ಪ್ರಚಲಿತ

ಬಲಶಾಲಿಗಳಾಗುತ್ತಿವೆ ಭಾರತ ಅಮೇರಿಕಾ ಸ್ನೇಹ!! ಟ್ರಂಪ್ ಮೋದಿಯ ಕಾಲ್ ಸಂಭಾಷಣೆ ಏನಿತ್ತು ಗೊತ್ತಾ?!

ಮೂಲಭೂತ ಇಸ್ಲಾಮಿಕ್ ಭಯೋತ್ಪಾದನೆ ದಮನ, ಉಗ್ರರ ಸ್ವರ್ಗ ನಿರ್ನಾಮ ಹಾಗೂ ಭಯೋತ್ಪಾದನೆ ವಿರುದ್ಧದ ಹೋರಾಟ ಬಲಪಡಿಸಲು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹಾಗೂ ಪ್ರಧಾನಿ ನರೇಂದ್ರ ಮೋದಿ ಪಣತೊಟ್ಟಿದ್ದು, ಇದೀಗ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ದೂರವಾಣಿ ಕರೆ ಮಾಡಿರುವ ವಿಚಾರ ಎಲ್ಲೆಡೆ ಸುದ್ದಿಯಾಗಿದೆ.

ಹೌದು… ಪಾಕಿಸ್ತಾನದ ಭಯೋತ್ಪಾದನೆ ಪೆÇೀಷಣೆ ವಿರುದ್ಧ ಅಮೆರಿಕ ಟೀಕಿಸಿರುವ ಬೆನ್ನಲ್ಲೇ ಭಾರತದ ಪ್ರಧಾನಿ ನರೇಂದ್ರ ಮೋದಿ ಹಾಗೂ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಫೆÇೀನಿನಲ್ಲಿ ಮಾತನಾಡಿದ್ದಲ್ಲದೇ ಹಲವು ವಿಷಯಗಳ ಕುರಿತು ಚರ್ಚಿಸಿದ್ದಾರೆ ಎಂದು ತಿಳಿದುಬಂದಿದೆ. ಹಾಗಾಗಿ ಮಾಲ್ಡೀವ್ಸ್ ಬಿಕ್ಕಟ್ಟು ಕುರಿತು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರು ದೂರವಾಣಿ ಕರೆ ಮಾಡುವ ಮೂಲಕ ಪರಸ್ಪರ ಚರ್ಚೆ ನಡೆಸಿರುವುದಾಗಿ ಶುಕ್ರವಾರ ವರದಿಯಾಗಿದೆ.

ಮಾಲ್ಡೀವ್ಸ್ ತುರ್ತು ಪರಿಸ್ಥಿತಿ, ಉತ್ತರ ಕೊರಿಯಾದ ಅಣ್ವಸ್ತ್ರದ ನೀತಿ, ಅಫ್ಘಾನಿಸ್ತಾನದಲ್ಲಿನ ಭಯೋತ್ಪಾದನೆ ಹಾಗೂ ಇಂಡೋ-ಫೆಸಿಫಿಕ್ ಪ್ರಾಂತ್ಯದ ಕುರಿತು ಉಭಯ ನಾಯಕರು ಸಮಾಲೋಚನೆ ನಡೆಸಿದ್ದಾರೆ. ಉಭಯ ನಾಯಕರು ಮಾಲ್ಡೀವ್ಸ್ ರಾಜಕೀಯ ಬಿಕ್ಕಟ್ಟಿನ ಬಗ್ಗೆ ಕಳವಳ ವ್ಯಕ್ತಪಡಿಸಿ, ಪ್ರಜಾಪ್ರಭುತ್ವ ಸಂಸ್ಥೆ ಹಾಗೂ ಕಾನೂನಿನ ನಿಯಮಗಳ ಪ್ರಾಮುಖ್ಯತೆ ಬಗ್ಗೆ ಮಾತನಾಡಿದ್ದಾರೆ ಎಂದು ವೈಟ್ ಹೌಸ್ ಆಡಳಿತ ಮೂಲ ತಿಳಿಸಿದೆ.

ಹಾಗಾದರೆ ಈ ಮಾಲ್ಡೀವ್ಸ್ ಬಿಕ್ಕಟ್ಟೇನು?

ರಾಜಕೀಯ ಕೈದಿಗಳನ್ನು ಬಿಡುಗಡೆಗೊಳಿಸಿ, ಅವರ ಮೇಲಿನ ಪ್ರಕರಣಗಳ ಮರುವಿಚಾರಣೆಗೆ ಒಳಪಡಿಸಬೇಕೆಂದು ಫೆಬ್ರವರಿ 1 ರಂದು ಸುಪ್ರೀಂಕೋರ್ಟ್ ನೀಡಿರುವ ಆದೇಶ ಪಾಲಿಸಲು ಮಾಲ್ಡೀವ್ಸ್ ಸರ್ಕಾರ ನಿರಾಕರಿಸಿತ್ತು. ಹೀಗಾಗಿ ತೀವ್ರಗೊಳ್ಳುತ್ತಿರುವ ರಾಜಕೀಯ ಬಿಕ್ಕಟ್ಟಿನ ನಡುವೆ ಅಧ್ಯಕ್ಷ ಅಬ್ದುಲ್ಲಾ ಯಮೀನ್ 15 ದಿನಗಳ ತುರ್ತು ಪರಿಸ್ಥಿತಿ ಘೋಷಿಸಿದ್ದರು. ಇದರಿಂದ ಭದ್ರತಾ ಪಡೆಗಳಿಗೆ ಅನುಮಾನಾಸ್ಪದ ವ್ಯಕ್ತಿಗಳಟಿu್ನ ವಶಕ್ಕೆ ಪಡೆಯುವ ಅಧಿಕಾರ ದೊರೆತಂತಾಗಿ, ಪಕ್ಷ ವಿರೋಧಿ ಚಟುವಟಿಕೆ ನಡೆಸಿದ ಆರೋಪದ ಮೇಲೆ ಮಾಲ್ಡೀವ್ಸ್ ಮಾಜಿ ಅಧ್ಯಕ್ಷ ಮೌಮುನ್ ಅಬ್ದುಲ್ ಗಯೂಮ್’ರನ್ನು ಬಂಧಿಸಿದ್ದರು.

ಅಲ್ಲದೆ, ಸುಪ್ರೀಂಕೋರ್ಟ್ ಮುಖ್ಯ ನ್ಯಾಯಾಧೀಶ ಅಬ್ದುಲ್ ಸಯೀದ್ ಹಾಗೂ ನ್ಯಾಯಾಧೀಶ ಅಲಿ ಅಮೀದ್ ರನ್ನು ಕೂಡ ಈ ವಿಚಾರಕ್ಕೆ ಸಂಬಂಧಿ ಬಂಧಿಸಿದ್ದರು. ಹಾಗಾಗಿ ಈ ತುರ್ತು ಪರಿಸ್ಥಿತಿ ಹಿನ್ನೆಲೆಯಲ್ಲಿ ಮಾಲ್ಡೀವ್ಸ್ ಸರ್ಕಾರ ಸುದ್ದಿವಾಹಿನಿಗಳ ಮೇಲೆ ನಿಯಂತ್ರಣ ಹೇರಿದ್ದು, ಇಲ್ಲಿನ ಸುದ್ದಿವಾಹಿನಿ ರಾಜೆ ಟಿವಿಯನ್ನು ರದ್ದು ಮಾಡುವಂತೆ ಒತ್ತಡ ಹೇರಿ ಭದ್ರತಾ ಸಿಬ್ಬಂದಿ ಬೆದರಿಕೆ ಹಾಕಿದೆ. ರಾಷ್ಟ್ರೀಯ ರಕ್ಷಣೆಗೆ ಧಕ್ಕೆಯಾಗುವಂತಹ ಸುದ್ದಿಗಳನ್ನು ಬಿತ್ತರಿಸಿದರೆ ಅವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳುವುದಾಗಿ ಮಾಲ್ಡೀವ್ಸ್ ನ ರಕ್ಷಣಾ ಸಚಿವಾಲಯ ತಿಳಿಸಿದೆ.

ಈಗಾಗಲೇ ಡೊನಾಲ್ಡ್ ಟ್ರಂಪ್ ಅಮೆರಿಕ ಅಧ್ಯಕ್ಷರಾಗಿ ಆಯ್ಕೆಯಾದ ಬಳಿಕ ಉಭಯ ನಾಯಕರು ಹಲವು ಸಂದರ್ಭಗಳಲ್ಲಿ ಭೇಟಿಯಾಗಿದ್ದು, ದೂರವಾಣಿ ಮೂಲಕವೂ ಸಂಭಾಷಣೆ ನಡೆಸಿದ್ದಾರೆ. 2017ರ ಜೂನ್‍ನಲ್ಲಿ ಮೊದಲ ಭೇಟಿಗೂ ಮುನ್ನ ಮೋದಿ ಅವರನ್ನು “ನಿಜವಾದ ಮಿತ್ರ” ಎಂದು ಬಣ್ಣಿಸಿ ಟ್ರಂಪ್ ಟ್ವೀಟ್ ಮಾಡಿದ್ದರು. ಅಷ್ಟೇ ಅಲ್ಲದೇ, 2016ರ ಆಗಸ್ಟ್‍ನಲ್ಲಿ “ದಕ್ಷಿಣ ಏಷ್ಯಾ ನೀತಿ” ಬಹಿರಂಗ ಪಡಿಸಿದ್ದ ಟ್ರಂಪ್, ಅಫ್ಗಾನಿಸ್ತಾನ ಆರ್ಥಿಕ ಅಭಿವೃದ್ಧಿಯಲ್ಲಿ ಭಾರತ ಮಹತ್ವದ ಕೊಡುಗೆ ಅಗತ್ಯತೆ ಕುರಿತು ಪ್ರಸ್ತಾಪಿಸಿದ್ದರು. ಜತೆಗೆ ವಿಶ್ವಸಂಸ್ಥೆ ನೇತೃತ್ವದ ಅಂತರರಾಷ್ಟ್ರೀಯ ಪಡೆಗಳ ವಿರುದ್ಧ ಕಾರ್ಯಾಚರಣೆ ನಡೆಸುತ್ತಿರುವ ಭಯೋತ್ಪಾದಕರಿಗೆ ಪಾಕಿಸ್ತಾನ ಸುರಕ್ಷಿತ ಜಾಗ ಎಂದು ದೂರಿದ್ದರು.

2017ರ ವೇಳೆ ಮೂಲಭೂತ ಇಸ್ಲಾಮಿಕ್ ಭಯೋತ್ಪಾದನೆ ದಮನ, ಉಗ್ರರ ಸ್ವರ್ಗ ನಿರ್ನಾಮ ಹಾಗೂ ಭಯೋತ್ಪಾದನೆ ವಿರುದ್ಧದ ಹೋರಾಟ ಬಲ ಪಡಿಸಲು ಪಣತೊಟ್ಟಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹಾಗೂ ಪ್ರಧಾನಿ ನರೇಂದ್ರ ಮೋದಿ ‘ಉಗ್ರ ದಮನಕ್ಕೆ ನಮ್ಮ ಮೊದಲ ಆದ್ಯತೆ,’ ಎಂದು ಜಂಟಿ ಪತ್ರಿಕಾಗೋಷ್ಠಿ ನಡೆಸಿದ ಮೋದಿ ಹೇಳಿದ್ದರು. ಹಾಗಾಗಿ ಗಡಿಯಾಚೆಗಿನ ಭಯೋತ್ಪಾದನೆ ನಿಲ್ಲಿಸುವಂತೆ ಪಾಕಿಸ್ತಾನಕ್ಕೆ ಭಾರತ ಹಾಗೂ ಅಮೆರಿಕ ಆಗ್ರಹಿಸಿವೆ. ಇದರ ಜತೆಗೆ, ಮುಂಬಯಿ ದಾಳಿ ಹಾಗೂ ಪಠಾಣ್‍ಕೋಟ್ ದಾಳಿಕೋರರಿಗೆ ತಕ್ಕ ಶಾಸ್ತಿ ಆಗಬೇಕು ಎಂದು ಒತ್ತಾಯಿಸಿವೆ.

ಅಲ್ಲದೇ, ಉಭಯ ನಾಯಕರ ಭೇಟಿ ನಂತರ ಹೊರಡಿಸಿದ ಜಂಟಿ ಹೇಳಿಕೆಯಲ್ಲಿ, ‘ತನ್ನ ನೆಲದಿಂದ ಬೇರೆ ರಾಷ್ಟ್ರಗಳ ಮೇಲೆ ದಾಳಿ ನಡೆಸಲು ಪಾಕಿಸ್ತಾನ ಅವಕಾಶ ನೀಡಬಾರದು,’ ಎಂದು ಆಗ್ರಹಿಸಿದ್ದಾರೆ. ಅಷ್ಟೇ ಅಲ್ಲದೇ, ‘ಎರಡೂ ದೇಶಗಳು ಪ್ರಗತಿಯ ಎಂಜಿನ್ ಇದ್ದಂತೆ, ವ್ಯಾಪಾರ, ಉದ್ಯೋಗ ಸೃಷ್ಟಿಗೆ ಒತ್ತು ನೀಡಲಾಗುವುದು. ಪೆಸಿಫಿಕ್ ಪ್ರದೇಶದಲ್ಲಿ ಸ್ಥಿರತೆ ಕಾಯ್ದುಕೊಳ್ಳಲು ಬದ್ಧ,’ ಎಂದು ಜಂಟಿ ಗೋಷ್ಠಿಯಲ್ಲಿ ಹೇಳಿದ್ದರು.

ಆದರೆ ಇದೀಗ ಮಾಲ್ಡೀವ್ಸ್ ಬಿಕ್ಕಟ್ಟು ಕುರಿತು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹಾಗೂ ನರೇಂದ್ರ ಮೋದಿ ಅವರು ದೂರವಾಣಿ ಕರೆ ಮೂಲಕ ಅಫ್ಘಾನಿಸ್ತಾನದ ಸದ್ಯದ ಪರಿಸ್ಥಿತಿ, ಉತ್ತರ ಕೊರಿಯಾ ಪರಮಾಣು ಬೆದರಿಕೆ, ಮ್ಯಾನ್ಮಾರ್ ನಿರಾಶ್ರಿತರು ಹಾಗೂ ಇಂಡೋ-ಫೆಸಿಫಿಕ್ ಪ್ರದೇಶದಲ್ಲಿ ಭದ್ರತೆ ಕುರಿತು ಉಭಯ ನಾಯಕರು ಚರ್ಚೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.

ಇನ್ನು, 2018ರಲ್ಲಿ ಇಬ್ಬರೂ ನಾಯಕರು ಇದೇ ಮೊದಲ ಬಾರಿಗೆ ಫೆÇೀನಿನಲ್ಲಿ ಮಾತನಾಡಿದ್ದು, ದಕ್ಷಿಣ ಏಷ್ಯಾದ ಅಭಿವೃದ್ಧಿಗೆ ಟ್ರಂಪ್ ಸಹಕಾರ, ಅಫ್ಗಾನಿಸ್ತಾನಕ್ಕೆ ಭದ್ರತೆ ಒದಗಿಸುವ ನಿಟ್ಟಿನಲ್ಲಿ ಉಭಯ ನಾಯಕರ ಬದ್ಧತೆ ವ್ಯಕ್ತವಾಗಿದೆ ಎಂದು ತಿಳಿದುಬಂದಿದೆ. ಅದರಲ್ಲೂ ಉಭಯ ರಾಷ್ಟ್ರಗಳ ಆರ್ಥಿಕ ಸಹಕಾರ ಹಾಗೂ ಏಳಿಗೆಯ ದೃಷ್ಟಿಯಿಂದ ಮುಂದಿನ ಏಪ್ರಿಲ್ ನಲ್ಲಿ ಅಮೆರಿಕದ ಶ್ವೇತಭವನದಲ್ಲಿ ಭಾರತದ ಇಬ್ಬರು ಹಾಗೂ ಅಮೆರಿಕದ ಇಬ್ಬರು ವಕ್ತಾರರ ಮಧ್ಯೆ ಸಚಿವಾಲಯ ಮಟ್ಟದ ಮಾತುಕತೆ ನಡೆಸಲು ಇಬ್ಬರೂ ಮುಖಂಡರು ಒಪ್ಪಿಗೆ ಸೂಚಿಸಿರುವುದು ಮಾತುಕತೆಯ ಮಹತ್ತರ ಬೆಳವಣಿಗೆಯಾಗಿದೆ.

ಇದರ ಜತೆಗೆ ಉಭಯ ರಾಷ್ಟ್ರಗಳ ಪರಸ್ಪರ ಸಹಕಾರ, ರೋಹಿಂಗ್ಯಾ ಮುಸ್ಲಿಮರು, ಜಾತಿಕ ಭಯೋತ್ಪಾದನೆ, ವಿಶ್ವ ಶಾಂತಿ ಸೇರಿ ಹಲವು ವಿಷಯಗಳನ್ನು ಮೋದಿ ಹಾಗೂ ಟ್ರಂಪ್ ಚರ್ಚಿಸಿದ್ದಾರೆ ಎಂದು ಶ್ವೇತಭವನದ ವಕ್ತಾರರು ತಿಳಿಸಿದ್ದಾರೆ.

– ಅಲೋಖಾ

Tags

Related Articles

Close