ದೇಶಪ್ರಚಲಿತ

ಬ್ರಾಹ್ಮಣರನ್ನು ಭಾರತದಿಂದ ಹೊರಗೋಡಿಸಲು ನಡೆದಿದೆ ಷಡ್ಯಂತ್ರ!

ನಮ್ಮ ದೇಶದಲ್ಲಿ ಒಡೆದು ಆಳುವ ನೀತಿಯನ್ನು ಬ್ರಿಟಿಷರು ರೂಢಿಸಿಕೊಂಡಿದ್ದರೂ ಸಹ, ಅವರ ಜೊತೆಯಲ್ಲಿ‌ಯೇ ಅದು ತೊಲಗಿ ಹೋಗಿಲ್ಲ. ಹಿಂದೂಗಳನು ಒಡೆಯುವ, ಜಾತಿ ಹೆಸರಿನಲ್ಲಿ ಬೇರ್ಪಡಿಸುವ ಮೂಲಕ ಈ ದೇಶವನ್ನು ಒಡೆಯಲು ಸಂಚು ಮಾಡುವ ದೇಶ ವಿರೋಧಿಗಳಿಗೆ ಕರಗತವಾಗಿದೆ.

ಇದಕ್ಕೆ ಪುಷ್ಟಿ ನೀಡುವಂತಹ ಒಂದು ಘಟನೆ ಜೆಎನ್‌ಯು ಕ್ಯಾಂಪಸ್‌ನಲ್ಲಿಯೂ ನಡೆದಿದೆ. ಈ ವರೆಗೆ ಜೆಎನ್‌ಯು ನಲ್ಲಿ ಕೇವಲ ದೇಶ ವಿರೋಧಿಗಳಿದ್ದಾರೆ ಎಂಬುದಷ್ಟೇ ನಮಗೆ ತಿಳಿದಿದ್ದ ಸತ್ಯ. ಆದರೆ ನಿಮಗೆ ಗೊತ್ತಾ.. ಹಿಂದೂ ವಿರೋಧಿಗಳು ಸಹ ಜೆಎನ್‌ಯು‌ನಲ್ಲಿ ಇದ್ದಾರೆ. ದೇಶ ಇವರ ಮೊದಲ ಟಾರ್ಗೆಟ್ ಆಗಿತ್ತು. ಇದೀಗ ಈ ದೇಶದ ಬ್ರಾಹ್ಮಣ‌ರನ್ನು ಟಾರ್ಗೆಟ್ ಮಾಡಿ ‘ಬ್ರಾಹ್ಮಣ್ ಭಾರತ್ ಚೋಡೋ’, ಬ್ರಾಹ್ಮಣ‌ರೇ ಭಾರತ ಬಿಟ್ಟು ತೊಲಗಿ. ಮುಂದಿನ ಟಾರ್ಗೆಟ್ ನೀವೇ ಎನ್ನುವ ಅರ್ಥ‌ದಲ್ಲಿ ಗೋಡೆ ಬರಹಗಳನ್ನು ಬರೆಯಲಾಗಿದೆ.

ಸ್ಕೂಲ್ ಆಫ್ ಇಂಟರ್ನ್ಯಾಷನಲ್ ಸ್ಟಡೀಸ್ ಬಿಲ್ಡಿಂಗ್ ಗೋಡೆಗಳಲ್ಲಿ ಹಿಂದೂ ವಿರೋದಿ, ಬ್ರಾಹ್ಮಣ ವಿರೋಧಿ ಬರಹಗಳನ್ನು ಕಿಡಿಗೇಡಿಗಳು ಬರೆಯುವ ಮೂಲಕ, ಬ್ರಾಹ್ಮಣ‌ರನ್ನು ಬೆದರಿಸುವುದಕ್ಕೆ ಮುಂದಾಗಿದ್ದಾರೆ. ಇಷ್ಟರ ವರೆಗೆ ಜೆಎನ್‌ಯು‌ನ ಕೆಲವು ವಿದ್ಯಾರ್ಥಿಗಳಲ್ಲಿ ಭಾರತದ ವಿರುದ್ಧ‌ದ ಮನಸ್ಥಿತಿ ಇತ್ತು. ಜೆಎನ್‌ಯು ದೇಶ ವಿರೋಧಿ ಚಟುವಟಿಕೆ‌ಗಳಿಗೆ ಹೆಸರಾಗಿತ್ತು. ಇದೀಗ ಆ ಯೋಜನೆಯಲ್ಲಿ ನಿರೀಕ್ಷಿತ ಮಟ್ಟದ ಫಲಿತಾಂಶ ದೊರೆಯದ ಹಿನ್ನೆಲೆಯಲ್ಲಿ, ಅವರು ಮತ್ತೊಂದು ಗುರಿಯ ಮೂಲಕ ದೇಶವನ್ನು ವ್ಯವಸ್ಥಿತವಾಗಿ ಒಡೆಯುವ ಹುನ್ನಾರಕ್ಕೆ ಕೈ ಹಾಕಿದ್ದಾರೆ.

ದೇಶವನ್ನು ತುಂಡರಿಸಬೇಕಾದರೆ ಇಲ್ಲಿನ ಬಹುಸಂಖ್ಯಾತ ಹಿಂದೂಗಳನ್ನು ಒಡೆಯುವ ಕೆಲಸವಾಗಬೇಕು ಎಂಬ ಬ್ರಿಟಿಷರ ಪಾಠವನ್ನು ಚಾಚೂ ತಪ್ಪದೆ ಪಾಲಿಸಿದಂತಿರುವ ಈ ದುಷ್ಕರ್ಮಿಗಳು, ಇಲ್ಲಿನ ಬಹುಸಂಖ್ಯಾತ ಹಿಂದೂಗಳನ್ನು ಒಡೆಯಲು ಜಾತಿಯ ವಿಷಬೀಜ ಬಿತ್ತಲಾರಂಭಿಸಿದ್ದಾರೆ. ಮುಖ್ಯವಾಗಿ ಮೊದಲ ಆಯ್ಕೆ ಎಂಬಂತೆ ಬ್ರಾಹ್ಮಣ ವರ್ಗವನ್ನು ಆರಿಸಿಕೊಂಡಿರುವ ಇವರು, ಅವರನ್ನು ಭಾರತ ಬಿಟ್ಟು ತೊಲಗಿ, ಮುಂದಿನ ಟಾರ್ಗೆಟ್ ನೀವು ಎಂಬುದಾಗಿ ಬರೆಯುವ ಮೂಲಕ ಬೆದರಿಕೆ ಒಡ್ಡಿದ್ದಾರೆ.

ಜೆಎನ್‌ಯು ಎಂದರೆ ಶಿಕ್ಷಣ ನೀಡುವ ಕಾಲೇಜೋ ಅಥವಾ ದೇಶ ವಿರೋಧಿಗಳನ್ನು ಸೃಷ್ಟಿಸುವ ಕಾರ್ಖಾನೆ‌ಯೋ ಎಂಬ ಸಂದೇಹ ಮೂಡುತ್ತಿದೆ. ಇಂತಹ ನಾಲಾಯಕ್ಕು‌ಗಳೇ ತುಂಬಿ ತುಳುಕುತ್ತಿರುವ ಜೆಎನ್‌ಯು‌ಯು ವಿರುದ್ಧ ಕ್ರಮ ಕೈಗೊಳ್ಳಬೇಕಾದ ತುರ್ತು ಇದೆ. ದೇಶಕ್ಕೆ ಯಾವುದು ಮಾರಕವೋ, ಅದೆಲ್ಲದರಲ್ಲಿಯೂ ಈ ಸಂಸ್ಥೆ‌ಯ ಹೆಚ್ಚಿನ ವಿದ್ಯಾರ್ಥಿಗಳು ತೊಡಗಿಸಿಕೊಂಡಿರುವುದು ಆತಂಕಕಾರಿ ವಿಷಯವೇ ಹೌದು.

ಇಂತಹ ನಾಲಾಯಕ್ಕು ಅನಾಗರಿಕ‌ರ ಅಡ್ಡೆಯ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕಾಗಿದೆ. ಈ ನಿಟ್ಟಿನಲ್ಲಿ ಸರ್ಕಾರ ಎಚ್ಚೆತ್ತುಕೊಂಡಲಿ ದೇಶ ವಿರೋಧಿ ವಿಷ ಜಂತುಗಳಿಂದ ಮುಂದೆ ಭವಿಷ್ಯದ‌ಲ್ಲಿ ಆಗಬಹುದಾದ ಅಪಾಯವನ್ನು ತಡೆಗಟ್ಟಬಹುದು. ಇಲ್ಲವೇ, ಇಂದು ಬ್ರಾಹ್ಮಣ‌ರನ್ನು ಟಾರ್ಗೆಟ್ ಮಾಡಿರುವ ಇವರ ಕಣ್ಣಿಗೆ ಈ ದೇಶದ ಎಲ್ಲಾ ವರ್ಗಗಳ ಜನರೂ ಬೀಳಬಹುದು. ದೇಶದ ಭದ್ರತೆ‌ಗೂ ಈ ಕ್ರಿಮಿಗಳು ಮಾರಕವಾಗಬಹುದು.

ಸಂವಿಧಾನ ಪಾಲಿಸುವವರು ಎಂದು ನಾಟಕವಾಡುವ ಇವರಿಂದ ಸಂವಿಧಾನ‌ಕ್ಕೆ ವಿರೋಧ ಒಡ್ಡುವ ಬರವಣಿಗೆ ಜೆಎನ್‌ಯು ಗೋಡೆಯಲ್ಲಿ ಕಂಡುಬಂದಿದೆ. ಅಂಬೇಡ್ಕರ್ ಅವರ ಜಾತ್ಯಾತೀತ ರಾಷ್ಟ್ರದ ಕನಸಿಗೆ ಕೊಳ್ಳಿ ಇಡುವ ಇಂತಹ ಕ್ರಿಮಿಗಳಿಗೆ ತಕ್ಕ ಶಿಕ್ಷೆ ಆಗಬೇಕಿದೆ. ಇಲ್ಲವಾದಲ್ಲಿ ಕಾಶ್ಮೀರದಲ್ಲಿ ಕಾಶ್ಮೀರಿ ಪಂಡಿತರಿಗಾದ ಸ್ಥಿತಿ ಮುಂದೆ ನಮ್ಮ ಪಕ್ಕದ ಮನೆಗೂ ಪಸರಿಸಬಹುದು.

ಇಂತಹ ಭಯೋತ್ಪಾದಕ ಮನಸ್ಥಿತಿ‌ಗಳಿಗೆ ಸರಿಯಾದ ಪಾಠ ಕಲಿಸಿದಲ್ಲಿ ಮಾತ್ರ ಭಾರತ ಸರ್ವ ಜನಾಂಗದ ಶಾಂತಿಯ ತೋಟವಾಗಿ ಉಳಿಯಬಹುದು. ಇಲ್ಲವಾದಲ್ಲಿ ಈ ತೋಟ ಅಶಾಂತಿಯ ಗೂಡಾಗಬಹುದು. ಬಹುಸಂಖ್ಯಾತ ಹಿಂದೂಗಳು ಮನೆಯಿಂದ ಹೊರ ಕಾಲಿಡುವುದಕ್ಕೂ ಭಯ ಪಡಬೇಕಾದ ಸ್ಥಿತಿ ಬಂದೊದಗಬಹುದು. ಪರಿಸ್ಥಿತಿ ಕೈಮೀರುವ ಮುನ್ನ ಎಚ್ಚೆತ್ತಲ್ಲಿ ಉತ್ತಮ.

Tags

Related Articles

Close