ಪ್ರಚಲಿತ

ನಮ್ಮ ಜೊತೆಗಿದ್ದು ನಮ್ಮ ಧರ್ಮವನ್ನು ಮುಗಿಸುವವರಿದ್ದಾರೆ…ಎಚ್ಚರ!

ಈ ದೇಶದ ಬುನಾದಿ ಹಿಂದೂ ಧರ್ಮ. ನಮ್ಮ ಧರ್ಮ ಸರ್ವ ಧರ್ಮ ಸಹಿಷ್ಣುವೂ ಹೌದು. ಹಾಗೆಂದ ಮಾತ್ರಕ್ಕೆ ಹಿಂದೂ ಧರ್ಮ‌ದ ಮೇಲೆ ಅನ್ಯ ಧರ್ಮ‌ದ ಆಕ್ರಮಣ, ಬಲವಂತ‌ದ ಮತಾಂತರ, ಲವ್ ಜಿಹಾದ್ ಹೀಗೆ ಸಾಲು ಸಾಲು ಅನಾಚಾರಗಳಾದ, ಅದೆಲ್ಲ‌ವನ್ನು ಸಹಿಸಿಕೊಂಡು ಕೂರುವಷ್ಟು ಸಹಿಷ್ಣುತೆ ನಮ್ಮಲ್ಲಿದೆ ಎಂದರೆ, ಈ ವಾದವೂ ತಪ್ಪು.

ನಿಮಗೆ ಗೊತ್ತಾ. ನಮ್ಮ ಧರ್ಮ‌ದ ಮೇಲೆ ಅನ್ಯರ ದಾಳಿಯಾದಾಗ ಅದನ್ನು ತಡೆಯಲು ಕ್ರಮ ಕೈಗೊಳ್ಳಬಹುದು, ಅವರ ವಿರುದ್ಧ ಎದೆ ಸೆಟೆದು ನಿಲ್ಲಬಹುದು. ಆದರೆ ನಮ್ಮ ಧರ್ಮ‌ದಲ್ಲಿದ್ದುಕೊಂಡು, ನಮ್ಮ ಜೊತೆಗೆ ಚೆನ್ನಾಗಿರುವಂತೆ ನಟಿಸಿ, ನಮ್ಮ ಬೆನ್ನಿಗೆಯೇ ಚೂರಿ ಹಾಕುವ ನಾಲಾಯಕು ಜನರಿಗೆ ಏನೆನ್ನುವುದು.

ನಮ್ಮ ಧರ್ಮವನ್ನು ಪ್ರೀತಿಸು, ಪರ ಧರ್ಮ‌ದ ಮೇಲೆ ದ್ವೇಷ ಬೇಡ. ಹೌದು, ಆದರೆ ಹಿಂದೂಗಳಲ್ಲಿ ಹಾಗಾಗುತ್ತಿಲ್ಲ‌. ನಮ್ಮಲ್ಲಿ ಕೆಲವರು ನಮ್ಮ ಧರ್ಮವನ್ನು ದೂಷಣೆ ಮಾಡುತ್ತಾ, ನಮ್ಮ ಧರ್ಮ‌ದ ವಿರುದ್ಧ ಕೆಲಸ ಮಾಡುತ್ತಾ, ಪರ ಧರ್ಮ‌ದ ಮೇಲೆ ಪ್ರೇಮ ಮೆರೆಯುತ್ತಾರೆ. ಇಲ್ಲಿ ಅವರು ಪರ ಧರ್ಮ‌ವನ್ನು ಪ್ರೀತಿಸುವ ಬಗ್ಗೆ ನಮ್ಮ ತಕರಾರಿಲ್ಲ. ಅದು ಅವರಿಷ್ಟ. ಹಾಗೆಂದು, ಹುಟ್ಟಿದ ಧರ್ಮ‌ಕ್ಕೆ ದ್ರೋಹ ಬಗೆಯುವವರನ್ನು ಕ್ಷಮಿಸುವಷ್ಟು ಉದಾರತೆಯನ್ನು ಬೆಳೆಸಿಕೊಳ್ಳುವುದೂ ಒಳಿತಲ್ಲ. ಉತ್ತಮ ಹಣ್ಣುಗಳ ಜೊತೆಯಲ್ಲಿ ಒಂದು ಕೊಳೆತ ಹಣ್ಣು ಇದ್ದರೂ, ಆ ಬುಟ್ಟಿಯಲ್ಲಿರುವ ಎಲ್ಲಾ ಹಣ್ಣುಗಳ ಮೇಲೆಯೂ ದುಷ್ಪರಿಣಾಮ ಬೀರುವ ಸಾಧ್ಯ‌ತೆ ಇದೆ ಎನ್ನುವುದನ್ನು ನಾವು ಮರೆತೆವೋ, ನಮ್ಮ ಧರ್ಮದ ಕೆಲವು ಕೆಟ್ಟ ಹುಳಗಳೇ ‘ಹಿಂದೂ ಧರ್ಮದ ವಿನಾಶ’ ಮಾಡಿ ಬಿಡುತ್ತವೆ ಎನ್ನುವುದು ವಾಸ್ತವ.

ನೀವೇ ಗಮನಿಸಿ, ಹಿಂದೂ ಧರ್ಮದ ಮೇಲೆ ಅನಾಚಾರಗಳಾದಾಗ ಸುಮ್ಮನಿರುವ ಕೆಲವು ಬುದ್ಧಿಜೀವಿಗಳು, ಬೇರೆ ಧರ್ಮ‌ಕ್ಕೆ ಸಣ್ಣ ನೋವಾದರೂ ಪ್ರತಿಭಟನೆ, ಬೇಕಾಬಿಟ್ಟಿ ಸ್ಟೇಟ್‌ಮೆಂಟ್ಸ್ ಕೊಡುವ ಮೂಲಕ ತಮ್ಮ ಬೇಳೆ ಬೇಯಿಸಿಕೊಳ್ಳುತ್ತವೆ. ಹಿಂದೂ ಧರ್ಮದ ಯುವತಿ ಲವ್ ಜಿಹಾದ್‌ಗೆ ತುತ್ತಾದಾಗ, ಅನಂತರ ಅವಳ ಬಾಳು ಸರ್ವನಾಶವಾದಾಗಲೂ ತುಟಿ ಪಿಟಿಕ್ ಎನ್ನದ ಇವರು, ಪರ ಧರ್ಮ‌ದ ಮೇಲೆ ಏನಾದರೂ ಆಯಿತೆಂದರೆ ಸರ್ಕಾರ, ಹಿಂದೂ‌ಗಳ ವಿರುದ್ಧ ಅರಚಾಟ ಕಿರುಚಾಟ ನಡೆಸುತ್ತಾರೆ. ಹಿಂದೂಗಳ ಮೇಲೆ ಏನೇ ಕ್ರೌರ್ಯ ನಡೆದರೂ ಇವರಿಗೆ ನೋವೂ ಇಲ್ಲ.. ವಿರೋಧಿಸುವ ಸ್ವರವೂ ಇಲ್ಲ. ಇದಲ್ಲವೇ ದುರಂತ.

ನಮ್ಮವರೇ ನಮಗೆ ಮುಳ್ಳಾದಾಗ, ಆ ಮುಳ್ಳಿನಿಂದ ನಮ್ಮನ್ನು ನಾವು ಕಾಪಾಡಿಕೊಳ್ಳುವುದು ಕಷ್ಟ ಸಾಧ್ಯ. ಶತ್ರುಗಳ ನಡೆಯನ್ನಾದರೂ ಅರಿಯಬಹುದು, ಪ್ರತಿ ತಂತ್ರ ಹೂಡಬಹುದು. ಆದರೆ, ಹಿತ ಶತ್ರು‌ಗಳು ಬೆನ್ನಿಗೆ ಹಾಕುವ ಚೂರಿಯ ಅರಿವು ನಮಗಿರುವುದಿಲ್ಲ. ಆದರೆ ಈ ಹಿತ ಶತ್ರು‌ಗಳು ಗಮನಿಸಬೇಕಾದ ವಿಷಯವೊಂದಿದೆ. ಇಂದು ನಿಮ್ಮ ಧರ್ಮ‌ಕ್ಕೆ ನೀವು ಎದುರು ನಿಂತಿರಬಹುದು. ಪರ ಧರ್ಮ‌ದ ಅನ್ಯಾಯಗಳ ಪರ ನಿಲ್ಲಬಹುದು. ಆದರೆ ಇಂದು ನೀವು ಸಾಕುತ್ತಿರುವ ವಿಷದ ಹಾವು, ನಾಳೆ ನಿಮ್ಮನ್ನೇ ಕಚ್ಚಬಹುದು. ಆಗ ನಿಮಗೆ ಸಹಾಯಕ್ಕೆ ಬರುವುದು ಹಿಂದೂ ಧರ್ಮ‌ ಮಾತ್ರ. ನೆನಪಿಡಿ.

Tags

Related Articles

Close