ಪ್ರಚಲಿತ

ಪುಲ್ವಾಮ ದಾಳಿಗೆ ಒಂದು ವರ್ಷ! ದೇಶಕ್ಕೆ ದೇಶವೇ ಕಣ್ಣೀರಿಟ್ಟ ಆ ಕರಾಳ ದಿನವನ್ನು ಮರೆಯಲಾದೀತೇ? ಅಗಲಿದ ವೀರ ಯೋಧರಿಗೆ ಶ್ರದ್ಧಾಂಜಲಿ!

ಫೆಬ್ರವರಿ ೧೪ ಇಡೀ ಭಾರತವನ್ನೇ ಬೆಚ್ಚಿಬೀಳಿಸಿದ ಕರಾಳದಿನ ಪಾಕಿಸ್ತಾನದ ಉಗ್ರರು ತಮ್ಮ ಅಟ್ಟಹಾಸ ಮೆರೆದ ದಿನ. ಹೌದು ಭಾರತೀಯರ ಕಣ್ಣಿಗೆ ಇನ್ನೂ ಕಟ್ಟಿದಂತಿರುವ ಹಾಗೂ ಎಂದಿಗೂ ಮರೆಯಾಲಾಗದ ದಿನ, ಅದೆಷ್ಟೋ ಸುಮಂಗಲೆಯರು ವಿದವೆಯಾರಾದದಿನ, ಅದೆಷ್ಟೋ ಮಕ್ಕಳು ತಂದೆಯರ ಅಗಲಿ ಅನಾಥರಾದದಿನ, ತಂದೆ-ತಾಯಿಯರ ಎದುರೆ ಮಕ್ಕಳು ಶವವಾದ ದಿನ, ಅದಕ್ಕೂ ಮಿಗಿಲಾಗಿ ಭಾರತಾಂಬೆಯ ಮಡಿಲ ರತ್ನಗಳು ಅವಳ ಮಡಿಲಲ್ಲೇ ಚಿರನಿದಿರೆಗೆ ಜಾರಿದ ದಿನ, ದೇಶಕ್ಕೇ ದೇಶವೇ ಕಣ್ಣೀರಿಟ್ಟ ದಿನ ಅದೇ ಪುಲ್ವಾಮ ದಾಳಿ. ಇಂದಿಗೆ ಪುಲ್ವಾಮದಾಳಿಯಾಗಿ ಒಂದು ವರ್ಷವಾಯಿತು. ಅಂದು ಫೆಬ್ರವರಿ ೧೪ ಜಮ್ಮು ಶ್ರೀನಗರ ರಾಷ್ಟ್ರೀಯ ಹೆದ್ದಾರಿಯಲ್ಲಿ, ಭದ್ರತಾ ಸಿಬ್ಬಂದಿಯನ್ನು ಸಾಗಿಸುವ ವಾಹನಕ್ಕೆ ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾ ಜಿಲ್ಲೆಯ ಲೆಥ್ಪೊರದಲ್ಲಿ ( ಅವಾಂತಿಪೋರಾ ಬಳಿ) ವಾಹನಕ್ಕೆ ಪಾಕ್ ಉಗ್ರರು ಆತ್ಮಹತ್ಯಾ ಬಾಂಬಾರ್‌ ಮೂಲಕ ದಾಳಿ ನಡೆಸಿದ್ದರು. ಆ ದಾಳಿಯಲ್ಲಿ ನಮ್ಮ ೪೦ ಮಂದಿ ವೀರ ಯೋಧರು ಹುತಾತ್ಮರಾದರು. ಪಾಕಿಸ್ತಾನ ಮೂಲದ ಇಸ್ಲಾಂ ಉಗ್ರಗಾಮಿ ಗುಂಪು ಜೈಷ್- ಎ – ಮೊಹಮದ್ ಈ ಹತ್ಯೆಯ ಮೂಲ ನರ ರಾಕ್ಷಸರು ಎನ್ನಲಾಗಿತ್ತು. ಅದಲ್ಲದೇ ಆತ್ಮಾಹುತಿ ಆಕ್ರಮಣಕಾರ ಆದಿಲ್ ಅಹ್ಮದ್ ಎನ್ನುವಾತ ವಿಡಿಯೋ ಬಿಡುಗಡೆ ಮಾಡಿ ತಾವೇ ದಾಳಿ ನಡೆಸಿದ್ದು ಎಂದು ಮೆರೆದಿದ್ದೂ ನಮಗೆಲ್ಲ ಗೊತ್ತೇ ಇದೆ.

ಅದೇ ನೋವಿನ ಬೇಗೆಯಲ್ಲಿದ್ದ ನಮ್ಮ ಇತರೆ ಯೋಧರು ತಮ್ಮ ಸ್ನೇಹಿತರ ಸಾವಿಗೆ ಪ್ರತಿಕಾರ ತೀರಿಸಿಕೊಳ್ಳಲು ಹೃದಯದಲಿ ನೋವಿನ ಜ್ವಾಲೆಯನ್ನು ಇಟ್ಟುಕೊಂಡು ಕಾಯುತ್ತಿದ್ದರು ೨೬/೨/೨೦೧೯ ರ ಮುಂಜಾನೆ ೩.೩೦ ರ ವೇಳೆ ಬಾಲಾಕೋಟ್ ಪ್ರದೇಶದಲ್ಲಿ ಟೆಂಟ್ ಹಾಕಿದ್ದ ಜೈಷ್ – ಎ- ಮೊಹಮ್ಮದ್ ಉಗ್ರರ ಶಿಬಿರದಮೇಲೆ ಭಾರತದ ವಾಯುಪಡೆಯ ಜೆಟ್‌ಗಳು ಸುನಾಮಿಯಂತೆ ಅಬ್ಬರಿಸಿ ಉಗ್ರರ ರುಂಡಾ ಚೆಂಡಾಡಿದ್ದು ನಮ್ಮ ಇತಿಹಾಸದ ಪುಟ ಸೇರುವಂತಹದು. ಬಾಲಾಕೋಟ್‌ನಲ್ಲಿ ತನ್ನ ಕ್ರೂರತೆಯನ್ನು ಮೆರೆದಿದ್ದ ಉಗ್ರರನ್ನು ಬೆಳೆಸಿದ್ದ ಪಾಕ್‌ನ ನೆಲವನ್ನೇ ನಮ್ಮ ಯೋಧರು ಅಲುಗಾಡಿಸಿ ಬಿಟ್ಟರು ಆ ದಿನ ನಿಜವಾಗಿಯೂ ಭಾರತೀಯರು ರಾವಣನ ಸಂಹಾರ ಮಾಡಿದಷ್ಟು ಸಂಭ್ರಮ ಪಟ್ಟಿದ್ದು ಮಾತ್ರ ಅಕ್ಷರಶಃ ಸತ್ಯ.! ಆದರೆ ದುರಾದೃಷ್ಟವಶಾತ್ ನಡೆದ ದಾಳಿಯಲ್ಲಿ ಕ್ರೂರ ಪಾಕ್ ೨ ಭಾರತೀಯ ಯುದ್ಧ ವಿಮಾನಗಳ ಮೇಲೆ ದಾಳಿ ನಡೆಸಿತ್ತು. ಮರುದಿವಸ ಫೆಬ್ರವರಿ ೨೭ ರಂದು ಒಬ್ಬ ಭಾರತೀಯ ಪೈಲಟ್‌ ಅಭಿನಂದನ್ ವರ್ತಮಾನ್ ರವನ್ನು ಬಂಧಿಸಿತ್ತು. ಅದರಲ್ಲೂ ಆ ದಾಳಿ ಪಾಕ್ ಜನ ರಹಿತ ಪ್ರದೇಶದಲ್ಲಿ ನಡೆದುದ್ದರಿಂದ ಜನರಿಗೆ ಯಾವುದೇ ರೀತಿಯ ಹಾನಿಯಾಗಿಲ್ಲ.

ಫೆಬ್ರವರಿ ೨೬ ರಂದು ಭಾರತೀಯ ವಾಯುಪಡೆ ಹನ್ನೆರಡು ಮಿರಾಜ್ ೨೦೦೦ ಜೆಟ್‌ಗಳು, ಗಡಿ ನಿಯಂತ್ರಣ ರೇಖೆಯನ್ನೂ ದಾಟಿ ಬಾಲಕೋಟ್ನಲ್ಲಿದ್ದ ಉಗ್ರಗಾಮಿಗಳ ಸಂಹಾರ ಮಾಡಲು ನುಗ್ಗಿತ್ತು. ಅದು ಜೈಶ್ – ಇ- ಮೊಹಮ್ಮದ್ ತರಬೇತಿ ಶಿಬಿರದ ಮೇಲೆ ನಡೆಸಿದ ದಾಳಿಯಲ್ಲಿ ಸುಮಾರು ೨೫೦ ಉಗ್ರರನ್ನು ೭೨ ಕನ್ಯಯರ ಬಳಿ ನಮ್ಮ ಸೇನೆ ಕಳುಹಿಸಿತು. ೨೫೦ ಮಂದಿ ಉಗ್ರರನ್ನು ಭಾರತ ಹೊಡೆದುರುಳಿಸಿದ್ದು ನಿಜವಾದರೂ ಕೆಲ ವಿದೇಶಿ ರಾಜತಾಂತ್ರಿಕರು ಅದನ್ನು ಒಪ್ಪಲು ತಯಾರಿರಲಿಲ್ಲ. ಅದರಲ್ಲೂ ನಮ್ಮಲ್ಲೇ ಇರುವ ಕೆಲ ರಾಜಕಾರಣಿಗಳು ಒಪ್ಪಲಿಲ್ಲ ಅನ್ನುವುದೇ ಬೇಸರದ ಸಂಗತಿ. ಅದು ಮಾತ್ರವಲ್ಲದೇ ಸೇನೆಯ ಬಳಿ ಸಾಕ್ಷಿ ಕೇಳಿ ಅವರನ್ನೂ ಅವಮಾನಿಸುವಂತಹ ದೇಶದ್ರೋಹಿಗಳೂ ನಮ್ಮ ನಡುವೆಯೇ ನಮ್ಮ ದೇಶದೊಳಗೆನೇ ಇದ್ದಾರೆ.!

ಕ್ಲಿಷ್ಟ ಕಾರ್ಯಾಚರಣೆಗಳನ್ನು ನಡೆಸಬೇಕಾದ ಸವಾಲು ಎದುರಾದಾಗಲೆಲ್ಲಾ ನಮ್ಮ ಸೇನೆಯು ಯಾವಾಗಲೂ ನಮ್ಮ ಆಡಳಿತಗಾರರ ನೆಚ್ಚಿನ ಆಯ್ಕೆ ಆಗಿರುತ್ತಿತ್ತು. ಕಠಿಣ ತರಬೇತಿ, ವೈವಿಧ್ಯಮಯ ಅನುಭವ ಮತ್ತು ವೃತ್ತಿಪರತೆಯಿಂದಾಗಿ ಭಾರತೀಯ ಸೇನೆಗೆ ಜಾಗತಿಕ ಮಟ್ಟದಲ್ಲಿ ಉತ್ತಮ ಹೆಸರು ಕೂಡ ಇದೆ. ಕಳೆದ ಬಾರಿಯ ಸರ್ಜಿಕಲ್ ಸ್ಟ್ರೈಕ್‌ನಲ್ಲೂ ಮಹತ್ವದ ಕಾರ್ಯಚಾರಣೆಯ ಬಗ್ಗೆ ನಮಗೆ ತಿಳಿದೇ ಇದೆ. ಆದರೆ ೪೦ ಜನ ವೀರ ಯೋಧರ ಸಾವಿಗೆ ಪ್ರತೀಕಾರ ತೀರಿಸಲೇ ಬೇಕೆಂದು ಪಣತೊಟ್ಟಿದ್ದ ಸೇನೆಯು ಕೊನೆಗೂ ಪ್ರತ್ಯುತ್ತರ ನೀಡಿಯೇ ಬಿಟ್ಟಿತು.ಅದೇನೇ ಇರಲಿ ನಮ್ಮ ಸೈನಿಕರ ಬಗ್ಗೆ ನಮಗೆ ಸಂಪೂರ್ಣವಾದ ನಂಬಿಕೆ ಇದೆ. ಅದ್ಯಾವ ದೊಣ್ಣೆನಾಯಕನ ಮಾತಿಗೆ ನಾವು ಕಿವಿ ಕೊಡುವವರಲ್ಲ , ಸೇನೆ ಹಾಗೂ ದೇಶದ ಗೌರವ ಅಂತಾ ಬಂದಾಗ ಯಾವುದೇ ರೀತಿಯ ರಾಜಿ ಮಾಡಿಕೊಳ್ಳುವ ಪ್ರಶ್ನೆಯೇ ಇಲ್ಲ. ನಮ್ಮ ಸೇನೆಯನ್ನು ನಾನು ನಮ್ಮ ಹೃದಯಮಂದಿರದಲಿಟ್ಟು ಪೂಜಿಸುತ್ತೇವೆ, ನಮ್ಮ ಸರ್ಕಾರ ಕೂಡ ಅವರಿಗೆ ಗೌರವ ಪೂರ್ವಕ ನಮನಗಳನ್ನು ನೀಡುತ್ತಿದೆ. ಪಾಕಿಸ್ತಾನ ಬಂದಿಸಿದ ಅಭಿನಂದನ್ ವರ್ತಮಾನ್ ರವರನ್ನು ೪೮ ಗಂಟೆಯೊಳಗೆ ಪಾಕ್ ಭಾರತಕ್ಕೆ ಒಪ್ಪಿಸುವಂತೆ ಮೋದಿಜೀ ಸರ್ಕಾರ ಮಾಡಿದ್ದೇ ಸಾಕ್ಷಿ! ಇಂದಿನ ದಿನ ತಮ್ಮನ್ನು ತಾವು ದೇಶಕ್ಕೆಂದೇ ಅರ್ಪಿಸಿಕೊಂಡಿರುವ ಯೋಧರು ದುಷ್ಟರ ಸಂಚಿಗೆ ಬಳಿಯಾದದ್ದೇ ಮನಸ್ಸಿಗೆ ಬಹಳ ನೋವುಂಟು ಮಾಡುತ್ತಿದೆ. ನಮ್ಮನ್ನಗಲಿದ ಯೋಧರು ಮತ್ತೇ ಈ ಪುಣ್ಯ ಭೂಮಿಯಲ್ಲಿ ಹುಟ್ಟಿಬರಲಿ ಅವರ ಅಗತ್ಯ ಈ ದೇಶಕ್ಕೆ ತುಂಬಾನೇ ಇದೆ ಅನ್ನೋದೇ ಆ ದೇವರಲ್ಲಿ ಎಲ್ಲಾ ಭಾರತೀಯ ಪ್ರಾರ್ಥನೆ. ಜೈ ಜವಾನ್ , ಜೈ ಕಿಸಾನ್

ಕಾವ್ಯ ಅಂಚನ್

Tags

Related Articles

FOR DAILY ALERTS
Close