ಪ್ರಚಲಿತ

ಹುಟ್ಟಿನಲ್ಲಿ ಮುಸಲ್ಮಾನನಾಗಿದ್ದರೂ ನಾನೊಬ್ಬ ಹಿಂದೂ ಎಂದು ಎದೆ ತಟ್ಟಿ ಹೇಳಬಲ್ಲೆ!! ಜಾತ್ಯಾತೀತರಿಗೆ ಬರ್ನಾಲ್ ಭಾಗ್ಯ ನೀಡಿದ ಯೋಗಿ ಬಂಟ!!

ಉತ್ತರಪ್ರದೇಶದಲ್ಲಿ ಬಿಜೆಪಿ ಭರ್ಜರಿ ಗೆಲುವು ಸಾಧಿಸಿದ ನಂತರ ಉತ್ತರ ಪ್ರದೇಶದ 21ನೇ ಸಿಎಂ ಆಗಿ ಯೋಗಿ ಆದಿತ್ಯನಾಥ್ ಪದಗ್ರಹಣ ಮಾಡಿದ್ದಲ್ಲದೇ ಪ್ರಬಲ ಹಿಂದುತ್ವವಾದಿಯಾಗಿರುವ ಯೋಗಿ ಆದಿತ್ಯನಾಥ್ ಅವರು ತಮ್ಮ ಸಂಪುಟದಲ್ಲಿ ಏಕೈಕ ಮುಸ್ಲಿಂ ಸಚಿವರನ್ನಾಗಿ ಮಾಜಿ ಕ್ರಿಕೆಟಿಗ ಮೊಹ್ಸಿನ್ ರಾಜಾ ಅವರಿಗೆ ಸಂಪುಟದಲ್ಲಿ ಸ್ವತಂತ್ರ ಖಾತೆಯನ್ನು ನೀಡಿ ಸೌಹಾರ್ದತೆಯನ್ನು ಮೆರೆದಿದ್ದರು!! “ಯಾರಿಗೆ ಜೀವನದಲ್ಲಿ ಜ್ಞಾನೋದಯವಾಗಬೇಕೆಂದಿದೆಯೋ, ಅವರೆಲ್ಲ ಕೇಸರಿಯನ್ನು ಬಣ್ಣವನ್ನು ಅಪ್ಪಿಕೊಳ್ಳಿ” ಎನ್ನುವ ಮೂಲಕ ಸುದ್ದಿಯಾಗಿದ್ದ ಉತ್ತರ ಪ್ರದೇಶದ ಸಚಿವ ಮೊಹ್ಸಿನ್ ರಾಜಾ ಇದೀಗ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ!!

ಈಗಾಗಲೇ ಉತ್ತರ ಪ್ರದೇಶ ಸಿಎಂ ಪಕ್ಕಾ ಹಿಂದುವಾದಿ ಎಂದು ಅವರು ಅಧಿಕಾರ ಸ್ವೀಕರಿಸಿದಾಗಲೇ ಆರೋಪಗಳಿತ್ತು. ಆದರೆ ಸಿಎಂ ಯೋಗಿ ಬಡ ಮುಸ್ಲಿಮರ ಸರ್ಕಾರಿ ಪ್ರಾಯೋಜಿತ ಸಾಮೂಹಿಕ ವಿವಾಹಕ್ಕೆ ಸಿಎಂ ಯೋಗಿ ಪೌರೋಹಿತ್ಯ ವಹಿಸುವ ಮೂಲಕ ಮಹತ್ವದ ನಿರ್ಧಾರವನ್ನು ಕೈಗೊಂಡಿದ್ದರು!! ಹಾಗಾಗಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸಾಮೂಹಿಕ ವಿವಾಹವನ್ನು ಸರ್ಕಾರದ ಕಾರ್ಯಕ್ರಮವಾಗಿ ಹಮ್ಮಿಕೊಳ್ಳುವುದಲ್ಲದೆ, ಬಡ ಮುಸ್ಲಿಂ ಯುವತಿಯರಿಗೆ ವಿವಾಹಕ್ಕೆಂದು 20 ಸಾವಿರ ರೂಪಾಯಿ ನೀಡಲಿರುವ ಕುರಿತಾದ ಮಸೂದೆ ಯೊಂದಕ್ಕೆ ಸಿದ್ಧತೆ ನಡೆಸುತ್ತಿರುವುದಾಗಿ ರಾಜ್ಯ ಅಲ್ಪಸಂಖ್ಯಾತ ಸಚಿವ ಮೊಹ್ಸಿನ್ ರಾಜಾ ಹೇಳಿದ್ದರು. ಈ ಮೂಲಕ ತಾನು ಮುಸ್ಲಿಂ ವಿರೋಧಿ ಮುಖ್ಯಮಂತ್ರಿಯಲ್ಲ ಎಂದು ಯೋಗಿ ಸಾಬೀತು ಮಾಡುತ್ತಿದ್ದಾರಲ್ಲದೇ ಉತ್ತರ ಪ್ರದೇಶವನ್ನು ಗೂಂಡಾ ಮುಕ್ತ ರಾಜ್ಯವನ್ನಾಗಿ ಮಾಡುತ್ತಿರುವ ವಿಚಾರ ಗೊತ್ತೇ ಇದೆ.

“ಯಾರಿಗೆ ಜೀವನದಲ್ಲಿ ಜ್ಞಾನೋದಯವಾಗಬೇಕೆಂದಿದೆಯೋ, ಅವರೆಲ್ಲ ಕೇಸರಿಯನ್ನು ಬಣ್ಣವನ್ನು ಅಪ್ಪಿಕೊಳ್ಳಿ” ಎಂದು ಹೇಳಿರುವ ಉತ್ತರ ಪ್ರದೇಶದ ಸಚಿವ ಮೊಹ್ಸಿನ್ ರಾಜಾ ಇದೀಗ “ಹಿಂದೂಸ್ತಾನದಲ್ಲಿ ವಾಸ ಮಾಡುವ ಪ್ರತಿಯೊಬ್ಬ ವ್ಯಕ್ತಿಯೂ ಹಿಂದೂ. ನಾನು ವಿದೇಶಗಳಿಗೆ ಹೋದಾಗ ಹಿಂದೂಸ್ತಾನಿ ಎಂದು ಹೇಳಿಕೊಳ್ಳಲು ನನಗೆ ಹೆಮ್ಮೆ ಎನಿಸುತ್ತದೆ” ಎಂದು ಹೇಳುವ ಮೂಲಕ ಇದೀಗ ಮತ್ತೊಮ್ಮೆ ಸುದ್ದಿಯಾಗಿದ್ದಾರೆ!!

ಯೋಗಿ ಆದಿತ್ಯನಾಥ ಸರ್ಕಾರದಲ್ಲಿ ಮುಸ್ಲಿಂ ಸಮುದಾಯದಿಂದ ಏಕೈಕ ಸಚಿವರಾಗಿರುವ ಮೊಹ್ಸಿನ್ ರಾಜಾ, ಅಂಬೇಡ್ಕರ್ ಜಯಂತ್ಯುತ್ಸವ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿ ಮಾತನಾಡಿ, ಹಿಂದೂಸ್ತಾನದಲ್ಲಿ ಜೀವನ ನಡೆಸುವ ಪ್ರತಿಯೊಬ್ಬ ವ್ಯಕ್ತಿಯೂ ಹಿಂದೂಗಳಾಗಿತ್ತಾರೆ. ನಾನು ವಿದೇಶಗಳಿಗೆ ಹೋದಾಗ ಕೆಲವು ಎಲ್ಲಿಂದ ಬಂದಿದ್ದೀರಿ ಎಂದು ಪ್ರಶ್ನಿಸಿದರೇ ನಾವು ಹೆಮ್ಮೆಯಿಂದ ಹೇಳುತ್ತೇನೆ “125 ಕೋಟಿ ಹಿಂದೂಸ್ತಾನಿಗಳು ವಾಸಿಸುವ ನಾಡಿನಿಂದ ಬಂದಿದ್ದೇನೆ” ಎಂದು ಹೆಮ್ಮೆಯಿಂದ ಹೇಳಿಕೊಂಡಿದ್ದಾರೆ.

ಈಗಾಗಲೇ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಉತ್ತರ ಪ್ರದೇಶದಲ್ಲಿ ಬೆಳಕನ್ನು ತರಲು ಯತ್ನಿಸುತ್ತಿದ್ದು, ವಿಪಕ್ಷಗಳು ತಮ್ಮ ಆಡಳಿತಾವಧಿಯಲ್ಲಿ ರಾಜ್ಯವನ್ನು ಕತ್ತಲಲ್ಲಿ ನೂಕಿವೆ. ಯಾರಿಗೆ ಬೆಳಕು ಅಥವಾ ಜ್ಞಾನೋದಯದ ಅಗ್ಯವಿದೆಯೋ ಅವರೆಲ್ಲ ಕೇಸರಿಯನ್ನು ಅಪ್ಪಿಕೊಳ್ಳಿ ಎಂದು ಕ್ಯಾಬಿನೆಟ್ ಸಚಿವ ಮೊಹ್ಸಿನ್ ರಾಜಾ ಹೇಳಿ ಸುದ್ದಿಯಾಗಿದ್ದರು!! ಅಷ್ಟೇ ಅಲ್ಲದೇ, ಒಮ್ಮೆ ಕೇಸರಿ ಬಣ್ಣವನ್ನು ಅಪ್ಪಿಕೊಂಡು ನೋಡಿ, ಜ್ಞಾನೋದಯವಾಗಿಯೇ ಆಗುತ್ತದೆ. ಏಕೆಂದರೆ ಕೇಸರಿ ಎಂಬುದು ಶಕ್ತಿಯ ಸಂಕೇತ. ಅದು ಬದುಕಿಗೆ ಶಕ್ತಿಯನ್ನು ನೀಡುತ್ತದೆ ಎಂದಿದ್ದರು!!

ಅಷ್ಟೇ ಅಲ್ಲದೇ, ಕೆಲ ದಿನಗಳ ಹಿಂದಷ್ಟೇ ಉತ್ತರ ಪ್ರದೇಶ ಮುಖ್ಯಮಂತ್ರಿ ಕಚೇರಿಗಳಿಗೆ ಕೇಸರಿ ಬಣ್ಣವನ್ನು ಹಚ್ಚುವ ಮೂಲಕ ಸುದ್ದಿಯಾಗಿದ್ದ ಅವರು ತದನಂತರದಲ್ಲಿ ಹಸಿರು ಹಾಗೂ ಬಿಳಿ ಬಣ್ಣದಲ್ಲಿದ್ದ ಹಜ್ ಕಚೇರಿಯ ಮುಂಭಾಗದ ಗೋಡೆಗಳಿಗೆ ಕೇಸರಿ ಬಣ್ಣವನ್ನು ಹಚ್ಚಲಾಗಿದ್ದು, ಸರ್ಕಾರದ ಈ ನಡೆಗೆ ವಿರೋಧ ಪಕ್ಷಗಳು ಹಾಗೂ ವಿವಿಧ ರಾಜಕೀಯ ಪಕ್ಷಗಳು, ದಾರೂಲ್ ಉಲುಮ್ ವಿರೋಧ ವ್ಯಕ್ತಪಡಿಸಿದ್ದವು.

ಹಾಗಾಗಿ ಈ ಹಜ್ ಕಚೇರಿಗೆ ಕೇಸರಿ ಬಣ್ಣ ನೀಡಿರುವ ಹಿನ್ನಲೆಯಲ್ಲಿ ಪ್ರತಿಕ್ರಿಯೆ ನೀಡಿರುವ ಉತ್ತರಪ್ರದೇಶ ಸಚಿವ ಮೊಹ್ಸಿನ್ ರಾಜಾ ಅವರು, ಇದರಲ್ಲಿ ವಿವಾದ ಹುಟ್ಟುಹಾಕುವ ಅಗತ್ಯವಿಲ್ಲ. ಕೇಸರಿ ಶಕ್ತಿಯುತವಾಗಿದ್ದು, ಪ್ರಕಾಶಮಾನವಾದ ಬಣ್ಣವಾಗಿದೆ. ಕಟ್ಟಡಕ್ಕೆ ಕೇಸರಿ ಬಣ್ಣ ನೀಡುವುದರಿಂದ ಚೆನ್ನಾಗಿ ಕಾಣುತ್ತದೆ. ನಮ್ಮ ವಿರುದ್ಧ ದನಿ ಎತ್ತಲು ವಿರೋಧ ಪಕ್ಷಗಳಿಗೆ ಬೇರಾವುದೇ ವಿಚಾರಗಳು ಸಿಗಲಿಲ್ಲ. ಹೀಗಾಗಿ ವಿವಾದವನ್ನು ಸೃಷ್ಟಿಸುತ್ತಿದೆ ಎಂದು ಹೇಳಿ ಯೋಗಿ ಆದಿತ್ಯನಾಥರ ದಿಟ್ಟ ಹೆಜ್ಜೆಯನ್ನು ಸಮರ್ಥಿಸಿಕೊಂಡಿದ್ದಲ್ಲದೇ, ಯೋಗಿ ಆದಿತ್ಯನಾಥರ ಈ ಕ್ರಮವನ್ನು ಮೆಚ್ಚಿಕೊಂಡಿದ್ದರು!!

ಉತ್ತರ ಪ್ರದೇಶದಲ್ಲಿ ಯೋಗಿ ಆದಿತ್ಯನಾಥರು ಅಧಿಕಾರ ಸ್ವೀಕರಿಸಿದ ನಂತರ ತಾನು ಮುಸ್ಲಿಂ ವಿರೋಧಿ ಮುಖ್ಯಮಂತ್ರಿಯಲ್ಲ ಎಂದು ಯೋಗಿ ಪದೇ ಪದೇ ಸಾಬೀತು ಪಡಿಸುತ್ತಲೇ ಇದ್ದು, ಅದರ ಫಲವಾಗಿ ಇದೀಗ ಉತ್ತರ ಪ್ರದೇಶದಲ್ಲಿ ಜನರ ಮನಸ್ಥಿತಿ ಬದಲಾಗುತ್ತಿದೆ. ಅಷ್ಟೇ ಅಲ್ಲದೇ, ಹಿಂದೂ ಮುಸ್ಲಿಂರ ಮಧ್ಯೆ ಭಾವೈಕತ್ಯೆ ಹೆಚ್ಚುತ್ತಿದೆ ಎಂಬುದನ್ನು ಈ ಮೂಲಕ ಮೊಹಿಸೀನ್ ರಾಜಾ ಮಾತುಗಳಲ್ಲಿ ವ್ಯಕ್ತ ಪಡಿಸಿದ್ದಂತೂ ಅಕ್ಷರಶಃ ನಿಜ.

ಆದರೆ ಇದೀಗ ನಾನು ಹಿಂದೂ ಎಂದು ಹೇಳಿಕೊಳ್ಳಲು ಹೆಮ್ಮೆಯಿದೆ ಎಂದು ಹೇಳಿರುವ ಮೊಹ್ಸಿನ್ ರಾಜಾ ಅವರ ಹೇಳಿಕೆಯನ್ನು ಕೇಳಿಯಾದರು ಕೆಲ ಬುದ್ದಿಜೀವಿಗಳು ಇನ್ನಾದರೂ ಎಚ್ಚೆತ್ತುಕೊಳ್ಳುವುದು ಅತೀ ಸೂಕ್ತವೆನಿಸುತ್ತದೆ!! ಯಾಕೆಂದರೆ ತಾನೊಬ್ಬ ಹಿಂದೂವೇ ಅಲ್ಲ, ಹಿಂದೂ ಧರ್ಮ ಅನ್ನೋದೇ ಇಲ್ಲ, ಭಗವದ್ಗೀತೆಯನ್ನು ಸುಟ್ಟು ಬಿಡುತ್ತಿದ್ದೆ ಎಂದೆಲ್ಲ ಬೊಬ್ಬಿರುವ ಬುದ್ದಿಜೀವಿಗಳು ಹಿಂದೂಸ್ತಾನದ ಬಗ್ಗೆ ಹಿಂದೂ ಧರ್ಮದ ಬಗ್ಗೆ ಅರ್ಥ ಮಾಡಿಕೊಳ್ಳಬೇಕಾದದ್ದು ಬಹಳಷ್ಟಿದೆ ಎಂದನಿಸುತ್ತದೆ!!

ಮೂಲ: https://tulunadunews.com/tnn12041

– ಅಲೋಖಾ

Tags

Related Articles

Close