಿದ್ದ.

ಉಲ್ಲೇಖ : ಪ್ರೊಫೆಸರ್ ಮೋಹನ್ ಲಾಲ್ ಕೌಲ್

Chapter1:

ಭೂಲೋಕದ ಸ್ವರ್ಗ ಕಾಶ್ಮೀರ ಶಾರದಾ ಮಾತೆಯ ತವರೂರು! ಭರತ ಭೂಮಿ ಎಂಬುದು ದೇವರುಗಳ ಭೂಮಿ ಎಂಬುದನ್ನು ನಾವು ಮರೆತಿದ್ದೇವಾ?

Chapter2:

ಭಾರತದ ಕಿರೀಟ ಕಾಶ್ಮೀರ ಶಾರದೆಯ ಕಿರೀಟವಾಗಿದ್ದು ಹೇಗೆ? ಕಾಶ್ಮೀರಪುರವಾಸಿನಿಯ ಐತಿಹಾಸಿಕ ಕಥೆ…

 

Chapter 3:

 

ಕಾಶ್ಮೀರದಲ್ಲಿ ಹಿಂದೂಗಳ ಇತಿಹಾಸ ಎಂತದ್ದು.? ಇಸ್ಲಾಂ ಧರ್ಮಕ್ಕೆ ಮತಾಂತರಗೊಂಡ ಹಿಂದೂಗಳ ಪರಿಸ್ಥಿತಿ ಹೇಗಾಗಿತ್ತು??

Chapter 4:

ಅಧ್ಯಾಯ ೪: ಪಂಡಿತರ ಬೀಡಾಗಿದ್ದ ಕಾಶ್ಮೀರದಲ್ಲಿ ಹಿಂದೂಗಳಿಗೆ ವಿಧಿಸಿದ್ದ ಷರತ್ತುಗಳು ಎಂತದ್ದು ಗೊತ್ತಾ.? ಆ ಷರತ್ತು ಪಾಲಿಸದಿದ್ದರೆ ಏನಾಗುತ್ತೆ.?

Chapter 5:

ಅಧ್ಯಾಯ ೫:ಕಡೆಗೂ‌ ಹಿಂದೂಗಳ ಘೋರ ಅವನತಿಗೆ ಮೂಕ ಸಾಕ್ಷಿಯಾಯಿತು ಭಾರತದ ಮುಕುಟ.! ಹೆಜ್ಜೆ ಹೆಜ್ಜೆಗೂ ನೆಲೆವೂರಿತ್ತು ಇಸ್ಲಾಂ ಛಾಯೆ!

-Deepashree M

Tags

Related Articles

FOR DAILY ALERTS
Close