ಪ್ರಚಲಿತ

ಈ ದೇವಾಲಯದಲ್ಲಿ ಮೂರು ಯುಗಗಳಿಂದಲೂ ಒಮ್ಮೆಯೂ ಆರದೆ ಇಂದಿಗೂ ಉರಿಯುತ್ತಿದೆ ಬೆಂಕಿ !! ಇಲ್ಲಿ ನಡೆದಿತ್ತು ಶಿವ ಪಾರ್ವತಿ ವಿವಾಹ!!

ಮಂಗಳಕರನೋ ಅವನೇ ಶಿವ.   ಹಿಂದೂ ಧರ್ಮದ ಪ್ರಕಾರ ತ್ರಿಮೂರ್ತಿಗಳಲ್ಲಿ ಒಬ್ಬನಾದ ಮಹೇಶ್ವರನೇ ಶಿವನೆಂದು ಭಾವಿಸುತ್ತಾರೆ. ಶಿವನಿಗೆ ಲಯಕಾರಕ ಎಂದೂ ಸಹ ಕರೆಯುತ್ತಾರೆ. ಅಂದರೆ ಸೃಷ್ಟಿ ಮಾಡುವುದು ಬ್ರಹ್ಮನ ಕೆಲಸವಾದರೆ, ಆ ಸೃಷ್ಟಿಯಾದ ಆಕರಗಳಿಗೆ (ಜೀವಿಗಳಿಗೆ) ಸ್ಥಿತಿ ಕೊಡುವುದು ವಿಷ್ಣುವಿನ ಕೆಲಸ. ಈ ರೀತಿ ಸೃಷ್ಟಿ, ಸ್ಥಿತಿ ಪಡೆದ ಆಕರಗಳಿಗೆ ಲಯ (ಕೊನೆ) ಕಾಣಿಸುವವನು ಶಿವ. ಆದ್ದರಿಂದ ಶಿವನಿಗೆ ಲಯಕಾರ ಎಂದೂ ಸಹ ಕರೆಯುತ್ತಾರೆ. ಸಂಹಾರಕ ಅಥವಾ ಲಯಕಾರಕ ದೇವತೆ!!  ಈ ರುದ್ರನಿಗೆ ಶಿವ, ಈಶ್ವರ, ಶಂಭು, ಶಂಕರ, ಪಶುಪತಿ, ಮುಕ್ಕಣ್ಣ, ಶಶಿಧರ, ಚಂದ್ರಶೇಖರ, ನೀಲಕಂಠ, ನಂಜುಂಡ, ಮಹದೇಶ್ವರ, ಮಹೇಶ್ವರ, ನಾಗರಾಜ, ನಾಗೇಶ, ಕೈಲಾಸ ಪತಿ ಎನ್ನುವ ವಿಶೇಷಣವನ್ನು ಬಳಸಲಾಗಿದೆ.

ಶಿವ ಶಬ್ದಕ್ಕೆ ಸಂಸ್ಕೃತದಲ್ಲಿ ‘ಮಂಗಳ ಎನ್ನುವ ಅರ್ಥವನ್ನು ಹೇಳುವರಾದರೂ, ಈ ಶಬ್ದಕ್ಕೆ ಸಂಸ್ಕೃತದಲ್ಲಿ ಸರಿಯಾದ ವ್ಯುತ್ಪತ್ತಿಯು ಇನ್ನೂ ನಿಶ್ಚಯವಾಗಿಲ್ಲ. ಶಿವ ಶಬ್ದವು ಮೂಲದಲ್ಲಿ ಸಂಸ್ಕೃತ ಭಾಷೆಯ ಶಬ್ದವೇ ಅಲ್ಲ. ಆದುದರಿಂದಲೇ ಈ ಶಬ್ದಕ್ಕೆ ನಿರುಕ್ತ ದೊರೆಯು ವುದಿಲ್ಲ ಎಂದು ದ್ರಾವಿಡ ಭಾಷಾತಜ್ಞರು ಹೇಳುತ್ತಾರೆ. ಶಿವ ಎಂದರೆ ಮಾಯಾ, ನಿರಹಂಕಾರ, ಬಂಧರಹಿತ ಎನ್ನಲಾಗಿದೆ!!  ಈ ಮಾಯಾಕಾರ ಶಿವನ ವಿವಾಹ ಹೇಗೆ ನಡೆಯಿತು ಎಂದು ಯಾರಿಗಾಗದರೂ ತಿಳಿದೆಯಾ?!

ಶಿವನಿಗಾಗಿ ತನ್ನ ಪ್ರಾಣ ತ್ಯಾಗ ಮಾಡಿದ ಪಾರ್ವತಿ!!

ಪಾರ್ವತಿ ದೇವಿಯು ಮೂಲತಃ ಹಿಂದಿನ ಜನ್ಮದಲ್ಲಿ ಶಿವನ ಮಡದಿ ಸತಿಯಾಗಿದ್ದಳು ಹಾಗೂ ಶಿವನಿಗೆ ಅವಮಾನವಾದ ಸಂದರ್ಭವೊಂದರಲ್ಲಿ ಅಗ್ನಿಗೆ ಹಾರಿ ತನ್ನ ಪ್ರಾಣ ತ್ಯಾಗ ಮಾಡಿದ್ದಳು. ನಂತರ ಮತ್ತೆ ಜನ್ಮ ಪಡೆದು ಹಿಮಾವತ್ ರಾಜನ ಮಗಳಾಗಿದ್ದಳು ಹಾಗೂ ಶಿವನನ್ನು ವರಿಸಲು ಬಯಸಿದ್ದಳು. ಅದಕ್ಕಾಗಿ ತನ್ನ ಸೌಂದರ್ಯದಿಂದ ಶಿವನನ್ನು ಎಷ್ಟೊ ಸಲ ಆಕರ್ಷಿಸಲು ಪ್ರಯತ್ನಿಸಿದಳಾರೂ ಸಫಲವಾಗಿರಲಿಲ್ಲ. ಉತ್ತರಾಖಂಡದ ಪ್ರಮುಖ ಆಕರ್ಷಣೆಗಳು ಕೊನೆಗೆ ಸತ್ಯವನ್ನರಿತ ಪಾರ್ವತಿ ದೇವಿ ಗೌರಿ ಕುಂಡ ಎಂಬಲ್ಲಿ ಅತಿ ಕಠಿಣವಾದ ತಪಸ್ಸು ಮಾಡಿ ಶಿವನ ಮನಗೆಲ್ಲುತ್ತಾಳೆ!!

Image result for shiva parvathi

ಪಾರ್ವತಿ ದೇವಿಯ ಪ್ರೀತಿಗೆ ಮನಸೋತ ಶಿವ!!

ಇವಳ ಭಕ್ತಿಗೆ, ಪ್ರೀತಿಗೆ ಮನಸೋತ ಶಿವನು ಪಾರ್ವತಿಯಲ್ಲಿ ಮೊದಲ ಬಾರಿಗೆ ತನ್ನ ಪ್ರೇಮ ನಿವೇದನೆಯನ್ನು ಮಾಡಿದ. ಅವನು ತನ್ನ ಪ್ರೇಮ ನಿವೇದನೆ ಮಾಡಿದ ಸ್ಥಳವೆ ಇಂದು ಗುಪ್ತಕಾಶಿ ಎಂಬ ಹೆಸರಿನಿಂದ ಗುರುತಿಸಲ್ಪಡುತ್ತದೆ ಹಾಗೂ ಇದು ಕೇದಾರನಾಥಕ್ಕೆ ಹೋಗುವ ಮಾರ್ಗದಲ್ಲಿ ಮಂದಾಕಿನಿ ನದಿಯ ತಟದ ಮೇಲೆ ಸ್ಥಿತವಿದೆ. ಮಂದಾಕಿನಿ ನದಿ ಹರಿದಿರುವ ಗುಪ್ತಕಾಶಿ, ಮುಂದೆ ಶಿವ ಹಾಗೂ ಪಾರ್ವತಿಯರ ಮದುವೆಯನ್ನು ಹಿಮಾವತ್ ರಾಜನ ರಾಜಧಾನಿಯಾಗಿದ್ದ ತ್ರಿಯುಗಿನಾರಾಯಣದಲ್ಲಿ ಅದ್ದೂರಿಯಾಗಿ ನೆರವೇರಿಸಲಾಯಿತು. ಈ ಮದುವೆಯ ಕಾರ್ಯದಲ್ಲಿ ಸ್ವತಃ ವಿಷ್ಣು ಪಾರ್ವತಿಯ ಸಹೋದರನಾಗಿ ಕಾರ್ಯನಿರ್ವಹಿಸಿದರೆ, ಬ್ರಹ್ಮನು ಮದುವೆ ಪುರೋಹಿತನಾಗಿ ಮದುವೆ ಮಾಡಿಸಿದನೆಂದು ಹೇಳಲಾಗುತ್ತದೆ. ಈ ಕಾರ್ಯದಲ್ಲಿ ಎಲ್ಲ ಸಾಧು-ಸಂತರು, ದೇವ-ದೇವತೆಗಳು ಭಾಗವಹಿಸಿದ್ದರೆನ್ನಲಾಗಿದೆ. ಅವರುಗಳು ಸ್ನಾನ ಮಾಡಿದ ಸ್ಥಳವೆ ಇಂದು ಬ್ರಹ್ಮಕುಂಡ, ರುದ್ರಕುಂಡ ಹಾಗೂ ವಿಷ್ಣು ಕುಂಡಗಳಾಗಿವೆ. ಕರಾರುವಕ್ಕಾಗಿ ಮದುವೆ ನಡೆದ ಸ್ಥಳದಲ್ಲಿಂದು ಒಂದು ಶಿಲೆಯಿದ್ದು ಅದನ್ನು ಬ್ರಹ್ಮಶಿಲೆ ಎಂದು ಕರೆಯಲಾಗುತ್ತದೆ.

Related image

ತ್ರಿಯುಗಿಯಲ್ಲಿ ಶವ ಪಾರ್ವತಿ ಮದುವೆ ಸಂಪನ್ನಗೊಂಡ ಸ್ಥಳ!!

ತ್ರಿಯುಗಿನಾರಾಯಣ ದೇವಾಲಯವು ಹಿಂದೆ ಶಿವ ಹಾಗೂ ಪಾರ್ವತಿಯರ ಮದುವೆ ಕಾರ್ಯ ಸಂಪನ್ನಗೊಂಡ ಸ್ಥಳವಾಗಿದೆಯೆನ್ನಲಾಗುತ್ತದೆ.

Image result for triyugi narayan temple

ಮೂರು ಯುಗದಲ್ಲಿ ಇನ್ನೂ ಆರಿಲ್ಲ ಬೆಂಕಿ!!

ತ್ರಿಯುಗಿನಾರಾಯಣ ದೇವಾಲಯದ ವಿಶೇಷತೆ ಎಂದರೆ ಇಲ್ಲಿ ಶಾಶ್ವತವಾಗಿ ಉರಿಯುತ್ತಿರುವ ಬೆಂಕಿ. ಈ ಅಗ್ನಿಯ ಸಾಕ್ಷಿಯಲ್ಲೆ ಶಿವ ಹಾಗೂ ಪಾರ್ವತಿಯರು ಮದುವೆಯಾಗಿದ್ದು ಮೂರು ಯುಗಗಳಿಂದಲೂ ಒಮ್ಮೆಯೂ ಆರದೆ ಇದು ಇಂದಿಗೂ ಉರಿಯುತ್ತಿರುವುದರಿಂದ ಇದಕ್ಕೆ ತ್ರಿಯುಗಿ ಎಂದೂ ದೇವಾಲಯದಲ್ಲಿ ನಾರಾಯಣ ಪ್ರಷ್ಠಾಪಿತವಾಗಿರುವ ಕಾರಣ ನಾರಾಯಣ ಎಂದೂ ಹೆಸರುಬಂದಿದೆ ಎನ್ನಲಾಗುತ್ತದೆ. ಹೀಗಾಗಿ ಇದನ್ನು ತ್ರಿಯುಗಿನಾರಾಯಣ ದೇವಾಲಯ ಎನ್ನಲಾಗುತ್ತದೆ.

Related image

ಬೂಧಿಯೇ ಇಲ್ಲಿಯ ಪ್ರಸಾದ!!

ಈ ದೇವಾಲಯಕ್ಕೆ ಭೇಟಿ ನೀಡುವವರು ಅಖಂಡ ಧುನಿ ಅಂದರೆ ಯಾವಾಗಲೂ ಉರಿಯುತ್ತಿರುವ ಅಗ್ನಿಗೆ ಒಣ ಕಟ್ಟಿಗೆಗಳನ್ನು ಅರ್ಪಿಸುತ್ತಾರೆ ಹಾಗೂ ಅದರ ಬೂಧಿಯನ್ನು ಪ್ರಸಾದವಾಗಿ ಸ್ವೀಕರಿಸುತ್ತಾರೆ. ಅಲ್ಲದೆ ಇಲ್ಲಿಂದ ಐದು ಕಿ.ಮೀ ದೂರದಲ್ಲಿರುವ ಪಾರ್ವತಿ ತಪಗೈದಿದ್ದ ಗೌರಿಕುಂಡಕ್ಕೂ ಭೇಟಿ ನೀಡುತ್ತಾರೆ. ಹಿಮದಿಂದ ಆವೃತವಾಗಿರುವ ಗೌರಿಕುಂಡ, ಇಲ್ಲಿನ ಮೂರು ಕುಂಡಗಳಿಗೆ ದೇವಾಲಯದಲ್ಲಿರುವ ನೀರಿನ ಮೂಲವೊಂದು ಸದಾ ನೀರುಣಿಸುತ್ತದೆ ಹಾಗೂ ಇದನ್ನು ಸರಸ್ವತಿ ಕುಂಡ ಎಂದು ಕರೆಯಲಾಗಿದೆ.

Related image

ಈ ಸರಸ್ವತಿಕುಂಡವು ವಿಷ್ಣುವಿನ ನಾಭಿಯಿಂದ ಜನ್ಮಿಸಿದ್ದೆನ್ನಲಾಗಿದ್ದು ಇಲ್ಲಿಗೆ ಭೇಟಿ ನೀಡುವ ದಂಪತಿಗಳಿಗೆ ಮಕ್ಕಳಿಲ್ಲದ ಸಂದರ್ಭದಲ್ಲಿ ಸಂತಾನ ಭಾಗ್ಯ ಲಭಿಸುತ್ತದೆ ಹಾಗೂ ಶಿವ-ಪಾರ್ವತಿಯರ ಮದುವೆ ನಡೆದ ಸ್ಥಳ ಇದಾಗಿದ್ದರಿಂದ ದಂಪತಿಗಳ ಜೀವನ ಸದಾ ಸುಖಮಯವಾಗಿರುತ್ತದೆ ಎಂದೂ ಸಹ ನಂಬಲಾಗುತ್ತದೆ. ತ್ರಿಯುಗಿನಾರಾಯಣ ದೇವಾಲಯವನ್ನು ಸೋನಪ್ರಯಾಗ್ ನಿಂದ ಚಾರಣ ಮಾಡುತ್ತ ಇಲ್ಲವೆ ರಸ್ತೆಯ ಮೂಲಕವಾಗಿ ತಲುಪಬಹುದಾಗಿದೆ. ತ್ರಿಯುಗಿನಾರಾಯಣ ಸೋನಪ್ರಯಾಗ್ ನಿಂದ ರಸ್ತೆಯ ಮೂಲಕ 12 ಕಿ.ಮೀ ದೂರವಿದೆ. ಇನ್ನೂ ಸೋನಪ್ರಯಾಗ್ ಅನ್ನು ದೆಹ್ರಾಡೂನ್ ಹಾಗೂ ರಿಶಿಕೇಶಗಳಿಂದ ರಸ್ತೆಯ ಮಾರ್ಗವಾಗಿ ತಲುಪಬಹುದು. ಸೋನಪ್ರಯಾಗ್ ನಿಂದ ದೆಹ್ರಾಡೂನ್ 251 ಕಿ.ಮೀ ದೂರವಿದ್ದರೆ, ರಿಶಿಕೇಶ್ ರೈಲು ನಿಲ್ದಾಣವು 212 ಕಿ.ಮೀ ದೂರವಿದೆ. ನಿಮಗೂ ಈ ತೀರ್ಥಕ್ಷೇತ್ರಕ್ಕೆ ಹೋಗುವ ಬಯಕೆಯಿದ್ದಲ್ಲಿ ಇಂದೆ ಯೋಜನೆ ಪ್ರಾರಂಭಿಸಿ, ಏಕೆಂದರೆ ಅಕ್ಟೋಬರ್ ನಿಂದ ಹಿಡಿದು ಮಾರ್ಚ್ ಮಧ್ಯದ ಸಮಯ ಇಲ್ಲಿಗೆ ಪ್ರಯಾಣಿಸಲು ಪ್ರಶಸ್ತ.

ಶಿವ-ಪಾರ್ವತಿಯರು ಮದುವೆಯಾದ ಪುಣ್ಯ ಸ್ಥಳ

ಒಟ್ಟಿನಲ್ಲಿ, ಶಿವ ಎಂದರೆ ಸರ್ವವ್ಯಾಪಕವಾದ ಶೂನ್ಯವೂ ಹೌದು, ಆದಿಯೋಗಿಯೂ ಹೌದು. ಸಮಸ್ತ ವಿಶ್ವವನ್ನು ಆತ್ಮಭಾವದಿಂದ ಯಾರು ಅನುಭವಿಸಬಲ್ಲನೋ ಅವನೇ ಯೋಗಿ. ಅರ್ಥಾತ್, ಯಾರು ಸರ್ವವ್ಯಾಪಕವಾದ ಶೂನ್ಯವೇ ತಾನಾಗಬಲ್ಲನೋ ಅವನೇ ಯೋಗಿ.

ಕೃಪೆ: nativeplanet.com

         wikipidia

Tags

Related Articles

Close