ಪ್ರಚಲಿತ

ಕೊರೋನಾವನ್ನು ಚೈನೀಸ್ ಕೋವಿಡ್ ಎಂದ ಟ್ರಂಪ್! ಬಹಿರಂಗವಾಗಿಯೇ ಚೀನಾಕ್ಕೆ ಟಾಂಗ್ ನೀಡಿದ ಅಮೆರಿಕಾ ಅಧ್ಯಕ್ಷ…

ಹಾಮಾರಿ ಕೊರೋನಾದಿಂದಾಗಿ ಇಡೀ ವಿಶ್ವವೇ ತತ್ತರಿಸಿ ಹೋಗಿದೆ. ಚೀನಾದ ವುಹಾನ್ ನಗರದಿಂದ ಆರಂಭವಾದ ಈ ರೋಗ ವಿಶ್ವದೆಲ್ಲೆಡೆ ಹರಡಿ ಇದೀಗ ಏಳು ಸಾವಿರಕ್ಕೂ ಅಧಿಕ ಜನರನ್ನು ನಿರ್ನಾಮ ಮಾಡಿದೆ. ಹೀಗಾಗಿ ವಿಶ್ವದೆಲ್ಲೆಡೆ ಇದೀಗ ಭಾರೀ ಮುನ್ನೆಚ್ಚರಿಕೆಯನ್ನು ಕೈಗೊಂಡಿದ್ದು ಈ ವೈರಸ್ ಹರಡಂತೆ ನಿಗಾ ವಹಿಸುತ್ತಿದೆ. ಚೀನಾದಲ್ಲಿ ಪ್ರಾರಂಭವಾದ ಈ ವೈರಸ್ ಅಲ್ಲಿ ಸ್ವಲ್ಪ ಮಟ್ಟಿಗೆ ನಿಯಂತ್ರಣಕ್ಕೆ ಬಂದಿದ್ದರೂ ವಿಶ್ವದಾದ್ಯಂತ ಇದು ಅವ್ಯಾಹತವಾಗಿ ವ್ಯಾಪಿಸುತ್ತಿದೆ. ಔಷಧವನ್ನು ಇನ್ನೂ ಕಂಡುಹಿಡಿಯುವಲ್ಲಿ ಪ್ರಯತ್ನಗಳೂ ನಡೆಯುತ್ತಿದೆ. ಅದೆಷ್ಟೋ ಜನ ಈ ಕೊರೋನಾ ವೈರಸ್‍ನಿಂದ ಗುಣಮುಖವಾಗುತ್ತನೂ ಇದ್ದು ಅತ್ತ ಅಮೆರಿಕಾ ಅಧ್ಯಕ್ಷ ಟ್ರಂಪ್ ಚೀನಾ ಕೋವಿಡ್ ಎಂದು ಚೀನಾಕ್ಕೆ ಬಹಿರಂಗವಾಗಿಯೇ ಟಾಂಗ್ ನೀಡಿದ್ದಾರೆ.

ಚೀನಾ ಕೋವಿಡ್ ಎಂದ ಟ್ರಂಪ್…

ಹೌದು… ಚೀನಾದಲ್ಲಿ ಆರಂಭವಾದ ಈ ಭಯಾನಕ ವೈರಸ್‍ನ್ನು ಅಮೆರಿಕಾ ಚೀನಾದ ಕೋವಿಡ್ ಎಂದು ಹೇಳಿದೆ. ಇತ್ತೀಚೆಗೆ ಅಮೆರಿಕಾದ ರಾಜಕಾರಣಿಗಳು ಕೊರೋನಾ ವೈರಸ್‍ನ್ನು ಚೀನಾ ವೈರಸ್ ಎಂದು ಹೇಳಿದ ಬೆನ್ನಲ್ಲೇ ಇದೀಗ ಅಮೆರಿಕಾದ ಅಧ್ಯಕ್ಷ ಟ್ರಂಪ್ ಕೂಡಾ ಚೀನಾ ಕೋವಿಡ್ ಎಂದು ಟ್ವೀಟ್ ಮಾಡಿದ್ದು ಚೀನಾಕ್ಕೆ ಬಹಿರಂಗವಾಗಿಯೇ ಟಾಂಗ್ ನೀಡಿದ್ದಾರೆ. ಈ ಹಿಂದೆ ಚೀನಾದ ವಿದೇಶಾಂಗ ಸಚಿವಾಲಯದ ವಕ್ತಾರ  ಇದು ಅಮೆರಿಕಾದಿಂದ ಹರಡಿರುವ ಸೊಂಕು ಚೀನಾದ ವುಹಾನ್‍ನಲ್ಲಿ ಉಗಮವಾಗಿದ್ದಲ್ಲ ಎಂದು ಟ್ವೀಟ್ ಮಾಡಿದ್ದರು. ಚೀನಾದ ಅಧಿಕಾರಿ ಯಾಂಗ್ ಚೈಚಿ ಜತೆಗೆ ಫೋನ್ ಕರೆಯಲ್ಲಿ ಮಾತನಾಡಿದ ವೇಳೆ ಅಮೆರಿಕಾದ ಸೆಕ್ರೆಟರಿ ಆಫ್ ಸ್ಟೇಟ್ ಮೈಕ್ ಪೋಂಪಿಯೋ ಅವರು ಕೋವಿಡ್ 19 ವೈರಸ್‍ಗೆ ಸಂಬಂಧಿಸಿ ಅಮರಿಕದ ವಿರುದ್ಧ ಪಿತೂರಿ ನಡೆಸಲು ಚೀನಾ ತನ್ನ ಅಧಿಕೃತ ಚಾನೆಲ್‍ಗಳನ್ನು ಬಳಸುತ್ತಿರುವ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ್ದರು. 

Sujaya Acharya

Tags

Related Articles

FOR DAILY ALERTS
Close