ಪ್ರಚಲಿತ

ಬಿಡುಗಡೆಯಾಯಿತು ಮೋದೀಜೀಯ ಚುನಾವಣಾ ಘೋಷವಾಕ್ಯ!! ಮತ್ತೊಮ್ಮೆ ಇತಿಹಾಸ ಸೃಷ್ಠಿಸಲಿದೆಯಾ 2019ರ ಚುನಾವಣೆ!!

ಅನೇಕ ವರ್ಷಗಳ ಕಾಲ ಕಾಂಗ್ರೆಸ್ ದುರಾಡಳಿತ ನೋಡಿ ನೋಡಿ ಭಾರತದ ಜನತೆ ಬೇಸತ್ತು ಹೋಗಿ ಕೊನೆಗೂ ಒಬ್ಬ ದಕ್ಷ ಪ್ರಾಮಾಣಿಕ ಪ್ರಧಾನಿಯನ್ನಾಗಿ ನರೇಂದ್ರ ಮೋದಿಯನ್ನು ಅಧಿಕಾರದ ಗದ್ದುಗೆಯನ್ನು ಏರುವಂತೆ ಮಾಡುತ್ತಾರೆ!! ಪ್ರಧಾನಿ ನರೇಂದ್ರ ಮೋದಿಜೀಯವರು ಅಧಿಕಾರವಹಿಸಿ ನಾಳೆಗೆ 4 ವರ್ಷಗಳು!! ಮಾಡಿರುವ ಸಾಧನೆ ಮಾತ್ರ ಅಗಾಧ!! ಮೋದಿಜೀ ಅಧಿಕಾರ ಸ್ವೀಕರಿಸಿದಾಗಿನಿಂದ ಮಾಡಿದ ಅಭಿವೃದ್ಧಿ ಒಂದಾ ಎರಡಾ? ಕೆಲ ಜನರು ಇವರ ಅಧಿಕಾರದ ವರ್ಚಸ್ಸನ್ನು ನೋಡಿ ಸುಖಾಸುಮ್ಮನೆ ಬಾಯಿಗೆ ಬಂದ ರೀತಿಯಲ್ಲಿ ಜರಿದ್ದದ್ದೇ ಜರಿದದ್ದು!! ಈ ಮೋದಿಜೀ ಮುಂದೆ ವಿರೋಧ ಪಕ್ಷದ ಯಾವನೂ ನಿಲ್ಲಲೂ ಸಾಧ್ಯವಿಲ್ಲ ಎಂಬುವುದನ್ನು ಈಗಾಗಲೇ ಮೋದೀಜೀ ತನ್ನ ಕೆಲಸದ ಮೂಲಕ ತೋರಿಸಿಕೊಟ್ಟಿದ್ದಾರೆ!! ಮೋದಿಜೀಯನ್ನು ನೋಡಿದರೆ ವಿರೋಧ ಪಕ್ಷವೇನು?.. ವಿಶ್ವವೇ ಗಢಗಢ ನಡುತ್ತದೆ!!

Related image

ಕಾಂಗ್ರೆಸ್ ಅಧಿಕಾರ ವಹಿಸಿಕೊಂಡಿದ್ದಾಗ ಇದ್ದ ಭಾರತದ ಅಭಿವೃದ್ಧಿಯೂ ಮೋದಿ ಅಧಿಕಾರವಹಿಸಿದ್ದಾಗ ದೇಶದ ಅಭಿವೃದ್ಧಿಯೂ ಯಾವ ರೀತಿ ಇದೆ ಎಂಬುವುದನ್ನು ಈಗಾಗಲೇ ಭಾರತದ ಜನರು ಅರ್ಥೈಸಿಕೊಂಡಿದ್ದಾರೆ!! ನೋಟ್ ಬ್ಯಾನ್, ಜಿಎಸ್‍ಟಿಯಂತಹ ಅನೇಕ ನಿರ್ಧಾರಗಳನ್ನು ಕೈಗೊಂಡಾಗ ಮೊದಲು ದೇಶದ ಜನತೆ ಕಷ್ಟವಾಗಿರಬಹುದು ಆದರೆ ದಿಗಳೆದಂತೆ ಮೋದೀಜೀ ಯಾತಕ್ಕಾಗಿ ಇಂತಹ ನಿರ್ಧಾರಗಳನ್ನು ಕೈಗೊಂಡರು ಎಂಬುವುದು ಜನತೆಗೆ ಅರ್ಥವಾಯಿತು!! ಮೋದೀಜೀ ಅಧಿಕಾರ ವಹಿಸಿಕೊಂಡು ಮೊದಲು ಮಾಡಿದ ಕೆಲಸವೇ ಬಡತನ ನಿರ್ಮೂಲನೆ!! ಶಿಕ್ಷಣ ಕ್ಷೇತ್ರದಲ್ಲಿ ಬೆಳವಣಿಗೆ, ಆರೋಗ್ಯ ಕ್ಷೇತ್ರದಲ್ಲಿ ಆಯುಷ್ಮಾನ್ ಭಾರತ್ ಎಂಬ ಶೀರ್ಷಿಕೆಯಡಿ ಆರೋಗ್ಯ ಕ್ಷೇತ್ರದಲ್ಲಿ ತಂದ ಬದಲಾವಣೆ ವಾಹ್!! ಮೋದಿಜೀಯನ್ನು ಯಾವ ರೀತಿ ಹೊಗಳುವುದು ಎಂದೇ ಅರ್ಥವಾಗುತ್ತಿಲ್ಲ!! ದೇಶದ ಜನರು ಯಾವುದಾದರೂ ಸಮಸ್ಯೆಯಿಂದ ಬಳಲುತ್ತಿದ್ದರೆ ಅದಕ್ಕೆ ಯಾವ ರೀತಿ ಪರಿಹಾರವನ್ನು ಹುಡುಕಬಹುದು ಎಂಬುವುದನ್ನು ಅಂದೇ ಯೋಚಿಸಿ ನಿರ್ಧರಿಸಿ ಸುಧಾರಣೆಯನ್ನು ತರುತ್ತಾರೆ!!

 

ಎಷ್ಟೋ ಜನ ಮೋದಿ ಒಬ್ಬ ಚಾಯ್‍ವಾಲಾ ಎಂದು ನೋಡಿ ನೋಡಿ ನಗುತ್ತಿದ್ದರು!! ಯಸ್.. ಮೋದೀ ಒಬ್ಬ ಚಾಯ್‍ವಾಲಾ ಆಗಿರಬಹುದು ಆದರೆ ಮೋದೀಜೀ ಭಾರತವನ್ನು ಅಭಿವೃದ್ಧಿ ಮಾಡಿದಷ್ಟು ಮೋದೀಯನ್ನು ನೋಡಿ ನಗುವವರಿಗೆ ಮಾಡಲು ಸಾಧ್ಯವೇ ಎಂದು ಒಂದು ಬಾರಿ ಅರ್ಥೈಸಿಕೊಂಡರೆ ಒಳಿತು ಅಂದೆನಿಸುತ್ತದೆ!! ಭಾರತದತ್ತ ಮುಖವೇ ಮಾಡದೆ ಭಾರತವೆಂದರೆ ಹಲ್ಲುಕಿರಿಯುತ್ತಿದ್ದ ರಾಷ್ಟ್ರಗಳೆಲ್ಲಾ ಇದೀಗ ಮೋದಿಜೀ ಪ್ರಧಾನಿಯಾದ ಬಳಿಕ ಸ್ನೇಹಕ್ಕೆ ಕೈಚಾಚಿ ನಿಂತಿದೆ ಎಂದರೆ ಮೋದಿಜೀ ಎಷ್ಟು ಪವರ್ ಫುಲ್ ಎಂದು ಬಾಯಿ ಮಾತಲ್ಲಿ ಹೇಳಲು ಸಾಧ್ಯವಿಲ್ಲ!! ಅದಲ್ಲದೆ ಮೋದೀಜೀ ಯಾವಾಗ ನೋಡಿದರೂ ವಿದೇಶಿ ಪ್ರವಾಸವನ್ನು ಕೈಗೊಳ್ಳುತ್ತಾರೆ ಎಂದು ಕೆಲ ಬುದ್ಧಿ ಜೀವಿಗಳು ಜರಿಯುತ್ತಿರುತ್ತಾರೆ!! ಆದರೆ ಆ ಸೋಗಲಾಡಿ ಬುದ್ಧಿ ಜೀವಿಗಳು ಒಂದು ವಿಷಯನ್ನು ಅರ್ಥ ಮಾಡಿಕೊಳ್ಳಬೇಕು!! ಮೋದೀಜೀ ವಿದೇಶಿ ಪ್ರವಾಸಕ್ಕೆ ಹೋಗುವುದು ಅಲ್ಲಿ ಎಂಜಾಯ್ ಮಾಡಕ್ಕಲ್ಲ!! ಬದಲಾಗಿ ನಮ್ಮ ದೇಶವನ್ನು ಯಾವ ರೀತಿ ಉನ್ನತ ಸ್ಥಿತಿಗೆ ತೆಗೆದುಕೊಂಡು ಹೋಗುವುದೆಂದು!!

Image result for ಮೋದಿ

ಅಂದು 2014ರ ಲೋಕಸಭಾ ಚುನಾವಣೆ!! ಕಾಂಗ್ರೆಸ್‍ನ ಭ್ರಹ್ಮಾಂಡ ಭ್ರಷ್ಟಾಚಾರವನ್ನು ಬಯಲು ಮಾಡಬೇಕೆಂದು ದೇವರೇ ನರೇಂದ್ರ ಮೋದಿಜೀಯವರನ್ನು ಅಧಿಕಾರದ ಚುಕ್ಕಾಣಿಯನ್ನು ಹಿಡಿಯುವಂತೆ ಮಾಡಿದರೋ ಏನೋ… ಅಷ್ಟು ವರ್ಷಗಳ ಕಾಲ ಇಡೀ ಭಾರತವನ್ನು ಹಗರಣ ಮಾಡುವುದರ ಮೂಲಕ ಭಾರತದ ಆಸ್ತಿಯೆಲ್ಲಾ ನಿಂಗಿ ನೀರು ಕುಡಿದಿದ್ದರು ಈ ಕಾಂಗ್ರೆಸ್ ಸರಕಾರ!! ಕೊನೆಗೂ ಮೋದೀಜೀ ಗೆದ್ದು ಬಂದರು!! ಆಗ ಇಡೀ ಭಾರತವೇ ಮೋದೀ ಗೆಲುವಿನ ವಿಷಯ ತಿಳಿಯುತ್ತಿದ್ದಂತೆಯೇ ಕುಣಿದು ಕುಪ್ಪಳಿಸಿದ್ದರು!! ಇದೀಗ ಮೋದಿಜೀ ಸರಕಾರಕ್ಕೆ 4 ವರ್ಷ ತುಂಬಿದ ಸಂತೋಷ!! ಅದಲ್ಲದೆ 2014ರ ಚುನಾವಣೆಯಲ್ಲಿ ಬಿಜೆಪಿ ಅಬ್ ಕೀ ಬಾರ್ ಬಿಜೆಪಿ ಸರ್ಕಾರ್ ಎಂಬ ಘೋಷಣೆ ಹೊರಡಿಸಿತ್ತು. ಅದು ಸಹ ತುಂಬ ಜನಪ್ರಿಯವಾಗಿತ್ತು!! ಈಗ ಮೋದಿಯವರು ಪ್ರಧಾನಿಯಾಗಿ ನಾಲ್ಕು ವರ್ಷವಾಗಿದೆ. ದೇಶದ ಜಿಡಿಪಿ ಏರಿಕೆಯಾಗುತ್ತಿದೆ. ನೋಟು ನಿಷೇಧದ ಮೂಲಕ ಕಪ್ಪು ಹಣ ತಹಬಂದಿಗೆ ತರಲಾಗಿದೆ. ಸರಕು ಮತ್ತು ಸೇವಾ ತೆರಿಗೆ ಮೂಲಕ ದೇಶದ ತೆರಿಗೆ ವ್ಯವಸ್ಥೆ ಸುಧಾರಣೆಯಾಗಿದೆ. ಭಾರತದ ಘನತೆ ವಿಶ್ವಮಟ್ಟದಲ್ಲಿ ಬಾನೆತ್ತರಕ್ಕೆ ಹಾರಿದೆ. ಪಾಕಿಸ್ತಾನ, ಚೀನಾ ಬಾಲ ಮುದುರಿಕೊಂಡು ಕೂತಿವೆ. ಭ್ರಷ್ಟಾಚಾರ ಕಾಣೆಯಾಗಿವೆ ಇದಕ್ಕೆಲ್ಲಾ ಕಾರಣ ಯಾರೆಂದು ಕೇಳಿದರೆ ಹೆಮ್ಮೆಯಿಂದ ಹೇಳಲು ಖುಷಿಯಾಗುತ್ತದೆ ನಮ್ಮ ಮೋದೀಜೀ ಎಂದು!!

Image result for ಮೋದಿ

ಹೀಗೆ ನರೇಂದ್ರ ಮೋದಿ ಅವರು ಕಳೆದ ನಾಲ್ಕು ವರ್ಷದಲ್ಲಿ ದೇಶದಲ್ಲಿ ಮಾಡಿದ ಹಲವು ಸುಧಾರಣೆಗಳಿಂದ 2019ರ ಚುನಾವಣೆಯಲ್ಲೂ ಮೋದಿ ಅವರನ್ನೇ ಗೆಲ್ಲಿಸಬೇಕು ಎಂಬ ಮನೋಭಾವ ದೇಶದ ಜನರಲ್ಲಿ ಮೂಡಿದೆ. ದೇಶದ 22 ರಾಜ್ಯಗಳಲ್ಲಿ ಬಿಜೆಪಿ ಆಡಳಿತದಲ್ಲಿದ್ದು, ಮುಂದೆ ಬರುವ ಎಲ್ಲಾ ಚುನಾವಣೆಗಳಲ್ಲೂ ಮೋದಿಜೀ ಗೆದ್ದು ಬರಲಿ ಎಂಬುವುದೇ ನಮ್ಮೆಲ್ಲರ ಆಶಯ!! ಈಗಾಗಲೇ ಹಲವಾರು ಸಂಸ್ಥೆಗಳು ಮಾಡಿರುವ ಸಮೀಕ್ಷೆಗಳ ಪ್ರಕಾರ 2019ರಲ್ಲಿ ಕೂಡ ಮೋದೀಜೀಯೇ ಅಧಿಕಾರದ ಗದ್ದುಗೆಯನ್ನು ಏರುತ್ತಾರೆ ಎಂಬುವುದೇ ತಿಳಿದಿದೆ!! ಈಗಾಗಲೇ ಈಗ ಬಿಜೆಪಿ ಹಾಗೂ ಕಾಂಗ್ರೆಸ್ ಸಹ 2019ರ ಲೋಕಸಭೆ ಚುನಾವಣೆಗೆ ಸಜ್ಜಾಗಿದೆ.!! 2014ರಲ್ಲಿ ಹೊರಡಿಸಿದ ಜನಪ್ರಿಯ ಸ್ಲೋಗನ್ ಹಾಗೆ, 2019ರ ಚುನಾವಣೆಗೂ ಒಂದು ಸ್ಲೋಗನ್ ಹೊರಡಿಸಿದೆ. `2019 ಮೇ ಫಿರ್ ಮೋದಿ ಸರ್ಕಾರ್’ (2019ರಲ್ಲೂ ಮತ್ತೆ ಮೋದಿ ಸರ್ಕಾರ್) ಎಂಬ ಘೋಷಣೆ ಹೊರಡಿಸಿದೆ!! ಆ ಸ್ಲೋಗನ್ ಪ್ರಕಾರ ಮತ್ತೆ ಮತ್ತೆ ಮೋದಿ ಸರಕಾರ ಅಧಿಕಾರಕ್ಕೆ ಬರಲಿ ಎಂಬುವುದು ನಮ್ಮೆಲ್ಲರ ಆಶಯ!!

ಜೈ ಮೋದೀಜೀ!!

source: www.ndtv.com

  • ಪವಿತ್ರ
Tags

Related Articles

Close