ಪ್ರಚಲಿತ

ವಿಶ್ವದ ವಿಶ್ವಾಸಾರ್ಹ ವ್ಯಕ್ತಿಗಳಲ್ಲಿ ಪ್ರಧಾನಿ ಮೋದಿಯವರೂ ಒಬ್ಬರು: ಅಸ್ಲೆ ತೋಜೆ

ವಿರೋಧಿಗಳಿಗೆ ಮತ್ತಷ್ಟು ಉರಿ ಹೆಚ್ಚುವ ಪ್ರಧಾನಿ ಮೋದಿ ಅವರ ಕುರಿತಾದ ವಿಷಯವೊಂದಿದೆ.

ಪ್ರಧಾನಿ ನರೇಂದ್ರ ಮೋದಿ ಅವರು ನೊಬೆಲ್ ಶಾಂತಿ ಪ್ರಶಸ್ತಿಗೆ ಅತಿ ದೊಡ್ಡ ಸ್ಪರ್ಧಿಯಾಗಿದ್ದಾರೆ ಎಂಬುದಾಗಿ ನೊಬೆಲ್ ಶಾಂತಿ ಪ್ರಶಸ್ತಿ ಸಮಿತಿಯ ಉಪ ನಾಯಕರಾದ ಅಸ್ಲೆ ತೋಜೆ ಅವರು ತಿಳಿಸಿದ್ದಾರೆ. ಈ ಬಗ್ಗೆ ನಿನ್ನೆಯಷ್ಟೇ ಮಾತನಾಡಿರುವ ಅವರು ಈ ವಿಚಾರವನ್ನು ಹೇಳಿದ್ದಾರೆ‌.

ಹಾಗೆಯೇ ಪ್ರಧಾನಿ ಮೋದಿ ಅವರ ರೀತಿ ನೀತಿಗಳಿಂದ ಭಾರತ ಶಕ್ತಿಯುತ ಮತ್ತು ಶ್ರೀಮಂತ ದೇಶವಾಗುತ್ತಿರುವುದಾಗಿಯೂ ತಿಳಿಸಿದ್ದಾರೆ. ಭಾರತವನ್ನು ಶಾಂತಿಯ ಪರಂಪರೆ ಎಂಬುದಾಗಿಯೂ ಅಸ್ಲೆ ಅವರು ಹೇಳಿದ್ದಾರೆ. ಭಾರತ ಸೂಪರ್ ಪವರ್ ಆಗಲು ಉದ್ದೇಶಿಸಿರುವುದಾಗಿಯೂ ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಅವರು ಯುದ್ಧವನ್ನು ನಿಲ್ಲಿಸುವಲ್ಲಿಯೂ ಅತ್ಯಂತ ವಿಶ್ವಾಸಾರ್ಹ ನಾಯಕರಾಗಿದ್ದಾರೆ. ಅವರಿಂದ ಮಾತ್ರ ಶಾಂತಿ ಸ್ಥಾಪನೆ ಸಾಧ್ಯ ಎಂಬುದಾಗಿಯೂ ಅವರು ಅಭಿಪ್ರಾಯಪಟ್ಟಿದ್ದಾರೆ. ಮೋದಿ ಅವರು ವಿಶ್ವದ ವಿಶ್ವಾಸಾರ್ಹ ಮುಖಗಳಲ್ಲಿ ಒಬ್ಬರು ಎಂದೂ ಅವರು ತಿಳಿಸಿದ್ದಾರೆ. ರಷ್ಯಾ – ಉಕ್ರೇನ್ ಯುದ್ಧ ನಿಲ್ಲಿಸುವಲ್ಲಿಯೂ ಭಾರತ ಪ್ರಮುಖ ಪಾತ್ರ ವಹಿಸಲಿದೆ ಎಂದು ಅಸ್ಲೆ ಹೇಳಿದ್ದಾರೆ. ಹಾಗೆಯೇ ಮೋದಿ ಅವರು ಭಾರತ ಮತ್ತು ಭಾರತದ ಆರ್ಥಿಕತೆಯನ್ನು ಮೇಲೆತ್ತುವ ಕಾಳಜಿಯ ಜೊತೆಗೆ, ವಿಶ್ವದಾದ್ಯಂತ ಹಲವು ವಿಷಯಗಳಲ್ಲಿ ಕೊಡುಗೆ ನೀಡುವ ಮತ್ತು ಭಾಗವಹಿಸುವ ನಾಯಕ ಎಂಬುದಾಗಿಯೂ ಪ್ರಧಾನಿಗಳನ್ನು ಹೊಗಳಿದ್ದಾರೆ.

ಒಟ್ಟಿನಲ್ಲಿ ಪ್ರಧಾನಿ ಮೋದಿ ಅವರನ್ನು ವಿರೋಧಿಸುವ ಭಾರತದ ಕೆಲ ಲದ್ದಿ ಜೀವಿಗಳಿಗೆ ಈ ಸಂಗತಿ ಉರಿವಲ್ಲಿಗೆ ಉಪ್ಪು ಇಟ್ಟಂತಾಗಿರುವುದರಲ್ಲಿ ಸಂದೇಹವಿಲ್ಲ.

Tags

Related Articles

Close