ಪ್ರಚಲಿತ

ಉಗ್ರರಿಗೆ ಬೆಂಬಲ ನೀಡಿದವರು ಕಾಂಗ್ರೆಸ್‌ಗೆ ಬೆಂಬಲ ನೀಡಿದ್ದರು: ಸ್ಫೋಟಕ ಮಾಹಿತಿ ಬಹಿರಂಗ!

ಕಾಂಗ್ರೆಸ್ ಪಕ್ಷಕ್ಕೆ ಉಗ್ರಗಾಮಿಗಳ ಜೊತೆಗೆ, ಸಮಾಜ ಘಾತುಕ ಶಕ್ತಿಗಳ ಜೊತೆಗೆ, ಸಮಾಜದಲ್ಲಿ ಅಶಾಂತಿ ಸೃಷ್ಟಿಸುವ ಅಶಾಂತಿದೂತರ ಜೊತೆಗೆ ಉತ್ತಮ ಬಾಂಧವ್ಯ ಇದೆ ಎನ್ನುವುದಕ್ಕೆ ಈಗ ಮತ್ತೊಂದು ಸಾಕ್ಷ್ಯ ಸಿಕ್ಕಿದೆ.

2018 ರಲ್ಲಿ ಕಾಂಗ್ರೆಸ್ ಪಕ್ಷದ ಜೊತೆಗೆ ನಾವು ಮೈತ್ರಿ ಹೊಂದಿದ್ದವು ಎಂದು ಉಗ್ರರನ್ನು ಪೋಷಣೆ ಮಾಡುವ, ಕೊಲೆಗಡುಕರಿಗೆ ಆಶ್ರಯ ನೀಡುವ ಎಸ್‌ಡಿ‌ಪಿಐ ಪಕ್ಷ ಬಹಿರಂಗ ಮಾಡಿದೆ. ಕಾಂಗ್ರೆಸ್ ಪಕ್ಷದ ಜೊತೆಗೆ ಮಾಡಿಕೊಳ್ಳಲಾಗಿದ್ದ ಒಳ ಒಪ್ಪಂದದ ಬಗ್ಗೆ ಎಸ್‌ಡಿಪಿಐ ರಹಸ್ಯ ಬಿಚ್ಚಿಟ್ಟಿದ್ದು, ಆ ಮೂಲಕ ಕಾಂಗ್ರೆಸ್ ಸಹ ಸಮಾಜ ಘಾತುಕ ಕೆಲಸಗಳಿಗೆ, ಶಕ್ತಿಗಳಿಗೆ ಬೆಂಬಲ ನೀಡುವುದನ್ನು ಮತ್ತೊಮ್ಮೆ ಸಮಾಜದೆದುರು ತೆರೆದಿಟ್ಟಿದೆ.

ಕಳೆದ ಚುನಾವಣೆಯಲ್ಲಿ ಕಾಂಗ್ರೆಸ್ ಜೊತೆಗೆ ಮೈತ್ರಿ ಮಾಡಿಕೊಂಡು, ಕಾಂಗ್ರೆಸ್ ಪಕ್ಷವನ್ನು ನಂಬಿ ಎಸ್‌ಡಿಪಿಐ ಸೋಲು ಕಂಡಿತ್ತು. ಆದರೆ ಈ ಬಾರಿ ಕಣದಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ ಎಂದು ಎಸ್‌ಡಿಪಿಐ ಪಕ್ಷದ ಬಂಟ್ವಾಳ ಕ್ಷೇತ್ರದ ಅಭ್ಯರ್ಥಿ ಇಲ್ಯಾಸ್ ತುಂಬೆ ಹೇಳಿದ್ದಾನೆ. ಕಳೆದ ಚುನಾವಣಾ ಸಂದರ್ಭದಲ್ಲಿ ರಾಷ್ಟ್ರೀಯ ನಾಯಕರ ಸೂಚನೆಯಂತೆ ಕಾಂಗ್ರೆಸ್ ಪಕ್ಷದ ಜೊತೆಗೆ ಒಳ ಒಪ್ಪಂದ ಮಾಡಿಕೊಳ್ಳಲಾಗಿತ್ತು. ಮೂರು ಕ್ಷೇತ್ರಗಳಲ್ಲಿ ಎಸ್‌ಡಿಪಿಐ ಸ್ಪರ್ಧಿಸುವುದು ಮತ್ತು ಉಳಿದ ಕ್ಷೇತ್ರಗಳಲ್ಲಿ ಕಾಂಗ್ರೆಸ್‌ಗೆ ಬೆಂಬಲ ನೀಡುವುದಾಗಿ ಒಪ್ಪಂದ ಮಾಡಿಕೊಳ್ಳಲಾಗಿತ್ತು. ಆದರೆ ಚುನಾವಣಾ ಸಮಯದಲ್ಲಿ ಕಾಂಗ್ರೆಸ್ ಪಕ್ಷ ಮಾತು ತಪ್ಪಿತ್ತು ಎಂದು ತುಂಬೆ ಹೇಳಿದ್ದಾನೆ.

ಈ ಬಾರಿ ಎಸ್‌ಡಿಪಿಐ ಕೊಲೆ ಆರೋಪ ಹೊತ್ತು ಜೈಲು ಸೇರಿರುವವರು, ಸಮಾಜದ ಸ್ವಾಸ್ಥ್ಯ ಕದಡುವಂತಹ ಹೇಳಿಕೆಗಳನ್ನು ನೀಡಿ, ಜನರನ್ನು ಕೆರಳುವಂತೆ ಮಾಡುವವರಿಗೆ ಚುನಾವಣಾ ಟಿಕೆಟ್ ನೀಡುವ ಮೂಲಕ ತಾನೊಂದು ಭಯೋತ್ಪಾದಕ ಪೋಷಕ ಪಕ್ಷ ಎಂಬುದನ್ನು ಈಗಾಗಲೇ ಜಗಜ್ಜಾಹೀರು ಮಾಡಿದೆ. ಪಿಎಫ್ಐ‌ ಎಂಬ ನಿಷೇಧಿತ ಸಂಘಟನೆಗೆ ಸಹಾಯ ಮಾಡುತ್ತಿದ್ದ ಆರೋಪ ಸಹ ಎಸ್‌ಡಿಪಿಐ ಮೇಲಿದ್ದು, ಇಂತಹ ಪಕ್ಷದ ಜೊತೆ ಕೈ ಜೋಡಿಸಿದ ಕಾಂಗ್ರೆಸ್ ಸಹ ಭಯೋತ್ಪಾದನೆ, ಹಿಂಸಾಚಾರಕ್ಕೆ ಬೆಂಬಲ ನೀಡುತ್ತಿದೆಯೇ? ಎನ್ನುವ ಪ್ರಶ್ನೆ ಸದ್ಯ ಸಾರ್ವಜನಿಕರದ್ದು.

Tags

Related Articles

Close