ಪ್ರಚಲಿತ

ಮುಖ್ಯಮಂತ್ರಿ ಆದ ಒಂದೇ ದಿನಕ್ಕೆ ಜಟಾಪಟಿ ಶುರು..! ಸಿಎಂ-ಡಿಸಿಎಂ’ ನ ಜುಟ್ಟು ಹಿಡಿಯುತ್ತಿರುವ ಕಾಂಗ್ರೆಸ್-ಜೆಡಿಎಸ್ ಶಾಸಕರು

ರಾಜ್ಯದಲ್ಲೇ ಅಸ್ತಿತ್ವ ಕಳೆದುಕೊಳ್ಳುವ ಭೀತಿಯಲ್ಲಿದ್ದ ಜೆಡಿಎಸ್ ಗೆ ಕೊನೆಯ ಹಂತದಲ್ಲಿ ಕಾಂಗ್ರೆಸ್ ಕೈಜೋಡಿಸಿ ಮೈತ್ರಿ ಮಾಡಿಕೊಂಡು ಸರಕಾರ ರಚಿಸುವಲ್ಲಿ ಯಶಸ್ವಿಯಾಗಿದೆ. ಕೇವಲ ಭಾರತೀಯ ಜನತಾ ಪಕ್ಷವನ್ನು ಅಧಿಕಾರದಿಂದ ದೂರ ಇಡಬೇಕು ಅನ್ನುವ ಕಾರಣಕ್ಕಾಗಿ ಅಪವಿತ್ರ ಮೈತ್ರಿ ಮಾಡಿಕೊಂಡ ಕಾಂಗ್ರೆಸ್ ಮತ್ತು ಜೆಡಿಎಸ್‌‌ಗೆ ಸರಕಾರ ರಚಿಸಿರುವ ಖುಷಿ ಒಂದೆಡೆಯಾದರೆ, ಇತ್ತ ಖಾತೆ ಹಂಚಿಕೆ ವಿಚಾರದಲ್ಲಿ ಶಾಸಕರ ಆಕ್ರೋಶ ಮುಖಂಡರ ಬಳಿ ಬಂದು ನಿಂತಿದೆ. ಮೈತ್ರಿ ಮಾಡಿಕೊಂಡು ಶಾಸಕರನ್ನು ರೆಸಾರ್ಟ್ ಗಳಲ್ಲಿ ಕೂಡಿಟ್ಟು ಪಕ್ಷದ ಮುಖಂಡರು ಹೇಳಿದ ಕಡೆಗಳಿಗೆಲ್ಲಾ ಹೋದ ಶಾಸಕರು ಇದೀಗ ಸರಕಾರದ ಮುಂದೆ ತಮ್ಮ ಬೇಡಿಕೆ ಇಟ್ಟಿದ್ದಾರೆ.!

ಖಾತೆ ಹಂಚಿಕೆ ವಿಚಾರದಲ್ಲಿ ಶಾಸಕರ ಜಟಾಪಟಿ..!

ಈಗಾಗಲೇ ಮೈತ್ರಿ ಮಾಡಿಕೊಂಡ ಕಾಂಗ್ರೆಸ್ ಮತ್ತು ಜೆಡಿಎಸ್‌ ಸಚಿವ ಸಂಪುಟದ ಖಾತೆ ವಿಚಾರವಾಗಿ ಮೊದಲೇ ಮಾತಾಡಿಕೊಂಡಿತ್ತು. ಒಂದೆಡೆ ಮಂತ್ರಿ ಸ್ಥಾನಕ್ಕಾಗಿ ಕಾಂಗ್ರೆಸ್ ಶಾಸಕರು ಬೇಡಿಕೆ ಇಟ್ಟರೆ, ಇತ್ತ ಮತ್ತೊಂದೆಡೆ ಜೆಡಿಎಸ್‌ ಶಾಸಕರು ಕುಮಾರಸ್ವಾಮಿ ಅವರ ಬಳಿ ತಮ್ಮ ಬೇಡಿಕಿ ಇಟ್ಟಿದ್ದಾರೆ. ನಿನ್ನೆಯಷ್ಟೇ ವಿಶ್ವಾಸ ಮತಯಾಚನೆ ಬಳಿಕ ಮುಖ್ಯಮಂತ್ರಿಯಾಗಿ ನೇಮಕಗೊಂಡ ಕುಮಾರಸ್ವಾಮಿ ಅವರಿಗೆ ಇಂದು ಭಾರೀ ಕಂಟಕ ಎದುರಿಸುವಂತಾಗಿದೆ. ಫಲಿತಾಂಶ ಬಳಿಕ ನಾಪತ್ತೆಯಾಗಿದ್ದ ಶಾಸಕ ಪ್ರತಾಪ್ ಗೌಡ ಪಾಟೀಲ್ ಅವರು ಬಿಜೆಪಿ ಸೇರಲಿದ್ದಾರೆ ಎಂಬ ಅನುಮಾನ ವ್ಯಕ್ತವಾಗಿತ್ತು. ಆದರೆ ಬಿಜೆಪಿ ಬಹುಮತ ಸಾಬೀತು ಪಡಿಸುವ ದಿನ ರಾಜಭವನಕ್ಕೆ ಆಗಮಿಸಿದ ಪ್ರತಾಪ್ ಗೌಡ ನೇರವಾಗಿ ಡಿಕೆ ಶಿವಕುಮಾರ್ ಅವರ ಬಳಿ ಕೂತಿದ್ದರು.ಆದರೆ ಇದೀಗ ಮತ್ತೆ ಈ ಶಾಸಕ ಸುದ್ದಿಯಾಗಿದ್ದು, ರಾಜ್ಯ ಸರಕಾರದ ಸಚಿವ ಸಂಪುಟದಲ್ಲಿ ಮಂತ್ರಿ ಸ್ಥಾನ ನೀಡಬೇಕೆಂಬ ಬೇಡಿಕೆ ಇಟ್ಟಿದ್ದಾರೆ.

ಮತ್ತೊಂದೆಡೆ ಹೂವಿನ ಹಡಗಲಿ ಶಾಸಕ ,ಮಾಜಿ ಸಚಿವ ಪಿಟಿ ಪರಮೇಶ್ವರ್ ನಾಯ್ಕ್ ಕೂಡಾ ಡಿಸಿಎಂ , ಕೆಪಿಸಿಸಿ ಅಧ್ಯಕ್ಷ ಜಿ ಪರಮೇಶ್ವರ್ ಅವರ ಮನೆಗೆ ಭೇಟಿ ನೀಡಿ ತನಗೂ ಮಂತ್ರಿ ಸ್ಥಾನ ನೀಡಬೇಕೆಂದು ಒತ್ತಾಯಿಸಿದ್ದಾರೆ.

ಇಕ್ಕಟ್ಟಿನ ಪರಿಸ್ಥಿತಿಯಲ್ಲಿ ಪರಂ-ಸಿಎಂ..!

ಮೈತ್ರಿ ಮಾಡಿಕೊಂಡು ಸಂಪೂರ್ಣ ಐದು ವರ್ಷ ಆಡಳಿತ ನೀಡುತ್ತೇವೆ ಎಂದು ಈಗಾಗಲೇ ಹೇಳಿಕೊಂಡ ಕಾಂಗ್ರೆಸ್ ಮತ್ತು ಜೆಡಿಎಸ್‌ ಗೆ ಮೊದಲ ದಿನವೇ ಭಾರೀ ಆತಂಕ ಎದುರಾಗಿದೆ. ಯಾಕೆಂದರೆ ಶಾಸಕರ ಬೆಂಬಲವಿಲ್ಲದೆ ಸಂಪುಟ ರಚಿಸುವುದು ಅಸಾಧ್ಯ, ಮತ್ತು ಶಾಸಕರು ತಮಗೇ ಮಂತ್ರಿ ಸ್ಥಾನ ನೀಡಬೇಕು ಎಂದು ಒತ್ತಡ ಹೇರುತ್ತಿದ್ದು, ಸಿಎಂ ಕುಮಾರಸ್ವಾಮಿ ಮತ್ತು ಡಿಸಿಎಂ ಜಿ ಪರಮೇಶ್ವರ್ ಅವರು ಇಕ್ಕಟ್ಟಿನ ಸ್ಥಿತಿಗೆ ಬಂದಿದ್ದಾರೆ. ಕಾಂಗ್ರೆಸ್ ಮತ್ತು ಜೆಡಿಎಸ್‌ ಎರಡೂ ಪಕ್ಷಗಳ ಶಾಸಕರು ಅಧಿಕಾರಕ್ಕಾಗಿ ಮುಗಿಬಿದ್ದಿದ್ದು, ಇನ್ನು ಮುಂದೆ ಸರಕಾರಕ್ಕೆ ಎದುರು ನಿಲ್ಲುವ ಮುನ್ಸೂಚನೆ ದೊರಕಿದೆ..!

Image result for parameshwar kumaraswamy together,

ಎಲ್ಲವನ್ನೂ ನೋಡಿ ಸುಮ್ಮನಾಗಿರುವ ಸಿದ್ದರಾಮಯ್ಯ..!

ಕೇವಲ ಅಧಿಕಾರಕ್ಕಾಗಿ ಮೈತ್ರಿ ಮಾಡಿಕೊಂಡಿರುವುದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಒಂಚೂರು ಇಷ್ಟವಿಲ್ಲ, ಆದರೂ ಅನಿವಾರ್ಯವಾಗಿ ಒಪ್ಪಲೇಬೇಕಾಗಿರುವುದರಿಂದ ಏನೂ ಮಾತನಾಡದೆ ಸುಮ್ಮನಿದ್ದಾರೆ. ಇದೀಗ ಶಾಸಕರ ಈ ವರ್ತನೆ ನೋಡಿಯೂ ಸುಮ್ಮನಾಗಿರುವ ಸಿದ್ದರಾಮಯ್ಯನವರು ಪರೋಕ್ಷವಾಗಿ ಮೈತ್ರಿಯನ್ನು ವಿರೋಧಿಸುತ್ತಿದ್ದಾರೆ ಎಂಬ ಅನುಮಾನ ಬಲವಾಗಿ ಮೂಡುತ್ತಿದೆ. ಕುಮಾರಸ್ವಾಮಿ ಅವರನ್ನು ಮುಖ್ಯಮಂತ್ರಿಯನ್ನಾಗಿ ನೇಮಿಸಿದ ದಿನದಿಂದಲೇ ಸಿದ್ದರಾಮಯ್ಯನವರನ್ನು ಮೂಲೆಗುಂಪು ಮಾಡಲಾಗಿತ್ತು. ಆದ್ದರಿಂದ ಇದೀಗ ಈ ಎರಡೂ ಪಕ್ಷದ ಶಾಸಕರ ನಡೆಗೆ ಸಿದ್ದರಾಮಯ್ಯನವರು ಬೆಂಬಲಿಸಬಹುದು ಎಂಬ ಸಂಶಯವೂ ವ್ಯಕ್ತವಾಗಿದೆ..!

ಅದೇನೇ ಆದರೂ ನಾವು ಸಂಪೂರ್ಣವಾಗಿ ಐದು ವರ್ಷಗಳ ಕಾಲ ಆಡಳಿತ ನಡೆಸುತ್ತೇವೆ ಎಂದು ಭರವಸೆ ನೀಡಿರುವ ಕುಮಾರಸ್ವಾಮಿ ಮತ್ತು ಕಾಂಗ್ರೆಸ್ ನಾಯಕರಿಗೆ ತಮ್ಮದೇ ಶಾಸಕರ ಈ ನಡೆಯಿಂದ ಕಂಗಾಲಾಗುವಂತಾಗಿದೆ..!

–ಅರ್ಜುನ್

Tags

Related Articles

Close