ಪ್ರಚಲಿತ

ಉಗ್ರರ ಛಳಿ ಬಿಡಿಸಲು ಕಾಶ್ಮೀರಕ್ಕೆ ಕಾಲಿಟ್ಟ “ಸಿಘಂ” ಪೋಲಿಸ್ ಅಧಿಕಾರಿ!! ವೀರಪ್ಪನ್ ನನ್ನು ಯಮಪುರಿಗಟ್ಟಿದ್ದ ಕೆ. ವಿಜಯ್ ಕುಮಾರ್ ಅವರನ್ನು ರಾಜ್ಯಪಾಲರ ಸಲಹೆಗಾರರಾಗಿ ನೇಮಕ ಮಾಡಿದ ಮೋದಿ ಸರಕಾರ!!

ಕಾಶ್ಮೀರದಲ್ಲಿ ಉಗ್ರರನ್ನು ಚೆಂಡಾಡಲು ಮೋದಿ ಸರಕಾರ ಸರ್ವ ರೀತಿಯಿಂದಲೂ ಸಜ್ಜಾಗಿದೆ. ಎರಡು ದಿನಗಳ ಹಿಂದೆ ಪಿಡಿಪಿ ಜೊತೆ ಮೈತ್ರಿ ಮುರಿದುಕೊಂಡ ಭಾಜಪಾ ದ ಮುಂದಿನ ನಡೆಯ ಬಗ್ಗೆ ಅತ್ತ ಘಟಾನುಘಟಿಗಳು ತಲೆ ಕೆರೆದುಕೊಳ್ಳುತ್ತಿದ್ದರೆ, ಇತ್ತ ಮೋದಿ ಸರಕಾರ ರಾಜ್ಯದಲ್ಲಿ ಹಲವಾರು ಉನ್ನತ ಮಟ್ಟದ ನೇಮಕಾತಿಗಳನ್ನು ಮಾಡಿ ಉಗ್ರರಿಗೆ ಒಂದರ ಮೇಲೊಂದರಂತೆ ಆಘಾತ ನೀಡುತ್ತಿದೆ.

ಇದರಲ್ಲಿ ಅತಿ ಪ್ರಮುಖವಾಗಿ ಆದಂತಹ ನೇಮಕಾತಿ ಐ.ಪಿ.ಎಸ್ ಅಧಿಕಾರಿ ಕೆ. ವಿಜಯ್ ಕುಮಾರ್ ಅವರದ್ದು. ಸಿಘಂ ವ್ಯಕ್ತಿತ್ವದ ಐ.ಪಿ.ಎಸ್ ಅಧಿಕಾರಿಯ ಹೆಸರು ಕೇಳಿದರೇನೆ ಅಪರಾಧಿಗಳ ಬೆನ್ನು ಹುರಿಯಲ್ಲಿ ನಡುಕ ಉಂಟಾಗುತ್ತದೆ. ಹಾಗಾದರೆ ಯಾರೀತ ವಿಜಯ್ ಕುಮಾರ್?

ಕೆ ವಿಜಯ್ ಕುಮಾರ್ ಅವರು 1975 ಬ್ಯಾಚ್ ಐಪಿಎಸ್ ಅಧಿಕಾರಿ. ಅವರು ಕಾಡಿನ ಯುದ್ಧ, ಭದ್ರತೆಯ ಸೂಕ್ಷ್ಮತೆ ಮತ್ತು ಕೌಂಟರ್-ಬಂಡಾಯದಲ್ಲಿ ವ್ಯಾಪಕವಾದ ಅನುಭವವನ್ನು ಹೊಂದಿದ್ದಾರೆ. ರಾಜೀವ್ ಗಾಂಧಿಯವರ ಎಸ್.ಪಿ.ಜಿ ಆಗಿ ಸೇವೆ ಸಲ್ಲಿಸಿದ ಅನುಭವ ಹೊದಿದ್ದಾರೆ ವಿಜಯ್ ಕುಮಾರ್. ವಿಶೇಷವೆಂದರೆ ರಾಜೀವ್ ಗಾಂಧಿ ಯ ಹತ್ಯೆಗೆ ಒಂದು ವರ್ಷಗಳ ಮುನ್ನ ಅವರನ್ನು ರಾಜೀವ್ ಭದ್ರತಾ ಪಡೆಯಿಂದ ತೆಗೆದು ಜಯಲಲಿತಾ ಭದ್ರತಾ ಪಡೆಗೆ ಸೇರಿಸಲಾಗಿತ್ತು!

1998 ರಲ್ಲಿ ಅವರು ರಾಜ್ಯದಲ್ಲಿ ಬಿಎಸ್ಎಫ್ ನ ಕಾರ್ಯಾಚರಣೆಗಳ ಐಜಿ ಆಗಿ ನೇಮಕಗೊಂಡಿದ್ದ ಕಾರಣ ಜಮ್ಮು ಕಾಶ್ಮೀರ ಅವರಿಗೆ ಪರಿಚಿತವೆ ಆಗಿದೆ. ಇನ್ನು ಮುಂದೆ ಜಮ್ಮು-ಕಾಶ್ಮೀರದ ರಾಜ್ಯಪಾಲರು ತೆಗೆದುಕೊಳ್ಳುವ ಆಕ್ರಾಮಕ ನಿರ್ಧಾರಗಳ ಹಿಂದೆ ವಿಜಯ್ ಅವರ ಸಲಹೆ ಇರುತ್ತದೆ ಎನ್ನುವುದನ್ನು ಬಿಡಿಸಿ ಹೇಳಬೇಕಾಗಿಲ್ಲ.

2004 ರಲ್ಲಿ ದಂತಚೋರ- ಕಾಡುಗಳ್ಳ ವೀರಪ್ಪನ್ ನನ್ನು ಬೇಟೆಯಾಡಲು ವಿಶೇಷ ಕಾರ್ಯಪಡೆ ‘ಆಪರೇಷನ್ ಕೊಕೂನ್’ಗೆ ವಿಜಯ್ ಅವರನ್ನು ಮುಖ್ಯಸ್ಥರಾಗಿ ನೇಮಿಸಲಾಗಿತ್ತು. ಈ ಕಾರ್ಯಾಚರಣೆಯು ಭಾರತದ ಇತಿಹಾಸದಲ್ಲಿ ಅತ್ಯಂತ ದುಬಾರಿಯಾಗಿದ್ದು, 1 ಶತಕೋಟಿಗಿಂತ ಹೆಚ್ಚು ವೆಚ್ಚವನ್ನು ಹೊಂದಿತ್ತು ಎಂದು ಹೇಳಲಾಗುತ್ತದೆ. ಕೆ ವಿಜಯ್ ಕುಮಾರ್ ನೇಮಕಗೊಂಡ ಬಳಿಕವೆ ವೀರಪ್ಪನ್ 18 ಅಕ್ಟೋಬರ್ 2004 ರಂದು ಕೊಲ್ಲಲ್ಪಟ್ಟನು.

ಹೈದರಾಬಾದಿನ ರಾಷ್ಟ್ರೀಯ ಪೊಲೀಸ್ ಅಕಾಡೆಮಿಯ ಮುಖ್ಯಸ್ಥರಾಗಿದ್ದ ವಿಜಯ್ ಕುಮಾರ್, 2010 ರಲ್ಲಿ ಅವರು ಸಿ.ಆರ್.ಪಿ.ಎಫ್ ನಿರ್ದೇಶಕ ಜನರಲ್ ಆಗಿ ನೇಮಕಗೊಂಡರು. ಅಂದಿನಿಂದ ಮಾವೋ-ನಕ್ಸಲ್ ವಾದಿಗಳ ಹೆಡೆ ತುಳಿಯುತ್ತಲೆ ಬಂದಿದ್ದಾರೆ ವಿಜಯ್ ಕುಮಾರ್. ನಕ್ಸಲ್ ಪ್ರದೇಶಗಳಲ್ಲಿ ರಸ್ತೆ ಸಂಪರ್ಕ ಮಾಡಿಸುವಲ್ಲಿ ಮತ್ತು ಯುದ್ದ ತಂತ್ರಗಳನ್ನು ಹೆಣೆಯುವಲ್ಲಿ ಇವರ ಪಾತ್ರ ಬಹಳ ದೊಡ್ಡದಿದೆ. ವಿಜಯ್ ಕುಮಾರ್ ನೇತೃತ್ವದಲ್ಲಿ ಇಂದು ಸಿ.ಆರ್.ಪಿ.ಎಫ್ ಯೋಧರು ನಕ್ಸಲರನ್ನು ಮಟ್ಟ ಹಾಕುವಲ್ಲಿ ಸಫಲರಾಗಿದ್ದಾರೆ.

ಕೆ ವಿಜಯ್ ಕುಮಾರ್ ಅವರು ಸ್ವತಃ ಒಬ್ಬ ಅಪ್ರತಿಮ ಶಾರ್ಪ್ ಶೂಟರ್ ಮತ್ತು ಫಿಟ್ನೆಸ್ ಉತ್ಸಾಹಿಯಾಗಿದ್ದಾರೆ. ಅಪರಾಧಿಗಳನ್ನು ಬೆಂಡೆತ್ತುವುದು ಮತ್ತು ಓದುವುದು ಅವರ ಅತಿ ನೆಚ್ಚಿನ ಹವ್ಯಾಸ.

2001-2003ರಲ್ಲಿ ಚೆನ್ನೈ ಪೊಲೀಸ್ ಆಯುಕ್ತರಾಗಿ ಎರಡೇ ವರ್ಷಗಳಲ್ಲಿ ಚೆನೈ ನ ಅನೇಕ ಮಾಫಿಯಾ ಡಾನ್ ಗಳ ಎನ್ಕೌಂಟರ್ ನಡೆಸಿದ್ದಾರೆ. ಇವರ ನಡೆಯನ್ನು ಮಾನವಾಧಿಕಾರ ಹಕ್ಕುಗಳು ಟೀಕಿಸಿದಾಗ “ಪೊಲೀಸರು ಬಂದೂಕುಗಳನ್ನು ಆಭರಣಗಳಂತೆ ತೊಡಲು ಇಟ್ಟುಕೊಂಡಿರುವುದಲ್ಲ” ಎಂದು ಖಡಕ್ಕಾಗಿ ಉತ್ತರಿಸಿದ್ದರು ಸಿಘಂ ವಿಜಯ್ ಕುಮಾರ್!

2012 ರಲ್ಲಿ ಗೃಹ ವ್ಯವಹಾರ ಸಚಿವಾಲಯದಲ್ಲಿ ಹಿರಿಯ ಭದ್ರತಾ ಸಲಹೆಗಾರರಾಗಿ ನೇಮಕಗೊಂಡಿದ್ದ ವಿಜಯ್ ಜೂನ್ 12ರಂದು ಕರ್ತವ್ಯ ಮುಕ್ತರಾಗಿದ್ದಾರೆ. ‘ವೀರಪ್ಪನ್, ಚೇಸಿಂಗ್ ದಿ ಬ್ರಿಗಂಡ್’ ಎನ್ನುವ ಪುಸ್ತಕವನ್ನೂ ಬರೆದಿದ್ದಾರೆ ವಿಜಯ್ ಕುಮಾರ್.

ನಕ್ಸಲ್ ಮತ್ತು ದರೋಡೆಕೋರರನ್ನು ಬೆಂಡಿತ್ತಿರುವ ಗೋ-ಗೆಟ್ಟರ್ ವ್ಯಕ್ತಿತ್ವದ ದಕ್ಷ ಹಾಗೂ ಪ್ರಾಮಾಣಿಕ ಅಧಿಕಾರಿಯ ನೇಮಕ ಜಮ್ಮ-ಕಾಶ್ಮೀರದಲ್ಲಿ ಹೊಸ ಆಶಾ ಕಿರಣವನ್ನು ತಂದಿದೆ. ಇನ್ನೇನಿದ್ದರೂ ಕಾಶ್ಮೀರದಲ್ಲಿ ಪ್ರತಿದನವೂ ಹೋಳಿ, ಪ್ರತಿ ದಿನವೂ ದೀಪಾವಳಿ ಅಷ್ಟೆ. ದೇಶದ ಭದ್ರತೆಯ ವಿಷಯದಲ್ಲಿ ಮೋದಿ ಸರಕಾರ ಯಾವುದೇ ಕಾರಣಕ್ಕೂ ರಾಜಿಯಾಗುವುದಿಲ್ಲ ಎಂದು ಮತ್ತೆ ಸಾಬೀತಾಗಿದೆ.

-ಶಾರ್ವರಿ

Tags

Related Articles

Close