ಪ್ರಚಲಿತ

ಲವ್ ಜಿಹಾದ್ – ಹಿಂದೂ ಹೆಣ್ಣು ಮಕ್ಕಳ ಬಲಿ ಪಡೆದು ಕ್ರೈಸ್ತ ಸಮುದಾಯದ ಬಾಗಿಲು ತಟ್ಟಿದೆ! ಸೆಕ್ಯುಲರ್ ಗಳ ಪಾಲಿಗೆ ಲವ್ ಜಿಹಾದ್ ಎಂಬುದೇ ಇಲ್ಲ, ಆದರೆ ಅಂಕಿ ಅಂಶಗಳು ಸುಳ್ಳು ಹೇಳುವುದಿಲ್ಲವಲ್ಲಾ!

ತಾರಾ ಸಹದೇವ್,ಒಬ್ಬ ರಾಷ್ಟ್ರೀಯ ಮಟ್ಟದ ಏರ್ ರೈಫಲ್ ಶೂಟರ್..ಜಾರ್ಖಂಡ್ ರಾಜ್ಯದವಳಾದ ಈ ಹೆಣ್ಣುಮಗಳು ತನ್ನ ಪಾಡಿಗೆ ಕ್ರೀಡೆಯಲ್ಲಿ ಸಾಧಿಸುವ ಉದ್ದೇಶದಿಂದ,ಸಾಧನೆಯ ಒಂದೊಂದೇ ಮೆಟ್ಟಿಲನ್ನೇರುತ್ತಿದ್ದಳು. ಪ್ರತೀ ಹೆಣ್ಣು ಮಕ್ಕಳಂತೆ ಈಕೆಯೂ ರಂಜಿತ್ ಕೊಹ್ಲಿ ಎನ್ನುವ ಹುಡುಗನೊಂದಿಗೆ ಪ್ರೀತಿಗೆ ಬಿದ್ದಳು..ಪ್ರೀತಿಯ ನಂತರದ ಹೆಜ್ಜೆಯಾಗಿ ಅವನೊಂದಿಗೆ ಮದುವೆಯೂ ಆದಳು..ಆದರೆ ೨೦೧೪ ರ ಅಕ್ಟೋಬರ್ ೨೨ ರಂದು ತಾರಾ ಹಿಂದ್ ಪಿರಿ ಪೊಲೀಸ್ ಠಾಣೆಯಲ್ಲಿ ದೂರೊಂದನ್ನು ಸಲ್ಲಿಸಿದಳು.ತನ್ನ ಪತಿ ತನ್ನನ್ನು ಬಲವಂತವಾಗಿ ಇಸ್ಲಾಂ ಧರ್ಮಕ್ಕೆ ಮತಾಂತರಿಸಿದ್ದಾನೆ, ಪ್ರತಿನಿತ್ಯ ನನಗೆ ದೈಹಿಕ ಹಿಂಸೆಯನ್ನೂ ನೀಡುತ್ತಾನೆ. ಪತಿಯು ನನ್ನನ್ನು ಅವನು ಹಿಂದೂ ಎಂಬುದಾಗಿ ನಂಬಿಸಿ ವಿವಾಹವಾಗಿದ್ದ.ಆದರೆ ಅವನ ಅಸಲಿ ಹೆಸರು ರಾಕಿಬುಲ್ ಹಾಸನ್ ಖಾನ್ ಮತ್ತು ಅವನೊಬ್ಬ ಮುಸ್ಲಿಂ ಎಂದು ದೂರನ್ನು ನೀಡಿದ್ದಳು.ಲವ್ ಜಿಹಾದ್,ಮಾನಸಿಕ ಹಾಗೂ ದೈಹಿಕ ಹಿಂಸೆ ಅನುಭವಿಸಿದ ನಂತರ ನಾನೀಗ ಎಚ್ಚೆತ್ತುಕೊಂಡಿರುವುದಾಗಿಯೂ ಅವರು ತಿಳಿಸಿದ್ದರು..ಈ ಘಟನೆ ನಡೆದದ್ದು ೨೦೧೪ ರಲ್ಲಿ.ಮುಂದೆ ರಾಂಚಿಯ ಪೊಲೀಸರು ಆಕೆಯ ಪತಿಯನ್ನು ಬಂಧಿಸಿದ್ದೂ ಆಯಿತು.೨೦೧೮ ರಲ್ಲಿ ಜಿಲ್ಲೆಯ ಮಾಜಿಸ್ಟ್ರೇಟರ್ ಮತ್ತು ಪ್ರಖ್ಯಾತ ವೈದ್ಯೆಯೊಬ್ಬರ ಮಗಳು ಕೂಡ ಮುಸಲ್ಮಾನ ಹುಡುಗನೊಬ್ಬನ ಪ್ರೀತಿಯಲ್ಲಿ ಬಿದ್ದಳು.

ಹುಡುಗಿಯು ವೈದ್ಯಕೀಯ ವಿದ್ಯಾರ್ಥಿಯಾಗಿದ್ದಳು ಮತ್ತು ಹುಡುಗ ಆಕೆಯ ಪ್ರಾಧ್ಯಾಪಕ!ಮೊದಲಿಗೆ ಆಕೆಯ ಪಾಲಕರು ಪ್ರೀತಿಗೆ ವಿರೋಧಿಸಬಹುದು ಎಂದು ಆಕೆಯ ಪಾಲಕರಿನ ವಿಷಯವನ್ನು ಮುಚ್ಚಿಡಲು ಆಕೆಯನ್ನು ಪುಸಲಾಯಿಸಲು ಆ ಹುಡುಗ ಯಶಸ್ವಿಯಾಗಿದ್ದ, ವರುಷ ಕಳೆದಬಳಿಕ ಆಕೆಯನ್ನು ತನ್ನ ಮನೆಗೆ ಕರೆದೊಯ್ದು ತನ್ನ ಪಾಲಕರಿಗೆ ಪರಿಚಯಿಸಿದಾಗ ಅಚ್ಚರಿಯೆನೆಂಬಂತೆ ಅವನ ಪಾಲಕರು ಇವರ ಪ್ರೀತಿಯ ಬೆನ್ನಿಗೆ ನಿಂತರು.ವಿಷಯವು ಇಲ್ಲಿಗೆ ನಿಲ್ಲಲಿಲ್ಲ.ಒಂದು ದಿನ ಹುಡುಗ ಆಕೆಯನ್ನು ತನ್ನ ಮನೆಗೆ ಕರೆದೊಯ್ದು ಮದುವೆಯಾಗುವುದಾಗಿಯೂ,ಅದಕ್ಕಾಗಿ ಆಕೆ ಮತಾಂತರ ಹೊಂದಬೇಕೆಂದೂ ಪುಸಲಾಯಿಸಿದ ,ಅಲ್ಲಿ ಅವನ ಪಾಲಕರು ಮತ್ತೆ ಹಲವು ಅಪರಿಚಿತರೊಂದಿಗೆ ಮೌಲಾನಾ ಕೂಡಾ ಉಪಸ್ಥಿತರಿದ್ದರು.. ಅದು ಹೇಗೋ ಎಚ್ಚೆತ್ತುಕೊಂಡ ಹುಡುಗಿ ತನ್ನ ಪಾಲಕರಿಗೆ ತಾನಿಲ್ಲಿ ಬಂದಿರುವುದು ಗೊತ್ತು ಎಂದು ಅವನನ್ನು ಭಯಪಡಿಸಿ ಅಲ್ಲಿಂದ ತಪ್ಪಿಸಿಕೊಂಡುಬಿಟ್ಟಳು..ಅಸಲಿಗೆ ಆಕೆ ಮನೆಗೆ ಬಂಡ ಬಳಿಕವೇ ಅವಳ ಪಾಲಕರಿಗೆ ಆಕೆ ಎಲ್ಲವನ್ನೂ ತಿಳಿಸಿದ್ದು.ಅವಳ ತಂದೆ ತನ್ನ ಪ್ರಭಾವ ಬಳಸಿ ಹುಡುಗನನ್ನು ಊರಿಂದ ಹೊರಗಟ್ಟಿ ಅವನ ವೈದ್ಯಕೀಯ ಲೈಸೆನ್ಸ್ ಹೋಗುವಂತೆ ಮಾಡಲು ಯಶಸ್ವಿಯಾದರು.ವರುಷಗಳ ಬಳಿಕ ಹುಡುಗನು ಆಕೆಗೆ ಪತ್ರ ಬರೆದು ಅವನು ಅವಳನ್ನು ಮದುವೆಯಾಗಿದ್ದಲ್ಲಿ,ಅವರ ಸಮಾಜದಿಂದ ಅವನ ಕುಟುಂಬಕ್ಕೆ ಲಕ್ಷಾಂತರ ರೂಪಾಯಿ ಸಿಗುತ್ತಿತ್ತೆಂದೂ,ಅವರೆಲ್ಲರೂ ಆಕೆಯನ್ನು ಮದುವೆಗೆ ಮೊದಲೇ ಗರ್ಭವತಿಯನ್ನಾಗಿಸಬೇಕೆಂದು ಬಯಸಿದ್ದರೂ ತಾನು ಹಾಗೆ ಮಾಡಿಲ್ಲವೆಂದೂ, ಆಕೆಯನ್ನು ಮಧ್ಯಪ್ರಾಚ್ಯಕ್ಕೆ ಕರೆದುಕೊಂಡು ಹೋಗಿ ಆಕೆಯ ಕುಟುಂಬದಿಂದ ದೂರಾಗಿಸುವ ಉಪಾಯವಿತ್ತೆಂದೂ ತಿಳಿಸಿ ಕ್ಷಮಾಪಣೆ ಕೋರಿದ್ದನು..ದೇವರ ದಯೆ ಅವಳ ಮೇಲಿತ್ತು,ಇಲ್ಲದಿದ್ದಲ್ಲಿ ಅವಳಂದು ಮದುವೆಯಾಗಿ ಮತಾಂತರವಾಗಿ ಸೌದಿ ದೇಶಗಳಲ್ಲಿ ಲೈಂಗಿಕ ಗುಲಾಮಳಾಗಿಯೋ ಅವನ ನಾಲ್ಕು ಪತ್ನಿಯರಲ್ಲಿ ಒಬ್ಬಳಾಗಿಯೋ ಜೀವಿಸಬೇಕಾಗಿತ್ತು..

ಎಲ್ಲರೂ ಇವರಿಬ್ಬರಂತೆ ಅದೃಷ್ಟ ಹೊಂದಿರುವುದಿಲ್ಲ.ಮದುವೆಯಾದ ಕ್ರಿಶ್ಚಿಯನ್ ಹೆಣ್ಣುಮಗಳೊಬ್ಬಳು ತನ್ನ ಪ್ರಿಯತಮ ನೌಶಾದ್ ನಿಗೆ ಸಿಮ್ ಕಾರ್ಡ್ ಖರೀದಿಸಿಕೊಟ್ಟಿದ್ದಳು,ಅವನು ಅದನ್ನು ಭಯೋತ್ಪಾದನಾ ಕೃತ್ಯಗಳಿಗೆ ಉಪಯೋಗಿಸಿ ಪರಾರಿಯಾಗಿದ್ದನು,ಸಿಕ್ಕಿಬಿದ್ದು ಜೈಲುವಾಸಿಯಸ್ದದ್ದು ಸಿಮ್ ತಗೆದುಕೊಟ್ಟ ಅಮಾಯಕ ಕ್ರಿಶ್ಚಿಯನ್ ಹೆಣ್ಣುಮಗಳು.ಅವಳು ದುಬೈ ಯಲ್ಲಿ ಅವನ ಪರಿಚಯ ಹೊಂದಿ ತನ್ನ ಪತಿ ಮತ್ತು ಮಕ್ಕಳನ್ನು ಬಿಟ್ಟು ಅವನ ಪ್ರೀತಿಯ ಹಿಂದೆ ಮತಾಂತರಗೊಂಡು ಕೇರಳಕ್ಕೆ ಹಿಂದಿರುಗಿದ್ದಳು..ಈ ನೌಶಾದ್ ನಿಗೆ ಬೆಂಗಳೂರಿನಲ್ಲಾದ ಸ್ಫೋಟದೊಂದಿಗೂ ಸಂಬಂಧವಿತ್ತು. ಕೇರಳದ ಕೋಝಿಕೋಡ್ ನಲ್ಲಿ ೧೯ ವರ್ಷದ ಕ್ರಿಶ್ಚಿಯನ್ ಹುಡುಗಿಯೊಬ್ಬಳು ಲೈಂಗಿಕ ದೌರ್ಜನ್ಯಕ್ಕೆ ಗುರಿಯಾಗಿದ್ದಳು..ಅದರ ವಿಡಿಯೋ ಮಾಡಿಟ್ಟುಕೊಂಡ ದುರುಳರು ಆಕೆಯನ್ನು ಒತ್ತಾಯಪೂರ್ವಕವಾಗಿ ಮತಾಂತರಿಸಿ ಇಸ್ಲಾಮಿಕ್ ಸ್ಟೇಟ್ ಉಗ್ರಗಾಮಿ ಶಿಬಿರಕ್ಕೆ ಕಳುಹಿಸಿದ್ದರು..ಮೊದಲೆಲ್ಲಾ ಹಿಂದೂ ಸಂಘಟನೆಗಳು ಲವ್ ಜಿಹಾದ್ ನ ವಿರುದ್ಧ ಮಾತನಾಡುವಾಗೆಲ್ಲಾ ಮಾಧ್ಯಮಗಳು ಹಿಂದೂಗಳು ಮತೀಯವಾದಿಗಳು,ಕೋಮುವಾದಿಗಳು ಇವರು ಪ್ರೀತಿಗೆ ಅಡ್ಡಿಪಡುಸುತ್ತಾರೆ ಎಂದೆಲ್ಲಾ ಅರಚಾಡುತ್ತಿದ್ದರು.ಆದರೆ ಇದೀಗ ಕೇರಳದ ಕ್ರೈಸ್ತ ಸಂಘಟನೆಯೂ ‘ಲವ್ ಜಿಹಾದ್ ಇರುವುದು ಸತ್ಯ,ಕ್ರೈಸ್ತ ಹೆಣ್ಣುಮಕ್ಕಳನ್ನು ಪ್ರೀತಿಯ ಬಲೆಗೆ ಬೀಳಿಸಿ ಅವರನ್ನು ಮತಾಂತರಿಸಿ ಇಸ್ಲಾಂ ಭಯೋತ್ಪಾದನೆಗೆ ಕಳುಹಿಸಲಾಗುತ್ತದೆ’ ಎಂದು ಆರೋಪಿಸಿದೆ.

ಸಿರೋ ಮಲಬಾರ್ ಚರ್ಚ್ ಕಳೆದೆರಡು ವರ್ಷಗಳಲ್ಲಿ ಕೇರಳದಿಂದ ಹೋಗಿ ಇಸ್ಲಾಮಿಕ್ ಸ್ಟೇಟ್ ಉಗ್ರಗಾಮಿ ಶಿಬಿರ ಸೇರಿರುವ ೨೧ ಹೆಣ್ಣುಮಕ್ಕಳಲ್ಲಿ ಅರ್ಧಕ್ಕೂ ಹೆಚ್ಚಿನವರು ಕ್ರಿಸ್ತರು ಎಂದು ಹೇಳಿಕೆಯನ್ನು ನೀಡಿದೆ..ಕೇರಳ ಸರಕಾರದ ಹೇಳಿಕೆಯ ಪ್ರಕಾರ ೨೦೦೬ ರಿಂದ ಕೇರಳದಲ್ಲಿ ೨೬೬೭ ಯುವತಿಯರನ್ನು ಮತಾಂತರಗೊಳಿಸಲಾಗಿದೆ.ಆದರೆ ಇನ್ನೊಂದು ಸರಕಾರೀ ಅಂಶದ ಪ್ರಕಾರ ೨೦೦೭ ರಿಂದ ೨೦೧೭ ರ ಅವಧಿಯಲ್ಲಿ ೭೭೧೩ ಮತಾಂತರ ನಡೆದಿದ್ದು ಅದರಲ್ಲಿ ೨೮೦೩ ಹಿಂದೂ ಹೆಣ್ಣು ಮಕ್ಕಳು ಮತಾಂತರಕ್ಕೊಳಗಾಗಿದ್ದಾರೆ.೨೦೦೯ ರಿಂದ ೨೦೧೨ ರ ಅವಧಿಯಲ್ಲಿ ೨೬೬೭ ಮತಾಂತರಗಳು ನಡೆದಿದ್ದು ಅದರಲ್ಲಿ ೨೧೯೫ ಹಿಂದೂಗಳು ಮತ್ತು ೪೯೨ ಕ್ರಿಶ್ಚಿಯನ್ನರು.ಈ ಮೇಲಿನ ಅಂಕಿಗಳು ಕಾಲ್ಪನಿಕವಲ್ಲ ಇವುಗಳನ್ನು ಹೇಳಿದ್ದು ಕೇರಳದ ಮುಖ್ಯಮಂತ್ರಿಯಾಗಿದ್ದ ಉಮ್ಮನ್ ಚಾಂಡಿ.ಕೇರಳದ ಕ್ಯಾಥೋಲಿಕ್ ಬಿಷಪ್ ಕೌಂಸಿಲ್ ನ ಪ್ರಕಾರ ೨೦೦೯ ರಲ್ಲಿ ಕೇರಳ ರಾಜ್ಯವೊಂದರಲ್ಲೇ ೨೬೦೦ ಕ್ರಿಶ್ಚಿಯನ್ ಹೆಣ್ಣುಮಕ್ಕಳನ್ನು ಮತಾಂತರಿಸಲಾಗಿದೆ.

ಲವ್ ಜಿಹಾದ್ ನ ಕುರಿತಾಗಿ ಜಾಗ್ರತೆ ಮೂಡಿಸುವ ಕೆಲಸ ಮಾಡುತ್ತಿರುವ ಮಹಿಳೆಯೊಬ್ಬರ ಪ್ರಕಾರ ಕಳೆದ ಮೂರು ತಿಂಗಳಲ್ಲಿ ಆಕೆಯ ಬಳಿ ಲವ್ ಜಿಹಾದ್ ನ ೪ ಅಥವಾ ೫ ಕೇಸ್ ಗಳು ಬರುತ್ತವೆಯಂತೆ..ಅವರ ಪ್ರಕಾರ
* ಇಂತಹಾ ೫ ಕೇಸ್ ಗಳಲ್ಲಿ ಒಂದು ಕೇಸ್ ಮಾತ್ರ ಹಿಂದುಳಿದ ವರ್ಗದ ಹೆಣ್ಣು ಮತಾಂತರಕ್ಕೊಳಗಾದ ಹೆಣ್ಣಿನ ಕುರಿತಾಗಿತ್ತು.
* ಯಾವುದೇ ವಯಸ್ಸಿನ ಹೆಣ್ಣು ಕೂಡಾ ಈ ಲವ್ ಜಿಹಾದ್ ಗೆ ಬಲಿಯಾಗಬಹುದು.ಒಂದು ಬಾರಿ ಎರಡು ಮಕ್ಕಳಿರುವ ವಿಧವೆ ಕೂಡಾ ಇದೇ ತೊಂದರೆಗೆ ಸಿಲುಕಿದ್ದಳು.ಆದರೆ ಹೆಚ್ಚಾಗಿ ಈ ಪ್ರೀತಿಯಲ್ಲಿ ಬೀಳುವುದು ೧೪ ರಿಂದ ೧೬ ವಯಸ್ಸಿನ ಹೆಣ್ಣು ಮಕ್ಕಳು.
* ಬಹಳಷ್ಟು ಕೇಸ್ ಗಳಲ್ಲಿ ಹುಡುಗರು ಹೆಣ್ಣುಮಕ್ಕಳನ್ನು ಬೈಕ್ ನಲ್ಲಿ ಸುತ್ತಿಸಿ,ಇದನ್ನೇ ಹೆಣ್ಣುಮಕ್ಕಳು ಸ್ವಾತಂತ್ರವೆಂದು ಭ್ರಮಿಸುವಂತೆ ಮಾಡುತ್ತಾರೆ.
* ಈ ಹುಡುಗರಿಗೆ ಹೆಣ್ಣುಮಕ್ಕಳನ್ನು ಲೈಂಗಿಕವಾಗಿ ಪಳಗಿಸಿಕೊಳ್ಳುವ ತರಬೇತಿಯನ್ನೂ ನೀಡಲಾಗುತ್ತದೆ. ಅವರು ಕೈ ಹಿಡಿದುಕೊಳ್ಳುವುದು,ಸಾಮಾನ್ಯ ಸ್ನೇಹಪೂರ್ವಕ ಅಪ್ಪುಗೆಯನ್ನು ನೀಡುವುದು,ಕೈತಪ್ಪಿ ಕೆಲವು ದೇಹದ ಭಾಗಗಳನ್ನು ಮುಟ್ಟುವುದು ಮತ್ತು ನಿಧಾನವಾಗಿ ಮುತ್ತು ಕೊಡುವುದು ಕೊನೆಗೆ ದೈಹಿಕ ಸಂಬಂಧ ಬೆಳೆಸುವುದರೊಂದಿಗೆ ಇದು ಕೊನೆಗೊಳ್ಳುತ್ತದೆ. ಸಾಮಾನ್ಯವಾಗಿ ಓದಿನ ಒತ್ತಡದಲ್ಲಿರುವ ೧೦ ನೇ ಮತ್ತು ೧೨ ನೇ ತರಗತಿಯ ಹೆಣ್ಣುಮಕ್ಕಳ ಮೇಲೆ ಇಂತಹಾ ಪ್ರಯೋಗಗಳು ನಡೆಯುತ್ತವೆ.ಇಂತಹಾ ಸಂದರ್ಭದಲ್ಲಿ ದೈಹಿಕ ಸಂಬಂಧಗಳ ವಿಡಿಯೋಗಳನ್ನು ಕೂಡಾ ಮಾಡಲಾಗುತ್ತದೆ.
* ಬಹಳಷ್ಟು ಸಲ ವಿಷಯವು ಗಂಭೀರವಾಗುವ ವರೆಗೂ ಪಾಲಕರಿಗೆ ಇದರ ಅರಿವಿರುವುದಿಲ್ಲ.
* ಪಾಲಕರಿಗೆ ವಿಷಯ ತಿಳಿದಾಗ ಅವರು ಈ ಪ್ರೀತಿಯನ್ನು ತುಂಡರಿಸುತ್ತಾರೆ..ಅಂತಹಾ ಸಮಯದಲ್ಲಿ ಹೆಣ್ಣುಮಕ್ಕಳನ್ನು ಮನೆಬಿಟ್ಟು ಓಡಿ ಬರುವಂತೆ ಒತ್ತಡ ಹೇರಲಾಗುತ್ತದೆ ಅಥವಾ ದೈಹಿಕ ಸಂಪರ್ಕದ ವಿಡಿಯೋ ತೋರಿಸಿ,ಪ್ರೀತಿಯ ಸಂಬಂಧವನ್ನು ಮುಂದುವರೆಸುವಂತೆ ಬ್ಲಾಕ್ ಮೇಲ್ ಮಾಡಲಾಗುತ್ತದೆ.ಬಹಳಷ್ಟು ಹುಡುಗಿಯರಿಗೆ ತಮ್ಮ ವಿಡಿಯೋ ನೋಡುವ ವರೆಗೂ ವಿಡಿಯೋ ಮಾಡಲಾಗಿದೆಎಂಬ ಅರಿವು ಕೂಡಾ ಇರುವುದಿಲ್ಲ.
* ಆದರೂ ಹೆಣ್ಣುಮಗಳು ಸಂಬಂಧವನ್ನು ತುಂಡರಿಸಲು ಬಯಸಿದರೆ,ಹುಡುಗ ತನ್ನ ಸ್ನೇಹಿತರನ್ನೇ ಆಕೆಯನ್ನು ಭಯಪಡಿಸಲು ಬಳಸಿಕೊಳ್ಳುತ್ತಾನೆ.ಇಷ್ಟೆಲ್ಲಾ ನಡೆಯುವಾಗಲೂ ಅವನು ಹುಡುಗಿಗೆ ವಿವಾಹವಾಗುವುದಾಗಿ ನಂಬಿಸುತ್ತಲೇ ಇರುತ್ತಾನೆ.
* ಆದರೂ ಹೆತ್ತವರ ಮಧ್ಯಪ್ರವೇಶದಿಂದಾಗಿ ಹುಡುಗಿಯರು ಅಲ್ಪ ಸಮಯ ಸಂಬಂಧದಿಂದ ಹಿಂದೆ ಸರಿದರೂ,ಹುಡುಗಿಗೆ ೧೮ ವರ್ಷ ತುಂಬುವಾಗ ಈ ಸಂಬಂಧ ಪುನಃ ಪ್ರಾರಂಭವಾಗುತ್ತದೆ.ಈ ಬಾರಿ ಹೆಣ್ಣು ಹೊರಬರಲಾಗದಂತೆ ಸಿಕ್ಕಿಬೀಳುತ್ತಾಳೆ.
* ಬಹಳಷ್ಟು ಬಾರಿ ಮದುವೆಯೂ ನಡೆಯುತ್ತದೆ.೬ ತಿಂಗಳು ಎಲ್ಲವೂ ಚೆನ್ನಾಗಿಯೇ ಇರುತ್ತದೆ.ನಂತರ ತೊಂದರೆ ಪ್ರಾರಂಭವಾಗುತ್ತದೆ.ಮೊದಲಿಗೆ ಹೊಡೆಯುವುದು ನಂತರ ಗರ್ಭಧಾರಣೆ,ಗರ್ಭಪಾತ ಇಂತಹಾ ದೈಹಿಕ ಹಿಂಸೆಗಳು ಪ್ರಾರಂಭವಾಗುತ್ತದೆ.
* ೨ ವರ್ಷದ ಬಳಿಕ ಹುಡುಗ ಇನ್ನೊಂದು ಮದುವೆಯಾಗುತ್ತಾನೆ.
* ಈಗ ಮೊದಲನೆಯ ಪತ್ನಿ ಸ್ವಾಭಾವಿಕವಾಗಿಯೇ ಅದನ್ನು ವಿರೋಧಿಸುತ್ತಾಳೆ,ಆಗ ಅವಳನ್ನು ವಿವಾಹದಲ್ಲಿರಿಸುವ ಉದ್ದೇಶದಿಂದ ಆಕೆಯ ಮಾವ ಅಥವಾ ಪತಿಯ ಸಹೋದರರು ಆಕೆಯ ಮೇಲೆ ಅತ್ಯಾಚಾರ ಮಾಡುತ್ತಾರೆ.ಮನೆಯಲ್ಲಿನ ಇತರ ಹೆಂಗಸರು ಆಕೆಯ ಮೇಲೆ ಪ್ರತಿನಿತ್ಯ ದೈಹಿಕ ಹಲ್ಲೆ ನಡೆಸುತ್ತಾರೆ.
* ತನ್ನ ಪಾಲಕರೊಂದಿಗೆ ಸಂಪರ್ಕ ಹೊಂದಿದ್ದಲ್ಲಿ ಅವರೂ,ಪೊಲೀಸರೂ ಹೇಗಾದರೂ ಹೊಂದಿಕೊಂಡು ಹೋಗುವಂತೆ ಆಕೆಯನ್ನೇ ಪುಸಲಾಯಿಸುತ್ತಾರೆ.
* ಹಾಗೂ ಆಕೆಯು ಅಲ್ಲಿಂದ ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾದರೂ,ಮಕ್ಕಳ ಪೋಷಣೆಯು ಆಕೆಗೆ ದೊರಕುವುದಿಲ್ಲ.ಅವು ಪತಿಯ ಪಾಲಾಗುತ್ತವೆ.
* ಕೋರ್ಟ್ ನ ಮುಖಾಂತರ ಆಕೆಗೆ ಜೀವನಾಂಶ ದೊರಕಿದರೂ ಪತಿ ಜೀವನಾಂಶ ನೀಡುವುದಿಲ್ಲ,ಯಾಕೆಂದರೆ ಆಕೆ ಮತಾಂತರ ಹೊಂದುವುದು ಮದುವೆಯಾದ ಬಳಿಕ. ಹಾಗಾಗಿ ಆಕೆಗೆ ಪತಿಯಾ ಆಸ್ತಿಯಲ್ಲಿ ಯಾವುದೇ ಹಕ್ಕಿರುವುದಿಲ್ಲ..ಆದರೆ ಹಿಂದೂಗಳ ಕ್ರಮ ಮತ್ತು ನಿಯಮದ ಪ್ರಕಾರ ಆಕೆಯ ಪಾಲಕರ ಆಸ್ತಿಯ ಮೇಲೆ ಅವಳ ಪತಿ ಹಕ್ಕು ಸಾಧಿಸಬಹುದು.

ಇಂದಿಗೂ ಬಹಳಷ್ಟು ಹೆಣ್ಣುಮಕ್ಕಳು ಸ್ವಾತಂತ್ರ ಮತ್ತು ಸ್ವೇಚ್ಛೆಯ ನಡುವಿನ ಅಂತರವನ್ನು ಅರಿಯದೆ ಲವ್ ಜಿಹಾದ್ ಎಂಬ ಕೆಸರಿನಲ್ಲಿ ಬೀಳುತ್ತಾರೆ..ಆದರೆ ಇದರಿಂದ ಹೊರಬರುವ ದಾರಿ ಕಾಣದೆ ಅದರಲ್ಲೇ ಕೊನೆಯಾಗುತ್ತಾರೆ.ನಮ್ಮ ಜೀವನ ನಮ್ಮ ಕೈಯಲ್ಲೇ ಇದೆ.. ಎಚ್ಚರವಹಿಸಿ

-Deepashree M

Tags

Related Articles

FOR DAILY ALERTS
Close