ಪ್ರಚಲಿತ

ಭಯೋತ್ಪಾದಕರನ್ನು ಬೆಳೆಸಿದ ಪಾಕಿಸ್ತಾನದಲ್ಲೀಗ ಆಹಾರಕ್ಕಾಗಿ ಗಲಭೆ: ಹೊಟ್ಟೆ ತುಂಬಿಸಿಕೊಳ್ಳಲು ಕೈಚಾಚಿದ ಪಾಕ್!

ಬಿಕಾರಿ ದೇಶದ ದುರಂಹಕಾರವನ್ನು ಮಟ್ಟ ಹಾಕಿದ ಭಾರತ

ಮಾಡಿದ ಪಾಪಕ್ಕೆ ದೇವರು ತಕ್ಕ ಶಿಕ್ಷೆ ಕೊಟ್ಟೇ ಕೊಡುತ್ತಾನೆ ಎನ್ನುವುದಕ್ಕೆ ಸದ್ಯ ಪಾಪಿ ಪಾಕಿಸ್ತಾನ ಎದುರಿಸುತ್ತಿರುವ ಪರಿಸ್ಥಿತಿಯೇ ಸಾಕ್ಷಿ.

ಶಿಶುಪಾಲನ ೧೦೦ ತಪ್ಪುಗಳಾಗುವವರೆಗೆ ಕಾದ ಶ್ರೀಕೃಷ್ಣ ೧೦೧ ನೇ ತಪ್ಪು ನಡೆದ ಕೂಡಲೇ ಅವನನ್ನು ವಧಿಸುತ್ತಾನೆ. ಆ ಮೂಲಕ ಅವನ ತಪ್ಪಿಗೆ ಶಿಕ್ಷೆ ನೀಡಿದ ಪೌರಾಣಿಕ ಕಥೆ ಗೊತ್ತಲ್ಲಾ.. ಸದ್ಯ ಪಾಕಿಸ್ತಾನದ ಪಾಪದ ಕೊಡ ಸಹ ಹಿಂದಿನ ಶಿಶುಪಾಲನೆಂಬ ದುರುಳನ ಹಾಗೆಯೇ ತುಂಬಿದೆ. ಈಗ ಪಾಕಿಸ್ತಾನದ ಅವಸಾನ ಕಾಲ ಸಮೀಪಿಸಿದಂತಿದೆ ಎನ್ನುವುದು ಅಲ್ಲಿನ ಸದ್ಯದ ಪರಿಸ್ಥಿತಿಯ ಮೇಲೊಮ್ಮೆ ಕಣ್ಣಾಡಿಸಿದರೆ ಅರ್ಥವಾಗಿಬಿಡುತ್ತದೆ. ಅಷ್ಟರ ಮಟ್ಟಿಗೆ ಪಾಕಿಸ್ತಾನ ನಿಜವಾದ ನರಕ ಯಾತನೆಯ ರುಚಿಯನ್ನು ಅನುಭವಿಸುತ್ತಿದೆ.

ಅಲ್ಲೀಗ ಆಹಾರ ಬಿಕ್ಕಟ್ಟು, ಆರ್ಥಿಕ ಬಿಕ್ಕಟ್ಟು ದೊಡ್ಡ ಮಟ್ಟದಲ್ಲಿ ಪಾಪಿಸ್ತಾನವನ್ನು ಅಸಹಾಯಕ ಸ್ಥಿತಿಗೆ ತಳ್ಳಿದೆ. ಭಾರತದ ಮೇಲೆ ಉಗ್ರರನ್ನು ಛೂ ಬಿಟ್ಟು ಮಜಾ ನೀಡುತ್ತಿದ್ದ ರಾಷ್ಟ್ರ, ಇದೀಗ ಭಾರತದ ನೆರವು ಸಿಗಬೇಕು ಎಂದು ಆಶಿಸುತ್ತಿರುವುದು ಪಾಕ್‌ನ ಅರಾಜಕತೆಗೆ, ನಾಚಿಗೆಕೆಟ್ಟ ಪರಿಸ್ಥಿತಿಗೆ ಹಿಡಿದ ಕೈಗನ್ನಡಿ. ಪಾಕಿಸ್ತಾನ ಪರಮಾಣು ರಾಷ್ಟ್ರವಾಗಿದ್ದರೂ, ಆಹಾರಕ್ಕಾಗಿ ವಿಶ್ವದ ಮುಂದೆ ಕೈಚಾಚುವ ಸ್ಥಿತಿ ಎದುರಾಗಿರುವುದಕ್ಕೆ ನಾಚಿಕೆಯಾಗುತ್ತಿದೆ ಎಂದು ಸ್ವತಃ ಪಾಕಿಸ್ತಾನವೇ ಒಪ್ಪಿಕೊಂಡಿದ್ದು, ಆ ಮೂಲಕ ಜಗತ್ತಿನ ಮುಂದೆ ತನ್ನ ನಿಜವಾದ ಸೋಲನ್ನು ತೆರೆದಿಡುವ ಮೂಲಕ ಅಪಹಾಸ್ಯಕ್ಕೆ ತುತ್ತಾಗಿರುವುದು ಹಾಸ್ಯಾಸ್ಪದ.

ಸ್ವತಃ ಪಾಕ್ ಪ್ರಧಾನಿ ಶೆಹಬಾಜ್ ಷರೀಫ್ ತಮ್ಮ ದೇಶದ ದುರಂತಮಯ ಪರಿಸ್ಥಿತಿ ಬಗ್ಗೆ ಮಾತನಾಡಿದ್ದು, ಜಗತ್ತಿನ ಮುಂದೆ ಕೈಚಾಚಲು ನಾಚಿಕೆಯಾಗುತ್ತಿರುವುದಾಗಿ ಹೇಳಿದ್ದಾರೆ. ದೇಶದ ಆರ್ಥಿಕ ಬಿಕ್ಕಟ್ಟು ಪರಿಹರಿಸಲು ವಿದೇಶಗಳಿಂದ ಸಾಲ ಪಡೆಯುವುದೇ ಪರಿಹಾರವಲ್ಲ. ಸಾಲಕ್ಕಾಗಿ ನೆರೆ ರಾಷ್ಟ್ರಗಳ ಮುಂದೆ ಕೈಚಾಚುವುದು ಮುಜುಗರಕ್ಕೀಡು ಮಾಡುತ್ತಿದೆ ಎಂದು ತಮ್ಮ ಅಸಾಹಾಯಕತೆಯನ್ನು ಹೊರ ಹಾಕಿದ್ದಾರೆ.

ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಅವರ ಪಕ್ಷ ಅಲ್ಲಿನ ಪರಿಸ್ಥಿತಿ ಬಗ್ಗೆ ಮಾತನಾಡಿದ್ದು, “ಪಾಕಿಸ್ತಾನದ ದುರಹಂಕಾರವನ್ನು ಭಾರತ ಮಟ್ಟ ಹಾಕಿದೆ. ಪಾಕಿಸ್ತಾನವನ್ನು ಭಿಕ್ಷಾ ಪಾತ್ರೆ ಹಿಡಿದು ಜಗತ್ತಿನ ಮುಂದೆ ಅಂಗಲಾಚುವಂತೆ ಮಾಡುವುದಾಗಿ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ಹೇಳಿದ್ದರು. ೨೦೧೯ ರಲ್ಲಿ ಪ್ರಧಾನಿ ಮೋದಿ ಅವರು ನುಡಿದಿದ್ದ ಭವಿಷ್ಯ ಈಗ ಪಾಕ್ ಪಾಲಿಗೆ ಅಕ್ಷರಶಃ ನಿಜವಾಗಿದೆ. ಮೋದಿ ಅವರು ಹೀಗೆ ಹೇಳಿಕೆ ನೀಡಿರುವ ವಿಡಿಯೋವನ್ನು ಅಂಟಿಕೊಂಡಿರುವ ಇಮ್ರಾನ್ ಅವರ ಪಕ್ಷ, ಮೋದಿ ಭವಿಷ್ಯವನ್ನು ಶೆಹಬಾಜ್ ಸರ್ಕಾರ ನಿಜವಾಗಿಸಿದೆ” ಎಂದು ಹೇಳಿದೆ.

ಇನ್ನು ಭಾರತದಲ್ಲಿದ್ದುಕೊಂಡು ಪಾಕಿಸ್ತಾನವನ್ನು ವಹಿಸಿ ಮಾತನಾಡುವ ಹಲವು ಜನರಿದ್ದಾರೆ. ಭಾರತದಲ್ಲಿರುವ ಭಯವಾಗುವ ಪಾಕ್ ಪ್ರೇಮಿಗಳಿಗೂ ನಮ್ಮಲ್ಲೇನೂ ಕಡಿಮೆ ಇಲ್ಲ. ಭಾರತದಲ್ಲಿ ಅಸಹಿಷ್ಣುತೆ ಅನುಭವಿಸುತ್ತಿರುವವರು, ಅವರ ಪಾಲಿನ ಸಹಿಷ್ಣು ರಾಷ್ಟ್ರ ಪಾಕಿಸ್ತಾನಕ್ಕೆ ತೆರಳಲು ಇದು ಸಕಾಲ. ಅಲ್ಲಿನ ಜನರಿಗೆ ಭಾರತದ ಹಿರಿಮೆ ಏನು?, ಪ್ರಧಾನಿ ಮೋದಿ ಅವರ ಸ್ಟೇಟಸ್ ಏನು ಎಂಬುದರ ಅರಿವಾಗಿದೆ. ಆದರೆ ಭಾರತದಲ್ಲಿರುವ ಕೆಲ ದೇಶ ದ್ರೋಹಿಗಳಿಗೆ ಈ ಅರಿವು ಮೂಡದಿರುವುದು ದುರಾದೃಷ್ಟ.

Tags

Related Articles

Close