ಪ್ರಚಲಿತ

ಪ್ರಧಾನ ಮಂತ್ರಿ ಮುದ್ರಾ ಯೋಜನೆಯಡಿಯಲ್ಲಿ ಇದುವರೆಗೂ ಪರಿಶಿಷ್ಟ ಜಾತಿಯ 3873529 ಜನರು ಲಾಭ ಪಡೆದಿದ್ದರೂ ಮೋದಿ ಹಿಂದುಳಿದವರ ವಿರೋಧಿ ಎನ್ನುತ್ತಾರೆ!!

ಕೇಂದ್ರ ಸರಕಾರದ ಯೋಜನೆಗಳ ಫಲ ಸರ್ವರಿಗೂ ಸಮಾನವಾಗಿ ದೊರಕುತ್ತಿವೆ. ಆದರೂ ಮೋದಿ ಅಂಬಾನಿ- ಅದಾನಿ ಪರ, ಮೋದಿ ವಿದೇಶೀ ಕಂಪನಿಗಳ ಪರ, ಮೋದಿ ಹಿಂದುಳಿದವರ ವಿರೋಧಿ, ಎನ್ನುತ್ತಾ ಸುಳ್ಸುದ್ದಿ ಹಬ್ಬಿಸುತ್ತಾರೆ ಅಂಧ ಗುಲಾಮರು. 2016-17ರ ಅವಧಿಯಲ್ಲಿ ಪ್ರಧಾನಮಂತ್ರಿ ಮುದ್ರಾ ಯೋಜನೆಯಡಿಯಲ್ಲಿ ಪರಿಶಿಷ್ಟ ಜಾತಿಯ (SC) 3873529 ದಷ್ಟು ಜನರು ಈ ಯೋಜನೆಯ ಲಾಭ ಪಡೆದಿರುತ್ತಾರೆ ಎಂದು ಸರಕಾರದ ಅಂಕಿ ಅಂಶಗಳು ಹೇಳುತ್ತವೆ. ಈ ಪರಿಶಿಷ್ಟ ಜಾತಿಗಳಿಗೆ ಪಿಎಂಎಂವೈ ಅಡಿಯಲ್ಲಿ 2016-17ರ ಅವಧಿಯಲ್ಲಿ ವಿತರಿಸಲಾದ ಮೊತ್ತ ರೂ. 8535.41 ಕೋಟಿ.

2016-17ರ ಅವಧಿಯಲ್ಲಿ ಪಿಎಂಎಂವೈ ಅಡಿಯಲ್ಲಿ ಪರಿಶಿಷ್ಟ ಜಾತಿಗಳ ಸಂಖ್ಯೆಯಲ್ಲಿ ಪ್ರಯೋಜನ ಪಡೆದ ಟಾಪ್ 10 ರಾಜ್ಯಗಳು / ಕೇಂದ್ರಾಡಳಿತ ಪದೇಶಗಳು ಇಂತಿವೆ:
ತಮಿಳುನಾಡು, ಉತ್ತರ ಪ್ರದೇಶ, ಕರ್ನಾಟಕ, ಮಹಾರಾಷ್ಟ್ರ, ಪಶ್ಚಿಮ ಬಂಗಾಳ, ಮಧ್ಯಪ್ರದೇಶ, ಒಡಿಶಾ, ಪಂಜಾಬ್, ಹರಿಯಾಣ ಮತ್ತು ಬಿಹಾರ.

ಈ ಮೇಲಿನ ಹತ್ತು ರಾಜ್ಯಗಳಲ್ಲಿ ಟಾಪ್ 5 ರಾಜ್ಯಗಳ ಹಿಂದುಳಿದವರು ಅತಿ ಹೆಚ್ಚು ಹಣ ಪಡೆದುಕೊಂಡಿದ್ದಾರೆ

ತಮಿಳುನಾಡು, ಉತ್ತರ ಪ್ರದೇಶ, ಕರ್ನಾಟಕ, ಮಹಾರಾಷ್ಟ್ರ ಮತ್ತು ಪಶ್ಚಿಮ ಬಂಗಾಳಗಳು ಅನುಕ್ರಮವಾಗಿ ರೂ 1322.89 ಕೋಟಿ, ರೂ. 1089.93 ಕೋಟಿ, ರೂ. 919.81 ಕೋಟಿ, ರೂ. 811.88 ಕೋಟಿ ಮತ್ತು ರೂ. 665.03 ಕೋಟಿ ಪಡೆದುಕೊಂಡಿವೆ. ಈ 5 ರಾಜ್ಯಗಳು ಶೇಕಡವಾರು ಪರಿಶಿಷ್ಟ ಜಾತಿಗಳಲ್ಲಿ ಒಟ್ಟು 57.76% ನಷ್ಟು ಲಾಭ ಪಡೆದಿವೆ. ಮೇಲೆ ತಿಳಿಸಿದ ಟಾಪ್ 10 ರಾಜ್ಯಗಳು ಶೇಕಡಾವಾರು ಪರಿಶಿಷ್ಟ ಜಾತಿಗಳಲ್ಲಿ ಒಟ್ಟು 86.09% ನಷ್ಟು ಲಾಭ ಪಡೆದಿವೆ ಹಾಗಿದ್ದರೂ ಮೋದಿ ಹಿಂದುಳಿದವರ ವಿರೋಧಿ, ಮೋದಿ ದಲಿತ ವಿರೋಧಿ!

ಸಣ್ಣ ವ್ಯಾಪಾರದಲ್ಲಿ ತೊಡಗಿಸಿಕೊಂಡಿರುವ ಎಸ್ಸಿ, ಎಸ್ಟಿ, ಒಬಿಸಿ ಮತ್ತು ಮಹಿಳಾ ಉದ್ಯಮಿಗಳಿಗೆ ತಮ್ಮ ಕಾಲ ಮೇಲೆ ನಿಂತು ಸ್ವಾವಲಂಬಿಗಳಾಗಲು ಮೋದಿ ಸರಕಾರ ವಿಶೇಷ ಪ್ಯಾಕೇಜ್ ನೀಡುತ್ತಿದೆ. ದಲಿತರ-ಹಿಂದುಳಿದವರ ಉದ್ದಾರಕ್ಕಾಗಿ ಸ್ವತಃ ದಲಿತ ಮುಖ್ಯ ಮಂತ್ರಿಗಳೂ, ಸಚಿವ-ಶಾಸಕರೂ ತೆಗೆದುಕೊಳ್ಳದಷ್ಟು ಕಾಳಜಿಯನ್ನು ಮೋದಿ ಸರಕಾರ ತೆಗೆದುಕೊಳ್ಳುತ್ತಿದೆ. ಆದರೂ ಮೋದಿ ದಲಿತ ವಿರೋಧಿ ಎನ್ನುವ ಭ್ರಮೆಯನ್ನು ಜನರ ಮನಸಿನಲ್ಲಿ ತುಂಬಲಾಗುತ್ತಿದೆ. ಸಬ್ ಕಾ ಸಾಥ್ ಸಬ್ ಕಾ ವಿಕಾಸ್ ಎನ್ನುವ ಸಿದ್ಧಾಂತದ ಮೇಲೆ ನಂಬಿಕೆ ಇಟ್ಟಿರುವ ಮೋದಿ ಅವರು ಯಾವತ್ತೂ ಯಾರಲ್ಲೂ ಭೇದ ಮಾಡಿಲ್ಲ.

ದಲಿತರ ಹೆಸರಿನಲ್ಲಿ ರಾಜಕಾರಣ ಮಾಡುತ್ತಾ ತಮ್ಮ ಹತ್ತು ತಲೆಮಾರಿಗಾಗುವಷ್ಟು ಆಸ್ತಿ ಮಾಡಿಕೊಂಡಿಟ್ಟದ್ದು ಮಾಯಾವತಿ ಮತ್ತು ಖರ್ಗೆಯಂತಹ ಢೋಂಗೀ ದಲಿತ ಪ್ರೇಮಿಗಳೆ ಹೊರತು ಮೋದಿ ಅವರಲ್ಲ. ಜಾತಿ ಹೆಸರಿನಲ್ಲಿ ಮೋಸ ಮಾಡುವವರ ಮಾತಿಗೆ ಮರುಳಾಗದಿರಿ. ಅವರ ಕೈಯಲ್ಲಿ ದಲಿತರ ಉದ್ದಾರ ಸಾಧ್ಯವಿಲ್ಲ. ಎಲ್ಲರ ಒಳಿತಿಗಾಗಿ ದುಡಿಯುವ ಮೋದಿ ಅವರಿಂದಷ್ಟೆ ದಲಿತರ ಉದ್ದಾರ ಸಾಧ್ಯ.

-ಶಾರ್ವರಿ

Tags

Related Articles

Close