ಪ್ರಚಲಿತ

ಪ್ರಧಾನ ಮಂತ್ರಿ ಕುರ್ಚಿಯ ಮೇಲೆ ಕಣ್ಣಿಟ್ಟಿರುವ ಮಮತಾ ತನ್ನ ರಾಜ್ಯದಲ್ಲಿ ಗೋರ್ಖಾಗಳ ಪ್ರಾಬಲ್ಯವನ್ನು ಮುರಿಯಲು “ಛೋಟಾ ಪಾಕಿಸ್ತಾನ್” ನಿರ್ಮಾಣ ಮಾಡುತ್ತಿದ್ದಾರೆ!!

ಉತ್ತರ ಭಾರತದಲ್ಲಿ “ಮಮತಾ ಡಾಯನ್” ಎಂದೆ ಪ್ರಚಲಿತವಾಗಿರುವ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ಹಿಂದೂಗಳ ಪಾಲಿಗೆ ಸಾಕ್ಷಾತ್ ರಾಕ್ಷಸಿ ಆಗಿರುವುದು ಈಗ ಗುಟ್ಟಾಗಿ ಉಳಿದಿಲ್ಲ. ತನ್ನ ವೋಟ್ ಬ್ಯಾಂಕ್ ರಾಜನೀತಿಗಾಗಿ ಬಾಂಗ್ಲಾ-ಬರ್ಮಾದ ರೋಹಿಂಗ್ಯಾ ಮುಸಲ್ಮಾನರಿಗೆ ಕೆಂಪು ಚಾದರ ಹಾಸಿ ಬರಮಾಡಿಕೊಳ್ಳುತ್ತಿರುವ ಮಮತಾ ಸರಕಾರ ಹಿಂದೂಗಳ ಮಾರಣ ಹೋಮ ನಡೆಸುತ್ತಿದೆ. ಹಿಂದುತ್ವದ ಹುಲಿ, ಸನಾತನ ಧರ್ಮ ರಕ್ಷಕ ಸ್ವಾಮಿ ವಿವೇಕಾನಂದರ ಜನ್ಮ ಭೂಮಿ ಇಂದು “ಛೋಟಾ ಪಾಕಿಸ್ತಾನ್” ಆಗುವುದರಲ್ಲಿದೆ ಎಂದರೆ ಸನಾತನಕ್ಕಾಗಿ ದುಡಿದ ಅವರ ಆತ್ಮ ಎಷ್ಟು ನೊಂದುಕೊಳ್ಳುತ್ತಿರುವುದೊ ಏನೋ? ಭಾರತ ಹೆಮ್ಮೆ ಪಡುವ, ಜಗವೆ ಗೌರವಿಸುವ ಸ್ವಾಮಿ ವಿವೇಕಾನಂದರು ನಡೆದಾಡಿದ ಪಾವನ ಪುಣ್ಯ ಭೂಮಿ ಇಂದು ಮತಾಂಧರ ಕೈಯಲ್ಲಿ ಸಿಲುಕಿ ನಲುಗುತ್ತಿದ್ದರೂ ಏನೂ ಮಾಡಲಾಗದ ಸ್ಥಿತಿ ನಮ್ಮದು.

ಬಂಗಾಳದ ಕಾಲಿಂಪೊಂಗ್ ಎಂಬಲ್ಲಿ ಸದ್ದಿಲ್ಲದೆ “ಛೋಟಾ ಪಾಕಿಸ್ತಾನ್” ನಿರ್ಮಾಣವಾಗುತ್ತಿದೆ. ತೀಸ್ತಾ ನದಿಯ ಇಕ್ಕೆಲಗಳ ಕಣಿವೆಯ ತಪ್ಪಲಿನಲ್ಲಿರುವ ಈ ಪ್ರದೇಶದಲ್ಲಿ ಮೇಸ್ತ್ರಿಗಳು, ಬಡಗಿಗಳು, ಕಾರ್ ಮೆಕ್ಯಾನಿಕ್, ಕಾರ್ಮಿಕರು, ಚಿಂದಿ ಆಯುವವರು ಮೆಲ್ಲನೆ ಬಂದು ನುಸುಳಿದ್ದಾರೆ. ಗಿಡ್ಡ ಪೈಜಾಮ ಅಥವಾ ಲುಂಗಿ ಉಡುವ, ಕೊಳಕಾದ ಕುರ್ತಿ ತೊಡುವ, ಮೀಸೆ ಬೋಳಿಸಿ ಗಡ್ಡ ಬಿಟ್ಟುಕೊಂಡಿರುವ, ಟೊಪ್ಪಿ ಧರಿಸಿರುವ ಇವರನ್ನು ನೋಡಿದರೆ ಥಟ್ಟನೆ ಇವರು ಮುಸ್ಲಿಮರು ಎಂದು ಹೇಳಬಹುದು. ಇವರಲ್ಲಿ ಹೆಚ್ಚಿನವರು ಬಾಂಗ್ಲಾದೇಶದ ಕೆಲವು ಜಿಲ್ಲೆಗಳಲ್ಲಿ ಮಾತನಾಡುವ ಹಳ್ಳಿಗಾಡಿನ ಬಂಗಾಳದಲ್ಲಿ ಮಾತನಾಡಿದರೆ, ಕೆಲವರು ಬಿಹಾರಿಯಲ್ಲಿ ಮಾತನಾಡುತ್ತಾರೆ. ಮಮತಾ ಸರಕಾರ ಬಂಗ್ಲಾದೇಶದ ಮುಸ್ಲಿಮರನ್ನು ಪಶ್ಚಿಮ ಬಂಗಾಳದಲ್ಲಿ ನೆಲೆಯಾಗಲು ಬಿಡುತ್ತಿದ್ದಾರೆ ಎನ್ನುವುದು ಸುಸ್ಪಷ್ಟ.

ಕಳೆದ ನಾಲ್ಕು ವರ್ಷಗಳಿಂದ ಈ ನೆಲೆಸುವಿಕೆ ನಿಧಾನವಾಗಿ ನಡೆಯುತ್ತಿದ್ದರೆ ಕೆಲ ತಿಂಗಳುಗಳ ಹಿಂದಿನಿಂದ ಈ ವಲಸೆಗೆ ವೇಗ ದೊರಕಿದೆ. ಮುಸ್ಲಿಮರ ಈ ಅಕ್ರಮ ನೆಲೆಸುವಿಕೆ ಇಲ್ಲಿನ ಮೂಲ ನಿವಾಸಿಗಳಾದ ಗೋರ್ಖಾಗಳ ನಿದ್ದೆಗೆಡಿಸಿದೆ. ಡಾರ್ಜಿಲಿಂಗ್ ಬೆಟ್ಟಗಳಲ್ಲಿ ಗೋರ್ಖಾಗಳ ಪ್ರಾಬಲ್ಯ ಹೆಚ್ಚಾಗಿದೆ. ಕಳೆದ ಕೆಲವು ವರ್ಷಗಳಿಂದ ಗೋರ್ಖಾಗಳು ತಮಗೆ ಪ್ರತ್ಯೇಕ ಗೋರ್ಖಾ ಲ್ಯಾಂಡ್ ಬೇಕೆಂದು ಪ್ರತಿಭಟನೆ ನಡೆಸುತ್ತಿದ್ದಾರೆ. ಗೋರ್ಖಾಗಳ ಪ್ರಾಬಲ್ಯವನ್ನು ಮುರಿಯಲು ಮಮತಾ ಸರಕಾರ ಉದ್ದೇಶಪೂರ್ವಕವಾಗಿಯೆ ಈ ಪ್ರದೇಶದಲ್ಲಿ ಬಾಂಗ್ಲಾ ವಲಸಿಗರಿಗೆ ನೆಲೆ ನಿಲ್ಲಲು ಅನುವು ಮಾಡಿಕೊಡುತ್ತಿದೆ ಎಂದು ಗೋರ್ಖಾ ಜನಮುಕ್ತಿ ಮೋರ್ಚಾದ ನಾಯಕರು ಆರೋಪ ಮಾಡುತ್ತಿದ್ದಾರೆ. ತನ್ನ ಸ್ವಾರ್ಥ ಸಾಧನೆಗಾಗಿ ದೇಶದ ಭದ್ರತೆಯ ಜೊತೆಗೆ ಆಟವಾಡುವ ಇಂತಹ ದೇಶದ್ರೋಹಿ ರಾಜಕಾರಣಿಗಳು ಇರುವವರೆಗೆ ಭಾರತ ಸುರಕ್ಷಿತವಾಗಿರುವುದಿಲ್ಲ. ಮೊದಲು ಇಂತಹ ದೇಶದ್ರೋಹಿಗಳ ಕೈ ಯಿಂದ ಅಧಿಕಾರವನ್ನು ಕಿತ್ತು ತೆಗೆದುಕೊಳ್ಳಬೇಕು ಆಗ ತನ್ನಿಂದ ತಾನೆ ಭಾರತ ಸುರಕ್ಷಿತವಾಗುತ್ತದೆ.

2011 ಜನಗಣತಿಯ ಪ್ರಕಾರ 6,000 ದಷ್ಟಿದ್ದ ಜನಸಂಖ್ಯೆ ಈಗ ದುಪ್ಪಟ್ಟಾಗಿರುವುದು ಆತಂಕಕ್ಕೆ ಕಾರಣವಾಗಿದೆ. ಈ ಪ್ರದೇಶದಲ್ಲಿ ಮೂಲ ನಿವಾಸಿ ಮುಸ್ಲಿಮರಿದ್ದರೂ ಅವರು ನೇಪಾಳಿ ಭಾಷೆ ಮಾತನಾಡುತ್ತಾರೆ ಮತ್ತು ಇದುವರೆಗೂ ಉಳಿದವರ ಜೊತೆ ಸೌಹಾರ್ದದಿಂದ ಜೀವಿಸುತ್ತಿದ್ದರು ಆದರೆ ಈಗ ಬಂದಿರುವ ಮುಸ್ಲಿಮರು ಸಂಪ್ರದಾಯವಾದಿಗಳಾಗಿದ್ದಾರೆ ಮತ್ತು ಇತರರ ಜೊತೆ ಬೆರೆಯುವುದಿಲ್ಲ ಎಂದು ಸ್ಥಾನೀಯ ನಿವಾಸಿಗಳು ಹೇಳುತ್ತಿದ್ದಾರೆ. ಹೊಸದಾಗಿ ಬಂದ ಮುಸ್ಲಿಮರು ಇಲ್ಲಿನ ಮುಸ್ಲಿಮರನ್ನೂ ಸಂಪ್ರದಾಯವಾದಿಗಳಾಗಿ ಎಂದು ಬಲವಂತ ಮಾಡುತ್ತಿದ್ದಾರೆ ಎಂದೂ ಹೇಳಲಾಗುತ್ತಿದೆ. ಇಲ್ಲಿನ ನಿವಾಸಿಗಳು ಒಂದೆಡೆ ಹೆಚ್ಚುತ್ತಿರುವ ಮುಸ್ಲಿಂ ಜನಸಂಖ್ಯೆಯಿಂದ ಕಂಗಾಲಾಗಿದ್ದರೆ ಇನ್ನೊಂದೆಡೆ “ಇಸ್ಲಾಮಿಕ್ ಚಾರಿಟಿ” ಹೆಸರಿನಲ್ಲಿ ರಮ್ಜಾನಿಗಾಗಿ ನಿತ್ಯ ಹಣ ಸಂಗ್ರಹಿಸುವ “ಕೆಲಸಗಾರರ” ಉಪಟಳದಿಂದ ಹೈರಾಣಾಗಿದ್ದಾರೆ. ಈ ತಥಾಕಥಿತ ಕೆಲಸಗಾರರು ಗುಂಪು ಗುಂಪಾಗಿ ಬಂದು ಮುಸ್ಲಿಂ ಮನೆಗಳಿಂದ ಪ್ರತಿದಿನ “ಚಂದಾ” ಹೆಸರಿನಲ್ಲಿ ಹಣ ಒಟ್ಟು ಮಾಡುತ್ತಿರುವುದು ಸಂದೇಹಕ್ಕೆ ಎಡೆ ಮಾಡಿ ಆತಂಕಕ್ಕೆ ಕಾರಣವಾಗಿದೆ.

‘ತಾಬ್ಲಿಘಿ ಜಮಾತ್’ ಎನ್ನುವ ಇಸ್ಲಾಮಿಕ್ ಸಂಘಟನೆ ಇಲ್ಲಿನ ಮೂಲನಿವಾಸಿ ಮುಸ್ಲಿಮರ ತಲೆ ಕೆಡಿಸಿ ಅವರಿಗೆ ಸಂಪ್ರದಾಯಿಕತೆ ಬೋಧಿಸುತ್ತಿದೆ. ಹಿಂದೆ ಹಿಂದೂಗಳ ಜೊತೆ ಹಬ್ಬ ಹರಿದಿನ ಆಚರಿಸುತ್ತಿದ್ದ, ಪ್ರಸಾದ ಸ್ವೀಕರಿಸುತ್ತಾ ಭಾವೈಕ್ಯತೆ ಮೆರೆದಿದ್ದ ಮುಸ್ಲಿಮರು ಈಗ ಹಿಂದೂಗಳ ಜೊತೆ ಬೆರೆಯುತ್ತಿಲ್ಲ. ರಕ್ಷಣಾ ದೃಷ್ಟಿಯಲ್ಲಿ ಅತ್ಯಂತ ಮಹತ್ವಪೂರ್ಣ ಪ್ರದೇಶವಾದ ಸಿಕ್ಕಿಂಗೆ ಅಂಟಿಕೊಂಡಿರುವಂತಹ ಈ ಪ್ರದೇಶದ ಸುತ್ತಮುತ್ತಲಿನಲ್ಲಿ ಭಾರತೀಯ ಸೇನೆಯ ಪ್ರಧಾನ ಕಚೇರಿ ಸೇರಿದಂತೆ ಮಿಲಿಟರಿ ಬೇಸ್ ಗಳೂ ಇವೆ. ಟಿಬೆಟ್ ಅನ್ನು ಭಾರತೊಂದಿಗೆ ಬೆಸೆಯುವ ಈ ಪ್ರದೇಶದಲ್ಲಿ ಚೀನಾದ ಮಿಲಿಟರಿ ಮೇಲೆ ಹದ್ದಿನ ಕಣ್ಣಿಡಲು ಭಾರತೀಯಾ ಸೇನಾ ನೆಲೆಗಳನ್ನು ಸ್ಥಾಪಿಸಲಾಗಿದೆ. ಇಂತಹ ಸೂಕ್ಷ್ಮ ಪ್ರದೇಶದಲ್ಲಿ ಅಕ್ರಮವಾಗಿ ಮುಸ್ಲಿಂಮರನ್ನು ನೆಲೆಸುತ್ತಿರುವ ಮಮತಾ ಸರಕಾರ ದೇಶದ ಭದ್ರತೆ ಜೊತೆ ಆಟವಾಡುತ್ತಿದೆ. ಈಕೆ ಮಾಡುವ ಕೆಲಸಗಳು ಯಾವ ರಾಕ್ಷಸಿಗೂ ಕಮ್ಮಿ ಇಲ್ಲ, ಮತ್ತೆ ಸುಮ್ಮ ಸುಮ್ಮನೆ ಇವಳನ್ನು ಡಾಯನ್ ಎಂದು ಕರೆಯುತ್ತಾರೆಯೆ? ಪ್ರಧಾನಿ ಗಾದಿಯ ಮೇಲೆ ಕಣ್ಣಿಟ್ಟಿರುವ ಈಕೆಯ ಕೈಯಲ್ಲಿ ಭಾರತದ ಚುಕ್ಕಾಣಿ ಕೊಟ್ಟರೆ ದೇಶದ ಗತಿಯೇನಾಗಬಹುದು ಯೋಚಿಸಿ.

ಈಗಾಗಲೆ ಡಾಯನ್ ಕರ್ನಾಟಕವನ್ನು ಪ್ರವೇಶಿಸಿ, ಒಬ್ಬ ಪ್ರಾಮಾಣಿಕ ಮತ್ತು ದಕ್ಷ ಮಹಿಳಾ ಅಧಿಕಾರಿಯನ್ನು ಎತ್ತಂಗಡಿ ಮಾಡಿಸಿ ಹಾಹಾಕಾರ ಪ್ರದರ್ಶಿಸಿದೆ. ಇಂತಹವರ ಜೊತೆ ಕೈ ಕುಲುಕಿದ ಪ್ರಾದೇಶಿಕ ನಾಯಕರ ವಿಶ್ವಾಸಾರ್ಹತೆಯೂ ಸಂದೇಹಾಸ್ಪದವೆ. ಜನರನ್ನು ಮಂಗ ಮಾಡುವ ಉದ್ದೇಶದಿಂದ ತೃತೀಯ ರಂಗ ಸ್ಥಾಪಿಸಿ ಮೋದಿಯವರಂತಹ ಅಪ್ಪಟ ದೇಶ ಭಕ್ತ ಪ್ರಧಾನ ಮಂತ್ರಿಯನ್ನು ಸೋಲಿಸಲು ಕಟಿಬದ್ದರಾಗಿರುವ ಇಂತಹ ದೇಶದ್ರೋಹಿಗಳಿಂದ ಭಾರತವನ್ನು ರಕ್ಷಿಸಬೇಕಾಗಿದೆ. ಎಚ್ಚರ ಮತದಾರರೆ ಎಚ್ಚರ… ಭಾರತವನ್ನು ಮತ್ತು ಹಿಂದೂಗಳನ್ನು ಹುರಿದು ಮುಕ್ಕುವವರು ಬರುತ್ತಿದ್ದಾರೆ ಎಚ್ಚರ….

-ಶಾರ್ವರಿ

Tags

Related Articles

Close